ಯೂಟ್ಯೂಬ್ ವಿಡಿಯೋವನ್ನು ಉಚಿತವಾಗಿ 4K ಗುಣಮಟ್ಟದಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

|

ಗೂಗಲ್ ಮಾಲೀಕತ್ವದ ಯೂಟ್ಯೂಬ್ ಆಪ್‌ ಅತ್ಯುತ್ತಮ ವಿಡಿಯೊ ಕಂಟೆಂಟ್ ಪ್ಲಾಟ್‌ಫಾರ್ಮ್ ಆಗಿದೆ. ಸದ್ಯ ನೆಕ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್‌ ಸೇರಿದಂತೆ ಇತರೆ ಓಟಿಟಿ ತಾಣಗಳು ಜನಪ್ರಿಯತೆಯಲ್ಲಿ ಇದ್ದರೂ, ಯೂಟ್ಯೂಬ್‌ ತನ್ನ ಟ್ರೆಂಡ್‌ ಕಡಿಮೆ ಮಾಡಿಕೊಂಡಿಲ್ಲ. ಲೀಡಿಂಗ್‌ನಲ್ಲಿ ಮುಂದೆ ಸಾಗಿರುವ ಯೂಟ್ಯೂಬ್‌ ಹಲವು ಉಪಯುಕ್ತ ಫೀಚರ್‌ಗಳ ಮೂಲಕ ಬಳಕೆದಾರರಿಗೆ ಬೆಸ್ಟ್‌ ಎನಿಸಿದೆ. ಯೂಟ್ಯೂಬ್‌ ತಾಣದಲ್ಲಿ ಎಲ್ಲ ಬಗೆಯ ಮಾಹಿತಿ, ಮನರಂಜನೆ ಸುಲಭವಾಗಿ ಲಭ್ಯವಾಗುತ್ತದೆ. ಇನ್ನು ಬಳಕೆದಾರರು ಯೂಟ್ಯೂಬ್ ಅಪ್ಲಿಕೇಶನ್‌ನಿಂದ ವಿಡಿಯೊಗಳನ್ನು ಸುಲಭವಾಗಿ 4K ಗುಣಮಟ್ಟದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಯೂಟ್ಯೂಬ್

ಹೌದು, ಯೂಟ್ಯೂಬ್ ಪ್ಲಾಟ್‌ಫಾರ್ಮ್ ನಲ್ಲಿನ ಎಲ್ಲಾ ಬಗೆಯ ವಿಡಿಯೊಗಳನ್ನು 4K ಕ್ವಾಲಿಟಿಯಲ್ಲಿ ಡೌನ್‌ಲೋಡ್ ಮಾಡುವ ಅವಕಾಶ ಇದೆ. ಆದರೆ ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಯೂಟ್ಯೂಬ್ ಯಾವುದೇ ನೇರವಾಗಿ ಮಾರ್ಗಗಳಿಲ್ಲ. ಬದಲಿಗೆ ಕೆಲವು ಥರ್ಡ್‌ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಕೆ ಮೂಲಕ ಯೂಟ್ಯೂಬ್ ವಿಡಿಯೊಗಳನ್ನು ಬಳಕೆದಾರರು ಸುಲಭವಾಗಿ ತಮ್ಮ ಸ್ಮಾರ್ಟ್‌ಫೋನ್‌ಗೆ 4K ಗುಣಮಟ್ಟದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಯೂಟ್ಯೂಬ್‌ ವಿಡಿಯೋಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಲು ಹಲವು ಥರ್ಡ್‌ ಪಾರ್ಟಿ ಆಪ್‌ಗಳ ಲಭ್ಯ ಇದ್ದು, ಅವುಗಳಲ್ಲಿ ಅತ್ಯುತ್ತಮ ಆಪ್‌ ಬಳಕೆ ಮಾಡುವುದು ಉತ್ತಮ. ಹಾಗಾದರೇ ಯೂಟ್ಯೂಬ್ ವಿಡಿಯೊಗಳನ್ನು 4K ಗುಣಮಟ್ಟದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಪೂರಕವಾದ ಕೆಲವು ಬೆಸ್ಟ್ ಅಪ್ಲಿಕೇಶನ್‌ಗಳ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಫ್ರೀಮೇಕ್ ವಿಡಿಯೋ ಡೌನ್‌ಲೋಡರ್

ಫ್ರೀಮೇಕ್ ವಿಡಿಯೋ ಡೌನ್‌ಲೋಡರ್

ಫ್ರೀ ಮೇಕ್ ವಿಡಿಯೋ ಡೌನ್‌ಲೋಡರ್ ಮತ್ತೊಂದು ಜನಪ್ರಿಯ ವಿಡಿಯೋ ಡೌನ್‌ಲೋಡರ್ ತಾಣ ಆಗಿದೆ. ಇದು ಯೂಟ್ಯೂಬ್, ವಿಮಿಯೋ, ಡೈಲಿಮೋಷನ್, ಫೇಸ್‌ಬುಕ್, ಟ್ವಿಚ್, ಲೈವ್‌ಲೀಕ್ ಸೇರಿದಂತೆ 1000+ ವೆಬ್ಸೈಟ್‌ಗಳಿಂದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಅತ್ಯುತ್ತಮ ಒನ್ ಸ್ಟಾಪ್ ಎನಿಸಿಕೊಂಡಿದೆ. ಹೆಚ್‌ಡಿ, ಎಂಪಿ 4, ಎಂಪಿ 3, ಎವಿಐ, ಜಿಪಿ, ಎಫ್‌ಎಲ್‌ವಿ, ಇತ್ಯಾದಿ ಸೇರಿದಂತೆ ಹಲವು ಫಾರ್ಮೇಟ್‌ಗಳಲ್ಲಿ ಯೂಟ್ಯೂಬ್ ವೀಡಿಯೋಗಳು ಸುಲಭವಾಗಿ ಡೌನ್‌ಲೋಡ್ ಮಾಡಲು ನೆರವಾಗಲಿದೆ.

YTD ವಿಡಿಯೋ ಡೌನ್‌ಲೋಡರ್

YTD ವಿಡಿಯೋ ಡೌನ್‌ಲೋಡರ್

YTD ವೀಡಿಯೊ ಡೌನ್‌ಲೋಡರ್ ಸಹ ಬೆಸ್ಟ್‌ ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಆಪ್ ಆಗಿದೆ. ಇದು ಯೂಟ್ಯೂಬ್ ಸೇರಿದಂತೆ 50+ ಸೈಟ್‌ಗಳಿಂದ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ MP4, MP3, WMV, FLV, MOV, 3GP, MOV, ಸೇರಿದಂತೆ ಇತರೆ ವಿವಿಧ ಫಾರ್ಮೇಟ್‌ಗಳ ವೀಡಿಯೊಗಳನ್ನು ಬದಲಾಯಿಸಲು ಬೆಂಬಲಿಸುತ್ತದೆ.

EaseUS MobiMover ಸೈಟ್

EaseUS MobiMover ಸೈಟ್

ಯೂಟ್ಯೂಬ್ ವಿಡಿಯೋಗಳನ್ನು 4K ಗುಣಮಟ್ಟದಲ್ಲಿ ಡೌನ್‌ಲೋಡ್ ಮಾಡಲು EaseUS MobiMover ಸೈಟ್ ಅತ್ಯುತ್ತಮ ತಾಣವಾಗಿದೆ. ಈ ಸೈಟ್ ಉಚಿತ ವೀಡಿಯೊ ಡೌನ್‌ಲೋಡರ್ ಆಗಿದ್ದು, ಹಲವು ಫಾರ್ಮೇಟ್‌ಗಳಲ್ಲಿ ವಿಡಿಯೋಗಳನ್ನು ಡೌನ್‌ಲೋಡ್ ಮಾಡಲು ಸಪೋರ್ಟ್‌ ಮಾಡುತ್ತದೆ. ಇದು ಫೇಸ್‌ಬುಕ್, ಟ್ಟಿಟರ್, ಯೂಟ್ಯೂಬ್, ಡೈಲಿಮೋಷನ್ ಮತ್ತು ಇತರ ಸಾಮಾಜಿಕ ತಾಣಗಳಿಂದ ನಿಮ್ಮ ಕಂಪ್ಯೂಟರ್‌ಗೆ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಡೀಫಾಲ್ಟ್ ಆಗಿ 4K ಗುಣಮಟ್ಟ ಇರುವ ವಿಡಿಯೋಗಳನ್ನು ಮಾತ್ರ ಡೌನ್‌ಲೋಡ್ ಮಾಡಲೂ ಬಹುದು.

ಕ್ಲಿಪ್ ಕಾನ್ವರ್ಟರ್- ClipConverter

ಕ್ಲಿಪ್ ಕಾನ್ವರ್ಟರ್- ClipConverter

ಕ್ಲಿಪ್ ಕಾನ್ವರ್ಟರ್ ಸಹ 4K ಗುಣಮಟ್ಟದ ವಿಡಿಯೋಗಳನ್ನು ಸುಲಭವಾಗಿ ಡೌನ್‌ಲೋಡರ್ ಮಾಡಲು ಬೆಸ್ಟ್‌ ತಾಣವಾಗಿದೆ. ಸಿನಿಮಾ, ಮ್ಯೂಸಿಕ್ ಮತ್ತು ಟಿವಿ ಸೀರಿಯಲ್‌ಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಹಾಗೆಯೇ ಅವುಗಳನ್ನು ಆಫ್‌ಲೈನ್‌ನಲ್ಲಿ ರೆಕಾರ್ಡ್ ಮಾಡಬಹುದಾಗಿದೆ. ಈ ಸೈಟ್ ವಿಂಡೋಸ್, ಮ್ಯಾಕ್, ಆಂಡ್ರಾಯ್ಡ್ ಮತ್ತು ಐಫೋನ್ ಸಪೋರ್ಟ್ ಪಡೆದಿದೆ. ಈ ಸೈಟ್ ನೇರವಾಗಿ ವೀಡಿಯೊವನ್ನು ಡೌನ್ಲೋಡ್ ಮಾಡಲು ಪೂರಕವಾದ ಆಯ್ಕೆ ಪಡೆದಿದೆ.

ವಿಡ್‌ಪಾವ್- VidPaw ಡೌನ್‌ಲೋಡರ್

ವಿಡ್‌ಪಾವ್- VidPaw ಡೌನ್‌ಲೋಡರ್

ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡುವ ಅತ್ಯುತ್ತಮ ತಾಣಗಳಲ್ಲಿ VidPaw ಸಹ ಒಂದಾಗಿದೆ. ಇದು ಅತ್ಯುತ್ತಮ ಆನ್‌ಲೈನ್ ಯೂಟ್ಯೂಬ್ ಡೌನ್‌ಲೋಡರ್‌ಗಳ ಲಿಸ್ಟ್‌ನಲ್ಲಿಅ ಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಆನ್‌ಲೈನ್ ವೀಡಿಯೊಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಲು ಇದು ಅತ್ಯುತ್ತಮ ಎನಿಸಿದೆ. ಬಳಕೆದಾರರು ವೀಡಿಯೊದ URL ಅನ್ನು ಕಾಪಿ ಪೇಸ್ಟ್ ಮಾಡುವ ಬದಲು, ಯೂಟ್ಯೂಬ್ ವಿಡಿಯೋಗಳನ್ನು ನೇರವಾಗಿ ವೆಬ್‌ಸೈಟ್‌ನಲ್ಲಿ ಹುಡುಕಿ, ಡೌನ್‌ಲೋಡ್ ಮಾಡಲು ನೆರವಾಗಲಿದೆ. ಇನ್ನು 480p, 720p, 1080p, 2K, 4K, ಮತ್ತು 8K ಬೆಂಬಲಿಸುತ್ತದೆ.

Most Read Articles
Best Mobiles in India

English summary
How to Download YouTube Videos in 4K For Free.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X