ಟಿಕ್‌ಟಾಕ್‌ ಅಕೌಂಟ್ ಡಿಲೀಟ್ ಮಾಡುವುದು ಹೇಗೆ ಗೊತ್ತಾ?

|

ಸಾಮಾಜಿಕ ಜಾಲತಾಣಗಳ ಪಟ್ಟಿಯಲ್ಲಿ ಕಡಿಮೆ ಅವಧಿಯಲ್ಲಿ ಅಗ್ರಸ್ಥಾನಕ್ಕೆರಿರುವ ಆಪ್‌ ಅಂದ್ರೆ ಅದು ಟಿಕ್‌ಟಾಕ್. ಚೀನಾ ಮೂಲದ ಈ ಟಿಕ್‌ಟಾಕ್ ಆಪ್ ಶಾರ್ಟ್‌ ವಿಡಿಯೊ ಮೇಕಿಂಗ್ ಆಪ್ ಆಗಿದ್ದು, ಸದ್ಯ ಹೆಚ್ಚು ಟ್ರೆಂಡಿಂಗ್‌ನಲ್ಲಿದೆ. ಮಾಸಿಕ 600 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಈ ಆಪ್‌ನಲ್ಲಿ ಹೊಸ ಖಾತೆ ರಚಿಸುವವರ ಸಂಖ್ಯೆಯೆನು ಕಡಿಮೆಯಾಗಿಲ್ಲ. ಹಾಗೆಯೇ ಟಿಕ್‌ಟಾಕ್ ಅಕೌಂಟ್ ಡಿಲೀಟ್ ಮಾಡುವ ಬಳಕೆದಾರರು ಇದ್ದಾರೆ.

ಟಿಕ್‌ಟಾಕ್ ವಿಡಿಯೊ

ಹೌದು, ಬೈಟ್‌ಡ್ಯಾನ್ಸ್ ಮಾಲೀಕತ್ವದ ಟಿಕ್‌ಟಾಕ್ ವಿಡಿಯೊ ಕ್ರಿಯೆಟ್‌ ಆಪ್‌ನಲ್ಲಿ ಹೆಚ್ಚಿನ ಬಳಕೆದಾರರು ಖಾತೆ ಹೊಂದಿದ್ದಾರೆ. ಅದರಲ್ಲಿ ಅನೇಕರು ವಿಡಿಯೊ ಕ್ರಿಯೆಟ್ ಮಾಡಿ ಅಪ್‌ಲೋಡ್ ಮಾಡಿದರೇ ಇನ್ನು ಕೆಲವರು ಕೇವಲ ವಿಡಿಯೊ ವೀಕ್ಷಿಸಲು ಮಾತ್ರ ಬಳಕೆ ಮಾಡುತ್ತಾರೆ. ವರದಿವೊಂದರ ಪ್ರಕಾರ ಒಬ್ಬ ಬಳಕೆದಾರ ದಿನನಿತ್ಯ ಸರಿಸುಮಾರು ಒಂದು ಗಂಟೆಗಳ ಕಾಲ ಟಿಕ್‌ಟಾಕ್‌ನಲ್ಲಿ ಸಕ್ರಿಯವಾಗಿರುತ್ತಾರಂತೆ. ಇಷ್ಟೆಲ್ಲಾ ಮೋಡಿ ಮಾಡಿರುವ ಟಿಕ್‌ಟಾಕ್‌ನಲ್ಲಿ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಟಿಕ್‌ಟಾಕ್ ಖಾತೆ ಡಿಲೀಟ್

ಟಿಕ್‌ಟಾಕ್ ಖಾತೆ ಡಿಲೀಟ್

ಟಿಕ್‌ಟಾಕ್ ಖಾತೆಯನ್ನು ರಚಿಸುವ ಪ್ರಕ್ರಿಯೆ ಸರಳವಾಗಿದ್ದು, ಇನ್ನು ಖಾತೆ ಡಿಲೀಟ್ ಮಾಡುವ ಹಂತಗಳು ಸಹ ತುಂಬಾ ಸರಳವಾಗಿವೆ. ಅದಕ್ಕಾಗಿ ಟಿಕ್‌ಟಾಕ್‌ ಸೆಟ್ಟಿಂಗ್ ಮೆನುವಿನಲ್ಲಿ ಅವಕಾಶ ಮಾಡಿಕೊಟ್ಟಿದ್ದು, ಅಲ್ಲಿನ ಆಯ್ಕೆ ಮೂಲಕ ಸುಲಭವಾಗಿ ಟಿಕ್‌ಟಾಕ್‌ ಖಾತೆಯನ್ನು ಡಿಲೀಟ್ ಮಾಡಬಹುದಾಗಿದೆ. ಹಾಗಾದರೆ ಟಿಕ್‌ಟಾಕ್ ಅಕೌಂಟ್ ಡಿಲೀಟ್ ಮಾಡುವ ಹಂತಗಳು ಹೇಗೆ ಎಂಬುದನ್ನು ಮುಂದಿನ ಸ್ಲೈಡ್‌ಗಳಲ್ಲಿ ನೋಡಿ.

ಖಾತೆ ಡಿಲೀಟ್‌ಗೆ ಒಂದೇ ವಿಧಾನ

ಖಾತೆ ಡಿಲೀಟ್‌ಗೆ ಒಂದೇ ವಿಧಾನ

ಆಂಡ್ರಾಯ್ಡ್ ಫೋನ್‌ ಮತ್ತು ಐಫೋನ್‌ ಎರಡು ಮಾದರಿಯ ಓಎಸ್‌ನಲ್ಲಿಯೂ ಟಿಕ್‌ಟಾಕ್ ಆಪ್‌ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಟಿಕ್‌ಟಾಕ್‌ ಖಾತೆ ಡಿಲೀಟ್ ಮಾಡಲು ಆಂಡ್ರಾಯ್ಡ್ ಹಾಗೂ ಐಫೋನ್‌ಗೆ ಬೇರೆ ಬೇರೆ ವಿಧಾನಗಳನ್ನು ಸಂಸ್ಥೆ ನೀಡಿಲ್ಲ. ಎರಡು ಓಎಸ್‌ ಬಳಕೆದಾರರು ತಮ್ಮ ಟಿಕ್‌ಟಾಕ್‌ ಖಾತೆ ಒಂದೇ ವಿಧಾನವನ್ನು ಅನುಸರಿಸಬೇಕಿದೆ.

ಟಿಕ್‌ಟಾಕ್ ಖಾತೆ ಡಿಲೀಟ್‌ಗೆ ಹೀಗೆ ಮಾಡಿ

ಟಿಕ್‌ಟಾಕ್ ಖಾತೆ ಡಿಲೀಟ್‌ಗೆ ಹೀಗೆ ಮಾಡಿ

* ನಿಮ್ಮ ಫೋನಿನಲ್ಲಿ ಟಿಕ್‌ಟಾಕ್‌ ಅಪ್ಲಿಕೇಶನ್ ತೆರೆಯಿರಿ.

* ನಂತರ ಟಿಕ್‌ಟಾಕ್ ಆಪ್‌ನ ಬಲ ಭಾಗದ ಮೂಲೆಯಲ್ಲಿನ ಪ್ರೊಫೈಲ್ ಐಕಾನ್ ಅನ್ನು ಟ್ಯಾಪ್ ಮಾಡಿ.

* ಪ್ರೊಫೈಲ್‌ ತೆರೆದ ನಂತರ ಮೂರು ಡಾಟ್ ಆಯ್ಕೆಯನ್ನು ಕ್ಲಿಕ್ಕ ಮಾಡಿರಿ.

* ಆಗ ಪ್ರೈವಸಿ ಮತ್ತು ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ.

ಡಿಲೀಟ್ ಅಕೌಂಟ್

* ಆ ನಂತರ ಮ್ಯಾನೇಜ್ ಮೈ ಅಕೌಂಟ್ ಸೆಲೆಕ್ಟ್ ಮಾಡಿರಿ.

* ಆಗ ಡಿಲೀಟ್ ಅಕೌಂಟ್ ಆಯ್ಕೆ ಒತ್ತಿರಿ.

* ಎರಡು ಆಯ್ಕೆಗಳು ಕಾಣಿಸುತ್ತವೆ. (ಫೋನ್ ನಂಬರ್ ಅಥವಾ ಇ-ಮೇಲ್)

* ಪೋನ್‌ ನಂಬರ್ ಅಥವಾ ಇ-ಮೇಲ್ ಖಾತೆ ವೇರಿಫಿಕೇಶನ್ ಮಾಡಿ ಡಿಲೀಟ್ ಪ್ರೊಸೆಸ್ ಮಾಡಿರಿ.

Most Read Articles
Best Mobiles in India

English summary
Tiktok is a mobile app and all the people use this app on mobile. Whenever we talk about mobile phone iPhone and Android comes into our mind.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X