ನಿಮ್ಮ ಸ್ನೇಹಿತರ ವಾಟ್ಸಾಪ್‌ ಸ್ಟೇಟಸ್‌ ಡೌನ್‌ಲೋಡ್ ಮಾಡಬೇಕೆ?..ಹಾಗಿದ್ರೇ ಹೀಗೆ ಮಾಡಿ!

|

ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಅಪ್ಲಿಕೇಶನ್ ಅನುಕೂಲಕರ ಫೀಚರ್ಸ್‌ಗಳಿಂದ ಬಳಕೆದಾರರನ್ನು ಆಕರ್ಷಿಸಿದೆ. ಅವುಗಳಲ್ಲಿ ವಾಟ್ಸಾಪ್‌ ಸ್ಟೇಟಸ್‌ ನೂತನ ಟ್ರೆಂಡ್‌ ಸೃಷ್ಠಿಸಿದೆ ಎಂದರೇ ತಪ್ಪಿಲ್ಲ. ಹಾಗೆಯೇ ಬಳಕೆದಾರರು ತಮ್ಮ ವಾಟ್ಸಾಪ್‌ ಲಿಸ್ಟ್‌ನಲ್ಲಿರುವವರು ಹಾಕುವ ಸ್ಟೇಟಸ್‌ ವೀಕ್ಷಿಸಬಹುದಾಗಿದೆ ಮತ್ತು ಅವುಗಳನ್ನು ಅತೀ ಸುಲಭವಾಗಿ ಸೇವ್ ಸಹ ಮಾಡಿಕೊಳ್ಳಬಹುದಾಗಿದೆ.

ಇನ್‌ಸ್ಟಂಟ್‌

ಹೌದು, ಜನಪ್ರಿಯ ಇನ್‌ಸ್ಟಂಟ್‌ ಮೆಸೆಜ್‌ ಆಪ್‌ ವಾಟ್ಸಾಪ್‌ನ ಸ್ಟೇಟಸ್‌ ಜಸ್ಟ್‌ 24 ಗಂಟೆಗಳ ಕಾಲಮಿತಿ ನಂತರ ಆಟೋಮ್ಯಾಟಿಕ್ ಆಗಿ ಮರೆಯಾಗುತ್ತದೆ. ಹೀಗೆ ಎಷ್ಟೂ ವೇಳೆ ಸ್ನೇಹಿತರು/ಪರಿಚಯಸ್ಥರು ಹಾಕುವ ವಾಟ್ಸಾಪ್‌ ಸ್ಟೇಟಸ್‌ಗಳು ಇಷ್ಟವಾಗುತ್ತವೆ. ಆದರೆ ಬಹುತೇಕರಿಗೆ ಆ ಸ್ಟೇಟಸ್‌ಗಳನ್ನು ಸೇವ್ ಮಾಡಿಕೊಳ್ಳವ ಹಾದಿ ಗೊತ್ತಾಗುವುದಿಲ್ಲ. ಹೀಗಾಗಿ ಇಂದಿನ ಲೇಖನದಲ್ಲಿ ವಾಟ್ಸಾಪ್‌ ಸ್ಟೇಟಸ್‌ಗಳನ್ನು ಸುಲಭವಾಗಿ ಸೇವ್ ಮಾಡುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ ಮುಂದೆ ಓದಿರಿ.

ವಾಟ್ಸಾಪ್ ಸ್ಟೇಟಸ್‌-ಜಸ್ಟ್‌ 24 ಗಂಟೆಗಳ ಕಾಲಮಿತಿ

ವಾಟ್ಸಾಪ್ ಸ್ಟೇಟಸ್‌-ಜಸ್ಟ್‌ 24 ಗಂಟೆಗಳ ಕಾಲಮಿತಿ

ವಾಟ್ಸಾಪ್ ಸ್ಟೇಟಸ್‌ಗಳು ಜಸ್ಟ್ 24 ಗಂಟೆಗಳ(ದಿನದ) ವ್ಯಾಲಿಡಿಟಿಯನ್ನು ಹೊಂದಿದ್ದು, ಆನಂತರ ತಾನಾಗಿಯೇ ಮರೆಯಾಗತ್ತವೆ. ಈ ಅವಧಿಯಲ್ಲಿ ಬಳಕೆದಾರರು ವಾಟ್ಸಾಪ್‌ ಸ್ಟೇಟಸ್‌ಗಳನ್ನು ಡಿಲೀಟ್ ಮಾಡಬಹುದು, ಹೊಸದಾಗಿ ಫೋಟೊ ಅಥವಾ ವಿಡಿಯೋ ಸೇರಿಸಬಹುದು. ಹಾಗೆಯೇ ವಾಟ್ಸಾಪ್‌ ಲಿಸ್ಟ್‌ನಲ್ಲಿರುವ ಸ್ನೇಹಿತರು ಹಾಕಿರುವ ಸ್ಟೇಟಸ್‌ ಸೇವ್ ಸಹ ಮಾಡಬಹುದಾಗಿದೆ.

ವಾಟ್ಸಾಪ್‌ನ ಸ್ಟೇಟಸ್‌ ಸುಲಭವಾಗಿ ಸೇವ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ

ವಾಟ್ಸಾಪ್‌ನ ಸ್ಟೇಟಸ್‌ ಸುಲಭವಾಗಿ ಸೇವ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ

* ಮೊದಲು ಸ್ಮಾರ್ಟ್‌ಫೋನ್‌ನಲ್ಲಿ ಫೈಲ್‌ ಮಾನೇಜರ್‌ ಅಪ್ಲಿಕೇಶನ್ ತೆರೆಯಿರಿ
* ಆ ನಂತರ ಫೋನ್‌ ಮೆಮೊರಿ ಆಯ್ಕೆಯನ್ನು ಸೆಲೆಕ್ಟ್‌ ಮಾಡಿರಿ
* ಫೋನ್‌ ಮೆಮೊರಿಯಲ್ಲಿ ವಾಟ್ಸಾಪ್‌ ಆಪ್‌ ಐಕಾನ್‌ ತೆರೆಯಿರಿ

ಫೈಲ್‌

* ವಾಟ್ಸಾಪ್‌ನಲ್ಲಿ ಮೀಡಿಯಾ ಫೈಲ್‌ ಆಯ್ಕೆ ಸೆಲೆಕ್ಟ್ ಮಾಡಿ
* ನಂತರ ಸ್ಟೇಟಸ್‌ ಆಯ್ಕೆ ಸೆಲೆಕ್ಟ್‌ ಮಾಡಿ, ಸ್ಟೇಟಸ್‌ಗಳು ಕಾಣಿಸುತ್ತವೆ.
* ಸೇವ್‌ ಮಾಡಬೇಕಾದ ಸ್ಟೇಟಸ್‌ ಪ್ರೆಸ್‌ ಮಾಡಿ ನಂತರ ಕಾಪಿ ಮಾಡಿ ಗ್ಯಾಲರಿಗೆ ಪೇಸ್ಟ್‌ ಮಾಡಿರಿ.

ಇತರೆ ಕ್ರಮಗಳು

ಇತರೆ ಕ್ರಮಗಳು

* ಥರ್ಡ್‌ಪಾರ್ಟಿ ಅಪ್ಲಿಕೇಶನ್ ಮೂಲಕ ಸ್ಟೇಟಸ್‌ ಮಾಡಬಹುದಾಗಿದೆ. (ಸ್ಟೇಟಸ್‌ ಸೇವರ್).
* ಆ ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಫೋನ್‌ನ ಸ್ಟೋರೇಜ್ನ ಆಕ್ಸಸ್‌ ನೀಡಿ.
* ನಿಮ್ಮ ಸ್ನೇಹಿತರ ವಾಟ್ಸಾಪ್ ಸ್ಟೇಟಸ್‌ ಡೌನ್‌ಲೋಡ್ ಮಾಡಲು ಅಥವಾ ಸೇವ್ ಮಾಡುವ ಮೊದಲು ಒಮ್ಮೆ ಅವರ ಸ್ಟೇಟಸ್‌ ವೀಕ್ಷಿಸುವುದು.
* ಆ ನಂತರ ಸ್ಟೇಟಸ್‌ ಸೇವರ್ ತೆರೆಯಿರಿ
* ಈಗ ನಿಮಗೆ ನೀವು ವೀಕ್ಷಿಸಿದ ನಿಮ್ಮ ಸ್ನೇಹಿತರ ವಾಟ್ಸಾಪ್‌ ಸ್ಟೇಟಸ್‌ಗಳು ಕಾಣಿಸುತ್ತವೆ.
* ಯಾವ ಸ್ಟೇಟಸ್‌ ಡೌನ್‌ಲೋಡ್/ ಸೇವ್ ಮಾಡಲು ಬಯಸುತ್ತಿಯೋ ಅದನ್ನು ಟ್ಯಾಪ್ ಮಾಡಿ ಮತ್ತು ಡೌನ್‌ಲೋಡ್ ಬಟನ್ ಒತ್ತಿರಿ.

Best Mobiles in India

English summary
WhatsApp doesn't allow you to download the Statuses. Here's how you can save or directly share WhatsApp Status of your friends.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X