ಟ್ರೂಕಾಲರ್‌ ಬ್ಯುಸಿನೆಸ್‌ ಪ್ರೊಫೈಲ್‌ ರಚಿಸುವುದು ಹೇಗೆ?..ಇದರ ಉಪಯೋಗ ಏನು?

|

ಟ್ರೂಕಾಲರ್ (TrueCaller) ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಆಗಿದ್ದು, ಇದು ಕರೆ ಮಾಡುವವರನ್ನು ಗುರುತಿಸುವುದು, ಕರೆ ನಿರ್ಬಂಧಿಸುವುದು, ಫ್ಲ್ಯಾಷ್-ಮೆಸೇಜಿಂಗ್, ಕರೆ-ರೆಕಾರ್ಡಿಂಗ್, ಚಾಟ್ ಮತ್ತು ಇಂಟರ್ನೆಟ್ ಬಳಸುವ ಮೂಲಕ ವಾಯಿಸ್ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಈ ಸೇವೆಯೊಂದಿಗೆ ನೋಂದಾಯಿಸಲು ಬಳಕೆದಾರರು ಮೊಬೈಲ್ ಸಂಖ್ಯೆಯನ್ನು ಒದಗಿಸುವ ಅಗತ್ಯವಿದೆ. ಹಾಗೆಯೇ ಈ ಅಪ್ಲಿಕೇಶನ್ ಆಂಡ್ರಾಯ್ಡ್‌ ಮತ್ತು ಐಓಎಸ್‌ ಪ್ಲಾಟ್‌ಫಾರ್ಮ್ ಗಳಲ್ಲಿ ಲಭ್ಯವಿದೆ.

ಖಾತೆಯನ್ನು

ಟ್ರೂಕಾಲರ್‌ನಲ್ಲಿ ಬಳಕೆದಾರರು ಟ್ರೂಕಾಲರ್‌ ಬ್ಯುಸಿನೆಸ್‌ ಪ್ರೊಫೈಲ್‌ (Truecaller business profile) ಖಾತೆಯನ್ನು ಸಹ ರಚನೆ ಮಾಡಬಹುದು. ಬಳಕೆದಾರರು ತಮ್ಮ ವ್ಯಾಪಾರ ಸಂವಹನವನ್ನು ಸುಧಾರಿಸಲು ಮತ್ತು ಹೆಚ್ಚಿನ ಗ್ರಾಹಕರಿಗೆ ತಮ್ಮ ವ್ಯಾಪಾರವನ್ನು ಸಂಪರ್ಕಿಸಲು ಬ್ಯುಸಿನೆಸ್‌ ಪ್ರೊಫೈಲ್‌ ಅನ್ನು ಸಹ ರಚನೆ ಮಾಡಿಕೊಳ್ಳಬಹುದಾಗಿದೆ. ಇನ್ನು ಬಳಕೆದಾರರು ಉಚಿತವಾಗಿ ಟ್ರೂಕಾಲರ್‌ ಬ್ಯುಸಿನೆಸ್‌ ಪ್ರೊಫೈಲ್‌ ಅನ್ನು ರಚಿಸಬಹುದು ಅಥವಾ ಪಾವತಿಸಿದ ಚಂದಾದಾರಿಕೆಯಾಗಿರುವ ಪರಿಶೀಲಿಸಿದ ಬ್ಯುಸಿನೆಸ್‌ ಪ್ರೊಫೈಲ್‌ ಖಾತೆಯನ್ನು ರಚಿಸಬಹುದು.

ಉಚಿತವಾಗಿ

ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಬ್ಯುಸಿನೆಸ್‌ ಪ್ರೊಫೈಲ್‌ ಆಯ್ಕೆಯನ್ನು ಆರಿಸುವ ಮೂಲಕ ಟ್ರೂಕಾಲರ್‌ ನಲ್ಲಿ ಹೊಸ ಖಾತೆಯನ್ನು ರಚಿಸಬಹುದು. ಒಂದು ವೇಳೆ ಈಗಾಗಲೇ ಟ್ರೂಕಾಲರ್ ಪ್ರೊಫೈಲ್ ಹೊಂದಿದ್ದರೆ, ನೀವು ಅದನ್ನು ಉಚಿತವಾಗಿ ಟ್ರೂಕಾಲರ್ ಬ್ಯುಸಿನೆಸ್‌ ಪ್ರೊಫೈಲ್‌ಗೆ ಎಡಿಟ್‌ ಸಹ ಮಾಡಬಹುದಾಗಿದೆ ಅಥವಾ ಬದಲಾಯಿಸಬಹುದು. ಹಾಗಾದರೇ ಟ್ರೂಕಾಲರ್‌ ಬ್ಯುಸಿನೆಸ್‌ ಪ್ರೊಫೈಲ್‌ ರಚಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಟ್ರೂಕಾಲರ್‌ ಬ್ಯುಸಿನೆಸ್‌ ಪ್ರೊಫೈಲ್‌ ರಚಿಸಲು ಈ ಮುಂದಿನ ಕ್ರಮಗಳನ್ನು ಅನುಸರಿಸಿ:

ಟ್ರೂಕಾಲರ್‌ ಬ್ಯುಸಿನೆಸ್‌ ಪ್ರೊಫೈಲ್‌ ರಚಿಸಲು ಈ ಮುಂದಿನ ಕ್ರಮಗಳನ್ನು ಅನುಸರಿಸಿ:

* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟ್ರೂಕಾಲರ್‌ ಆಪ್‌ ತೆರೆಯಿರಿ.
* ಸ್ಕ್ರೀನಿನ ಮೇಲಿನ ಎಡ ಮೂಲೆಯಲ್ಲಿ ಲಭ್ಯವಿರುವ 'ಮೂರು ಅಡ್ಡ ಸಾಲಿನ ಮೆನು' ಮೇಲೆ ಟ್ಯಾಪ್ ಮಾಡಿ.
* ನಿಮ್ಮ ಪ್ರೊಫೈಲ್ ಅನ್ನು ಸಂಪಾದಿಸಲು ನಿಮ್ಮ ಪ್ರೊಫೈಲ್ ಹೆಸರು ಮತ್ತು ಮೊಬೈಲ್ ಸಂಖ್ಯೆಯ ಪಕ್ಕದಲ್ಲಿರುವ 'ಪೆನ್ ಐಕಾನ್' ಅನ್ನು ಟ್ಯಾಪ್ ಮಾಡಿ.
* 'ವ್ಯವಹಾರ ಪ್ರೊಫೈಲ್ ಅನ್ನು ರಚಿಸಿ' ಆಯ್ಕೆಗೆ ಕೆಳಗೆ ಸ್ಕ್ರಾಲ್ ಮಾಡಿ.
* ನಿಮ್ಮನ್ನು ಕೆಲವು ವ್ಯಾಪಾರ ಪ್ರೊಫೈಲ್ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಗಳಿಗೆ ಮರುನಿರ್ದೇಶಿಸಲಾಗುತ್ತದೆ. 'ಮುಂದುವರಿಸಿ' ಮೇಲೆ ಟ್ಯಾಪ್ ಮಾಡಿ.

ಮುಕ್ತಾಯ

* ನಿಮ್ಮ ವ್ಯಾಪಾರದ ಹೆಸರನ್ನು ನಮೂದಿಸಿ.
* ನಿಮ್ಮ ವ್ಯಾಪಾರ ಕ್ಷೇತ್ರದ ಬಗ್ಗೆ ಮಾಹಿತಿಯನ್ನು ನಮೂದಿಸಿ.
* ಪಿನ್ ಕೋಡ್ ಸೇರಿದಂತೆ ನಿಮ್ಮ ವ್ಯಾಪಾರದ ಸ್ಥಳವನ್ನು ನಮೂದಿಸಿ. ಪೂರ್ಣ ವಿಳಾಸ ವಿವರಗಳಿಗಾಗಿ ನೀವು ನಕ್ಷೆಯಲ್ಲಿ ನಿಮ್ಮ ವ್ಯಾಪಾರವನ್ನು ಸಹ ಪತ್ತೆ ಮಾಡಬಹುದು.
* ಪೂರ್ಣಗೊಂಡಾಗ, "ಮುಕ್ತಾಯ" ಟ್ಯಾಪ್ ಮಾಡಿ.
ಇದಲ್ಲದೆ, ನಿಮ್ಮ ವ್ಯಾಪಾರದ ಲೋಗೋ, ಬಣ್ಣದ ಥೀಮ್, ಸ್ಟೋರ್ ತೆರೆಯುವ ಹಾಗೂ ಬಂದ್ ಮಾಡುವ ಸಮಯಗಳು ಇತ್ಯಾದಿಗಳನ್ನು ಸಹ ನೀವು ಸೇರಿಸಬಹುದು. ಹಾಗೆಯೇ ಇದು ನಿಮ್ಮ ಸ್ಥಳೀಯ ವ್ಯಾಪಾರವನ್ನು ದೇಶಾದ್ಯಂತ ಗಮನಕ್ಕೆ ತರಲು ಸಹಾಯ ಮಾಡುತ್ತದೆ.

ಇದರಿಂದ

ಹಾಗೆಯೇ ಟ್ರೂಕಾಲರ್‌ ಆಪ್‌ ನೂತನವಾಗಿ 'ಓಪನ್‌ ಡೋರ್ಸ್‌' ಅಪ್ಲಿಕೇಶನ್‌ ಪರಿಚಯಿಸಿದೆ. ಓಪನ್‌ ಡೋರ್ಸ್‌ ಆಪ್‌ ಆಡಿಯೋ ಸಂಭಾಷಣೆಯ ಆಪ್‌ ಆಗಿದೆ. ಇಲ್ಲಿ ಭಾಗವಹಿಸುವವರು ಯಾರು ಕೂಡ ಪರಸ್ಪರರ ಫೋನ್ ಸಂಖ್ಯೆಗಳನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದ ನಿಮ್ಮ ಫೋನ್‌ ನಂಬರ್‌ಗಳು ಬೇರೆಯವರಿಗೆ ದೊರಕುವ ಸಾಧ್ಯತೆಯನ್ನು ತಪ್ಪಿಸುತ್ತದೆ. ಆಡಿಯೋ ಸಂಭಾಷಣೆಯ ಸಮಯದಲ್ಲಿ ನಿಮ್ಮ ಹೆಸರುಗಳು ಮತ್ತು ಪ್ರೊಫೈಲ್ ಚಿತ್ರಗಳು ಮಾತ್ರ ಗೋಚರಿಸುತ್ತವೆ. ಅಲ್ಲದೆ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ಗೆ ಕೇವಲ ಎರಡು ಅನುಮತಿಗಳ ಅಗತ್ಯವಿರುವುದರಿಂದ ಬಳಕೆದಾರರು ತಮ್ಮ ವೈಯಕ್ತಿಕ ಡೇಟಾದ ಮೇಲೆ ಕಂಪ್ಲೀಟ್‌ ಕಂಟ್ರೋಲ್‌ ಹೊಂದಿರುತ್ತಾರೆ.

ರಿಯಾಕ್ಷನ್‌

ಇನ್ನು ಓಪನ್‌ ಡೋರ್ಸ್‌ ಅಪ್ಲಿಕೇಶನ್‌ನಲ್ಲಿ ನಿಮಗೆ ತಿಳಿಯದೆ ನಿಮ್ಮ ಸಂಭಾಷಣೆಯನ್ನು ಬೇರೆಯವರು ಆಲಿಸುವುದಕ್ಕೆ ಸಾಧ್ಯವಿಲ್ಲ. ನೀವು ಸಂವಾದದಲ್ಲಿ ಸೇರಿದಾಗಲೆಲ್ಲಾ ನಿಮ್ಮ ಸಂಪರ್ಕಗಳ ಮೇಲೆ ಎಚ್ಚರಿಕೆಯನ್ನು ನೀಡುವುದು. ಇತರ ಜನರು ಏನು ಹೇಳುತ್ತಿದ್ದಾರೆ ಎಂಬುದಕ್ಕೆ ರಿಯಾಕ್ಷನ್‌ ನೀಡುವುದಕ್ಕೆ ಹಲವು ಫೀಚರ್ಸ್‌ಗಳು ಇದರಲ್ಲಿ ಲಭ್ಯವಾಗಲಿವೆ. ಅಲ್ಲದೆ ಈ ಹೊಸ ಓಪನ್ ಡೋರ್ಸ್ ಸಂಭಾಷಣೆಗಳನ್ನು ಬಳಕೆದಾರರಿಗೆ ಹೇಗೆ ತಿಳಿಸುತ್ತದೆ ಎಂಬುದರ ಬಗ್ಗೆ ಅಪ್ಲಿಕೇಶನ್ ನಿಖರವಾದ ನಿಯಂತ್ರಣವನ್ನು ನೀಡಲಿದೆ.

ಅಪ್ಲಿಕೇಶನ್‌

ಪ್ರಸ್ತುತ ಟ್ರೂ ಕಾಲರ್‌ನ ಓಪನ್ ಡೋರ್ಸ್ ಅಪ್ಲಿಕೇಶನ್‌ ಸಂಪೂರ್ಣವಾಗಿ ಉಚಿತವಾಗಿದೆ. ಇದು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ಲಭ್ಯವಿರುತ್ತದೆ. ಈ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ ತಡೆರಹಿತ ಅನುಭವವನ್ನು ನೀಡಲಿದೆ ಎಂದು ಟ್ರೂ ಕಾಲರ್‌ ಹೇಳಿದೆ. ಇನ್ನು ಓಪನ್ ಡೋರ್ಸ್‌ ಅಪ್ಲಿಕೇಶನ್‌ ಬಳಸುವುದಕ್ಕೆ ಟ್ರೂ ಕಾಲರ್‌ ಬಳಕೆದಾರರು ಒಂದೇ ಟ್ಯಾಪ್‌ನೊಂದಿಗೆ ಲಾಗಿನ್‌ ಮಾಡಬಹುದು. ಈಗಾಗಲೇ ಟ್ರೂ ಕಾಲರ್‌ ಬಳಸುತ್ತಿರುವವರಿಗೆ ಪ್ರವೇಶ ಸುಲಭವಾಗಿದೆ.

ಸ್ಪ್ಯಾನಿಷ್

ಆದರೆ ಹೊಸ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಅಪ್ಲಿಕೇಶನ್‌ನಲ್ಲಿ ನಮೂದಿಸಬೇಕಾಗುತ್ತದೆ. ಅಲ್ಲದೆ ಮಿಸ್ಡ್ ಕಾಲ್ ಅಥವಾ OTP ಯೊಂದಿಗೆ ವೆರಿಫೈ ಮಾಡಬೇಕು. ಇದೆಲ್ಲ ಪ್ರಕ್ರಿಯೆಗಳು ಮುಗಿದ ನಂತರ ನೀವು ಓಪನ್‌ ಡೋರ್ಸ್‌ ಅಪ್ಲಿಕೇಶನ್‌ಗೆ ಪ್ರವೇಶ ಪಡೆಯಲು ಸಾಧ್ಯವಾಗಲಿದೆ. ಇನ್ನು ಓಪನ್‌ ಡೋರ್ಸ್‌ ಅಪ್ಲಿಕೇಶನ್ ಪ್ರಸ್ತುತ ಇಂಗ್ಲಿಷ್, ಹಿಂದಿ, ಸ್ಪ್ಯಾನಿಷ್, ಫ್ರೆಂಚ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಲಭ್ಯವಿದೆ. ಬಳಕೆದಾರರಿಗೆ ಅಗತ್ಯವಿದ್ದರೆ ಇಂಟರ್ಫೇಸ್‌ಗೆ ಹೆಚ್ಚಿನ ಭಾಷೆಗಳನ್ನು ಸೇರಿಸುವುದಕ್ಕೆ ಕೂಡ ಟ್ರೂ ಕಾಲರ್‌ ಅವಕಾಶವನ್ನು ನೀಡಿದೆ.

ಕಾಲರ್‌

ಇನ್ನು ಟ್ರೂ ಕಾಲರ್‌ ಅಪ್ಲಿಕೇಶನ್‌ ಇತ್ತೀಚಿಗೆ ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್‌ ಅನ್ನು ಕೂಡ ಪರಿಚಯಿಸಿದೆ. ಇದರಲ್ಲಿ ವಾಯ್ಸ್‌ ಕಾಲ್‌ ಲಾಂಚರ್, ಎಸ್‌ಎಮ್‌ಎಸ್‌ ಇನ್‌ಬಾಕ್ಸ್‌ಗಾಗಿ ಪಾಸ್‌ಕೋಡ್ ಲಾಕ್ ಫೀಚರ್ಸ್‌ಗಳು ಸೇರಿವೆ. ವಾಯ್ಸ್‌ ಕಾಲ್‌ ಲಾಂಚರ್ ಫೀಚರ್ಸ್‌ ಪರಿಚಯಿಸಿದೆ ಟ್ರೂ ಕಾಲರ್‌ ವಾಯ್ಸ್‌ನಲ್ಲಿ ಮಾತನಾಡಲು ಲಭ್ಯವಿರುವ ನಿಮ್ಮ ಎಲ್ಲಾ ಸಂಪರ್ಕಗಳನ್ನು ಹುಡುಕಲು ಸುಲಭವಾಗಲಿದೆ. ಇನ್ನು ಈ ಹೊಸ ಫೀಚರ್ಸ್‌ VoIP ಆಧಾರಿತ ಕರೆಯಲ್ಲಿ ಕಾರ್ಯನಿರ್ವಹಿಸಲಿದೆ.

Best Mobiles in India

English summary
How to Create a Truecaller Business Profile. Truecaller Business Profile available for Android and iOS devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X