ಉಚಿತವಾಗಿ ಯೂಟ್ಯೂಬ್‌ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಲು ಈ ಆಪ್‌ ಬಳಸಿ!

|

ಸದ್ಯ ಯೂಟ್ಯೂಬ್ ವಿಶ್ವದ ಅತ್ಯಂತ ಜನಪ್ರಿಯ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಯೂಟ್ಯೂಬ್ ತನ್ನ ಬಳಕೆದಾರರಿಗೆ ಪ್ರತಿದಿನ ಹೊಸ ವಿಷಯಗಳನ್ನು ಕಲಿಯಲು ಸಹಾಯ ಮಾಡುವುದಲ್ಲದೆ, ಇತ್ತೀಚಿನ ಮಾಹಿತಿಯೊಂದಿಗೆ ನವೀಕೃತವಾಗಿರಲು ಸಹಾಯ ಮಾಡುತ್ತದೆ. ತಡೆ ರಹಿತವಾಗಿ ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಸ್ಥಿರ ಇಂಟರ್ನೆಟ್ ಸಂಪರ್ಕ ಅಗತ್ಯ. ಒಂದು ವೇಳೆ ನೆಟ್‌ವರ್ಕ್‌ ವ್ಯವಸ್ಥೆ ಸರಿ ಇಲ್ಲದಿದ್ದರೇ, ನೆಟ್‌ವರ್ಕ್‌ ಇದ್ದಾಗ ಯೂಟ್ಯೂಬ್‌ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿಕೊಂಡು ನಂತರದಲ್ಲಿ ಆಫ್‌ಲೈನ್‌ ವೀಕ್ಷಿಸಬಹುದಾಗಿದೆ.

ಯೂಟ್ಯೂಬ್‌

ಹೌದು, ಗೂಗಲ್ ಮಾಲೀಕತ್ವದ ಯೂಟ್ಯೂಬ್ ತಾಣವು ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಆಯ್ಕೆಯನ್ನು ಒದಗಿಸಿದೆ. ಅದು ಫೋನ್ ಗ್ಯಾಲರಿಯಲ್ಲಿ ಸೇವ್ ಆಗುವುದಿಲ್ಲ ಬದಲಿಗೆ ಯೂಟ್ಯೂಬ್‌ ಅಕೌಂಟ್‌ನಲ್ಲಿಯೇ ಸ್ಟೋರ್ ಆಗಿರುತ್ತದೆ. ಅದು ಆಫ್‌ಲೈನ್ ವೀಕ್ಷಣೆಗೆ ಅನುಕೂಲವಾಗಿದೆ. ಒಂದು ವೇಳೆ ಬಳಕೆದಾರರು ಯೂಟ್ಯೂಬ್ ವಿಡಿಯೋಗಳನ್ನು ನೇರವಾಗಿ ಫೋನ್ ಗ್ಯಾಲರಿಗೆ ಡೌನ್‌ಲೋಡ್ ಮಾಡಿಕೊಳ್ಳ ಬಯಸಿದರೇ ಥರ್ಡ್‌ಪಾರ್ಟಿ ಆಪ್‌ಗಳ ಮೋರೆ ಹೋಗಬೇಕಿರುತ್ತದೆ.

ಉಚಿತವಾಗಿ

ಪ್ರಸ್ತುತ ಹಲವು ವಿಡಿಯೋ ಪ್ಲಾಟ್‌ಫಾರ್ಮ್ ಗಳು ಎಂಟ್ರಿ ನೀಡಿದ್ದರೂ ಇನ್ನು ತನ್ನ ಜನಪ್ರಿಯ ಸ್ಥಾನವನ್ನು ಉಳಿಸಿಕೊಂಡು ಮುನ್ನುಗ್ಗುತ್ತಿರುವ ಯೂಟ್ಯೂಬ್‌ ವಿಡಿಯೋಗಳನ್ನು ಡೌನ್‌ಲೋಡ್ ಮಾಡಲು ಹಲವು ಥರ್ಡ್‌ಪಾರ್ಟಿ ಆಪ್‌ಗಳು ಲಭ್ಯ ಇವೆ. ಅವುಗಳಲ್ಲಿ ಬಹುತೇಕ ಆಪ್‌ಗಳು ಉಚಿತವಾಗಿ ವಿಡಿಯೋ ಡೌನ್‌ಲೋಡ್ ಮಾಡಲು ನೆರವಾಗಿವೆ. ಈ ನಿಟ್ಟಿನಲ್ಲಿ ಇಂದಿನ ಈ ಲೇಖನದಲ್ಲಿ ಯೂಟ್ಯೂಬ್‌ ವಿಡಿಯೋಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಲು ನೆರವಾಗುವ ಕೆಲವು ಆಪ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ ಮುಂದೆ ಓದಿರಿ.

ಟ್ಯೂಬ್‌ಮೇಟ್ ಆಪ್

ಟ್ಯೂಬ್‌ಮೇಟ್ ಆಪ್

ಟ್ಯೂಬ್‌ಮೇಟ್ TubeMate ಆಪ್‌ ಸಹ ಯೂಟ್ಯೂಬ್ ವಿಡಿಯೊಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸಫೋರ್ಟ್ ಮಾಡುತ್ತದೆ. ಡೌನ್‌ಲೋಡ್ ಮಾಡುವಾಗ ವಿಡಿಯೊ ಕ್ವಾಲಿಟಿ ಮತ್ತು ಯಾವ ಫಾರ್ಮೇಟ್‌ನಲ್ಲಿ ಬೇಕು ಎನ್ನುವ ಆಯ್ಕೆಗಳು ಕಾಣಿಸುತ್ತವೆ.

ವಿಡಿಯೋಡರ್ ಆಪ್‌

ವಿಡಿಯೋಡರ್ ಆಪ್‌

ಗೂಗಲ್ ಒಡೆತನದ ಯೂಟ್ಯೂಬ್ ವಿಡಿಯೊಗಳನ್ನು ಡೌನ್ಲೋಡ್ ಮಾಡಿಕೊಳ್ಳಲು Videoder ಅಪ್ಲಿಕೇಶನ್‌ ಒಂದು ಉತ್ತಮ ತಾಣವಾಗಿದೆ. ಹಾಗೆಯೇ ಈ ಆಪ್ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಸೇರಿದಂತೆ ಇತರೆ ಸೋಶಿಯಲದ ತಾಣಗಳಲ್ಲಿನ ವಿಡಿಯೊಗಳನ್ನು ಡೌನ್‌ಲೋಡ್ ಮಾಡಲು ಈ ಆಪ್ ಸಹಕಾರಿಯಾಗಿದೆ.

ಸ್ನ್ಯಾಪ್‌ಟ್ಯೂಬ್ ಆಪ್‌

ಸ್ನ್ಯಾಪ್‌ಟ್ಯೂಬ್ ಆಪ್‌

ಸ್ನ್ಯಾಪ್‌ಟ್ಯೂಬ್ ಆಪ್‌ ಬಳಕೆದಾರ ಸ್ನೇಹಿ ಅನಿಸಲಿದ್ದು, ಯೂಟ್ಯೂಬ್ ವಿಡಿಯೊಗಳನ್ನು ಡೌನ್‌ಲೋಡ್ ಮಾಡಲು ಸಹ ಉತ್ತಮ ಅನಿಸಲಿದೆ. ಕೇವಲ ಯೂಟ್ಯೂಬ್ ಮಾತ್ರವಲ್ಲದೇ ಜನಪ್ರಿಯ ಸಾಮಾಜಿಕ ಜಾಲತಾಣಗಳ ವಿಡಿಯೊಗಳನ್ನು ಸಹ ಡೌನ್‌ಲೋಡ್ ಮಾಡಲು ನೆರವು ನೀಡಲಿದೆ.

YT3 ಯೂಟ್ಯೂಬ್ ಡೌನ್‌ಲೋಡರ್ ಆಪ್‌

YT3 ಯೂಟ್ಯೂಬ್ ಡೌನ್‌ಲೋಡರ್ ಆಪ್‌

ಆಂಡ್ರಾಯ್ಡ್‌ ಫೋನ್ ಬಳಕೆದಾರರು ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡಿಕೊಳ್ಳಲು YT3 ಯೂಟ್ಯೂಬ್ ಡೌನ್‌ಲೋಡರ್ ಆಪ್ ಉತ್ತಮ ಆಯ್ಕೆ ಆಗಿದೆ. ಈ ಆಪ್‌ನಲ್ಲಿ ವಿಡಿಯೊಗಳನ್ನು ಡೌನ್‌ಲೋಡ್ ಮಾಡುವಾಗ ಎಂಪಿ 3 ಮತ್ತು ಎಂಪಿ 4 ಫಾರ್ಮೇಟ್‌ಗಳ ಆಯ್ಕೆಗಳು ಲಭ್ಯವಾಗಲಿವೆ.

ಕೀಪ್ವಿಡ್‌ ಆಪ್‌

ಕೀಪ್ವಿಡ್‌ ಆಪ್‌

ಕೀಪ್ವಿಡ್‌ ಆಪ್‌ ಸಹ ವಿಡಿಯೊ ಡೌನ್‌ಲೋಡ್ ಮಾಡಲು ಬೆಸ್ಟ್ ಆಗಿದ್ದು, ವಿಡಿಯೊಗಳನ್ನು ವೇಗವಾಗಿ ಡೌನ್‌ಲೋಡ್ ಮಾಡಲು ಬೆಂಬಲ ನೀಡುತ್ತದೆ. ಇತರೆ ಸಾಮಾಜಿಕ ತಾಣಗಳ ವಿಡಿಯೊಗಳನ್ನು ಸಹ ನೇರವಾಗಿ ಡೌನ್‌ಲೋಡ್ ಮಾಡಲು ಈ ಆಪ್ ಸಫೋರ್ಟ್ ಮಾಡುತ್ತದೆ. ಎಂಪಿ3, ಎಂಪಿ4 ಫಾರ್ಮೇಟ್‌ ಆಯ್ಕೆಗಳು ಸಹ ಇವೆ.

ಇನ್ಸ್‌ಟ್ಯೂಬ್‌ ಆಪ್‌

ಇನ್ಸ್‌ಟ್ಯೂಬ್‌ ಆಪ್‌

ಇನ್ಸ್‌ಟ್ಯೂಬ್‌ ಸಹ ಯೂಟ್ಯೂಬ್ ವಿಡಿಯೊಗಳನ್ನು ನೇರವಾಗಿ ಡೌನ್‌ಲೋಡ್ ಒಂದು ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ. ಫಾಸ್ಟ್‌ ಡೌನ್‌ಲೋಡ್ ಆಯ್ಕೆಯು ಈ ಆಪ್‌ನಲ್ಲಿ ಕಾಣಿಸಿಲಿದೆ. ಅದರೊಂದಿಗೆ ಸಾಕಷ್ಟು ಹೊಸ ಆಯ್ಕೆಗಳು ಸಹ ಈ ಆಪ್‌ನಲ್ಲಿ ಕಾಣಬಹುದಾಗಿದೆ.

Most Read Articles
Best Mobiles in India

English summary
How To Download YouTube Videos For Free On Smartphone. use these apps to download YouTube Videos.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X