ಫೇಸ್‌ಬುಕ್‌ನಲ್ಲಿ ವೀಡಿಯೋಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

|

ಸೊಶೀಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್‌ ತನ್ನ ವಿಶೇಷ ಫೀಚರ್ಸ್‌ಗಳ ಮೂಲಕವೇ ಬಳಕೆದಾರರ ಗಮನ ಸೆಳೆದಿದೆ. ಇನ್ನು ಫೇಸ್‌ಬುಕ್‌ನಲ್ಲಿ ಬಳಕೆದಾರರು ತಮ್ಮ ಭಾವನೆಗಳು, ವೀಡಿಯೋಗಳನ್ನು ಶೇರ್‌ ಮಾಡುವ ಅವಕಾಶ ಇದೆ. ಆದರೆ ಫೇಸ್‌ಬುಕ್‌ನಲ್ಲಿ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಯೂಟ್ಯೂಬ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವಷ್ಟು ಸುಲಭವಲ್ಲ. ನಿಮಗೆ ಇಷ್ಟವಾಗುವ ವೀಡಿಯೊಗಳನ್ನು ನೋಡಿದರೂ ಡೌನ್‌ಲೋಡ್‌ ಮಾಡುವುದಕ್ಕೆ ಸಾಕಷ್ಟು ತ್ರಾಸ ಪಡುವುದಂತೂ ಗ್ಯಾರಂಟಿ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ನಲ್ಲಿ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಸುಲಭವಲ್ಲ. ನೀವು ಫೇಸ್‌ಬುಕ್‌ನಲ್ಲಿ ವೀಡಿಯೋ ವೀಕ್ಷಣೆ ಮಾಡಿ ಡೌನ್‌ಲೋಡ್‌ ಮಾಡಲು ಬಯಸಿದರೆ ಅದಕ್ಕೆ ಸಾಕಷ್ಟು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಏಕೆಂದರೆ ಫೇಸ್‌ಬುಕ್ ಆಫ್‌ಲೈನ್‌ನಲ್ಲಿ ವೀಕ್ಷಿಸಲು ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ನಿರ್ದಿಷ್ಟ ಆಯ್ಕೆಯನ್ನು ಒದಗಿಸುವುದಿಲ್ಲ. ಹಾಗಾದ್ರೆ ಫೇಸ್‌ಬುಕ್‌ನಲ್ಲಿ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್

ಅತಿದೊಡ್ಡ ಸಾಮಾಜಿಕ ಮಾಧ್ಯಮ ದೈತ್ಯಗಳಲ್ಲಿ ಒಂದಾದ ಫೇಸ್‌ಬುಕ್ ಆಫ್‌ಲೈನ್‌ನಲ್ಲಿ ವೀಕ್ಷಿಸಲು ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ನಿರ್ದಿಷ್ಟ ಆಯ್ಕೆಯನ್ನು ಒದಗಿಸಿಲ್ಲ. ಆದರೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್, ಐಫೋನ್, ಐಪ್ಯಾಡ್, ಮ್ಯಾಕ್ ಅಥವಾ ವಿಂಡೋಸ್‌ನಲ್ಲಿ ಫೇಸ್‌ಬುಕ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ನೀವು ಬಯಸಿದರೆ,ಕೆಲವು ಹಂತಗಳನ್ನು ಅನುಸರಿಸಿ ಡೌನ್‌ಲೋಡ್‌ ಮಾಡಬಹುದು.

ವಿಂಡೋಸ್, ಮ್ಯಾಕ್‌ನಲ್ಲಿ ಫೇಸ್‌ಬುಕ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ವಿಂಡೋಸ್, ಮ್ಯಾಕ್‌ನಲ್ಲಿ ಫೇಸ್‌ಬುಕ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಫೇಸ್‌ಬುಕ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುವ ಹಲವಾರು ವೆಬ್‌ಸೈಟ್‌ಗಳು ಅಂತರ್ಜಾಲದಲ್ಲಿ ಲಭ್ಯವಿದೆ. fbdown.net ವೆಬ್‌ಸೈಟ್ ಲಭ್ಯವಿರುವ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಇದನ್ನು ಬಳಸಿ ವಿಂಡೋಸ್‌ನಲ್ಲಿ ಫೇಸ್‌ಬುಕ್‌ ವೀಡಿಯೋ ಡೌನ್‌ಲೋಡ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ.

ಹಂತ:1 ನೀವು ಡೆಸ್ಕ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡಲು ಬಯಸುವ ಫೇಸ್‌ಬುಕ್ ವೀಡಿಯೊದ ಮೇಲೆ ಬಲ ಕ್ಲಿಕ್ ಮಾಡಿ.

ಹಂತ:2 ಕರೆಂಟ್‌ ಟೈಂನಲ್ಲಿ ವೀಡಿಯೊ URL ಅನ್ನು ಕಾಪಿ ಮಾಡಿ.

ಹಂತ:3 ನಂತರ, fbdown.net ವೆಬ್‌ಸೈಟ್‌ಗೆ ಹೋಗಿ.

ಹಂತ:4 ನೀವು ನಂತರ ಅಗತ್ಯವಿರುವ ವಿಭಾಗದಲ್ಲಿ ಲಿಂಕ್ ಅನ್ನು ಪೇಸ್ಟ್‌ ಮಾಡಿ ಮತ್ತು ಡೌನ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ:5 ನೀವು ವೀಡಿಯೊದ ಮೇಲೆ ರೈಟ್‌ ಕ್ಲಿಕ್ ಮಾಡಿ ಮತ್ತು ಅದನ್ನು ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಸೇವ್‌ ಮಾಡಿರಿ.

ಆಂಡ್ರಾಯ್ಡ್‌ನಲ್ಲಿ ಫೇಸ್‌ಬುಕ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ

ಆಂಡ್ರಾಯ್ಡ್‌ನಲ್ಲಿ ಫೇಸ್‌ಬುಕ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ

ಹಂತ:1 ನೀವು ಡೌನ್‌ಲೋಡ್ ಮಾಡಲು ಬಯಸುವ ಫೇಸ್‌ಬುಕ್ ವೀಡಿಯೊವನ್ನು ತೆರೆಯಿರಿ

ಹಂತ:2 ಶೇರ್‌ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಂತರ ಕಾಪಿ ಲಿಂಕ್ ಟ್ಯಾಪ್ ಮಾಡಿ.

ಹಂತ:3 ಮುಂದಿನ, fbdown.net ಅನ್ನು ತೆರೆಯಿರಿ ಮತ್ತು ಅಗತ್ಯವಿರುವ ವಿಭಾಗದಲ್ಲಿ ಲಿಂಕ್ ಅನ್ನು ಪೇಸ್ಟ್‌ ಮತ್ತು ಡೌನ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ:4 ನೀವು ಫೇಸ್‌ಬುಕ್ ವೀಡಿಯೊವನ್ನು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊ ಗುಣಮಟ್ಟವನ್ನು ಆರಿಸಿ.

ಹಂತ:5 ನಂತರ ಕ್ರೋಮ್‌ನಲ್ಲಿ ಡೌನ್‌ಲೋಡ್ ಲಿಂಕ್ ಆಯ್ಕೆಮಾಡಿ

ಹಂತ:6 ಫೇಸ್‌ಬುಕ್ ವೀಡಿಯೊವನ್ನು ಡೌನ್‌ಲೋಡ್‌ಗಳ ಫೋಲ್ಡರ್‌ನಲ್ಲಿ ಆಟೋಮ್ಯಾಟಿಕ್‌ ಆಗಿ ಸೇವ್‌ ಆಗಲಿದೆ.

Best Mobiles in India

English summary
Facebook tips and tricks: Here are simple steps to download Facebook videos on Android smartphone, iPhone, Mac, Desktop, iPad and more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X