ನಿಮ್ಮ ಸ್ಮಾರ್ಟ್‌ಫೋನ್‌ಗೆ ವೈರಸ್‌ ಅಟ್ಯಾಕ್‌ ಆಗದಂತೆ ಮಾಡಲು ಹೀಗೆ ಮಾಡಿ?

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಮೇಲಿನ ಅವಲಂಬನೆ ಹೆಚ್ಚಿದೆ. ಸ್ಮಾರ್ಟ್‌ಫೋನ್‌ ಇಲ್ಲದಿದ್ದರೆ, ಮನೆಯಿಂದ ಹೊರಹೋಗುವುದು ಕೂಡ ಅಸಾದ್ಯ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇನ್ನು ಸ್ಮಾರ್ಟ್‌ಫೋನ್‌ ಕೇವಲ ಸಂಪರ್ಕ ಸಾಧನವಾಗಿ ಉಳಿದಿಲ್ಲ. ಸ್ಮಾರ್ಟ್‌ಫೋನ್‌ ಮೂಲಕ ಆನ್‌ಲೈನ್‌ ಮನಿ ಟ್ರಾನ್ಸಫರ್‌, ಟಿಕೆಟ್‌ ಬುಕ್ಕಿಂಗ್‌, ವೀಡಿಯೊ ಕಾಲ್‌, ನಂತಹ ಮುಂತಾದ ಕಾರ್ಯಗಳನ್ನು ಮಾಡಬಹುದಾಗಿದೆ. ಅದರಲ್ಲೂ ಆನ್‌ಲೈನ್‌ ಆಕ್ಟಿವಿಟಿಗಳು ಹೆಚ್ಚಾಗಿರುವುದರಿಂದ ಹ್ಯಾಕರ್‌ಗಳ ಬಗ್ಗೆ ಎಚ್ಚರದಿಂದ ಇರಬೇಕಾದ ಅನಿವಾರ್ಯತೆ ಕೂಡ ಇದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಮೂಲಕ ಆನ್‌ಲೈನ್‌ ಆಕ್ಟಿವಿಟಿ ಹೆಚ್ಚಾದಂತೆ ಸೈಬರ್‌ ಕ್ರೈಮ್‌ಗಳ ಸಂಖ್ಯೆ ಕೂಡ ಹೆಚ್ಚಾಗುತ್ತಲೇ ಇದೆ. ಹ್ಯಾಕರ್‌ಗಳು ನಿಮ್ಮನ್ನು ಸಲುಭವಾಗಿ ಮೋಸಗೊಳಿಸಲು ಸುಲಭವಾಗಿ ಹಣ ಸಂಪಾದಿಸುವ ಜಾಹಿರಾತುಗಳನ್ನು ಅಪ್‌ಲೋಡ್‌ ಮಾಡುವ ಮೂಲಕ ಮಾಲ್‌ವೇರ್‌ ಇಂಜೆಕ್ಟ್‌ ಮಾಡುವುದು ಹೆಚ್ಚಾಗಿದೆ. ಮಾಲ್‌ವೇರ್‌ ಒಮ್ಮೆ ನಿಮ್ಮ ಸ್ಮಾರ್ಟ್‌ಫೋನ್‌ ಪ್ರವೇಶಿಸಿದರೆ ಸಾಕು ಹ್ಯಾಕರ್‌ ಕೈನಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಎಲ್ಲಾ ಮಾಹಿತಿ ಸೇರಲಿದೆ. ಇದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮಾಲ್‌ವೇರ್‌ ಸೇರದಂತೆ ತಡೆಗಟ್ಟಲು ಹಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅಂತಹ ಮುನ್ನೆಚ್ಚರಿಕೆ ಕ್ರಮಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಾಲ್ವೇರ್ ಎಂದರೇನು?

ಮಾಲ್ವೇರ್ ಎಂದರೇನು?

ಮಾಲ್ವೇರ್ ಎಂದರೆ ಇದು ಒಂದು ರೀತಿಯಲ್ಲಿ ಇಂಜೆಕ್ಟ್‌ ಸಾಫ್ಟ್‌ವೇರ್ ಆಗಿದೆ. ಕಂಪ್ಯೂಟರ್‌ಗಳು ಮತ್ತು ಕಂಪ್ಯೂಟರ್ ಸಿಸ್ಟಮ್‌ಗಳನ್ನು ಹಾನಿ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಮಾಲ್‌ವೇರ್" ದುರುದ್ದೇಶಪೂರಿತ ಸಾಫ್ಟ್‌ವೇರ್ " ಎಂದೇ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ವೈರಸ್‌ಗಳು, ವಾರ್ಮ್ಸ್, ಟ್ರೋಜನ್ ವೈರಸ್‌ಗಳು, ಸ್ಪೈವೇರ್, ಆಡ್‌ವೇರ್ ಮತ್ತು ರಾನ್ಸಂವೇರ್‌ ಗಳನ್ನ ಮಾಲ್‌ವೇರ್‌ಗಳ ಪಟ್ಟಿಗೆ ಸೇರಿಸಬಹುದಾಗಿದೆ.

ನಿಮ್ಮ ಫೋನ್‌ಗೆ ಮಾಲ್ವೇರ್‌ ತಗುಲಿದ್ದರೆ ಪತ್ತೆ ಮಾಡುವುದು ಹೇಗೆ?

ನಿಮ್ಮ ಫೋನ್‌ಗೆ ಮಾಲ್ವೇರ್‌ ತಗುಲಿದ್ದರೆ ಪತ್ತೆ ಮಾಡುವುದು ಹೇಗೆ?

* ನೀವು ಹೆಚ್ಚು ಸಮಯ ನಿಮ್ಮ ಸ್ಮಾರ್ಟ್‌ಫೋನ್‌ ಬಳಸದಿದ್ದರೂ ಫೋನ್ ಬಿಸಿಯಾಗಿದ್ದರೆ ಮಾಲ್ವೇರ್‌ ತಗುಲಿದೆ ಎಂದು ಹೇಳಬಹುದು.

* ಇನ್ನು ನಿಮ್ಮ ಡೇಟಾ ತುಂಬಾ ವೇಗವಾಗಿ ಖಾಲಿಯಾಗುತ್ತಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಕೂಡ ಬೇಗನೆ ಖಾಲಿಯಾಗುತ್ತಿದ್ದರೆ ವೈರಸ್‌ ತಗುಲಿದೆ ಎಂದರ್ಥ.

* ಒಂದು ವೇಳೆ ವೈರಸ್‌ ನಿಮ್ಮ ಸ್ಮಾರ್ಟ್‌ಫೋನ್‌ ಪ್ರವೇಶಿಸಿದ್ದರೆ ಅನಗತ್ಯ ಜಾಹಿರಾತುಗಳು ನಿಮ್ಮ ಫೋನ್‌ನಲ್ಲಿ ಕಾಣಿಸಿಕೊಳ್ಳಲಿವೆ.

* ನಿಮ್ಮ ಫೋನ್ ಪಟ್ಟಿಯಲ್ಲಿರುವ ಸಂಪರ್ಕಗಳು ನಿಮ್ಮ ಫೋನಿನಿಂದ ಸ್ಪ್ಯಾಮ್ ಸಂದೇಶಗಳನ್ನು ಪಡೆಯುತ್ತಿವೆ. ಇವುಗಳಿಂದ ನಿಮ್ಮ ಸಂಪರ್ಕದಲ್ಲಿರುವವರಿಗೂ ಈ ಸ್ಪ್ಯಾಮ್ ಸಂದೇಶಗಳು ಸೋಂಕು ತಗುಲಿಸಬಹುದು.

ನಿಮ್ಮ ಫೋನ್‌ನಲ್ಲಿರುವ ಮಾಲ್‌ವೇರ್‌ ಅಪ್ಲಿಕೇಶನ್‌ಗಳನ್ನ ಪತ್ತೆ ಹಚ್ಚಿ, ಡಿಲೀಟ್‌ ಮಾಡುವುದು ಹೇಗೆ?

ನಿಮ್ಮ ಫೋನ್‌ನಲ್ಲಿರುವ ಮಾಲ್‌ವೇರ್‌ ಅಪ್ಲಿಕೇಶನ್‌ಗಳನ್ನ ಪತ್ತೆ ಹಚ್ಚಿ, ಡಿಲೀಟ್‌ ಮಾಡುವುದು ಹೇಗೆ?

* ನಿಮ್ಮ ಫೋನ್‌ನಲ್ಲಿ ನೀವು ಡೌನ್‌ಲೋಡ್ ಮಾಡದ ಅಪ್ಲಿಕೇಶನ್‌ಗಳು ಇನ್‌ಸ್ಟಾಲ್‌ ಆಗಿದ್ದರೆ ಅವುಗಳು ಮಾಲ್‌ವೇರ್‌ ಆಗಿರುವ ಸಾಧ್ಯತೆ ಹೆಚ್ಚು.

* ನಿಮ್ಮ ಫೋನ್‌ನಲ್ಲಿ ಯಾವ ಅಪ್ಲಿಕೇಶನ್‌ಗಳು ಇತರರಿಗಿಂತ ಹೆಚ್ಚು ಡೇಟಾವನ್ನು ಬಳಸುತ್ತಿವೆ ಎಂಬುದನ್ನು ಪರಿಶೀಲಿಸಿ.

* ನಿಮ್ಮ ಫೋನ್‌ನಲ್ಲಿ ನೀವು ಬಳಸದಂತಹ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿ.

ನಿಮ್ಮ ಫೋನ್‌ನಲ್ಲಿ ವೈರಸ್ ಬರದಂತೆ ತಡೆಯುವುದು ಹೇಗೆ?

ನಿಮ್ಮ ಫೋನ್‌ನಲ್ಲಿ ವೈರಸ್ ಬರದಂತೆ ತಡೆಯುವುದು ಹೇಗೆ?

ಕೆಲವು ವೇಳೆ ಸ್ಮಾರ್ಟ್ ಫೋನ್ ಬಳಸುವವರು ಕೂಡ ಅರಿವಿಲ್ಲದೆ ಮಾಡುವ ಕಾರ್ಯದಿಂದ ಮಾಲ್ವೇರ್ ಗಳು ಪ್ರವೇಶಿಸುತ್ತವೆ. ಆದರಿಂದ ಮಾಲ್ವೇರ್‌ ನಿಮ್ಮ ಸ್ಮಾರ್ಟ್‌ಫೋನ್‌ ಪ್ರವೇಶಿಸಬಾರದು ಎಂದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

* ಅಜ್ಞಾತ ಮೂಲಗಳಿಂದ ದೃಡೀಕರೀಸಿದ ಅಪ್ಲಿಕೇಶನ್‌ಗಳನ್ನು ಎಂದಿಗೂ ಡೌನ್‌ಲೋಡ್ ಮಾಡಬೇಡಿ. ನಿಮಗೆ ಯಾವುದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಕೆನಿಸದರೂ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಂತಹ ಅಧಿಕೃತ ಆಪ್ ಸ್ಟೋರ್‌ಗಳಿಗೆ ಹೋಗಿ. ಆಪ್ ಸ್ಟೋರ್‌ಗಳಲ್ಲಿ ಕೂಡ ಮಾಲ್ವೇರ್‌ಗಳು ಇರುವ ಸಾಧ್ಯತೆ ಇರುತ್ತದೆ. ಆದ್ದರಿಂದ, ನೀವು ಅಧಿಕೃತ ಆಪ್ ಸ್ಟೋರ್‌ಗೆ ಹೋದರೂ ಸಹ, ನೀವು ಡೌನ್‌ಲೋಡ್ ಮಾಡಲಿರುವ ಆಪ್ ಅನ್ನು ಪರಿಶೀಲಿಸಿದ ನಂತರ ಡೌನ್‌ಲೋಡ್‌ ಮಾಡಿರಿ.

* ನೀವು ಆಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಿದಾಗಲೆಲ್ಲಾ ಅದು ನಿಮ್ಮ ಫೋನ್‌ನಲ್ಲಿ ಏನು ಮಾಡಬಹುದು ಎಂಬುದರ ಕುರಿತು ನಿಮ್ಮಿಂದ ಅನುಮತಿಗಳನ್ನು ಕೇಳುತ್ತದೆ. ಅದನ್ನು ಅನುಮತಿಸುವ ಮೊದಲು ಎಚ್ಚರಿಕೆ ವಹಿಸಬೇಕಿರುವುದು ಅತಿ ಅಗತ್ಯ.

* ಕಂಪ್ಯೂಟರ್‌ಗಳಂತೆ, ಮೊಬೈಲ್ ಫೋನ್‌ಗಳಿಗೂ ಆಂಟಿ-ವೈರಸ್ ಸಾಫ್ಟ್‌ವೇರ್ ಅಗತ್ಯವಿದೆ. ಆದ್ದರಿಂದ, ನೀವು ಆಂಟಿ-ವೈರಸ್ ಅನ್ನು ಇನ್‌ಸ್ಟಾಲ್ ಮಾಡಿದರೆ ಒಳಿತು. ಆದರೆ ಅದು ವಿಶ್ವಾಸಾರ್ಹ ಮೂಲದ್ದಾಗಿರಬೇಕು.

Best Mobiles in India

English summary
What makes things even worse is the fact that whether you have an Android smartphone or an Apple iPhone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X