ನಿಮಗೆ Google ಸಹವಾಸ ಬೇಡವೇ ಬೇಡಾ ಎನ್ನುವುದಾದರೇ ಹೀಗೆ ಮಾಡಿರಿ!

|

ಪ್ರತಿಯೊಬ್ಬರಿಗೂ ಗೂಗಲ್ (Google) ಅಕೌಂಟ್‌ ಹಲವು ಡಿಜಿಟಲ್ ಸೇವೆಗಳ ಕೀಲಿ ಕೈ ಆಗಿದೆ. ಅನೇಕ ಆನ್‌ಲೈನ್ ಸೇವೆಗಳನ್ನು ಪಡೆಯುವಾಗ ಗೂಗಲ್ ಅಕೌಂಟ್‌ ಅಗತ್ಯ ಇರುತ್ತದೆ. ಗೂಗಲ್‌ ಸಂಸ್ಥೆಯ ಜಿ-ಮೇಲ್ ಸೇವೆಯು ಅದರ ಒಂದು ಭಾಗವಾಗಿದೆ. ಇಷ್ಟೆಲ್ಲಾ ಬೇರೆತಿರುವ ಗೂಗಲ್‌ ಖಾತೆಯನ್ನು ನೀವು ಡಿಲೀಟ್ ಮಾಡಬಯಸಿದರೇ, ಇಲ್ಲವೇ ನಿಮ್ಮ ಜಿ-ಮೇಲ್ ಖಾತೆ ಕ್ಲೋಸ್ ಮಾಡಬಯಸಿದರೇ, ಅಥವಾ ಗೂಗಲ್‌ ಸಹವಾಸವೇ ಬೇಡ ಎಂದು ದೂರವಿರಲು ಬಯಸಿದರೇ ಅದಕ್ಕೂ ಅವಕಾಶ ಇದೆ.

ಸಹವಾಸದಿಂದ

ಹೌದು, ಗೂಗಲ್ ಬಳಕೆದಾರರು ಶಾಶ್ವತವಾಗಿ ಗೂಗಲ್ ಅಕೌಂಟ್‌ ಅನ್ನು ಡಿಲೀಟ್ ಮಾಡುವ ಮೂಲಕ ಗೂಗಲ್‌ ಸಹವಾಸದಿಂದ ದೂರ ಉಳಿಯಬಹುದು. ಗೂಗಲ್‌ ಅಕೌಂಟ್‌ ಅನ್ನು ಪರ್ಮನೆಂಟ್ ಆಗಿ ಕ್ಲೋಸ್ ಮಾಡಲು ಆಯ್ಕೆ ಇದೆ. ಆದರೆ ಗೂಗಲ್‌ ಅಕೌಂಟ್‌ ಅನ್ನು ಡಿಲೀಟ್ ಮಾಡುವ ಮುನ್ನ ಬಳಕೆದಾರರು ತಮ್ಮ ಯೂಟ್ಯೂಬ್, ಗೂಗಲ್‌ ಫೋಟೊಸ್, ಗೂಗಲ್ ಪ್ಲೇ ಸೇರಿದಂತೆ ಇತರೆ ಗೂಗಲ್‌ ಆಪ್‌/ಸೇವೆಗಳಿಗೆ ಸಂಬಂಧಿಸದ ಮಾಹಿತಿ, ಫೈಲ್ ಅಥವಾ ಡಾಟಾ ಬ್ಯಾಕ್‌ಅಪ್ ಮಾಡಿಕೊಳ್ಳುವುದು ಸೂಕ್ತ. ಏಕೆಂದರೇ ಗೂಗಲ್ ಅಕೌಂಟ್ ಕ್ಲೋಸ್ ಆದ್ರೆ, ಡಾಟಾ ಡಿಲೀಟ್ ಆಗುತ್ತವೆ. ಹಾಗಾದರೇ ಶಾಶ್ವತವಾಗಿ ಗೂಗಲ್ ಅಕೌಂಟ್ ಕ್ಲೋಸ್/ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಶಾಶ್ವತವಾಗಿ ಗೂಗಲ್ ಅಕೌಂಟ್ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿ:

ಶಾಶ್ವತವಾಗಿ ಗೂಗಲ್ ಅಕೌಂಟ್ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ನಿಮ್ಮ ವೆಬ್ ಬ್ರೌಸರ್‌ನಲ್ಲಿ https://myaccount.google.com/ ಮೂಲಕ ನಿಮ್ಮ Google ಖಾತೆಯ ಖಾತೆ ಸೆಟ್ಟಿಂಗ್‌ಗಳನ್ನು ತೆರೆಯಿರಿ.
ಹಂತ 2: ಈಗ, ಎಡಭಾಗದಲ್ಲಿ ಲಭ್ಯವಿರುವ ಮೆನುವಿನಿಂದ ಡೇಟಾ ಮತ್ತು ವೈಯಕ್ತೀಕರಣದ ಮೆನು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: 'ಡೌನ್‌ಲೋಡ್ ಮಾಡಿ, ಅಳಿಸಿ ಅಥವಾ ನಿಮ್ಮ ಡೇಟಾಗಾಗಿ ಯೋಜನೆಯನ್ನು ಮಾಡಿ' ಎಂಬ ಆಯ್ಕೆಯನ್ನು ನೀವು ನೋಡುವವರೆಗೆ ವಿವಿಧ ಆಯ್ಕೆಗಳ ಮೂಲಕ ಕೆಳಗೆ ಸ್ಕ್ರಾಲ್ ಮಾಡಿ.
ಹಂತ 4: ನೀವು 'ಸೇವೆ ಅಥವಾ ನಿಮ್ಮ ಖಾತೆಯನ್ನು ಅಳಿಸಿ' ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಹಂತ 5: ಬಳಿಕ 'Delete your Google Account' ಸೆಟ್ಟಿಂಗ್ ಅನ್ನು ಕ್ಲಿಕ್ ಮಾಡಿ.

ಕ್ಲಿಕ್

ಒಮ್ಮೆ ನೀವು ಈ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಅನುಗುಣವಾದ ಗೂಗಲ್‌ ಅಕೌಂಟ್‌ ಪಾಸ್‌ವರ್ಡ್ ಅನ್ನು ನಮೂದಿಸಲು ಕೇಳಲು ಗೂಗಲ್‌ ನಿಮ್ಮನ್ನು ಕೇಳುತ್ತದೆ. ಪಾಸ್‌ವರ್ಡ್‌ ನಮೂದಿಸಿ ದೃಢೀಕರಿಸಿದ ನಂತರ, ನಿಮ್ಮ ಗೂಗಲ್ ಅಕೌಂಟ್‌ ಡಿಲೀಟ್ ಮಾಡಲು ಸಾಧ್ಯವಾಗುತ್ತದೆ.

ನೀವು ಸತ್ತ ಮೇಲೆ ನಿಮ್ಮ 'Gmail' ಖಾತೆ 'ಡಿ ಆಕ್ಟಿವ್' ಆಗಲು ಹೀಗೆ ಮಾಡಿ

ನೀವು ಸತ್ತ ಮೇಲೆ ನಿಮ್ಮ 'Gmail' ಖಾತೆ 'ಡಿ ಆಕ್ಟಿವ್' ಆಗಲು ಹೀಗೆ ಮಾಡಿ

ಪ್ರಸ್ತುತ ಪ್ರತಿಯೊಬ್ಬರು ಜಿ-ಮೇಲ್ ಅಕೌಂಟ್ ಆಯ್ಕೆಯನ್ನು ಹೊಂದಿರುತ್ತಾರೆ. ಜಿ- ಮೇಲ್ ಕೇವಲ ಮೇಲ್ ಮಾಡಲು ಮಾತ್ರವಲ್ಲದೇ ಸಂಪೂರ್ಣ ಡಿಜಿಟಲ್ ಲೈಫ್‌ನ ಕೀಲಿಕೈ ಇದ್ದಂತೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇಬೇಕಾಗಿದೆ. ಏಕೆಂದರೇ ಪ್ರತಿಯೊಂದು ಡಿಜಿಟಲ್ ಸೇವೆಯು ಬಳಕೆದಾರರ ಜಿ-ಮೇಲ್ ಐಡಿ ನಮೂದಿಸಲು ಕೇಳುತ್ತದೆ. ಇಷ್ಟೆಲ್ಲಾ ಅಗತ್ಯವಾಗಿರುವ ಜಿ-ಮೇಲ್ ನೀವು ಸತ್ತ ಮೇಲೆ ಏನಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದಿರಾ?.ಬಹುಶಃ ಯೋಚಿಸಿರೋದಿಲ್ಲ.

ಖಾತೆ

ಹೌದು, ಸ್ಮಾರ್ಟ್‌ಫೋನ್ ಅಪ್ಲಿಕೇಶನ್ಸ್, ಆನ್‌ಲೈನ್ ತಾಣಗಳು, ಗೂಗಲ್ ಡ್ರೈವ್, ಹೀಗೆ ಹಲವಾರು ಕಡೆ ನೀವು ಜಿ-ಮೇಲ್ ಐಡಿ ನೀಡಿ ಡಿಜಿಟಲ್ ಸೇವೆಗಳನ್ನು ಆಕ್ಸಸ್‌ ಮಾಡಿರುತ್ತಿರಿ. ನಿಮ್ಮ ಜಿ-ಮೇಲ್ ಖಾತೆ ಆಕ್ಟಿವ್ ಆಗಿರುತ್ತದೆ. ಮುಂದೊಂದಿನ ನೀವು ಇಲ್ಲವಾದಾಗ ನಿಮ್ಮ ಜಿ-ಮೇಲ್ ಐಡಿ ಎನಾಗುತ್ತದೆ ಎಂಬ ಪ್ರಶ್ನೇ ನಿಮ್ಮನ್ನು ಕಾಡಿರಬಹುದು. ಅಂಥ ಸಮಯಕ್ಕೆ ಡಿಆಕ್ಟಿವ್ ಮಾಡುವ ಆಯ್ಕೆಗಳನ್ನು ಗೂಗಲ್ ನೀಡಿದೆ.

ಬಳಕೆದಾರರು ಇಲ್ಲವಾದಾಗ ಅವರ ಖಾತೆಯನ್ನು ಸ್ಮರಿಸುವ (memorialize) ಆಯ್ಕೆಯನ್ನು ಫೇಸ್‌ಬುಕ್‌ನಲ್ಲಿ ಕಾಣಬಹುದು. ಹಾಗೆಯೇ ಜಿ-ಮೇಲ್‌ನಲ್ಲಿ ಸಹ ಖಾತೆಯನ್ನು ನಿಷ್ಕ್ರಿಯ ಮಾಡುವ ಅವಕಾಶಗಳನ್ನು ಗೂಗಲ್ ನೀಡಿದ್ದು, ಅದಕ್ಕಾಗಿ 'ಪ್ರಿ ಸೆಲೆಕ್ಟೆಡ್‌ ಪೀರಿಡ್' ಆಯ್ಕೆ ಮತ್ತು ಖಾತೆ ಡಿಆಕ್ಟಿವ್ ಮಾಡಲು ಕುಟುಂಬ ಸದಸ್ಯರಿಗೆ ಆಕ್ಸಸ್‌ ನೀಡುವ ಆಯ್ಕೆಗಳನ್ನು ನೀಡಿದೆ. ಹಾಗಾದರೇ ನೀವಿಲ್ಲದ ಕಾಲಕ್ಕೆ ನಿಮ್ಮ ಜಿ-ಮೇಲ್ ಖಾತೆ ಡಿಆಕ್ಟಿವ್ ಆಗಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮುಂದೆ ಓದಿರಿ.

ಹೊಂದಿರುವ

ಜಿ-ಮೇಲ್ ಖಾಯೆಯನ್ನು ಹೊಂದಿರುವ ಬಳಕೆದಾರರು ಇಲ್ಲವಾದಾಗ ಅವರ ಖಾತೆಯನ್ನು ನಿಷ್ಕ್ರಿಯ ಮಾಡುವ ಆಯ್ಕೆ ಗೂಗಲ್‌ ಸೆಟ್ಟಿಂಗ್‌ನಲ್ಲಿದೆ. ಬಳಕೆದಾರರು ಪ್ರಿ ಸೆಲೆಕ್ಟೆಡ್ ಪೀರಿಡ್ ಆಯ್ಕೆಯ ಡಿಆಕ್ಟಿವ್ ಮಾಡುವ ಅವಕಾಶ ನೀಡಿದೆ. ಬಳಕೆದಾರ ಇಲ್ಲವಾದಾಗ ಅವರ ಕುಟುಂಬ ಸದಸ್ಯರು ಖಾತೆ ಡಿಆಕ್ಟಿವ್ ಮಾಡಲು ಆಕ್ಸಸ್ ನೀಡುವ ಆಯ್ಕೆ ಗೂಗಲ್ ನೀಡಿದೆ.

ಪ್ರಿ ಸೆಲೆಕ್ಟೆಡ್‌ ಪೀರಿಡ್‌-ಸೆಟ್‌ ಮಾಡಿ

ಪ್ರಿ ಸೆಲೆಕ್ಟೆಡ್‌ ಪೀರಿಡ್‌-ಸೆಟ್‌ ಮಾಡಿ

* ಮೊದಲು myaccount.google.com ತೆರೆಯಿರಿ
* ಪ್ರೈವೆಸಿ ಮತ್ತು ಪರ್ನಲೈಜೇಶನ್ ಆಯ್ಕೆಯಲ್ಲಿ ಮ್ಯಾನೇಜ್ ಯೂವರ್ ಡೇಟಾ ಮತ್ತು ಪರ್ನಲೈಜೇಶನ್ ಆಯ್ಕೆ ಸೆಲೆಕ್ಟ್ ಮಾಡಿರಿ
* ನಂತರ ಮೇಕ್‌ ಪ್ಲಾನ್ ಫಾರ್ ಡೇಟಾ ಸೆಷನ್ ಆಯ್ಕೆ ಟ್ಯಾಪ್ ಮಾಡಿರಿ.
* ಆನಂತರ ಸ್ಟಾರ್ಟ್‌ ಆಯ್ಕೆಯನ್ನು ಒತ್ತಿರಿ

ಕಾಂಟ್ಯಾಕ್ಟ್ ಮಾಹಿತಿ ತುಂಬಿರಿ

ಕಾಂಟ್ಯಾಕ್ಟ್ ಮಾಹಿತಿ ತುಂಬಿರಿ

* ನೀವು ಇಲ್ಲವಾದಾಗ ನಿಮ್ಮ ಖಾತೆ ಇನ್ಆಕ್ಟಿವ್ ಆಗಿರದಿದ್ದರೇ ಡಿಆಕ್ಟಿವ್ ಮಾಡಲು ಗೂಗಲ್ ಎಷ್ಟು ತಿಂಗಳು ಕಾಯಬೇಕು ಎನ್ನುವ ಆಯ್ಕೆಯನ್ನು ಸೆಲೆಕ್ಟ್‌ ಮಾಡಿಕೊಳ್ಳಿ.
* 3ತಿಂಗಳು, 6ತಿಂಗಳು, 12ತಿಂಗಳು ಮತ್ತು 18 ತಿಂಗಳು ಆಯ್ಕೆಗಳು ಕಾಣಿಸುತ್ತವೆ.
* ನಿಮ್ಮ ಫೋನ್ ನಂಬರ್ ಮತ್ತು ನಿಮ್ಮ ಕುಟುಂಬದವರ ಫೋನ್ ನಂಬರ್ ನಮೂದಿಸಿ
* ನಿಮ್ಮ ಮೇಲ್ ಐಡಿ ಮತ್ತು ಆಲ್ಟ್ರನೇಟಿವ್ ಮೇಲ್ ಐಡಿ ನೀಡಿರಿ.

ಯಾರಿಗೆ ಖಾತೆ ಆಕ್ಸಸ್‌ ನೀಡುವಿರಿ

ಯಾರಿಗೆ ಖಾತೆ ಆಕ್ಸಸ್‌ ನೀಡುವಿರಿ

* ಯಾರಿಗೆ ಖಾತೆ ಆಕ್ಸಸ್‌ ನೀಡುವಿರಿ ಅವರ ಹೆಸರನ್ನು ಬರೆಯಿರಿ
* ಕುಟುಂಬಸ್ಥರ ಜಿಮೇಲ್ ಐಡಿ ನಮೂದಿಸಿರಿ
* ಹಾಗೆಯೇ ಅವರ ಪೋನ್ ನಂಬರ್ ಬರೆಯಿರಿ (ಬೇಕಿದ್ದರೇ ಮೆಸ್ಸೆಜ್ ಸಹ ಬರೆಯಬಹುದು)
* ಸುಮಾರು 10 ಜನರ ಮಾಹಿತಿ ನಮೂದಿಸಲು ಅವಕಾಶ

ಖಾತೆ ಡಿಲೀಟ್ ಮಾಡಲು ಇಚ್ಚಿಸುವಿರಾ

ಖಾತೆ ಡಿಲೀಟ್ ಮಾಡಲು ಇಚ್ಚಿಸುವಿರಾ

* ಡಿಲೀಟ್ ಮೈ ಇನ್‌ಆಕ್ಟಿವ್ ಗೂಗಲ್ ಅಕೌಂಟ್ ಬಟನ್ ಸೆಲೆಕ್ಟ್ ಮಾಡಿರಿ.
* ನೀವು ಸೆಲೆಕ್ಟ್‌ ಮಾಡಿರುವ ತಿಂಗಳುಗಳ ಆಯ್ಕೆಯ ಅವಧಿ ಮುಗಿದ ಬಳಿಕ ಖಾತೆ ಡಿಲೀಟ್ ಆಗುವುದು
* ಪ್ರಿವ್ಯೂವ್ ಆಯ್ಕೆ ಇದೆ, ನೋಡಿ ಆನಂತರ ಕನ್ಫರ್ಮ್ ಪ್ಲ್ಯಾನ್ ಆಯ್ಕೆ ಕಾಣಿಸಲಿದೆ.
* ಈ ಪ್ರಕ್ರಿಯೇ ಬೇಡವಾದರೇ ಟರ್ನ್ ಆಫ್ ಮೈ ಪ್ಲ್ಯಾನ್ ಆಯ್ಕೆ ಸೆಲೆಕ್ಟ್ ಮಾಡಿಬಿಡಿ.

Most Read Articles
Best Mobiles in India

English summary
Do You want Delete Your Google Account Permanently? Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X