ನಿಮ್ಮ ಐಫೋನ್‌ನಲ್ಲಿ ಡೇಟಾ ಡಿಲೀಟ್ ಮಾಡುವುದು ಹೇಗೆ?..ಇಲ್ಲಿದೆ ಮಾಹಿತಿ!

|

ಪ್ರಸ್ತುತ ದಿನಗಳಲ್ಲಿ ಬಹುತೇಕ ಎಲ್ಲರೂ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ತಮ್ಮ ಅಗತ್ಯ ಡೇಟಾವನ್ನು ಇಟ್ಟುಕೊಳ್ಳುತ್ತಾರೆ. ಬ್ಯಾಂಕ್ ವಿವರಗಳು ಅಥವಾ ಯಾವುದೇ ಇತರ ಹಣಕಾಸು ದಾಖಲೆಗಳು. ಅಂತಹ ಸಂದರ್ಭದಲ್ಲಿ, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಕಳೆದುಕೊಂಡರೆ ಅಥವಾ ಅದು ಕದ್ದಿದ್ದರೆ, ನಂತರ ಡೇಟಾವನ್ನು ಸಹ ದುರುಪಯೋಗ ಪಡಿಸಿಕೊಳ್ಳಬಹುದು. ಅಂತಹ ಪರಿಸ್ಥಿತಿ ಯನ್ನು ತಪ್ಪಿಸಲು, ಐಓಎಸ್‌ ತನ್ನ ಐಫೋನ್ ಬಳಕೆದಾರರಿಗೆ ಫೋನ್ ಅನ್ನು ಹುಡುಕಲು ಮತ್ತು ಡೇಟಾವನ್ನು ಡಿಲೀಟ್ ಮಾಡಲು ಅನುಮತಿಸುತ್ತದೆ.

ನಿಮ್ಮ ಐಫೋನ್‌ನಲ್ಲಿ ಡೇಟಾ ಡಿಲೀಟ್ ಮಾಡುವುದು ಹೇಗೆ?..ಇಲ್ಲಿದೆ ಮಾಹಿತಿ!

ಹೌದು, ನಿಮ್ಮ ಐಫೋನ್ ಡೇಟಾವನ್ನು ನೀವು ಕಳೆದುಕೊಂಡಿದ್ದರೆ ಅದನ್ನು ಡಿಲೀಟ್ ಮಾಡಲು ಫೈಂಡ್‌ ಮೈ ಐಫೋನ್‌ (Find My iPhone) ಅನ್ನು ಸಕ್ರಿಯಗೊಳಿಸಲು ಇದು ಕಡ್ಡಾಯವಾಗಿದೆ. ಹಾಗಾದರೇ ಫೈಂಡ್ ಮೈ ಐಫೋನ್ ಅನ್ನು ಸಕ್ರಿಯಗೊಳಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ನಿಮ್ಮ ಐಫೋನ್‌ನಲ್ಲಿ ಡೇಟಾ ಡಿಲೀಟ್ ಮಾಡುವುದು ಹೇಗೆ?..ಇಲ್ಲಿದೆ ಮಾಹಿತಿ!

ಫೈಂಡ್ ಮೈ ಐಫೋನ್ ಅನ್ನು ಸಕ್ರಿಯಗೊಳಿಸಲು ಹೀಗೆ ಮಾಡಿರಿ:

ಹಂತ 1: ಮೊದಲಿಗೆ, ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ.

ಹಂತ 2: ಈಗ ಹುಡುಕಾಟ ಪಟ್ಟಿಯಲ್ಲಿ ಆಪಲ್ ಐಡಿ (Apple ID) ಮೇಲೆ ಕ್ಲಿಕ್ ಮಾಡಿ.

ಹಂತ 3: ಈಗ ಐಡಿಯಲ್ಲಿ ಫೈಂಡ್ ಮೈ ಐಫೋನ್ ವೈಶಿಷ್ಟ್ಯ ವನ್ನು ಆನ್ ಮಾಡಿ.

ನಿಮ್ಮ ಐಫೋನ್‌ನಲ್ಲಿ ಡೇಟಾ ಡಿಲೀಟ್ ಮಾಡುವುದು ಹೇಗೆ?..ಇಲ್ಲಿದೆ ಮಾಹಿತಿ!

ಹಂತ 4: ನಿಮ್ಮ ಐಫೋನ್ ಹುಡುಕಲು, ನೀವು http://icloud.com/find ಗೆ ಹೋಗಬೇಕು

ಹಂತ 5: ಈಗ, ನಿಮ್ಮ (Apple ID) ಆಪಲ್ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಸೈನ್ ಇನ್ ಮಾಡಿ.

ಹಂತ 6: ನಿಮ್ಮ ಐಫೋನ್ (iPhone) ನ ಸ್ಥಳವನ್ನು ಪತ್ತೆ ಹಚ್ಚಲಾಗುತ್ತದೆ ಮತ್ತು ಅದು ನಿಮ್ಮ ನಕ್ಷೆಯಲ್ಲಿ ತೋರಿಸಲು ಪ್ರಾರಂಭಿಸುತ್ತದೆ.

ಐಫೋನ್‌ನಲ್ಲಿ ಕಡಿಮೆ ಡೇಟಾ ಮೋಡ್ ಸಕ್ರಿಯ ಮಾಡುವುದು ಹೇಗೆ?

ಮೊಬೈಲ್ ಡೇಟಾಗಾಗಿ ಹೀಗೆ ಮಾಡಿ:
* ನಿಮ್ಮ ಸೆಟ್ಟಿಂಗ್‌ಗಳನ್ನು ತೆರೆಯಿರಿ
* ನಂತರ ಮೊಬೈಲ್ ಯೋಜನೆಯನ್ನು ಅವಲಂಬಿಸಿ ಸೆಲ್ಯುಲಾರ್ ಅಥವಾ ಮೊಬೈಲ್ ಡೇಟಾ ವನ್ನು ಆಯ್ಕೆಮಾಡಿ.
* ನಂತರ ಸೆಲ್ಯುಲಾರ್ ಡೇಟಾ ಆಯ್ಕೆಗಳು ಅಥವಾ ಮೊಬೈಲ್ ಡೇಟಾ ಆಯ್ಕೆಗಳನ್ನು ಟ್ಯಾಪ್ ಮಾಡಿ.
* ನೀವು ಡ್ಯುಯಲ್ ಸಿಮ್ ಬಳಸುತ್ತಿದ್ದರೆ, ಬದಲಿಗೆ ಸಂಖ್ಯೆಯನ್ನು ಆಯ್ಕೆಮಾಡಿ.
* 4G, LTE, ಅಥವಾ ಡ್ಯುಯಲ್ ಸಿಮ್‌ಗಾಗಿ, ಕಡಿಮೆ ಡೇಟಾ ಮೋಡ್ ಅನ್ನು ಆನ್ ಮಾಡಿ ಮತ್ತು 5G ಡೇಟಾಕ್ಕಾಗಿ, ಮೊದಲು ಡೇಟಾ ಮೋಡ್ ಅನ್ನು ಆಯ್ಕೆ ಮಾಡಿ ಮತ್ತು ನಂತರ ಕಡಿಮೆ ಡೇಟಾ ಮೋಡ್ ಅನ್ನು ಆನ್ ಮಾಡಿ.

Wi-Fi ಗಾಗಿ ಈ ಕ್ರಮ ಅನುಸರಿಸಿ:
- ಮೊದಲು, ನಿಮ್ಮ ಸೆಟ್ಟಿಂಗ್‌ಗಳನ್ನು ತೆರೆಯಿರಿ ಮತ್ತು ವೈ-ಫೈ ಆಯ್ಕೆಮಾಡಿ.
- ನಂತರ ನಿಮ್ಮ ಸಂಪರ್ಕಿತ ನೆಟ್‌ವರ್ಕ್‌ನ ಬಲಭಾಗದಲ್ಲಿರುವ ಮಾಹಿತಿ ಐಕಾನ್ ಅನ್ನು ಟ್ಯಾಪ್ ಮಾಡಿ.
- ಮುಂದೆ, ಕಡಿಮೆ ಡೇಟಾ ಮೋಡ್‌ ಗಾಗಿ ಟಾಗಲ್ ಅನ್ನು ಆನ್ ಮಾಡಿ ಇತ್ತೀಚಿನ ಐಫೋನ್ ಮಾಡೆಲ್ (2021 ಆವೃತ್ತಿ) ಬಳಸುವವರು ತಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಸ್ಮಾರ್ಟ್ ಡೇಟಾ ಮೋಡ್ ಫೀಚರ್‌ ಅನ್ನು ನೋಡಬಹುದು. ಇದಲ್ಲದೆ, ನಿಮ್ಮ ಸಾಧನವು ಪ್ರತಿದಿನ ಎಷ್ಟು ಡೇಟಾ ವನ್ನು ಬಳಸುತ್ತಿದೆ ಎಂಬುದನ್ನು ನೀವು ಪರಿಶೀಲಿಸಲು ಬಯಸಿದರೆ ಕೇವಲ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ನಿಮ್ಮ ಮೊಬೈಲ್ ಪ್ಯಾಕ್ ಅನ್ನು ಅವಲಂಬಿಸಿ ಸೆಲ್ಯುಲಾರ್ ಅಥವಾ ಮೊಬೈಲ್ ಡೇಟಾ ವನ್ನು ಆಯ್ಕೆಮಾಡಿ.

Most Read Articles
Best Mobiles in India

English summary
How to Erase Data From iPhone: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X