ಫೋನ್‌ಪೇ ಖಾತೆಯಲ್ಲಿ ಶಾಶ್ವತವಾಗಿ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿ!

|

ಸದ್ಯ ಗ್ರಾಹಕರು ಡಿಜಿಟಲ್ ಪೇಮೆಂಟ್‌ಗೆ ವ್ಯವಸ್ಥೆಗೆ ಹೊಂದಿಕೊಂಡಿದ್ದು, ಸಣ್ಣ-ಪುಟ್ಟ ವ್ಯವಹಾರಗಳಿಗೂ ಪೇಮೆಂಟ್/UPI ಆಪ್‌ಗಳ ಮೂಲಕವೇ ಹಣ ವರ್ಗಾವಣೆ ನಡೆಸುತ್ತಾರೆ. ಈ ಪೈಕಿ ಫೋನ್‌ಪೇ ಭಾರತದಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಯುಪಿಐ ಪೇಮೆಂಟ್‌ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಫೋನ್‌ಪೇ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಹಣ ವರ್ಗಾವಣೆ ಸರಳವಾಗಿದೆ. ಹಾಗೆಯೇ ಫೋನ್‌ಪೇ ಖಾತೆಯನ್ನು ಡಿ ಆಕ್ಟಿವೇಟ್ ಮಾಡಬಹುದಾಗಿದೆ.

ಯುಪಿಐ

ಯುಪಿಐ ಪಾವತಿ ಅಪ್ಲಿಕೇಶನ್ ಬಳಕೆದಾರರಿಗೆ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣವನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸುಲಭಗೊಳಿಸುತ್ತದೆ. ನಿಮ್ಮ ಬ್ಯಾಂಕ್ ಖಾತೆಯನ್ನು ಯುಪಿಐ ಇಂಟರ್ಫೇಸ್‌ನೊಂದಿಗೆ ಲಿಂಕ್ ಮಾಡಬೇಕಾಗಿದೆ. ಇದನ್ನು ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಮತ್ತು ಇನ್ನೂ ಹೆಚ್ಚಿನ ಪೇಮೆಂಟ್‌ ಪ್ಲಾಟ್‌ಫಾರ್ಮ್‌ಗಳು ಒದಗಿಸುತ್ತವೆ. ಇತರೆ ಅಪ್ಲಿಕೇಶನ್‌ಗಳಲ್ಲಿರುವಂತೆ ಫೋನ್‌ಪೇ ನಲ್ಲಿಯು ಬ್ಯಾಂಕ್ ಖಾತೆಯನ್ನು ಶಾಶ್ವತವಾಗಿ ಡಿ ಆಕ್ಟಿವೇಟ್ ಸಹ ಮಾಡಲು ಅವಕಾಶ ನೀಡಲಾಗಿದೆ. ಹಾಗಾದರೇ ಫೋನ್‌ಪೇ ಖಾತೆಯನ್ನು ಡಿ ಆಕ್ಟಿವೇಟ್ ಮಾಡುವ ಹಂತಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಫೋನ್‌ಪೇ ಅಪ್ಲಿಕೇಶನ್‌ನಿಂದ ಬ್ಯಾಂಕ್ ಖಾತೆಯನ್ನು ತೆಗೆದುಹಾಕಲು ಈ ಕ್ರಮ ಅನುಸರಿಸಿ:

ಫೋನ್‌ಪೇ ಅಪ್ಲಿಕೇಶನ್‌ನಿಂದ ಬ್ಯಾಂಕ್ ಖಾತೆಯನ್ನು ತೆಗೆದುಹಾಕಲು ಈ ಕ್ರಮ ಅನುಸರಿಸಿ:

ಹಂತ 1. ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ-ಆಪ್‌ನ ಕೆಳಗಿನ ಮೆನುವಿನಲ್ಲಿ 'My Money' ಆಯ್ಕೆಯನ್ನು ನೀವು ಕಾಣವಿರಿ. ಆಗ ಈ ಆಯ್ಕೆಯನ್ನು ಕ್ಲಿಕ್ ಮಾಡಿರಿ.

ಹಂತ 2. ಈ ಆಯ್ಕೆಯು ನೀವು ಫೋನ್‌ಪೇ ಅಪ್ಲಿಕೇಶನ್‌ನೊಂದಿಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಗೆ ನಿಮ್ಮನ್ನು ಕರೆದೊಯ್ಯುತ್ತದೆ.

ಹಂತ 3. ಫೋನ್‌ಪೆಯೊಂದಿಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳ ಪಟ್ಟಿಯನ್ನು ಇಲ್ಲಿ ನೀವು ನೋಡುತ್ತೀರಿ ಆದ್ದರಿಂದ ನೀವು ಅಪ್ಲಿಕೇಶನ್‌ನಿಂದ ತೆಗೆದುಹಾಕಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿ.

ಫೋನ್‌ಪೇ

ಹಂತ 4. ಅಪ್ಲಿಕೇಶನ್‌ನಿಂದ ನಿಮ್ಮ ಬ್ಯಾಂಕ್ ಖಾತೆಯನ್ನು ಅನ್ಲಿಂಕ್ ಮಾಡುವ ಆಯ್ಕೆಯನ್ನು ನೀವು ಪಡೆಯುತ್ತೀರಿ ಎಂದು ಇಲ್ಲಿ ನೀವು ಸುಲಭವಾಗಿ ನೋಡಬಹುದು.

ಹಂತ 5. ಫೋನ್‌ಪೇ ಅಪ್ಲಿಕೇಶನ್‌ನಿಂದ ಬ್ಯಾಂಕ್ ಖಾತೆಯನ್ನು ತೆಗೆದುಹಾಕಲು ನೀವು ಅನುಸರಿಸಬೇಕಾದ ಅಂತಿಮ ಹಂತ ಇದು.

ಫೋನ್‌ಪೇ ಖಾತೆಯನ್ನು ಶಾಶ್ವತವಾಗಿ ಡಿ ಆಕ್ಟಿವೇಟ್ ಮಾಡುವ ಹಂತಗಳು:

ಫೋನ್‌ಪೇ ಖಾತೆಯನ್ನು ಶಾಶ್ವತವಾಗಿ ಡಿ ಆಕ್ಟಿವೇಟ್ ಮಾಡುವ ಹಂತಗಳು:

* ಫೋನ್‌ಪೇ ಆಪ್‌ ತೆರೆಯಿರಿ ಬಲ ಭಾಗದಲ್ಲಿನ ಪ್ರಶ್ನೆ ಗುರುತು ಐಕಾನ್ ಕಾಣಿಸುತ್ತದೆ. ಫೋನ್‌ಪೇ ಖಾತೆಯನ್ನು ಶಾಶ್ವತವಾಗಿ ಅಳಿಸಲು ಪ್ರಕ್ರಿಯೆಯನ್ನು ಪ್ರಾರಂಭಿಸಲು ಐಕಾನ್ ಆಯ್ಕೆಮಾಡಿ.

* ನಂತರ My Account ಮತ್ತು KYC ಆಯ್ಕೆ ಸೆಲೆಕ್ಟ್ ಮಾಡಿರಿ.

* ಆನಂತರ Account Related Issues ಆಯ್ಕೆಯನ್ನು ಆರಿಸಿಕೊಳ್ಳಿರಿ.

* ತದ ನಂತರ ಅಲ್ಲಿ ಕಾಣಿಸುವ Delete my PhonePe Account ಆಯ್ಕೆಯನ್ನು ಕ್ಲಿಕ್ ಮಾಡಿರಿ.

ಡಿಲೀಟ್

* ಮುಂದೆ ಖಾತೆ ಡಿಲೀಟ್ ಮಾಡುವುದು ಹೇಗೆ ಸೆಲೆಕ್ಟ್ ಮಾಡಿರಿ(How do I Delete/Deactivate my PhonePe Account)

* ಆಗ ನಿಮಗೆ ಕಾಣಿಸುವ ಡಿ ಆಕ್ಟಿವೇಟ್ ಯೂವರ್ ಫೋನ್‌ಪೇ ಅಕೌಂಟ್‌ ಸೆಲೆಕ್ಟ್ ಮಾಡಿರಿ.

* ಖಚಿತತೆಗಾಗಿ ನಿಮ್ಮ ಮೊಬೈಲ್ ಸಂಖ್ಯೆ OTP ಬರುತ್ತದೆ.

* ನಂತರ ಯಾಕೆ ಫೋನ್‌ಪೇ ಖಾತೆ ಡಿಲೀಟ್ ಮಾಡಲು ಬಯಸುತ್ತಿರಿ ಎನ್ನುವುದನ್ನು ನಮೂದಿಸುವುದು.

* ಎರಡು ದಿನಗಳ ಕೆಲಸದ ಅವಧಿಯಲ್ಲಿ ಖಾತೆ ಡಿಲೀಟ್ ಆಗುವುದು.

Most Read Articles
Best Mobiles in India

English summary
There may be various reasons to delete the PhonePe account permanently and we are here to help you with it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X