ನಿಮ್ಮ ಮೊಬೈಲ್‌ನಲ್ಲಿ ತ್ವರಿತವಾಗಿ Email ID ರಚಿಸಲು ಹೀಗೆ ಮಾಡಿರಿ!

|

ಮೊಬೈಲ್‌ ಅಥವಾ ಲ್ಯಾಪ್‌ಟಾಪ್ ಹೊಂದಿದ್ದರೆ ಇ-ಮೇಲ್ ಐಡಿ ಹೊಂದಿರುವುದು ಅಗತ್ಯ. ಇ-ಮೇಲ್ ಐಡಿ ವೈಯಕ್ತಿಕ ಮತ್ತು ಇತರೆ ಕೆಲಸಕ್ಕೆ ಸಂಬಂಧಿಸಿದ ಕೆಲಸಗಳಿಗೆ ಇಮೇಲ್ ಐಡಿ ಸೂಕ್ತ. ಸರ್ಕಾರಿ ಕೆಲಸ, ಬ್ಯಾಂಕ್ ಅಪ್‌ಡೇಟ್‌, ವೈಯಕ್ತಿಕ ಕೆಲಸ ಮತ್ತು ಇತರೆ ಯಾವುದೇ ಅಧಿಕೃತ ಬಳಕೆಗಾಗಿ ಇ-ಮೇಲ್ ಬಳಸಬಹುದು. ಇ-ಮೇಲ್ ಖಾತೆ ಅಥವಾ ಇ-ಮೇಲ್ ಐಡಿಯನ್ನು ರಚಿಸುವುದು ತುಂಬಾ ಸುಲಭ ಆಗಿದೆ. ಅದಾಗ್ಯೂ, ಕೆಲವು ಬಳಕೆದಾರರಿಗೆ ಹಾಗೂ ಹೊಸಬರಿಗೆ ಇ-ಮೇಲ್ ರಚಿಸುವ ಬಗ್ಗೆ ಮಾಹಿತಿ ಅಗತ್ಯ ಇರುತ್ತದೆ.

ನಿಮ್ಮ ಮೊಬೈಲ್‌ನಲ್ಲಿ ತ್ವರಿತವಾಗಿ Email ID ರಚಿಸಲು ಹೀಗೆ ಮಾಡಿರಿ!

ಇ-ಮೇಲ್ ರಚಿಸುವ ಬಗ್ಗೆ ನೋಡುವುದಾದರೇ, ಕೆಲವು ಉತ್ತಮ ಆಯ್ಕೆಗಳಿವೆ. ಗೂಗಲ್‌ ನಿಂದ Gmail, ಮೈಕ್ರೋಸಾಫ್ಟ್‌ ನಿಂದ Outlook, ಯಾಹೂ ಮತ್ತು ProtonMail ನಂತಹ ಕೆಲವು ಜನಪ್ರಿಯವಾದ ಇ-ಮೇಲ್ ತಾಣ ಎನಿಸವೆ. ಬಹುತೇಕ ಈ ಎಲ್ಲ ಇ-ಮೇಲ್ ರಚನೆಗಳು ಉಚಿತವಾಗಿದ್ದರೂ, ProtonMail ಒಂದೆರಡು ಪ್ರೀಮಿಯಂ ಯೋಜನೆಗಳನ್ನು ಹೊಂದಿದೆ. ಇದು ಅಧಿಕ ಸ್ಟೋರೇಜ್‌ ಸ್ಥಳಾವಕಾಶ ಹೊಂದಿದ್ದು, ಇತರೆ ಕೆಲವು ಫೀಚರ್ಸ್‌ಗಳನ್ನು ನೀಡುತ್ತದೆ. ಹಾಗಾದರೇ ಪಿಸಿ ಮತ್ತು ಮೊಬೈಲ್ ಫೋನ್‌ಗಳಲ್ಲಿ ಇ-ಮೇಲ್ ಖಾತೆಗಳನ್ನು ಹೇಗೆ ರಚಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

Gmail ID ಅನ್ನು ರಚಿಸುವುದು ಹೇಗೆ?
ಗೂಗಲ್‌ ನಿಂದ Gmail ಅತ್ಯಂತ ಜನಪ್ರಿಯ ಇಮೇಲ್ ಕ್ಲೈಂಟ್‌ಗಳಲ್ಲಿ ಒಂದಾಗಿದೆ. ಗೂಗಲ್‌ ಪ್ಲೇ ಮತ್ತು ಸೇವೆಗಳಂತಹ ಯಾವುದೇ ಗೂಗಲ್‌ ಅಪ್ಲಿಕೇಶನ್‌ಗಳನ್ನು ಪ್ರವೇಶಿಸುವುದು ಮುಖ್ಯವಾದ ಕಾರಣ ಇದು ಎಲ್ಲಾ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹೊಂದಿರಬೇಕು. ಒಮ್ಮೆ ನೀವು ಸೈನ್ ಅಪ್ ಮಾಡಿದ ನಂತರ, ನೀವು 15GB ಗೂಗಲ್‌ ಡ್ರೈವ್ ಸಂಗ್ರಹಣೆಗೆ ಪ್ರವೇಶವನ್ನು ಲಭ್ಯ ಆಗುವುದು. ಇದನ್ನು ನಿಮ್ಮ ಚಿತ್ರಗಳು, ವೀಡಿಯೊಗಳು, ಇ-ಮೇಲ್‌ಗಳು ಸಂಗ್ರಹಿಸಲು ಬಳಸಬಹುದು.

ನಿಮ್ಮ ಮೊಬೈಲ್‌ನಲ್ಲಿ ತ್ವರಿತವಾಗಿ Email ID ರಚಿಸಲು ಹೀಗೆ ಮಾಡಿರಿ!

ಪಿಸಿಯಲ್ಲಿ Gmail ಐಡಿ ರಚಿಸಲು ಹೀಗೆ ಮಾಡಿ:
* ಗೂಗಲ್‌ ಖಾತೆ ರಚನೆ ಪುಟಕ್ಕೆ ಹೋಗಿ
* ನಿಮ್ಮ ಮೊದಲ ಹೆಸರು, ಕೊನೆಯ ಹೆಸರು, ಬಳಕೆದಾರಹೆಸರು ಮತ್ತು ಪಾಸ್‌ವರ್ಡ್ ಅನ್ನು ಭರ್ತಿ ಮಾಡಿ
* ಮುಂದೆ ಕ್ಲಿಕ್ ಮಾಡಿ
* ಫೋನ್ ಸಂಖ್ಯೆ ಮತ್ತು ಮರುಪ್ರಾಪ್ತಿ ಇ-ಮೇಲ್ ಐಡಿಯನ್ನು ನಮೂದಿಸಿ (ಇವುಗಳು ಐಚ್ಛಿಕವಾಗಿವೆ, ಅದಾಗ್ಯೂ, ನೀವು ಭರ್ತಿ ಮಾಡಿ)
* ನಿಮ್ಮ ಜನ್ಮ ದಿನಾಂಕ ಮತ್ತು ಲಿಂಗವನ್ನು ಆಯ್ಕೆ ಮಾಡಿ
* ಮುಂದೆ ಕ್ಲಿಕ್ ಮಾಡಿ
* ನಿಮ್ಮ ಖಾತೆಯನ್ನು ಹೊಂದಿಸಲು ಪರದೆಯ ಮೇಲಿನ ಹಂತಗಳನ್ನು ಅನುಸರಿಸಿ
* ಈ ಹಂತಗಳನ್ನು ಮಾಡಿದ ನಂತರ, ನಿಮ್ಮ Gmail ID ಅನ್ನು ರಚಿಸಲಾಗುತ್ತದೆ
* Gmail ಗೆ ಸೈನ್ ಇನ್ ಮಾಡಲು ನೀವು ರಚಿಸಿದ ಖಾತೆಯನ್ನು ಬಳಸಿ

ಮೊಬೈಲ್‌ನಲ್ಲಿ Gmail ಐಡಿ ರಚಿಸಲು ಹೀಗೆ ಮಾಡಿ:
* ಗೂಗಲ್‌ ಖಾತೆ ರಚನೆ ಪುಟಕ್ಕೆ ಭೇಟಿ ನೀಡಿ
* ಮುಂದಿನ ಪರದೆಯಲ್ಲಿ, ನಿಮ್ಮ ಫೋನ್‌ನಲ್ಲಿರುವ ಎಲ್ಲಾ Gmail ID ಗಳನ್ನು ನೀವು ಪಡೆಯುತ್ತೀರಿ, "ಸಾಧನಕ್ಕೆ ಖಾತೆಯನ್ನು ಸೇರಿಸಿ" ಟ್ಯಾಪ್ ಮಾಡಿ
* ಇಲ್ಲಿ, "ಖಾತೆ ರಚಿಸಿ" > "ನನಗಾಗಿ" ಟ್ಯಾಪ್ ಮಾಡಿ
* ನಿಮ್ಮ ಮೊದಲ ಹೆಸರು ಮತ್ತು ಕೊನೆಯ ಹೆಸರನ್ನು ನಮೂದಿಸಿ
* ಹುಟ್ಟಿದ ದಿನಾಂಕ ಮತ್ತು ಲಿಂಗವನ್ನು ನಮೂದಿಸಿ
* ಮುಂದಿನ ಸ್ಕ್ರೀನ್‌ನಲ್ಲಿ, ನೀವು ಸೂಚಿಸಿದ ಎರಡು Gmail ID ಗಳಿಂದ ಆಯ್ಕೆ ಮಾಡಬಹುದು ಅಥವಾ ಬಳಕೆದಾರ ಹೆಸರು/ Gmail ID ಅನ್ನು ಹಸ್ತಚಾಲಿತವಾಗಿ ಸೇರಿಸಲು "ನಿಮ್ಮ ಸ್ವಂತ ಜಿ-ಮೇಲ್ ವಿಳಾಸವನ್ನು ರಚಿಸಿ" ಅನ್ನು ಟ್ಯಾಪ್ ಮಾಡಿ

Best Mobiles in India

English summary
How to Create Email ID on Mobile: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X