ಅಪ್ಪಿ ತಪ್ಪಿ ಇ-ಮೇಲ್‌ ಬೇರೆಯವರಿಗೆ ಸೆಂಡ್‌ ಆದ್ರೆ, ಚಿಂತೆ ಬಿಡಿ ಹೀಗೆ ಮಾಡಿ!

|

ಗೂಗಲ್‌ ಮಾಲೀಕತ್ವದ ಜಿ-ಮೇಲ್‌ (Gmail) ಸೇವೆಯು ಬಹು ಉಪಯುಕ್ತವಾಗಿದ್ದು, ಬಳಕೆದಾರರಿಗೆ ಮೇಲ್ ಕಳುಹಿಸಲು ಅತ್ಯುತ್ತಮ ಪ್ಲಾಟ್‌ಫಾರ್ಮ್‌ ಆಗಿದೆ. ಬಹುತೇಕ ಆಂಡ್ರಾಯ್ಡ್‌ ಬಳಕೆದಾರರು ಜಿ-ಮೇಲ್‌ ಮೂಲಕವೇ ತಮ್ಮ ಅನೇಕ ವ್ಯವಹಾರಗಳನ್ನು ನಡೆಸುತ್ತಾರೆ. ಬಳಕೆದಾರರು ಹೀಗೆ ಜಿ-ಮೇಲ್‌ನಲ್ಲಿ ಮೇಲ್ ಮಾಡುವಾಗ ಕೆಲವೊಮ್ಮೆ ಅವಸರದಲ್ಲಿ ಅಥವಾ ಆಕಸ್ಮಿಕವಾಗಿ ತಪ್ಪಾದ ಇ-ಮೇಲ್‌ ವಿಳಾಸಕ್ಕೆ ಮೆಸೆಜ್‌/ ಇ ಮೇಲ್ ಕಳುಹಿಸಿರುತ್ತಾರೆ. ಹೀಗೆ ಆದಾಗ ಚಿಂತೆ ಮಾಡಬೇಡಿ.

ತಪ್ಪಾದ ಇ-ಮೇಲ್

ಹೌದು, ಜಿ-ಮೇಲ್ ತಪ್ಪಾದ ಇ-ಮೇಲ್ ಐಡಿ ವಿಳಾಸಕ್ಕೆ ಕಳುಹಿಸಿದ ಮೆಸೆಜ್‌/ ಇ ಮೇಲ್ ಅನ್ನು ಡಿಲೀಟ್ ಮಾಡಲು ಬಳಕೆದಾರರಿಗೆ ಅವಕಾಶ ಇದೆ. ಬಳಕೆದಾರರು ಮೇಲ್ ಕಳುಹಿಸಿದ ಮೇಲೆ 30 ಸೆಕೆಂಡುಗಳ ವರೆಗೂ ಕಾಲಾವಕಾಶ ಇದ್ದು, ಈ ಅವಧಿಯಲ್ಲಿ ಮೆಸೆಜ್‌/ ಇ ಮೇಲ್‌ ಅನ್ನು ತಡೆಯಬಹುದು. ಅದಕ್ಕಾಗಿಯೇ Undo ಎಂಬ ಫೀಚರ್ಸ್‌ ಎಲ್ಲಾ ಬಳಕೆದಾರರಿಗೆ ಪೂರ್ವನಿಯೋಜಿತವಾಗಿ ಲಭ್ಯವಿದೆ.

ಟೈಮಿಂಗ್

ಜಿ-ಮೇಲ್ ನಲ್ಲಿ Undo ಆಯ್ಕೆ ಇದ್ದು, ಬಳಕೆದಾರರಿಗೆ ಟೈಮಿಂಗ್ ಸೆಟ್ ಮಾಡುವ ಅವಕಾಶ ಸಹ ನೀಡಿದೆ. ಬಳಕೆದಾರರು ಬಫರ್ ಟೈಮ್‌ ಅನ್ನು ಕನಿಷ್ಠ 5 ಸೆಕೆಂಡ್‌ ನಿಂದ ಗರಿಷ್ಠ 30 ಸೆಕೆಂಡ್‌ಗಳ ವರೆಗೆ ಸೆಟ್ ಮಾಡಬಹುದಾಗಿದೆ. ಹಾಗಾದರೇ ತಪ್ಪಾಗಿ ಕಳುಹಿಸಿದ ಇ-ಮೇಲ್‌ ಅನ್ನು ರದ್ದುಗೊಳಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ತಪ್ಪಾಗಿ ಕಳುಹಿಸಿದ ಇ-ಮೇಲ್‌ ಅನ್ನು ರದ್ದುಪಡಿಸಲು ಈ ಕ್ರಮ ಅನುಸರಿಸಿ:

ತಪ್ಪಾಗಿ ಕಳುಹಿಸಿದ ಇ-ಮೇಲ್‌ ಅನ್ನು ರದ್ದುಪಡಿಸಲು ಈ ಕ್ರಮ ಅನುಸರಿಸಿ:

- ಡೆಸ್ಕ್‌ಟಾಪ್‌ನಲ್ಲಿ/ ಲ್ಯಾಪ್‌ಟಾಪ್‌ನಲ್ಲಿ ಜಿ-ಮೇಲ್ ತೆರೆಯಿರಿ.
- ನಂತರ ಸೆಟ್ಟಿಂಗ್ಸ್‌ಗೆ ಹೋಗಿ.
- ಬಳಿಕ ಜನರಲ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
- ಕಳುಹಿಸುವಿಕೆಯನ್ನು ರದ್ದುಮಾಡು ಆಯ್ಕೆಮಾಡಿ, ಅಲ್ಲಿ ಡ್ರಾಪ್‌ಡೌನ್ ಪಟ್ಟಿ ಕಾಣಿಸುತ್ತದೆ.(UNDO)
- ಇಲ್ಲಿಂದ, ಕಳುಹಿಸಿದ ಇ-ಮೇಲ್‌ ರದ್ದುಗೊಳಿಸಲು (UNDO) ನೀವು 5, 10, 20 ಅಥವಾ 30 ಸೆಕೆಂಡುಗಳ ನಡುವಿನ ಸಮಯವನ್ನು ಆಯ್ಕೆ ಮಾಡಬಹುದು.
- ನೀವು 30 ಸೆಕೆಂಡ್‌ ಕಾಲಮಿತಿಯನ್ನು ಆಯ್ಕೆ ಮಾಡಿಕೊಳ್ಳಿರಿ.

ಡೆಸ್ಕ್‌ಟಾಪ್‌ನಲ್ಲಿ

ಡೆಸ್ಕ್‌ಟಾಪ್‌ನಲ್ಲಿರುವ ಜಿ-ಮೇಲ್‌ ಬಳಕೆದಾರರು ಡೆಸ್ಕ್‌ಟಾಪ್‌ನಲ್ಲಿ ಸ್ಕ್ರೀನ್‌ನ ಕೆಳಗಿನ ಎಡಭಾಗದಲ್ಲಿ ಮತ್ತು ಮೊಬೈಲ್‌ನಲ್ಲಿ ಕೆಳಗಿನ ಬಲಭಾಗದಲ್ಲಿ ತೇಲುತ್ತಿರುವ ಕಪ್ಪು ಪೆಟ್ಟಿಗೆಯಲ್ಲಿ ರದ್ದುಗೊಳಿಸುವ (UNDO) ಲಿಂಕ್ ಕಾಣಿಸುತ್ತದೆ. 30 ಸೆಕೆಂಡ್‌ಗಳ ಸಮಯ ಮುಗಿಯುವ ಮೊದಲು ಬಳಕೆದಾರರು UNDO ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಅವರ ಇ-ಮೇಲ್‌ ಹೊರಹೋಗುವುದಿಲ್ಲ. ಬಳಕೆದಾರರು ಇಮೇಲ್ ಅನ್ನು ಮರಳಿ ಎಡಿಟ್ ಮಾಡಬಹುದು ಅಥವಾ ಅದನ್ನು ಸಂಪೂರ್ಣವಾಗಿ ಡಿಲೀಟ್‌ ಮಾಡಬಹುದು ಮತ್ತು ತಿರಸ್ಕರಿಸಬಹುದು.

ಜಿ-ಮೇಲ್‌ನಲ್ಲಿ ಈ ಆಯ್ಕೆ ಎಂದಾದರೂ ಬಳಕೆ ಮಾಡಿದ್ದಿರಾ?

ಜಿ-ಮೇಲ್‌ನಲ್ಲಿ ಈ ಆಯ್ಕೆ ಎಂದಾದರೂ ಬಳಕೆ ಮಾಡಿದ್ದಿರಾ?

ಮೆಸೇಜ್‌ ಫಾಸ್ಟರ್‌
ಮೆಸೇಜ್‌ ಫಾಸ್ಟರ್‌ ಜಿಮೇಲ್ ಹೊಂದಿರುವ ಒಂದು ಸುಧಾರಿತ ಟ್ಯಾಬ್ ಆಯ್ಕೆ ಯಾಗಿದೆ. ನೀವು ಸಾಮಾನ್ಯ ವಿಧಾನದ ಪರವಾಗಿ ಸಂಭಾಷಣೆಯನ್ನು ಆರ್ಕೈವ್ ಮಾಡಿದಾಗ ಅಥವಾ ಡಿಲೀಟ್ ಮಾಡಿದ ತಕ್ಷಣ ನಿಮ್ಮ ಪಟ್ಟಿಯಲ್ಲಿರುವ ಮುಂದಿನ ಅಥವಾ ಹಿಂದಿನ ಇಮೇಲ್‌ಗೆ ಇದು ನಿಮ್ಮನ್ನು ಕರೆದೊಯ್ಯುತ್ತದೆ. ನೀವು ಜಿ-ಮೇಲ್‌ ನ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಮತ್ತು ಆಂಡ್ರಾಯ್ಡ್‌ನಲ್ಲಿ ಆಯ್ಕೆಯನ್ನು ಪ್ರವೇಶಿಸಬಹುದು. ಐಒಎಸ್‌ನಲ್ಲಿ ಈ ಆಯ್ಕೆ ಲಭ್ಯವಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ.

ಶೆಡ್ಯೂಲ್‌ ಇಮೇಲ್‌

ಶೆಡ್ಯೂಲ್‌ ಇಮೇಲ್‌

ನಿಗದಿತ ಸಮಯದಲ್ಲಿ ಯಾರಿಗಾದರೂ ಇಮೇಲ್ ಕಳುಹಿಸಲು ಬಯಸಿದರೆ, ಮೊದಲೇ ಇಮೇಲ್ ಅನ್ನು ಶೆಡ್ಯೂಲ್‌ ಮಾಡುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ನಿಮ್ಮ ಪಿಸಿಯಲ್ಲಿ ಜಿಮೇಲ್ ಸೈಟ್‌ನಲ್ಲಿ ಇಮೇಲ್ ಕಂಪೋಸ್ ಮಾಡಿದ ನಂತರ, ಬಟನ್‌ನ ಬಲಭಾಗದಲ್ಲಿರುವ ಚಿಕ್ಕದಾದ ಬಾಣದ ಮೇಲೆ ಕ್ಲಿಕ್ ಮಾಡಿ ಮತ್ತು "ಕಳುಹಿಸಲು ವೇಳಾಪಟ್ಟಿ" ಕ್ಲಿಕ್ ಮಾಡಿ. ಮುಂದೆ ನಿಮ್ಮ ಇಮೇಲ್ ಕಳುಹಿಸಲು ಸೂಚಿಸಿದ ಸಮಯಗಳಲ್ಲಿ ಒಂದನ್ನು ನೀವು ಆಯ್ಕೆ ಮಾಡಬಹುದು, ಅಥವಾ ನೀವು ಬಯಸುವ ಯಾವುದೇ ಸಮಯವನ್ನು ಹೊಂದಿಸಲು "ದಿನಾಂಕ ಮತ್ತು ಸಮಯವನ್ನು ಆರಿಸಿ" ಅನ್ನು ಆಯ್ಕೆ ಮಾಡಿ. ನಿಮ್ಮ ಆಂಡ್ರಾಯ್ಡ್ ಅಥವಾ ಐಫೋನ್‌ನಲ್ಲಿನ ಜಿಮೇಲ್ ಆಪ್ ಬಳಸಿ ಕಂಪೋಸ್ ಸ್ಕ್ರೀನ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡುವ ಮೂಲಕ ಮತ್ತು ಡ್ರಾಪ್-ಡೌನ್ ಮೆನುವಿನಿಂದ "ಕಳುಹಿಸಲು ವೇಳಾಪಟ್ಟಿ" ಆಯ್ಕೆಮಾಡಿ.

Best Mobiles in India

English summary
Delete an email you accidentally sent on Gmail? Here is the simplest way to delete a sent email in Gmail.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X