ಫೇಸ್‌ಬುಕ್‌ ವೆಬ್‌ನಲ್ಲಿ ಡಾರ್ಕ್ ಮೋಡ್ ಅನ್ನು ಬಳಸುವುದು ಹೇಗೆ

|

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಕೇಳಿಬರುತ್ತಿರುವುದು ಡಾರ್ಕ್‌ಮೋಡ್ ಫೀಚರ್. ಬಳಕೆದಾರರ ಹಿತ ದೃಷ್ಟಿಯಿಂದ ಈಗಾಗಲೇ ಹಲವು ಆಪ್‌ಗಳು ಡಾರ್ಕ್‌ಮೋಡ್‌ ಫೀಚರ್‌ ಅನ್ನು ಅಳವಡಿಸಿಕೊಂಡಿವೆ. ಅದರಲ್ಲೂ ಸ್ಕ್ರೀನ್‌ ಬೆಳಕಿನ ಪ್ರಖರತೆಯನ್ನು ತಗ್ಗಿಸಿ ಕಣ್ಣುಗಳಿಗೆ ಹಿತ ಅನುಭವ ನೀಡುವ ಈ ಫೀಚರ್ಸ್‌ ಅನ್ನು ಇದೀಗ ಪ್ರಮುಖ ಅಪ್ಲಿಕೇಶನ್‌ಗಳು ಅಳವಡಿಸಿಕೊಳ್ಳುತ್ತಿವೆ. ಈ ಪೈಕಿ ಸೊಶೀಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್‌ ಕೂಡ ಈಗಾಲೇ ಡಾರ್ಕ್‌ ಮೋಡ್‌ ಫೀಚರ್‌ ಅಳವಡಿಸಿಕೊಂಡಿದೆ. ಆದರೆ ಇದರ ಫೇಸ್‌ಬುಕ್‌ ವೆಬ್‌ನಲ್ಲಿ ಡಾರ್ಕ್ ಮೋಡ್ ಬಳಸುವ ಬಗ್ಗೆ ಹೆಚ್ಚಿನವರಿಗೆ ಗೊಂದಲವಿದೆ.

ಫೇಸ್‌ಬುಕ್‌

ಹೌದು, ಬಹುತೇಕ ಸ್ಮಾರ್ಟ್‌ಫೋನ್‌ಗಳು ಹಾಗೂ ವಿಂಡೋಸ್‌ ಲ್ಯಾಪ್‌ಟಾಪ್‌ ಸ್ಕ್ರೀನ್‌ಗಳು ರೆಸಲ್ಯೂಶನ್ ಹೊಂದಿರುತ್ತವೆ. ಡಿಸ್‌ಪ್ಲೇಯು ಹೆಚ್ಚು ಬ್ರೈಟ್‌ನೆಶ್‌ ಅನ್ನು ಹೊಂದಿರುತ್ತವೆ. ಇವುಗಳ ಅತೀಯಾದ ಬಳಕೆಯು ಕಣ್ಣುಗಳ ಮೇಲೆ ಒತ್ತಡ ಹೇರುತ್ತದೆ ಮುಖ್ಯವಾಗಿ ರಾತ್ರಿ ಅಥವಾ ಮಂದ ಬೆಳಕಿನಲ್ಲಿ ಕಣ್ಣುಗಳ ಮೇಲೆ ಇನ್ನಷ್ಟು ಒತ್ತಡ ಆಗುತ್ತದೆ.ಫೇಸ್‌ಬುಕ್‌ನಲ್ಲಿ ಈಗಾಗಲೇ ಡಾರ್ಕ್‌ಮೋಡ್‌ ಆವೃತ್ತಿ ಇದೆ. ಫೇಸ್‌ಬುಕ್‌ ಆಪ್‌ನಲ್ಲಿಯೂ ಡಾರ್ಕ್‌ಮೋಡ್ ಇದೆ. ಹಾಗಾದರೇ ಫೇಸ್‌ಬುಕ್‌ ವೆಬ್‌ನಲ್ಲಿ ಡಾರ್ಕ್ ಮೋಡ್ ಸಕ್ರಿಯಗೊಳಿಸುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ ಈಗಾಲೇ ಡಾರ್ಕ್‌ಮೋಡ್‌ ಹೊಂದಿದೆ. ಫೇಸ್‌ಬುಕ್‌ನ ವೆಬ್ ಆವೃತ್ತಿಯು ಡಾರ್ಕ್ ಮೋಡ್ ಅನ್ನು ಬೆಂಬಲಿಸುತ್ತದೆ. ಇನ್ನು ಈಗಾಗಲೇ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಿದಲ್ಲಿ, ಇಂಟರ್ಫೇಸ್ ಕೂಡ ಡಾರ್ಕ್‌ ಆಗಲಿದೆ. ಅಲ್ಲದೆ ನೀವು ಫೇಸ್‌ಬುಕ್‌ ವೆಬ್‌ ಅನ್ನು ಡಾರ್ಕ್ ಥೀಮ್‌ನಲ್ಲಿ ಬ್ರೌಸ್ ಮಾಡಬಹುದು. ಅಷ್ಟಕ್ಕೂ ಬ್ರೌಸರ್‌ನಲ್ಲಿ ಫೇಸ್‌ಬುಕ್.ಕಾಂನಲ್ಲಿ ಡಾರ್ಕ್ ಮೋಡ್ ಅನ್ನು ಆನ್ ಮಾಡುವುದು ಹೇಗೆ. ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿರಿ.

ಫೇಸ್‌ಬುಕ್‌ ವೆಬ್‌ನಲ್ಲಿ ಡಾರ್ಕ್ ಮೋಡ್ ಅನ್ನು ಬಳಸುವುದು ಹೇಗೆ?

ಫೇಸ್‌ಬುಕ್‌ ವೆಬ್‌ನಲ್ಲಿ ಡಾರ್ಕ್ ಮೋಡ್ ಅನ್ನು ಬಳಸುವುದು ಹೇಗೆ?

ಹಂತ:1 ಯಾವುದೇ ಬ್ರೌಸರ್‌ನಲ್ಲಿ https://facebook.com ಗೆ ಭೇಟಿ ನೀಡಿ.

ಹಂತ:2 ಈಗ ಮೇಲಿನ ಬಲ ಮೂಲೆಯಲ್ಲಿ, ಡ್ರಾಪ್‌ಡೌನ್ ಮೆನು ತೆರೆಯಲು ಕೆಳಗಿನ ಬಾಣದ ಮೇಲೆ ಕ್ಲಿಕ್ ಮಾಡಿ.

ಹಂತ:3 ಪ್ರದರ್ಶನ ಪ್ರಾಶಸ್ತ್ಯಗಳನ್ನು ಆಯ್ಕೆಮಾಡಿ ಮತ್ತು ಡಾರ್ಕ್ ಮೋಡ್ ಅನ್ನು ಆರಿಸಿ, ಅದನ್ನು ಇಲ್ಲಿಂದ ಆನ್ ಮಾಡಿ.

ಹಂತ:4 ಡ್ರಾಪ್‌ಡೌನ್ ಮೆನು ಅಡಿಯಲ್ಲಿರುವ ಆಯ್ಕೆಯನ್ನು ಆರಿಸುವ ಮೂಲಕ ಹೊಸ ಇಂಟರ್ಫೇಸ್‌ಗೆ ಬದಲಾಯಿಸಿ ಹೊಸ ಫೇಸ್‌ಬುಕ್‌ಗೆ ಬದಲಿಸಿ.

ಹಂತ:5 ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಈಗ ಪರಿಷ್ಕರಿಸಿದ ಇಂಟರ್ಫೇಸ್ ಅನ್ನು ಬಳಸುತ್ತದೆ.

ಈ ಮೂಲಕ ಫೇಸ್‌ಬುಕ್.ಕಾಂನಲ್ಲಿ ಡಾರ್ಕ್ ಮೋಡ್ ಅನ್ನು ಬಳಸಬಹುದಾಗಿದೆ. ಇದರಿಂದ ವೆಬ್‌ಬ್ರೌಸರ್‌ನಲ್ಲಿ ಫೇಸ್‌ಬುಕ್‌ ಬಳಸುವಾಗ ನಿಮ್ಮ ಕಣ್ಣಿಗೆ ಯಾವುದೇ ಒತ್ತಡವಿಲ್ಲದಂತೆ ಬಳಸಬಹುದಾಗಿದೆ.

ಡಾರ್ಕ್‌ಮೋಡ್ ವಿಶೇಷತೆ

ಡಾರ್ಕ್‌ಮೋಡ್ ವಿಶೇಷತೆ

ಇಂದಿನ ಬಹುತೇಕ ಹೊಸ ಸ್ಮಾರ್ಟ್‌ಫೋನ್‌ಗಳು ಅಧಿಕ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿರುತ್ತವೆ. ಡಿಸ್‌ಪ್ಲೇಯು ಹೆಚ್ಚು ಪ್ರಖರವಾಗಿರುತ್ತದೆ. ಅತೀಯಾಗ ಬಳಕೆಯು ಕಣ್ಣುಗಳ ಮೇಲೆ ಒತ್ತಡ ಹೇರುತ್ತದೆ ಮುಖ್ಯವಾಗಿ ರಾತ್ರಿ ಅಥವಾ ಮಂದ ಬೆಳಕಿನಲ್ಲಿ ಕಣ್ಣುಗಳ ಮೇಲೆ ಇನ್ನಷ್ಟು ಒತ್ತಡ ಆಗುತ್ತದೆ. ಆದರೆ ಡಾರ್ಕ್‌ಮೋಡ್ ಆ ಆಯ್ಕೆಯು ಈ ಒತ್ತಡ ಕಡಿಮೆಗೊಳಿಸಲು ನೆರವಾಗಲಿದೆ. ಜೊತೆಗೆ ಫೋನ್ ಬ್ಯಾಟರಿ ಉಳಿಕೆಗೂ ನೆರವಾಗಲಿದೆ.

Most Read Articles
Best Mobiles in India

English summary
new Facebook UI supports the Dark mode and you can make use of it to browse the news feed and other pages on Facebook.com.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X