ನಿಮ್ಮ ಡಿವೈಸ್‌ನಲ್ಲಿ ಸ್ಟೋರೇಜ್ ಉಳಿಸಲು, ಬ್ಯಾಟರಿ ಲೈಫ್ ಹೆಚ್ಚಿಸಲು ಹೀಗೆ ಮಾಡಿ!

|

ಇತ್ತೀಚಿನ ಹೊಸ ಸ್ಮಾರ್ಟ್‌ಫೋನ್‌ಗಳು ಅಧಿಕ ಸ್ಟೋರೇಜ್ ಹಾಗೂ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಫೀಚರ್ಸ್‌ಗಳನ್ನು ಪಡೆದಿವೆ. ಅದಾಗ್ಯೂ ಫೋನ್ ಸ್ಟೋರೇಜ್ ಫುಲ್ ಹಾಗೂ ಬೇಗ ಬ್ಯಾಟರಿ ಖಾಲಿ ಆಗುವುದು ಕೆಲವು ಸ್ಮಾರ್ಟ್‌ಫೋನ್ ಬಳಕೆದಾರರ ಸಮಸ್ಯೆಯಾಗಿರುತ್ತದೆ. ಸ್ಟೋರೇಜ್ ಫುಲ್‌ನಿಂದಾಗಿ ಹೊಸ ಆಪ್ ಡೌನ್‌ಲೋಡ್, ವಿಡಿಯೋ/ಸಾಂಗ್ ಡೌನ್‌ಲೋಡ್ ಕಾರ್ಯಗಳು ನಿಧಾನವಾಗುತ್ತವೆ. ಆದರೆ ಸ್ಟೋರೇಜ್ ಖಾಲಿ ಮಾಡುವುದೇ ಇದಕ್ಕೆ ಉತ್ತಮ ದಾರಿಯಾಗಿದೆ.

ಅಪ್ಲಿಕೇಶನ್‌ಗಳನ್ನು

ಬಳಕೆದಾರರು ಕೆಲವು ಅಪ್ಲಿಕೇಶನ್‌ಗಳನ್ನು ಫೋನಿನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಆದರೆ ಅವುಗಳಲ್ಲಿ ಕೆಲವೊಂದು ಉಪಯುಕ್ತವಾಗಿ ಇರುವುದಿಲ್ಲ ಹಾಗೂ ಅವುಗಳ ಬಳಕೆ ಸಹ ಮಾಡುತ್ತಿರುವುದಿಲ್ಲ. ಅಂತ ಆಪ್‌ಗಳಿಗೆ ಗೇಟ್ ಪಾಸ್ ನೀಡುವ ಮೂಲಕ ಫೋನ್ ಸ್ಟೋರೇಜ್ ಕ್ಲಿಯರ್ ಮಾಡುವುದು ಉತ್ತಮ ಆಯ್ಕೆ ಆಗಿದೆ. ಹೀಗೆ ಅನಗತ್ಯ ಆಪ್‌ಗಳ ಅನ್‌ಇನ್‌ಸ್ಟಾಲ್/ಡಿಲೀಟ್ ಮಾಡುವುದರಿಂದ ಸ್ಟೋರೇಜ್ ಜೊತೆಗೆ ಬ್ಯಾಟರಿ ಲೈಫ್‌ಗೂ ಸಹಾಯಕವಾಗಲಿದೆ. ಅನಗತ್ಯ ಆಪ್‌ಗಳು ಹಿನ್ನಲೆಯಲ್ಲಿ ಬ್ಯಾಟರಿ ಕಬಳಿಸುವುದು ತಡೆಯಬಹುದು. ಬ್ಯಾಟರಿ ಬಾಳಿಕೆ ಹೆಚ್ಚಿಸಬಹುದು. ಹಾಗಾದರೇ ಭಿನ್ನ ಓಎಸ್‌ ಡಿವೈಸ್‌ಗಳಲ್ಲಿ ಉಪಯುಕ್ತ ಇರದ ಆಪ್‌ ಅನ್‌ಇನ್‌ಸ್ಟಾಲ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ ಅಥವಾ ಐಪ್ಯಾಡ್‌ನಲ್ಲಿ ಆಪ್ಸ್‌ ಡಿಲೀಟ್ ಮಾಡುವುದು ಹೇಗೆ

ಐಫೋನ್ ಅಥವಾ ಐಪ್ಯಾಡ್‌ನಲ್ಲಿ ಆಪ್ಸ್‌ ಡಿಲೀಟ್ ಮಾಡುವುದು ಹೇಗೆ

ಐಫೋನ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಲು, ನಿಮ್ಮ ಹೋಮ್‌ಪೇಜ್‌ಗೆ ಹೋಗಿ ಡಿಲೀಟ್ ಮಾಡುವ ಆಪ್‌ ಟ್ಯಾಪ್ ಮಾಡಿ ಹಿಡಿಯಿರಿ ನಂತರ Remove App ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ. ನಂತರ, Delete App ಆಯ್ಕೆ ಮಾಡಿ. ಅದು ಆ ಅಪ್ಲಿಕೇಶನ್‌ಗೆ ಸಂಬಂಧಿಸಿದ ಯಾವುದೇ ಡೇಟಾವನ್ನು ತೊಡೆದುಹಾಕುತ್ತದೆ.

ಆಂಡ್ರಾಯ್ಡ್‌ನಲ್ಲಿ ಆಪ್ಸ್‌ ಡಿಲೀಟ್ ಮಾಡುವುದು ಹೇಗೆ

ಆಂಡ್ರಾಯ್ಡ್‌ನಲ್ಲಿ ಆಪ್ಸ್‌ ಡಿಲೀಟ್ ಮಾಡುವುದು ಹೇಗೆ

ಆಂಡ್ರಾಯ್ಡ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಲು, ಮೊದಲಿಗೆ ಡಿಲೀಟ್ ಮಾಡಲಿಚ್ಛಿಸುವ ಅಪ್ಲಿಕೇಶನ್ ಅನ್ನು ಒತ್ತಿ ಹಿಡಿದಿಟ್ಟುಕೊಳ್ಳವುದು. ನಂತರ ಅದನ್ನು ಡಿಲೀಟ್ ಮಾಡಲು ಪರದೆಯ ಮೇಲಿನ ಬಲಭಾಗದಲ್ಲಿರುವ ಕಾಣುವ ಅನ್‌ಇನ್‌ಸ್ಟಾಲ್‌ ಆಯ್ಕೆ ಎಳೆಯಿರಿ.

ಮ್ಯಾಕ್‌ನಲ್ಲಿ ಆಪ್ಸ್ ಡಿಲೀಟ್ ಮಾಡುವುದು ಹೇಗೆ

ಮ್ಯಾಕ್‌ನಲ್ಲಿ ಆಪ್ಸ್ ಡಿಲೀಟ್ ಮಾಡುವುದು ಹೇಗೆ

ನಿಮ್ಮ ಮ್ಯಾಕ್‌ನಲ್ಲಿನ ಕೆಲವು ಅಪ್ಲಿಕೇಶನ್‌ಗಳನ್ನು ನೀವು ಅಳಿಸಲು ಸಾಧ್ಯವಿಲ್ಲ. ಲಾಂಚ್‌ಪ್ಯಾಡ್ ಅದನ್ನು ಪೂರೈಸಲು ಸುಲಭವಾದ ಮಾರ್ಗವಾಗಿದೆ. ಅದನ್ನು ತೆರೆಯಿರಿ ಡಿಲೀಟ್ ಮಾಡುವ ಆಪ್‌ ಅನ್ನು ಹಿಡಿದುಕೊಳ್ಳಿ. ಅಪ್ಲಿಕೇಶನ್ ಐಕಾನ್‌ನ ಮೇಲಿನ ಎಡ ಭಾಗದಲ್ಲಿಯಲ್ಲಿ "x" ಕಾಣಿಸಿಕೊಳ್ಳುತ್ತದೆ. ನಿಮ್ಮ ಮ್ಯಾಕ್‌ನಲ್ಲಿ ಅಪ್ಲಿಕೇಶನ್ ಅನ್‌ಇನ್‌ಸ್ಟಾಲ್ ಮಾಡಲು "x" ಕ್ಲಿಕ್ ಮಾಡಿ.

ವಿಂಡೋಸ್ 10 ನಲ್ಲಿ ಆಪ್ಸ್  ಮಾಡುವುದು ಹೇಗೆ

ವಿಂಡೋಸ್ 10 ನಲ್ಲಿ ಆಪ್ಸ್ ಮಾಡುವುದು ಹೇಗೆ

ವಿಂಡೋಸ್ 10 ನಲ್ಲಿ ಪ್ರೋಗ್ರಾಂಗಳನ್ನು ಡಿಲೀಟ್ ಸ್ವಲ್ಪ ಹೆಚ್ಚು ಸಂಕೀರ್ಣವಾಗಿದೆ. ಏಕೆಂದರೆ ಪ್ರೋಗ್ರಾಂ ಫೋಲ್ಡರ್ ಅಥವಾ ಫೈಲ್ ಅನ್ನು ಡಿಲೀಟ್ ಮಾಡುವುದರಿಂದ ಸಮಸ್ಯೆಗಳು ಉಂಟಾಗಬಹುದು. ವಿಂಡೋಸ್‌ 10ನಲ್ಲಿ ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ ತೆರೆದು ಅಲ್ಲಿ "Apps and Features" ಪುಟದ ಮೂಲಕ ಹೋಗುವುದು ಉತ್ತಮ. ಆ ನಂತರ, ಅಪ್ಲಿಕೇಶನ್ ಆಯ್ಕೆ ಮಾಡಿ ಮತ್ತು "Uninstall" ಕ್ಲಿಕ್ ಮಾಡಿ.

Best Mobiles in India

English summary
How To Delete Apps On Any Device To Free Up Storage Space And Save Battery Life.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X