ಸ್ನ್ಯಾಪ್‌ಚಾಟ್‌ ಆಪ್‌ನಲ್ಲಿ ಡಾರ್ಕ್‌ಮೋಡ್ ಆನ್ ಮಾಡುವುದು ಹೇಗೆ?

|

ಸದ್ಯ ಸ್ಮಾರ್ಟ್‌ಫೋನ್‌ ಬಳಕೆಯಲ್ಲಿ ಹಾಗೂ ಪ್ರಮುಖ ಆಪ್‌ಗಳಲ್ಲಿ ಹೆಚ್ಚು ಕೇಳಿ ಬರುತ್ತಿರುವುದು ಡಾರ್ಕ್‌ಮೋಡ್ ಫೀಚರ್. ಸ್ಕ್ರೀನ್‌ ಬೆಳಕಿನ ಪ್ರಖರತೆಯನ್ನು ತಗ್ಗಿಸಿ ಕಣ್ಣುಗಳಿಗೆ ಹಿತ ಅನುಭವ ನೀಡುವ ಈ ಫೀಚರ್ಸ್‌ ಅನ್ನು ಇದೀಗ ಎಲ್ಲ ಸೋಶಿಯಲ್‌ ಮೀಡಿಯಾ ತಾಣಗಳು ಅಳವಡಿಸಿಕೊಂಡಿವೆ. ಆ ಪೈಕಿ ಇದೀಗ ಜನಪ್ರಿಯ ಕಿರು ವೀಡಿಯೊ ಹಂಚಿಕೆ ಅಪ್ಲಿಕೇಶನ್‌ಗಳಲ್ಲಿ ಒಂದಾದ ಸ್ನ್ಯಾಪ್‌ಚಾಟ್‌ ಸಹ ಡಾರ್ಕ್‌ ಮೋಡ್ ಅಳವಡಿಸಿಕೊಂಡಿದೆ. ಅದನ್ನು ಸಕ್ರಿಯ ಮಾಡುವುದು ಹೇಗೆ ಅಂತೀರಾ?

ಸ್ನ್ಯಾಪ್‌ಚಾಟ್‌ ಆಪ್‌ನಲ್ಲಿ ಡಾರ್ಕ್‌ಮೋಡ್ ಆನ್ ಮಾಡುವುದು ಹೇಗೆ?

ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಪ್‌ ಸೇರಿದಂತೆ ಸ್ನ್ಯಾಪ್‌ಚಾಟ್‌ ಸಹ ಡಾರ್ಕ್‌ ಮೋಡ್ ಆಯ್ಕೆಯನ್ನು ಹೊಂದಿವೆ. ಪ್ರಸ್ತುತ, ಸ್ನ್ಯಾಪ್‌ಚಾಟ್‌ ಜಗತ್ತಿನಾದ್ಯಂತ 319 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಯುವ ಸಮೂಹವನ್ನು ಹೆಚ್ಚಾಗಿ ಆಕರ್ಷಿಸಿರುವ ಈ ಆಪ್‌ ಸ್ನ್ಯಾಪ್ ಸ್ಟ್ರೀಕ್, ಫಿಲ್ಟರ್‌ಗಳು, ಲೆನ್ಸ್ ಸೇರಿದಂತೆ ಹಲವು ಅತ್ಯುತ್ತಮ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಡಾರ್ಕ್‌ ಮೋಡ್ ಆಯ್ಕೆಯನ್ನು ಒದಗಿಸಿದೆ. ಆದರೆ ಆಂಡ್ರಾಯ್ಡ್‌ ಬಳಕೆದಾರರಿಗೆ ಅಧಿಕೃತವಾಗಿ ಡಾರ್ಕ್‌ ಮೋಡ್‌ ಸೆಟ್‌ ಮಾಡಲು ಇನ್ನು ನೇರ ಮಾರ್ಗ ನೀಡಲ್ಲ. ಹಾಗಾದರೆ ಸ್ನ್ಯಾಪ್‌ಚಾಟ್‌ ಆಪ್‌ನಲ್ಲಿ ಡಾರ್ಕ್‌ ಮೋಡ್ ಸಕ್ರಿಯಗೊಳಿಸುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಐಒಎಸ್ ನಲ್ಲಿ ಡಾರ್ಕ್ ಮೋಡ್ ಅನ್ನು ಆನ್ ಮಾಡಲು ಹೀಗೆ ಮಾಡಿ:

* ನಿಮ್ಮ ಐಫೋನಿನಲ್ಲಿ ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್ ತೆರೆಯಿರಿ
* ಪರದೆಯ ಮೇಲಿನ ಎಡಭಾಗದಲ್ಲಿರುವ Bitmoji ಐಕಾನ್ ಮೇಲೆ ಟ್ಯಾಪ್ ಮಾಡಿ (ಪ್ರೊಫೈಲ್ ಚಿತ್ರ)
* ಮೇಲಿನ ಬಲ ಮೂಲೆಯಲ್ಲಿರುವ ಸೆಟ್ಟಿಂಗ್‌ಗಳ ಐಕಾನ್ ಕ್ಲಿಕ್ ಮಾಡಿ
* 'ನನ್ನ ಖಾತೆ' ಸೆಟ್ಟಿಂಗ್‌ಗಳ ಅಡಿಯಲ್ಲಿ, 'ಅಪ್ಲಿಕೇಶನ್ ಗೋಚರತೆ' ಟ್ಯಾಪ್ ಮಾಡಿ
* ಈ ಮೆನು ಅಡಿಯಲ್ಲಿ, 'ಯಾವಾಗಲೂ ಡಾರ್ಕ್' ಆಯ್ಕೆಯನ್ನು ಟ್ಯಾಪ್ ಮಾಡಿ
* ನಿಮ್ಮ ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್ ಆನ್ ಆಗುತ್ತದೆ.

ಸ್ನ್ಯಾಪ್‌ಚಾಟ್‌ ಆಪ್‌ನಲ್ಲಿ ಡಾರ್ಕ್‌ಮೋಡ್ ಆನ್ ಮಾಡುವುದು ಹೇಗೆ?

ಆಂಡ್ರಾಯ್ಡ್‌ ನಲ್ಲಿ ಡಾರ್ಕ್ ಮೋಡ್ ಅನ್ನು ಮಾಡಲು ಹೀಗೆ ಮಾಡಿ:
* ಸೆಟ್ಟಿಂಗ್‌ಗಳನ್ನು ತೆರೆಯಿರಿ
* 'ಪ್ರದರ್ಶನ ಮತ್ತು ಬ್ರೈಟ್ನೆಸ್‌' ಗೆ ಹೋಗಿ
* ಡಾರ್ಕ್ ಮೋಡ್ ಸೆಟ್ಟಿಂಗ್‌ಗಳು' ಟ್ಯಾಪ್ ಮಾಡಿ
* 'ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳಿಗಾಗಿ ಡಾರ್ಕ್ ಮೋಡ್ (ಬೀಟಾ)' ಅನ್ನು ಟ್ಯಾಪ್ ಮಾಡಿ
* ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸ್ನ್ಯಾಪ್‌ಚಾಟ್‌ ಗಾಗಿ ಟಾಗಲ್ ಅನ್ನು ಸಕ್ರಿಯಗೊಳಿಸಿ
* ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ಗೆ ಡಾರ್ಕ್ ಮೋಡ್ ಅನ್ನು ಅನ್ವಯಿಸಲಾಗುತ್ತದೆ.

ಯಾವುದೇ ಆಂಡ್ರಾಯ್ಡ್ ಫೋನ್‌ನಲ್ಲಿ ಡಾರ್ಕ್ ಮೋಡ್ ಆನ್ ಮಾಡಲು ಹೀಗೆ ಮಾಡಿ:

(ಒಪ್ಪೋ, ಒನ್‌ಪ್ಲಸ್‌ ಮತ್ತು ವಿವೋ ಹೊರತುಪಡಿಸಿ ಬೇರೆ ಯಾವುದೇ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದರೆ, ಈ ಕ್ರಮ ಫಾಲೋ ಮಾಡಿ)

* ಸೆಟ್ಟಿಂಗ್‌ಗಳನ್ನು ತೆರೆಯಿರಿ
* 'ಅಬೋಟ್ ಫೋನ್‌' ಆಯ್ಕೆ ಗೆ ಹೋಗಿ
* ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'ಬಿಲ್ಡ್ ಸಂಖ್ಯೆ' ಅನ್ನು ಹುಡುಕಿ
* ಬಿಲ್ಡ್ ಸಂಖ್ಯೆಯನ್ನು ನಿರಂತರವಾಗಿ ಏಳು ಬಾರಿ ಟ್ಯಾಪ್ ಮಾಡಿ
* 'ನೀವು ಈಗ ಡೆವಲಪರ್ ಆಗಿದ್ದೀರಿ' ಎಂದು ಹೇಳುವ ಟೋಸ್ಟ್ ಸಂದೇಶವನ್ನು ನೀವು ಪಡೆಯುತ್ತೀರಿ
* ಸೆಟ್ಟಿಂಗ್‌ಗಳಿಗೆ ಹಿಂತಿರುಗಿ
* ಸಿಸ್ಟಮ್‌ಗೆ ಹೋಗಿ ಮತ್ತು ಡೆವಲಪರ್ ಆಯ್ಕೆಗಳ ಮೇಲೆ ಟ್ಯಾಪ್ ಮಾಡಿ
* ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'ಓವರ್ರೈಡ್ ಫೋರ್ಸ್-ಡಾರ್ಕ್' ಆಯ್ಕೆಯನ್ನು ಹುಡುಕಿ
* ಟಾಗಲ್ ಅನ್ನು ಆನ್ ಮಾಡುವ ಮೂಲಕ ಆಯ್ಕೆಯನ್ನು ಸಕ್ರಿಯಗೊಳಿಸಿ
* ಒಮ್ಮೆ ಇದನ್ನು ಸಕ್ರಿಯಗೊಳಿಸಿದರೆ, ನಿಮ್ಮ ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್ ಅನ್ನು ಡಾರ್ಕ್ ಮೋಡ್‌ಗೆ ತಿರುಗಿಸಲಾಗುತ್ತದೆ

Best Mobiles in India

English summary
How to Enable Dark Mode on Snapchat Android and iOS App.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X