ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?

Written By:

ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಸರಳ ಹಂತವಾಗಿದ್ದು ಐದು ನಿಮಿಷಗಳನ್ನು ಇದು ತೆಗೆದುಕೊಳ್ಳುತ್ತದೆ. ನೀವು ಆಧಾರ್ ಸಂಖ್ಯೆಯನ್ನು ಹೊಂದಿದ್ದಲ್ಲಿ, ನಿಮ್ಮ ಆಧಾರ್ ಕಾರ್ಡ್ ಅನ್ನು ಕಳೆದುಕೊಂಡಿದ್ದಲ್ಲಿ ಅಥವಾ ನೀವು ಯಾವುದೇ ದಾಖಲೆಗಳನ್ನು ಹೊಂದಿಲ್ಲದೇ ಇದ್ದಲ್ಲಿ ಇಲ್ಲಾ ನಿಮ್ಮಲ್ಲಿ ಆಧಾರ್ ಕಾರ್ಡೇ ಇಲ್ಲ ಎಂಬಂತಹ ಸಂದರ್ಭದಲ್ಲಿ ಏನು ಮಾಡಬೇಕು ಯಾವ ಮಾಹಿತಿಗಳನ್ನು ಅವಲೋಕಿಸಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಧಾರ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಕಂಡುಹಿಡಿಯುವುದು

ಆಧಾರ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಕಂಡುಹಿಡಿಯುವುದು

#1

https://resident.uidai.net.in/find-uid-eid ನಲ್ಲಿ UIDAI ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಪರದೆ ಈ ರೀತಿ ಇರುತ್ತದೆ.

ಆಧಾರ್ ಸಂಖ್ಯೆ

ಆಧಾರ್ ಸಂಖ್ಯೆ

#2

ಮೇಲ್ಭಾಗದ ಆಯ್ಕೆಯಿಂದ ಆಧಾರ್ ಸಂಖ್ಯೆಯನ್ನು ಆಯ್ಕೆಮಾಡಲು ಖಾತ್ರಿಪಡಿಸಿಕೊಳ್ಳಿ

ಪೂರ್ಣ ಹೆಸರು

ಪೂರ್ಣ ಹೆಸರು

#3

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ರಿಜಿಸ್ಟ್ರೇಶನ್ ಸಮಯದಲ್ಲಿ ನೀವು ನೀಡಿರುವ ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ

ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ

ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ

#4

ನಿಮ್ಮ ರಿಜಿಸ್ಟರ್ಡ್ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು ದಾಖಲಿಸಿ.

ಸೆಕ್ಯುರಿಟಿ ಕೋಡ್ ನಮೂದಿಸಿ

ಸೆಕ್ಯುರಿಟಿ ಕೋಡ್ ನಮೂದಿಸಿ

#5

ಬಾಕ್ಸ್‌ನಲ್ಲಿರುವ ನಿಮ್ಮ ಸ್ಕ್ರೀನ್‌ನಲ್ಲಿ ನೀವು ಕಾಣುವ ಭದ್ರತಾ ಕೋಡ್ ಅನ್ನು ನಮೂದಿಸಿ

ಓಟಿಪಿ

ಓಟಿಪಿ

#6

ಕೊನೆಯದಾಗಿ, ಓಟಿಪಿ ಪಡೆದುಕೊಳ್ಳಿ ಇಲ್ಲಿ ಕ್ಲಿಕ್ ಮಾಡಿ

ಒನ್ ಟೈಮ್ ಪಾಸ್‌ವರ್ಡ್

ಒನ್ ಟೈಮ್ ಪಾಸ್‌ವರ್ಡ್

#7

ನಿಮ್ಮ ಮೊಬೈಲ್ ಫೋನ್‌/ ಇಮೇಲ್ ಐಡಿನಲ್ಲಿ ಒನ್ ಟೈಮ್ ಪಾಸ್‌ವರ್ಡ್ ಅನ್ನು ನೀವು ಪಡೆದುಕೊಳ್ಳುತ್ತೀರಿ. ಇದು 5 ನಿಮಿಷಗಳ ಕಾಲ ಮಾನ್ಯವಾಗಿರುತ್ತದೆ.

ಪಾಸ್‌ವರ್ಡ್ ನಮೂದಿಸಿ

ಪಾಸ್‌ವರ್ಡ್ ನಮೂದಿಸಿ

#8

ಕೊನೆಯ ಫೀಲ್ಡ್‌ನಲ್ಲಿ ಪಾಸ್‌ವರ್ಡ್ ನಮೂದಿಸಿ, ಓಟಿಪಿ ನಮೂದಿಸಿ ಮತ್ತು ವೆರಿಫೈ ಓಟಿಪಿ ಬಟನ್ ಅನ್ನು ಕ್ಲಿಕ್ ಮಾಡಿ

ಆಧಾರ್ ಸಂಖ್ಯೆ ಇರುವ ಎಸ್‌ಎಮ್‌ಎಸ್ / ಇಮೇಲ್

ಆಧಾರ್ ಸಂಖ್ಯೆ ಇರುವ ಎಸ್‌ಎಮ್‌ಎಸ್ / ಇಮೇಲ್

#9

ಅಂತಿಮವಾಗಿ ಆಧಾರ್ ಸಂಖ್ಯೆಯನ್ನು ನಿಮ್ಮ ಮೊಬೈಲ್‌ಗೆ ಕಳುಹಿಸಲಾಗಿರುತ್ತದೆ. ನಿಮ್ಮ ಆಧಾರ್ ಸಂಖ್ಯೆ ಇರುವ ಎಸ್‌ಎಮ್‌ಎಸ್ / ಇಮೇಲ್ ಅನ್ನು ನೀವು ಪಡೆದುಕೊಳ್ಳುತ್ತೀರಿ.

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು

#10

ಅಧಿಕೃತ ವೆಬ್‌ಸೈಟ್ https://eaadhaar.uidai.gov.in/ ಗೆ ಭೇಟಿ ನೀಡಿ ಪರದೆ ಈ ರೀತಿ ಇರುತ್ತದೆ.

ಐ ಹೇವ್ ಆಧಾರ್

ಐ ಹೇವ್ ಆಧಾರ್

#11

ಫಾರ್ಮ್‌ನ ಮೇಲ್ಭಾಗದಲ್ಲಿ ಐ ಹೇವ್ ಆಧಾರ್ ಅನ್ನು ಆರಿಸಲು ಖಾತ್ರಿಪಡಿಸಿಕೊಳ್ಳಿ

ಆಧಾರ್ ಸಂಖ್ಯೆ

ಆಧಾರ್ ಸಂಖ್ಯೆ

#12

ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಪೂರ್ಣ ಹೆಸರು ಮತ್ತು ನಿವಾಸ ವಿಳಾಸದ ಪಿನ್ ಕೋಡದ ಹಾಕಿರಿ

ಇಮೇಜ್ ಟೆಕ್ಸ್ಟ್

ಇಮೇಜ್ ಟೆಕ್ಸ್ಟ್

#13

ಎಂಟರ್ ಅಬೌವ್ ಇಮೇಜ್ ಟೆಕ್ಸ್ಟ್ ನಲ್ಲಿರುವ ಪಠ್ಯವನ್ನು ನಮೂದಿಸಿ

ಒನ್ ಟೈಮ್ ಪಾಸ್‌ವರ್ಡ್

ಒನ್ ಟೈಮ್ ಪಾಸ್‌ವರ್ಡ್

#14

ಗೆಟ್ ಒನ್ ಟೈಮ್ ಪಾಸ್‌ವರ್ಡ್ ಬಟನ್ ಮೇಲೆ ಕ್ಲಿಕ್ಕಿಸಿ

ಎಸ್‌ಎಮ್‌ಎಸ್

ಎಸ್‌ಎಮ್‌ಎಸ್

#15

ಓಟಿಪಿಯೊಂದಿಗೆ ಎಸ್‌ಎಮ್‌ಎಸ್ ಅನ್ನು ನೀವು ಪಡೆದುಕೊಳ್ಳುತ್ತೀರಿ.

ಎಂಟರ್ ಓಟಿಪಿ

ಎಂಟರ್ ಓಟಿಪಿ

#16

ಎಂಟರ್ ಓಟಿಪಿ ಎಂದು ನಮೂದಿಸಿರುವ ಕೊನೆಯ ಬಾಕ್ಸ್‌ನಲ್ಲಿ ಆ ಓಟಿಪಿಯನ್ನು ನಮೂದಿಸಿ

ವ್ಯಾಲಿಡೇಟ್ ಮತ್ತು ಡೌನ್‌ಲೋಡ್ ಬಟನ್

ವ್ಯಾಲಿಡೇಟ್ ಮತ್ತು ಡೌನ್‌ಲೋಡ್ ಬಟನ್

#17

ಕೊನೆಯದಾಗಿ, ವ್ಯಾಲಿಡೇಟ್ ಮತ್ತು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ಕಿಸಿ.

ಪಿಡಿಎಫ್ ಸ್ವರೂಪ

ಪಿಡಿಎಫ್ ಸ್ವರೂಪ

#18

ಪಿಡಿಎಫ್ ಸ್ವರೂಪದಲ್ಲಿ ನಿಮ್ಮ ಆಧಾರ್ ಕಾರ್ಡ್ ಡೌನ್‌ಲೋಡ್ ಆಗುತ್ತದೆ. ಆಧಾರ್ ಕಾರ್ಡ್ ರಿಜಿಸ್ಟ್ರೇಶನ್ ಸಮಯದಲ್ಲಿ ನೀವು ನೀಡಿರುವ ಪ್ರದೇಶ ಪಿನ್‌ಕೋಡ್ ಫೈಲ್ ತೆರೆಯುವ ಪಾಸ್‌ವರ್ಡ್ ಆಗಿದೆ.

ಆಧಾರ್ ಕಾರ್ಡ್ ಪ್ರಿಂಟ್ ಔಟ್

ಆಧಾರ್ ಕಾರ್ಡ್ ಪ್ರಿಂಟ್ ಔಟ್

#19

ಆಧಾರ್ ಕಾರ್ಡ್ ಪ್ರಿಂಟ್ ಔಟ್ ಅನ್ನು ತೆಗೆದು ಸುರಕ್ಷಿತವಾದ ಸ್ಥಳದಲ್ಲಿ ಇರಿಸಿಕೊಳ್ಳಿ. ಬ್ಯಾಂಕ್, ಎಲ್‌ಪಿಜಿ ಗ್ಯಾಸ್ ಏಜೆನ್ಸಿ, ಕಾಲೇಜುಗಳಿಗೆ ಈ ಪ್ರಿಂಟ್ ಔಟ್ ಅನ್ನು ನೀಡಬಹುದಾಗಿದೆ. ಇದು ಎಲ್ಲೆಡೆಯೂ ಮಾನ್ಯವಾಗಿರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving step by step method on how to download aadhaar card online through step by step method.
Please Wait while comments are loading...
Opinion Poll

Social Counting