Home
ಟೆಕ್ ನೌಕರಿ

ಜಿ-ಮೇಲ್ ಖಾತೆಯನ್ನು ಪರ್ಮನೆಂಟ್‌ ಆಗಿ ಡಿಲೀಟ್‌ ಮಾಡುವುದು ಹೇಗೆ ಗೊತ್ತಾ?

ಕಾಗದ ರಹಿತವಾದ ಇಂದಿನ ಡಿಜಿಟಲ್ ಯುಗದಲ್ಲಿ ಮಿಂಚಂಚೆ(ಇ-ಮೇಲ್) ಪ್ರಮುಖ ಪಾತ್ರ ವಹಿಸಿದ್ದು, ಕ್ಷಣದಲ್ಲಿ ತಲುಪಬೇಕಾದ ಸ್ಥಳ ಸೇರುತ್ತದೆ. ಇ ಮೇಲ್‌ ಕಳುಹಿಸಬೇಕಿದ್ದರೆ ಮೊದಲು ಒಂದು ಅಕೌಂಟ್ ಅನ್ನು ಹೊಂದಿರುವುದು ಮುಖ್ಯವಾಗಿದ್ದು, ಅದಕ್ಕಾಗಿ ಹಲವಾರು ಸಂಸ್ಥೆಗಳು ಉಚಿತವಾಗಿ ಅಕೌಂಟ್ ತೆರೆಯಲು ಅವಕಾಶ ನೀಡಿವೆ. ಅವುಗಳಲ್ಲಿ ಗೂಗಲ್ ಸಂಸ್ಥೆ ಜಿ-ಮೇಲೆ(Gmail) ಹೆಚ್ಚು ಜನಪ್ರಿಯವಾಗಿದೆ.

ಜಿ-ಮೇಲ್ ಖಾತೆಯನ್ನು ಪರ್ಮನೆಂಟ್‌ ಆಗಿ ಡಿಲೀಟ್‌ ಮಾಡುವುದು ಹೇಗೆ ಗೊತ್ತಾ?

ಹೌದು, ಗೂಗಲ್ ಸಂಸ್ಥೆಯ ಹಲವಾರು ಸೇವೆಗಳಲ್ಲಿ 'ಜಿ ಮೇಲ್' ಸಹ ಒಂದಾಗಿದ್ದು ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ಬಹು ಉಪಯುಕ್ತವಾಗಿರುವ ಜಿ ಮೇಲ್‌ ಅಕೌಂಟ್‌ ಅನ್ನು ಬಳಕೆದಾರರು ಒಂದು ವೇಳೆ ಬೇಡವಾಗಿ ಡಿಲೀಟ್ ಮಾಡಲು ಇಚ್ಚಿಸಿದರೇ ಅದಕ್ಕೂ ಗೂಗಲ್ ಅವಕಾಶ ಮಾಡಿಕೊಟ್ಟಿದ್ದು, ಸಂಪೂರ್ಣವಾಗಿ ಅಕೌಂಟ್‌ ಕ್ಲೋಸ್‌ ಮಾಡುವ ಆಯ್ಕೆಗಳನ್ನು ಸೆಟ್ಟಿಂಗ್‌ನಲ್ಲಿ ನೀಡಿದೆ. ಹಾಗಾದರೇ ಜಿ ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಲೀಟ್ ಜಿ-ಮೇಲ್

ಡಿಲೀಟ್ ಜಿ-ಮೇಲ್

ಗೂಗಲ್ ಜಿ ಮೇಲ್ ಖಾತೆಯನ್ನು ಸಂಪೂರ್ಣವಾಗಿ ನಿಷ್ಕ್ರೀಯ ಮಾಡಲು ಆಯ್ಕೆಯನ್ನು ನೀಡಲಾಗಿದ್ದು, ನಿಮ್ಮ ಖಾತೆಯಲ್ಲಿನ ಎಲ್ಲ ಮೇಲ್‌ಗಳು ಡಿಲೀಟ್ ಆಗಲಿವೆ. ಒಂದು ಬಾರಿ ಡಿಲೀಟ್ ಆದರೆ ಆ ಖಾತೆಯನ್ನು ಇನ್ನೊಬ್ಬರು ಉಪಯೋಗಿಸಲು ಗೂಗಲ್ ಅನುಮತಿಸುವುದಿಲ್ಲ. ಹೀಗಾಗಿ ನಿಮ್ಮ ಜಿ-ಮೇಲ್‌ ಖಾತೆ ದುರುಪಯೋಗ ಆಗಬಹುದು ಎನ್ನುವ ಆತಂಕ ಅನಗತ್ಯ ಎನಿಸುತ್ತದೆ.

ಕಂಪ್ಯೂಟರ್‌ನಲ್ಲಿ ಡಿಲೀಟ್ ಮಾಡುವ ಕ್ರಮ

ಕಂಪ್ಯೂಟರ್‌ನಲ್ಲಿ ಡಿಲೀಟ್ ಮಾಡುವ ಕ್ರಮ

* ಗೂಗಲ್ ಮ್ಯಾನೆಜ್‌ಮೆಂಟ್ ಅಕೌಂಟ್ ತೆರೆಯಿರಿ
* ಡೇಟಾ ಮತ್ತು ಪರ್ಸನೈಲಿಜೇಶನ್ (Data & personalization) ಆಯ್ಕೆ ಕ್ಲಿಕ್ ಮಾಡಿ
* ಡಿಲೀಟ್ ಎ ಸರ್ವೀಸ್‌ ಅಥವಾ ಡಿಲೀಟ್ ಅಕೌಂಟ್ ಆಯ್ಕೆ ಸೆಲೆಕ್ಟ್‌ ಮಾಡಿ.
* ಡಿಲೀಟ್ ಗೂಗಲ್ ಸರ್ವೀಸ್ ಆಯ್ಕೆ ಕ್ಲಿಕ್‌ ಮಾಡಿರಿ
* ನಂತರ ಮತ್ತೆ ಡಿಲೀಟ್ ಆಯ್ಕೆ ಒತ್ತಿರಿ.

ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಡಿಲೀಟ್ ಮಾಡುವ ಕ್ರಮ

ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಡಿಲೀಟ್ ಮಾಡುವ ಕ್ರಮ

* ಡಿವೈಸ್‌ನಲ್ಲಿ ಸೆಟ್ಟಿಂಗ್ ಆಯ್ಕೆ ಸೆಲೆಕ್ಟ್‌ ಮಾಡಿರಿ.
* ನಂತರ ಸ್ಕ್ರೋಲ್ ಡೌನ್‌ ಮಾಡಿ ಗೂಗಲ್ ಆಯ್ಕೆ ಕ್ಲಿಕ್ ಮಾಡಿ.
* ಗೂಗಲ್‌ ಸೆಟ್ಟಿಂಗ್‌ನಲ್ಲಿ ಗೂಗಲ್‌ ಅಕೌಂಟ್ ಆಯ್ಕೆ ಮಾಡಿರಿ.
* ಡೇಟಾ ಮತ್ತು ಪರ್ಸನೈಲಿಜೇಶನ್ (Data & personalization) ಆಯ್ಕೆ ಕ್ಲಿಕ್ ಮಾಡಿ.
* ಡಿಲೀಟ್ ಎ ಸರ್ವೀಸ್‌ ಅಥವಾ ಡಿಲೀಟ್ ಅಕೌಂಟ್ ಆಯ್ಕೆ ಸೆಲೆಕ್ಟ್‌ ಮಾಡಿ.
* ಡಿಲೀಟ್ ಗೂಗಲ್ ಸರ್ವೀಸ್ ಆಯ್ಕೆ ಕ್ಲಿಕ್‌ ಮಾಡಿರಿ.
* ಜಿ ಮೇಲೆ ಕ್ರ್ಯಾಶ್‌ ಐಕೋನ್ ಕ್ಲಿಕ್ಕ್ ಮಾಡಿರಿ.

ಐಓಎಸ್‌ ಡಿವೈಸ್‌ನಲ್ಲಿ ಡಿಲೀಟ್ ಮಾಡುವ ಕ್ರಮ

ಐಓಎಸ್‌ ಡಿವೈಸ್‌ನಲ್ಲಿ ಡಿಲೀಟ್ ಮಾಡುವ ಕ್ರಮ

* ಡಿವೈಸ್‌ನಲ್ಲಿ ಜಿ ಮೇಲ್ ಆಪ್‌ ತೆರೆಯಿರಿ.
* ಸೆಟ್ಟಿಂಗ್ > ಯೂವರ್‌ ಅಕೌಂಟ್ > ಮ್ಯಾನೆಜ್‌ ಯೂವರ್‌ ಗೂಗಲ್ ಅಕೌಂಟ್.
* ಡೇಟಾ ಮತ್ತು ಪರ್ಸನೈಲಿಜೇಶನ್ (Data & personalization) ಆಯ್ಕೆ ಕ್ಲಿಕ್ ಮಾಡಿ.
* ಗೂಗಲ್‌ ಸೆಟ್ಟಿಂಗ್‌ನಲ್ಲಿ ಗೂಗಲ್‌ ಅಕೌಂಟ್ ಆಯ್ಕೆ ಮಾಡಿರಿ.
* ಡೇಟಾ ಮತ್ತು ಪರ್ಸನೈಲಿಜೇಶನ್ (Data & personalization) ಆಯ್ಕೆ ಕ್ಲಿಕ್ ಮಾಡಿ.
* ಡಿಲೀಟ್ ಎ ಸರ್ವೀಸ್‌ ಅಥವಾ ಡಿಲೀಟ್ ಅಕೌಂಟ್ ಆಯ್ಕೆ ಸೆಲೆಕ್ಟ್‌ ಮಾಡಿ.
* ಡಿಲೀಟ್ ಗೂಗಲ್ ಸರ್ವೀಸ್ ಆಯ್ಕೆ ಕ್ಲಿಕ್‌ ಮಾಡಿರಿ. (ಪಾಸ್‌ವರ್ಡ್‌ ಕೇಳುತ್ತದೆ)
* ಜಿ ಮೇಲೆ ಡಿಲೀಟ್ ಆಯ್ಕೆಯನ್ನು ಕ್ಲಿಕ್ಕ್ ಮಾಡಿರಿ.

Best Mobiles in India

English summary
How to delete a Gmail account.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+