ಅಂಚೆ ಇಲಾಖೆಯ ಹೊಸ 'ಡಾಕ್‌ಪೇ' ಪೇಮೆಂಟ್‌ ಆಪ್‌ ಡೌನ್‌ಲೋಡ್‌ ಮಾಡುವುದು ಹೇಗೆ!

|

ಪ್ರಸ್ತುತ ದೇಶದಲ್ಲಿ ಡಿಜಿಟಲ್ ಪೇಮೆಂಟ್‌ ವ್ಯವಸ್ಥೆ ಹೆಚ್ಚು ಮುನ್ನಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಹಲವು UPI ಆಧಾರಿತ ಪೇಮೆಂಟ್‌ ಆಪ್‌ಗಳು ಬಳಕೆಯಲ್ಲಿವೆ. ಈ ಸಾಲಿಗಿಗ ಭಾರತೀಯ ಅಂಚೆ ಇಲಾಖೆಯೂ ಸೇರ್ಪಡೆ ಆಗಿದ್ದು, ಅಂಚೆ ಇಲಾಖೆ ಹೊಸದಾಗಿ ''ಡಾಕ್‌ಪೇ'' ಆಪ್‌ ಅನ್ನು ಪರಿಚಯಿಸಿದೆ. ಈ ಸೇವೆಯಿಂದ ಹಣವನ್ನು ಕಳುಹಿಸುವುದು, ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವುದು ಮತ್ತು ವ್ಯಾಪಾರಿಗಳಿಗೆ ಡಿಜಿಟಲ್ ರೂಪದಲ್ಲಿ ಹಣ ಪಾವತಿಗಳನ್ನು ಮಾಡುವಂತಹ ಸೇವೆಗಳನ್ನು ಸುಗಮಗೊಳಿಸಲು ಸಾಧ್ಯವಾಗುತ್ತದೆ.

ಪೇಮೆಂಟ್

ಹೌದು, ದೇಶದಲ್ಲಿ ಡಿಜಿಟಲ್ ಪೇಮೆಂಟ್ ಉತ್ತೇಜಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆ ಮತ್ತು ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಈ ನೂತನ ಆಪ್‌ ಅನಾವರಣ ಮಾಡಿವೆ. ಇನ್ನು ಈ ಆಪ್‌ನಲ್ಲಿ ಬಳಕೆದಾರರಿಗೆ ಹಣ ವರ್ಗಾವಣೆ, QR ಕೋಡ್ ಸ್ಕ್ಯಾನ್, ಬಿಲ್ ಪಾವತಿ, ಹಣ ಪಾವತಿ, ವರ್ಚುವಲ್ ಡೆಬಿಟ್ ಕಾರ್ಡ್‌, UPI ಪೇಮೆಂಟ್‌, ಬ್ಯಾಂಕ್‌ ಸೇವೆಗಳಂತಹ ಸೇವೆಗಳು ಲಭ್ಯವಾಗುತ್ತವೆ. ಹಾಗಾದರೇ ಡಾಕ್‌ಪೇ ಆಪ್‌ ಡೌನ್‌ಲೋಡ್‌ ಮಾಡುವುದು ಹೇಗೆ ಎನ್ನುವ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಆಂಡ್ರಾಯ್ಡ್‌ನಲ್ಲಿ ಡಾಕ್‌ಪೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

ಆಂಡ್ರಾಯ್ಡ್‌ನಲ್ಲಿ ಡಾಕ್‌ಪೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

* ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಪ್ಲೇ ಸ್ಟೋರ್ ತೆರೆಯಿರಿ.
* ಹುಡುಕಾಟ ಪೆಟ್ಟಿಗೆಯನ್ನು ಬಳಸಿಕೊಂಡು 'ಡಾಕ್‌ಪೇ'-'DakPay' ಕೀ ಸರ್ಚ್ ಹುಡುಕಿ.

ಟ್ಯಾಪ್ ಮಾಡಿ

* DakPay by IPPB ಹೆಸರಿನ ಅಪ್ಲಿಕೇಶನ್‌ನಲ್ಲಿ ಟ್ಯಾಪ್ ಮಾಡಿ ಮತ್ತು ಇನ್‌ಸ್ಟಾಲ್‌ ಬಟನ್ ಒತ್ತಿರಿ.
* ಆಪ್‌ ಇನ್‌ಸ್ಟಾಲ್‌ ಆದ ನಂತರ, ಅಪ್ಲಿಕೇಶನ್ ತೆರೆಯಿರಿ.
* ಆನಂತರ NEXT ಐಕಾನ್ ಮೇಲೆ ಟ್ಯಾಪ್ ಮಾಡಿ.

ಮೊಬೈಲ್

* ನೀವು ಡಾಕ್‌ಪೇ ಜೊತೆ ಲಿಂಕ್ ಮಾಡಲು ಬಯಸುವ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿ/ನಮೂದಿಸಿ.
* ಹೆಸರು, ಇಮೇಲ್ ಐಡಿ, ಹುಟ್ಟಿದ ದಿನಾಂಕ ಮತ್ತು ಇತರೆ ವಿವರಗಳನ್ನು ನಮೂದಿಸುವ ಮೂಲಕ ಪ್ರೊಫೈಲ್ ರಚಿಸಿ.

ಆಂಡ್ರಾಯ್ಡ್‌ನಲ್ಲಿ ಲಭ್ಯ

ಆಂಡ್ರಾಯ್ಡ್‌ನಲ್ಲಿ ಲಭ್ಯ

ಅಂಚೆ ಇಲಾಖೆಯ ನೂತನ ಡಾಕ್‌ಪೇ ಪೇಮೆಂಟ್ ಅಪ್ಲಿಕೇಶನ್ ಸದ್ಯ ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಅಪ್ಲಿಕೇಶನ್ ಲಭ್ಯವಿದೆ. ಇನ್ನು ಡಾಕ್‌ಪೇ ಅಪ್ಲಿಕೇಶನ್ ಶೀಘ್ರದಲ್ಲೇ ಆಪಲ್ ಆಪ್ ಸ್ಟೋರ್ ಮೂಲಕ ಐಓಎಸ್‌ ಬಳಕೆದಾರರಿಗೂ ಲಭ್ಯವಾಗಲಿದ ಎನ್ನಲಾಗಿದೆ.

Best Mobiles in India

English summary
DakPay payments app in India in collaboration with its banking arm India Post Payments Bank (IPPB).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X