ನೀವು SBI ಗ್ರಾಹಕರೇ?..ಹೊಸ ಡೆಬಿಟ್‌ ಕಾರ್ಡ್‌ ಪಿನ್‌ ಸೆಟ್‌ ಮಾಡಲು ಹೀಗೆ ಮಾಡಿ!

|

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ಜನಪ್ರಿಯ ಬ್ಯಾಂಕ್‌ ಆಗಿದ್ದು, ಉಪಯುಕ್ತ ಬ್ಯಾಂಕಿಂಗ್‌ ಸೇವೆಗಳಿಂದ ಬಹು ದೊಡ್ಡ ಖಾತೆದಾರರನ್ನು ಹೊಂದಿದೆ. ಎಸ್‌ಬಿಐ ಬ್ಯಾಂಕ್‌ ತನ್ನ ಗ್ರಾಹಕರಿಗೆ/ ಖಾತೆದಾರರಿಗೆ ವಹಿವಾಟು ನಡೆಸಲು ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಸೇರಿದಂತೆ ಆನ್‌ಲೈನ್‌ ಬ್ಯಾಂಕಿಂಗ್‌ ಆಯ್ಕೆಗಳನ್ನು ನೀಡಿದೆ. ಹಾಗೆಯೇ ಖಾತೆದಾರರು ಎಟಿಎಂ ಕಾರ್ಡ್ ಮೂಲಕ ಯಾವುದೇ ಸಮಯದಲ್ಲಿ ಎಟಿಎಂನಿಂದ ಹಣವನ್ನು ವಿತ್‌ಡ್ರಾ ಮಾಡಬಹುದಾಗಿದೆ.

ATM ಪಿನ್ ಸೆಟ್‌

ಇನ್ನು ಗ್ರಾಹಕರು ಎಸ್‌ಬಿಐನಲ್ಲಿ ನೂತನ ಖಾತೆ ತೆರೆದಾಗ, ಅವರಿಗೆ ಹೊಸ ಡೆಬಿಟ್ ಕಾರ್ಡ್ ಹೊಂದಿರುವ ವೆಲ್‌ಕಮ್‌ ಕಿಟ್ ಅನ್ನು ನೀಡುತ್ತಾರೆ. ಆದ್ರೆ, ಖಾತೆದಾರರು ಯಾವುದೇ ವಹಿವಾಟುಗಳನ್ನು ನಡೆಸುವ ಮೊದಲು ಈ ಕಾರ್ಡ್‌ಗಾಗಿ ATM ಪಿನ್ ಅನ್ನು ಸೆಟ್‌ ಮಾಡಬೇಕಿರುತ್ತದೆ. ಡೆಬಿಟ್ ಕಾರ್ಡ್‌ (ATM) ಪಿನ್ ಸೆಟ್‌ ಮಾಡುವುದು ಸುಲಭವೇ ಆಗಿದೆ. ಆದ್ರೆ ಕೆಲವರಿಗೆ ಆ ಬಗ್ಗೆ ತಿಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ಎಸ್‌ಬಿಐ ಡೆಬಿಟ್‌ ಕಾರ್ಡ್‌ಗೆ ಪಿನ್/ ಪಾಸ್‌ವರ್ಡ್‌ ಸೆಟ್‌ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಎಸ್‌ಬಿಐ ATM ಮೂಲಕ ಎಸ್‌ಬಿಐ ಡೆಬಿಟ್‌ ಕಾರ್ಡ್‌ ಪಿನ್ ಅನ್ನು ರಚಿಸಲು ಹೀಗೆ ಮಾಡಿರಿ:

ಎಸ್‌ಬಿಐ ATM ಮೂಲಕ ಎಸ್‌ಬಿಐ ಡೆಬಿಟ್‌ ಕಾರ್ಡ್‌ ಪಿನ್ ಅನ್ನು ರಚಿಸಲು ಹೀಗೆ ಮಾಡಿರಿ:

* ಹತ್ತಿರದ ಎಸ್‌ಬಿಐ ATM ಗೆ ಭೇಟಿ ನೀಡಿ ಮತ್ತು ನಿಮ್ಮ ಎಸ್‌ಬಿಐ PIN ಅನ್ನು ರಚಿಸಲು ಪ್ರಕ್ರಿಯೆಯನ್ನು ಪ್ರಾರಂಭಿಸಿ.
* ಎಟಿಎಮ್‌ನ ಸ್ಕ್ರೀನ್‌ನಲ್ಲಿ PIN ಅನ್ನು ರಚಿಸುವ ಆಯ್ಕೆಯನ್ನು ಆಯ್ಕೆ ಮಾಡಿ
* ಎಟಿಎಮ್‌ನಲ್ಲಿ ಇನ್‌ಸರ್ಟ್‌(ಸೇರಿಸಲಾದ) ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದ 11-ಅಂಕಿಯ ಖಾತೆ ಸಂಖ್ಯೆಯನ್ನು ನಮೂದಿಸಿ.
* ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ 'confirm' ಕ್ಲಿಕ್ ಮಾಡಿ.

confirm

* ಮುಂದಿನ ಸ್ಕ್ರೀನ್‌ನಲ್ಲಿ, ನೀವು ಎಸ್‌ಬಿಐ ಗ್ರೀನ್ ಉಪಕ್ರಮದ ಭಾಗವಾಗಿದ್ದಕ್ಕಾಗಿ ಧನ್ಯವಾದ ಮೆಸೆಜ್‌ ಅನ್ನು ಕಾಣುತ್ತೀರಿ. 'confirm' ಬಟನ್ ಮೇಲೆ ಕ್ಲಿಕ್ ಮಾಡಿ.
* ನೀವು ಪಿನ್ ಅನ್ನು ಯಶಸ್ವಿಯಾಗಿ ರಚಿಸಿದ ನಂತರ ATM ದೃಢೀಕರಣ ಮೆಸೆಜ್‌ ಕಾಣಿಸುತ್ತದೆ.
* ಬಳಿಕ ನಿಮ್ಮ ಮೊಬೈಲ್‌ ಸಂಖ್ಯೆಗೆ 48 ಗಂಟೆಗಳವರೆಗೆ ಮಾನ್ಯವಾದ OTP ಬರಲಿದೆ.
* OTP ಮಾನ್ಯ ಇರುವ ಅವಧಿಯಲ್ಲಿ, ಯಾವುದೇ ಎಸ್‌ಬಿಐ ಎಟಿಎಂಗೆ ಭೇಟಿ ನೀಡಿ ಮತ್ತು 'ಬ್ಯಾಂಕಿಂಗ್ > ಪಿನ್ ಬದಲಾವಣೆ' ಆಯ್ಕೆಯನ್ನು ಆರಿಸಿಕೊಳ್ಳಿ ಮತ್ತು ಎಸ್‌ಬಿಐ ಎಟಿಎಂ ಪಿನ್ ನಮೂದಿಸಲು ಎಟಿಎಂ ಕೇಳಿದಾಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಸಿಗುತ್ತದೆ.
* SBI ATM ಕಾರ್ಡ್ ಪಿನ್ ಬದಲಾಯಿಸಲು ಉಳಿದ ಹಂತಗಳನ್ನು ಅನುಸರಿಸಿ.

ಇಂಟರ್ನೆಟ್‌ ಬ್ಯಾಂಕಿಂಗ್‌ ಮೂಲಕ ಎಸ್‌ಬಿಐ ಡೆಬಿಟ್ ಕಾರ್ಡ್‌ ಪಿನ್ ಸೆಟ್ ಮಾಡಲು ಈ ಕ್ರಮ ಅನುಸರಿಸಿ:

ಇಂಟರ್ನೆಟ್‌ ಬ್ಯಾಂಕಿಂಗ್‌ ಮೂಲಕ ಎಸ್‌ಬಿಐ ಡೆಬಿಟ್ ಕಾರ್ಡ್‌ ಪಿನ್ ಸೆಟ್ ಮಾಡಲು ಈ ಕ್ರಮ ಅನುಸರಿಸಿ:

* www.onlinesbi.com ಗೆ ಭೇಟಿ ನೀಡಿ ಮತ್ತು ಲಾಗ್ ಇನ್ ಮಾಡಿ.
* ಇ-ಸೇವೆಗಳ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ ಮತ್ತು ಎಟಿಎಂ ಪಿನ್ ಜನರೇಷನ್ ಆಯ್ಕೆ ಮಾಡಿ.
* ATM PIN Generation ಆರಿಸಿ ಮತ್ತು ಎರಡು ವಿಧಾನಗಳಲ್ಲಿ ಒಂದನ್ನು ಆಯ್ಕೆ ಮಾಡಿ: OTP ಅಥವಾ ಪ್ರೊಫೈಲ್ ಪಾಸ್‌ವರ್ಡ್.
* OTP ವಿಧಾನವನ್ನು ಆರಿಸಿ. ನಿಮ್ಮ ಫೋನ್‌ನಲ್ಲಿ ನೀವು ಒಂದನ್ನು ಸ್ವೀಕರಿಸುತ್ತೀರಿ, ಅದನ್ನು ನೀವು ಅಗತ್ಯವಿರುವ ಕಾಲಮ್‌ನಲ್ಲಿ ನಮೂದಿಸಬೇಕು.
* ಮುಂದೆ, ನಿಮ್ಮ ಡೆಬಿಟ್ ಕಾರ್ಡ್ ಲಿಂಕ್ ಆಗಿರುವ ಉಳಿತಾಯ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
* ಮುಂದಿನ ವಿಂಡೋದಲ್ಲಿ, ಪಿನ್ ಅನ್ನು ರಚಿಸಬೇಕಾದ ATM ಕಾರ್ಡ್ ಅನ್ನು ಆಯ್ಕೆ ಮಾಡಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.

ಎಸ್‌ಎಮ್‌ಎಸ್‌

* ಎಟಿಎಂ ಪಿನ್ ಜನರೇಷನ್ ಪುಟದಲ್ಲಿ, ನಿಮ್ಮ ಆಯ್ಕೆಯ 2 ಅಂಕೆಗಳನ್ನು ನೀವು ನಮೂದಿಸಬೇಕಾಗುತ್ತದೆ ಮತ್ತು ಕೊನೆಯ 2 ಅಂಕೆಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ಎಸ್‌ಎಮ್‌ಎಸ್‌ ಮೂಲಕ ಕಳುಹಿಸಲಾಗುತ್ತದೆ.
* ಮುಂದಿನ ಸ್ಕ್ರೀನ್‌ನಲ್ಲಿ, ನೀವು ಆಯ್ಕೆ ಮಾಡಿದ ಅಂಕಿಗಳನ್ನು ಮತ್ತು ಎಸ್‌ಎಮ್‌ಎಸ್‌ ಮೂಲಕ ಸ್ವೀಕರಿಸಿದ ಅಂಕಿಗಳನ್ನು ನಮೂದಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.
ATM PIN has been changed ಎಂಬ ಮೆಸೆಜ್‌ ಸ್ಕ್ರೀನ್‌ ಮೇಲೆ ಕಾಣಿಸುತ್ತದೆ.
ಹೊಸ ಕಾರ್ಡ್ ಅನ್ನು ಸಕ್ರಿಯಗೊಳಿಸಲು ನೀವು e-services>ATM Card Services>New ATM Card activation to activate the new card ಗೆ ಭೇಟಿ ನೀಡಬೇಕು.

Best Mobiles in India

English summary
How to Create New PIN for your SBI Debit Card: Follow these process.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X