ವಾಟ್ಸಾಪ್‌ ವಿಡಿಯೋ ಸ್ಟೇಟಸ್‌ ಅನ್ನು ಫೋನ್‌ ಗ್ಯಾಲರಿಗೆ ಸೇವ್‌ ಮಾಡುವುದು ಹೇಗೆ?

|

ಫೇಸ್‌ಬುಕ್ ಒಡೆತನದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್‌ ಆಪ್‌ ವಾಟ್ಸಾಪ್‌ ಹಲವು ಆಕರ್ಷಕ ಫೀಚರ್ಸ್‌ಗಳ ಮೂಲಕ ಬಳಕೆದಾರರ ಮೆಚ್ಚುಗೆ ಪಡೆದಿದೆ. ಆ ಪೈಕಿ 24 ಗಂಟೆ ಕಾಲಮಿತಿಯ ಸ್ಟೇಟಸ್‌ ಆಯ್ಕೆಯು ಸದ್ಯ ಹೆಚ್ಚು ಟ್ರೆಂಡಿಂಗ್‌ನಲ್ಲಿದೆ. ಸ್ನೇಹಿತರು ಮತ್ತು ಪರಿಚಿತರು ಇಡುವ ವಾಟ್ಸಾಪ್‌ಗಳು ಸ್ಟೇಟಸ್‌ಗಳು ವೀಕ್ಷಿಸಬಹುದಾಗಿದೆ. ಇಲ್ಲದೇ ಇಷ್ಟವಾಗುವ ಸ್ಟೇಟಸ್‌ಗಳನ್ನು ಫೋನ್‌ ಗ್ಯಾಲರಿಗೆ ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ ಅಂತೀರಾ?

ಸ್ಟೇಟಸ್‌ಗಳನ್ನು

ಹೌದು, ವಾಟ್ಸಾಪ್‌ನಲ್ಲಿನ ಸ್ಟೇಟಸ್‌ಗಳನ್ನು ಬಳಕೆದಾರರು ಡೌನ್‌ಲೋಡ್/ ಸೇವ್ ಮಾಡಬಹುದಾಗಿದೆ. ಎಷ್ಟೋ ಸಾರಿ ಗೆಳೆಯರು ಅಥವಾ ಪರಿಚಿತರು ಇಟ್ಟಿರುವ ಸ್ಟೇಟಸ್‌ಗಳು ಇಷ್ಟವಾಗಿರುತ್ತವೆ. ಅದೇ ಸ್ಟೇಟಸ್‌ ಅನ್ನು ತಮ್ಮ ವಾಟ್ಸಾಪ್‌ ಸ್ಟೇಟಸ್‌ಗೂ ಇಡಬೇಕೆಂದೆನಿಸಿರುತ್ತದೆ. ಆಗ ಅನೇಕರು ಥರ್ಡ್‌ ಪಾರ್ಟಿ ಆಪ್‌ ಮೋರೆ ಹೋಗುತ್ತಾರೆ. ಇಲ್ಲವೇ ಸ್ಕ್ರೀನ್‌ ರೇಕಾರ್ಡಿಂಗ್ ಅಥವಾ ಸ್ಕ್ರೀನ್‌ ಶಾರ್ಟ್‌ ತೆಗೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಈ ರೀತಿ ಮಾಡದೇ ಫೋನ್‌ನಲ್ಲಿರುವ ಆಯ್ಕೆ ಅವಕಾಶದ ಮೂಲಕವೇ ಸುಲಭವಾಗಿ ವಾಟ್ಸಾಪ್‌ ಸ್ಟೇಟಸ್‌ ಅನ್ನು ನಿಮ್ಮ ಫೋನ್‌ ಗ್ಯಾಲರಿಯಲ್ಲಿ ಸೇವ್ ಮಾಡಬಹುದು. ಹಾಗಾದರೇ ವಾಟ್ಸಾಪ್‌ ಸ್ಟೇಟಸ್‌ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್ ಸ್ಟೇಟಸ್‌ ಡೌನ್‌ಲೋಡ್

ವಾಟ್ಸಾಪ್ ಸ್ಟೇಟಸ್‌ ಡೌನ್‌ಲೋಡ್

ಆಂಡ್ರಾಯ್ಡ್‌ ಮೊಬೈಲ್ ಫೋನ್ ಅಥವಾ ಐಫೋನ್‌ನಲ್ಲಿ ವಾಟ್ಸಾಪ್ ಸ್ಟೇಟಸ್‌ ವೀಡಿಯೊ / ಫೋಟೊವನ್ನು ಡೌನ್‌ಲೋಡ್ ಮಾಡಲು ನಿಮಗೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್ ಅಗತ್ಯವಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಸೆಟ್ಟಿಂಗ್ ಬಳಸಿಕೊಂಡು ಸರಳವಾಗಿ ಸ್ಟೇಟಸ್‌ ಡೌನ್‌ಲೋಡ್ ಮಾಡಬಹುದಾಗಿದೆ.

ಆಂಡ್ರಾಯ್ಡ್‌ ಫೋನಿನಲ್ಲಿ ವಾಟ್ಸಾಪ್‌ ಸ್ಟೇಟಸ್‌ ಡೌನ್‌ಲೋಡ್ ಮಾಡಲು ಹೀಗೆ ಮಾಡಿ:

ಆಂಡ್ರಾಯ್ಡ್‌ ಫೋನಿನಲ್ಲಿ ವಾಟ್ಸಾಪ್‌ ಸ್ಟೇಟಸ್‌ ಡೌನ್‌ಲೋಡ್ ಮಾಡಲು ಹೀಗೆ ಮಾಡಿ:

* ವಾಟ್ಸಾಪ್‌ಗೆ ಹೋಗಿ ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ಸ್ಟೇಟಸ್‌ ಅನ್ನು ವೀಕ್ಷಿಸಿ
* ನಂತರ, ಫೋನಿನಲ್ಲಿ ‘ಫೈಲ್ ಮ್ಯಾನೇಜರ್' ಅಪ್ಲಿಕೇಶನ್ ತೆರೆಯಿರಿ. ಕೆಲವು ಫೋನ್‌ಗಳಲ್ಲಿ ಈ ಫೋಲ್ಡರ್ ಹೆಸರು ಮೈ ಫೈಲ್‌ ಎಂದಿರುತ್ತದೆ.
* ಆ ನಂತರ, ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳ ಪುಟಕ್ಕೆ ಹೋಗಿ ಮತ್ತು ‘Show hidden system files' ಸೆಟ್ಟಿಂಗ್‌ಗಳನ್ನು ಟಾಗಲ್/ಆನ್‌ ಮಾಡಿ.
* ಈಗ, ಅಪ್ಲಿಕೇಶನ್‌ನ ಮುಖಪುಟಕ್ಕೆ ಹಿಂತಿರುಗಿ ಮತ್ತು ಆಂತರಿಕ ಸಂಗ್ರಹಣೆಯನ್ನು(ಇಂಟರ್ನಲ್ ಸ್ಟೋರೇಜ್) ಆರಿಸಿ.
* ತದ ನಂತರ ವಾಟ್ಸಾಪ್ -> ಮೀಡಿಯಾ -> .ಸ್ಟೇಟಸ್‌ಗಳು ಸೆಲೆಕ್ಟ್ ಮಾಡಿ.
*.'ಸ್ಟೇಟಸ್‌ಗಳು ಫೋಲ್ಡರ್‌ನಲ್ಲಿ, ನೀವು ವೀಕ್ಷಿಸಿದ ಎಲ್ಲ ವಾಟ್ಸಾಪ್ ಸ್ಟೇಟಸ್‌ಗಳನ್ನು ಕಾಣುತ್ತಿರಿ.
* ವಾಟ್ಸಾಪ್ ಸ್ಟೇಟಸ್‌ ವೀಡಿಯೊವನ್ನು ದೀರ್ಘಕಾಲ ಒತ್ತಿ, ಫೈಲ್ ಅನ್ನು ಕಾಪಿ ಮಾಡಿ ಮತ್ತು ಅದನ್ನು ನಿಮ್ಮ ಗ್ಯಾಲರಿ/DCIM ಅಥವಾ ಯಾವುದೇ ಫೋಲ್ಡರ್‌ನಲ್ಲಿ ಪೇಸ್ಟ್‌ ಮಾಡಿ.

ಐಫೋನಿನಲ್ಲಿ ವಾಟ್ಸಾಪ್‌ ಸ್ಟೇಟಸ್‌ ಡೌನ್‌ಲೋಡ್ ಮಾಡಲು ಹೀಗೆ ಮಾಡಿ:

ಐಫೋನಿನಲ್ಲಿ ವಾಟ್ಸಾಪ್‌ ಸ್ಟೇಟಸ್‌ ಡೌನ್‌ಲೋಡ್ ಮಾಡಲು ಹೀಗೆ ಮಾಡಿ:

* ಐಫೋನ್‌ನಲ್ಲಿ ವಾಟ್ಸಾಪ್ ಸ್ಟೇಟಸ್‌ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು, ‘Control Centre'ಗೆ ಹೋಗಿ ಮತ್ತು ಸ್ಕ್ರೀನ್ ರೆಕಾರ್ಡಿಂಗ್ ಆಯ್ಕೆಯನ್ನು ಆರಿಸಿ.
* ಅಲ್ಲಿ ಆಯ್ಕೆಯು ಗೋಚರಿಸದಿದ್ದರೆ, ಐಫೋನ್‌ನ ಸೆಟ್ಟಿಂಗ್‌ಗಳ ಮೆನು ತೆರೆಯಿರಿ -> ‘Control Centre' -> ಆಯ್ಕೆಮಾಡಿ ಮತ್ತು ಸ್ಕ್ರೀನ್ ರೆಕಾರ್ಡಿಂಗ್ ಆಯ್ಕೆಯ ಪಕ್ಕದಲ್ಲಿರುವ ‘+' ಐಕಾನ್ ಅನ್ನು ಟ್ಯಾಪ್ ಮಾಡಿ.
* ಸ್ಕ್ರೀನ್ ರೆಕಾರ್ಡಿಂಗ್ ಆನ್ ಆಗಿರುವಾಗ, ವಾಟ್ಸಾಪ್ ತೆರೆಯಿರಿ -> ಸ್ಟೇಟಸ್‌ ವಿಂಡೋಗೆ ಹೋಗಿ -> ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ವಾಟ್ಸಾಪ್ ಸ್ಟೇಟಸ್ ವೀಡಿಯೊವನ್ನು ಪ್ಲೇ ಮಾಡಿ
* ಸಂಪೂರ್ಣ ವೀಡಿಯೊವನ್ನು ರೆಕಾರ್ಡ್ ಮಾಡಿದ ನಂತರ, ಮೇಲಿನಿಂದ ಕೆಳಕ್ಕೆ ಸ್ವೈಪ್ ಮಾಡಿ ಮತ್ತು ನೋಟಿಫೀಕೇಶನ್‌ನಲ್ಲಿ ಸ್ಟಾಪ್ ರೆಕಾರ್ಡಿಂಗ್ ಅನ್ನು ಒತ್ತಿರಿ. ಅಥವಾ ಪವರ್ ಬಟನ್ ಒತ್ತಬಹುದು.

Most Read Articles
Best Mobiles in India

English summary
WhatsApp status video can be downloaded using the built-in tools. You don't have to download third-party apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X