PayPalನಲ್ಲಿ ನಿಮ್ಮ ಅಕೌಂಟ್‌ ಡಿಲೀಟ್‌ ಮಾಡಬೇಕೆ? ಈ ಕ್ರಮಗಳನ್ನು ಅನುಸರಿಸಿ!

|

ಪೇಪಾಲ್‌ (PayPal) ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅಥವಾ ಆನ್‌ಲೈನ್ ಪಾವತಿ ಮಾಡಲು ವೇಗವಾದ, ಸುರಕ್ಷಿತ ಮಾರ್ಗವಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಪೇಪಾಲ್‌ ಡಿಜಿಟಲ್‌ ವ್ಯಾಲೆಟ್‌ ಸಾಕಷ್ಟು ಸುದ್ದಿಯಲ್ಲಿದೆ. ಹೊಸ Acceptable Use Policyಯನ್ನು ರೋಲ್‌ಔಟ್‌ ಮಾಡಿದ ನಂತರ ಪೇಪಾಲ್‌ ಕುರಿತು ಸಾಕಷ್ಟು ಟೀಕೆಗಳು ಶುರುವಾಗಿವೆ. ಅದರಲ್ಲೂ ಪೇಪಾಲ್‌ನ ಮಾಜಿ ಅಧ್ಯಕ್ಷ ಡೇವಿಡ್ ಮಾರ್ಕಸ್ ಟ್ವೀಟ್‌ ಮಾಡಿದ ನಂತರ ಪೇಪಾಲ್‌ನ ಸ್ಟಾಕ್‌ 6% ಕುಸಿತವನ್ನು ಕಂಡಿದೆ.

ಪೇಪಾಲ್‌

ಹೌದು, ಪೇಪಾಲ್‌ನ ಹೊಸ ಸ್ವೀಕಾರಾರ್ಹ ಬಳಕೆಯ ನೀತಿಯನ್ನು ಎಲ್ಲರೂ ವಿರೋದಿಸುತ್ತಿದ್ದಾರೆ. ಇದೇ ಕಾರಣಕ್ಕೆ ಹೆಚ್ಚಿನ ಪೇಪಾಲ್‌ ಬಳಕೆದಾರರು ತಮ್ಮ ಅಕೌಂಟ್‌ ಅನ್ನು ಕ್ಲೋಸ್‌ ಮಾಡುತ್ತಿದ್ದಾರೆ. ಒಂದು ವೇಳೆ ನೀವು ಕೂಡ ಪೇಪಾಲ್‌ ಅಕೌಂಟ್‌ ಅನ್ನು ಹೊಂದಿದ್ದರೆ ಅದನ್ನು ಕ್ಲೋಸ್‌ ಮಾಡುವುದಕ್ಕೆ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಪೇಪಾಲ್‌ ಅಕೌಂಟ್‌ ಅನ್ನು ಡಿಲೀಟ್‌ ಮಾಡಲು ಬಯಸಿದರೆ ನೀವು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪೇಪಾಲ್‌ ಅಕೌಂಟ್‌ ಅನ್ನು ಡಿಲೀಟ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ!

ಪೇಪಾಲ್‌ ಅಕೌಂಟ್‌ ಅನ್ನು ಡಿಲೀಟ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ!

ಹಂತ:1 ಮೊದಲಿಗೆ ಲ್ಯಾಪ್‌ಟಾಪ್ ಮೂಲಕ ನಿಮ್ಮ ಪೇಪಾಲ್ ಖಾತೆಗೆ ಲಾಗಿನ್ ಮಾಡಿ.
ಹಂತ:2 ನಂತರ ತೆರೆಯುವ ಸ್ಕ್ರೀನ್‌ನ ಮೇಲಿನ ಬಲ ಮೂಲೆಯಲ್ಲಿ ಇರಿಸಲಾದ ಗೇರ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದೀಗ ಸೆಟ್ಟಿಂಗ್ಸ್‌ ಆಯ್ಕೆಯನ್ನು ತೆರೆಯಿರಿ ಕರೆದೊಯ್ಯುತ್ತದೆ.
ಹಂತ:4 ಅಕೌಂಟ್‌ ಟ್ಯಾಬ್ ಅಡಿಯಲ್ಲಿ, ನಿಮ್ಮ ಅಕೌಂಟ್‌ ಕ್ಲೋಸ್‌ ಮಾಡಿ ಆಯ್ಕೆಯನ್ನು ಸರ್ಚ್‌ ಮಾಡಿ.

ಅಕೌಂಟ್‌

ಹಂತ:5 ಇದರ ಮೇಲೆ ಕ್ಲಿಕ್ ಮಾಡಿದ ನಂತರ, ನಿಮ್ಮ PayPal ಖಾತೆಯಲ್ಲಿ ಇನ್ನೂ ಹಣ ಉಳಿದಿದೆಯೇ ಎಂದು ನಿಮ್ಮನ್ನು ಕೇಳಲಾಗುತ್ತದೆ.
ಹಂತ:6 ನಿಮ್ಮ ಅಕೌಂಟ್‌ ಅನ್ನು ಡಿಲೀಟ್‌ ಮಾಡುವ ಮೊದಲು ನಿಮ್ಮ ಅಕೌಂಟ್‌ ಬ್ಯಾಲೆನ್ಸ್‌ ಅನ್ನು ಬೇರೆಡೆಗೆ ಟ್ರಾನ್ಸಫರ್‌ ಮಾಡಿಕೊಳ್ಳಿರಿ.
ಹಂತ:7 ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ವಿವರಗಳು ಮತ್ತು ಕೇಳಲಾದ ಇತರ ಮಾಹಿತಿಯನ್ನು ನಮೂದಿಸಿ.
ಹಂತ:8 ಇದೀಗ ಕ್ಲೋಸ್ ಅಕೌಂಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಈ ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಪೇಪಾಲ್‌ ಅಕೌಂಟ್‌ ಅನ್ನು ಶಾಶ್ವತವಾಗಿ ಡಿಲೀಟ್‌ ಮಾಡಬಹುದಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ ನಿಮ್ಮ ಪೇಪಾಲ್‌ ಅಕೌಂಟ್‌ ಅನ್ನು ಮೊಬೈಲ್‌ ಮೂಲಕ ಡಿಲೀಟ್‌ ಮಾಡಲು ಸಾಧ್ಯವಾಗುವುದಿಲ್ಲ.

ಪೇಪಾಲ್‌ ಅಕೌಂಟ್‌ ಡಿಲೀಟ್‌ ಮಾಡುವ ಮುನ್ನ ಗಮನಿಸಬೇಕಾದ ವಿಚಾರಗಳು!

ಪೇಪಾಲ್‌ ಅಕೌಂಟ್‌ ಡಿಲೀಟ್‌ ಮಾಡುವ ಮುನ್ನ ಗಮನಿಸಬೇಕಾದ ವಿಚಾರಗಳು!

* ಅಕೌಂಟ್‌ ಬ್ಯಾಲೆನ್ಸ್‌ ಚೆಕ್‌ ಮಾಡಿ: ಪೇಪಾಲ್‌ ಅಕೌಂಟ್‌ ಡಿಲೀಟ್‌ ಮಾಡುವ ಮುನ್ನ ನಿಮ್ಮ ಅಕೌಂಟ್‌ ಬ್ಯಾಲೆನ್ಸ್‌ ಚೆಕ್‌ ಮಾಡಿಕೊಳ್ಳುವುದು ಉತ್ತಮ.
* ಬ್ಯಾಲೆನ್ಸ್‌ ಇದ್ದರೆ ಬೇರೆಡೆ ವರ್ಗಾಯಿಸಿ: ಒಂದು ವೇಳೇ ಪೇಪಾಲ್‌ ಅಕೌಂಟ್‌ನಲ್ಲಿ ಬ್ಯಾಲೆನ್ಸ್‌ ಇದ್ದರೆ ಅದನ್ನು ಕೂಡಲೇ ಬೇರೆಡೆ ವರ್ಗಾಯಿಸಿ. ಏಕೆಂದರೆ ಒಂದು ಬಾರಿ ನಿಮ್ಮ ಪೇಪಾಲ್‌ ಅಕೌಂಟ್‌ ಅನ್ನು ಡಿಲೀಟ್‌ ಮಾಡಿದರೆ ನಂತರ ನಿಮ್ಮ ಬ್ಯಾಲೆನ್ಸ್‌ ಅನ್ನು ನೀವು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ.
* ಟ್ರಾನ್ಸಫರ್‌ ಹಿಸ್ಟರಿಯ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಿ: ಪೇಪಾಲ್‌ ಮೂಲಕ ನೀವು ಮಾಡಿರುವ ಸಂಪೂರ್ಣ ವಹಿವಾಟಿನ ಹಿಸ್ಟರಿಯ ಸ್ಕ್ರೀನ್‌ಶಾಟ್‌ ತೆಗೆದಿಟ್ಟುಕೊಳ್ಳುವುದು ಸೂಕ್ತ. ಭವಿಷ್ಯದಲ್ಲಿ ಇದು ನಿಮಗೆ ಅನುಕೂಲವಾಗಲಿದೆ.

ಪೇಪಾಲ್‌

ಸದ್ಯ ಕಳೆದ ಕೆಲವು ದಿನಗಳಿದ ಪೇಪಾಲ್‌ ತನ್ನ ಬಳಕೆದಾರರ ಸಂಖ್ಯೆಯಲ್ಲಿ ಸಾಕಷ್ಟು ಇಳಿಕೆಯನ್ನು ಕಂಡಿದೆ. ಹೊಸ ಸ್ವೀಕಾರಾರ್ಹ ಬಳಕೆಯ ನೀತಿ (AUP)ಯ ವಿರುದ್ದ ಹೆಚ್ಚಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೊಸ ನೀತಿಯ ಪ್ರಕಾರ ಯಾವುದೇ ಸಂದೇಶಗಳು, ವಿಷಯ, ಅಥವಾ ವಸ್ತುಗಳನ್ನು ಕಳುಹಿಸುವುದು, ಪೋಸ್ಟ್ ಮಾಡುವುದು ಅಥವಾ ಪ್ರಕಟಿಸುವುದು, ಅಪಾಯವನ್ನು ಪ್ರಸ್ತುತಪಡಿಸುವ ವಿಚಾರವನ್ನು ಕಳುಹಿಸುವಂತಿಲ್ಲ. ಒಂದು ವೇಳೆ ಈ ನೀತಿಯನ್ನು ಉಲ್ಲಂಘಿಸಿದವರು ತಮ್ಮ PayPal ಖಾತೆಯಿಂದ $2,500 ದಂಡ ಪಾವತಿಸಬೇಕಾಗುತ್ತದೆ. ಈ ಹೊಸ ನೀತಿಯು ನವೆಂಬರ್ 3 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

Best Mobiles in India

English summary
How to delete your PayPal account: Follow These Steps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X