ಬೇರೆಯವರು ನಿಮ್ಮ ನೆಟ್‌ಫ್ಲಿಕ್ಸ್‌ ಖಾತೆ ಬಳಸುತ್ತಿದ್ದರೆ ತಿಳಿಯಲು ಹೀಗೆ ಮಾಡಿ?

|

ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ನೆಟ್‌ಫ್ಲಿಕ್ಸ್‌ ಕೂಡ ಒಂದಾಗಿದೆ. ನೆಟ್‌ಫ್ಲಿಕ್ಸ್‌ ತನ್ನ ವೈವಿಧ್ಯಮಯ ಚಂದಾದಾರಿಕೆ ಮೂಲಕ ಬಳಕೆದಾರರ ಗಮನಸೆಳೆದಿದೆ. ಇನ್ನು ನೆಟ್‌ಫ್ಲಿಕ್ಸ್‌ ಬಳಕೆದಾರರು ತಮ್ಮ ಪಾಸ್‌ವರ್ಡ್‌ ಅನ್ನು ಬೇರೆಯವರಿಗೆ ಶೇರ್‌ ಮಾಡುವ ಮೂಲಕ ಅವರು ಕೂಡ ನಿಮ್ಮ ಖಾತೆಯನ್ನು ಬಳಸುವುದಕ್ಕೆ ಅವಕಾಶವಿದೆ. ನೀವು ಚಂದಾದಾರಿಕೆಯನ್ನು ಹೊಂದಿದ್ದರೆ, ಬೇರೆಯವರು ಕೂಡ ನಿಮ್ಮದೇ ಖಾತೆಯಲ್ಲಿ ಸ್ಟ್ರೀಮಿಂಗ್‌ ಮಾಡಬಹುದು.

ನೆಟ್‌ಫ್ಲಿಕ್ಸ್‌

ಹೌದು, ಹೆಚ್ಚಿನ ಜನರು ನೆಟ್‌ಫ್ಲಿಕ್ಸ್‌ ಖಾತೆಯನ್ನು ಹೊಂದಿರುವುದಿಲ್ಲ. ಬದಲಿಗೆ ತಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಹೊಂದಿರುವ ಚಂದಾದಾರಿಕೆಯ ಪಾಸ್‌ವರ್ಡ್‌ ಬಳಸಿ ನೆಟ್‌ಫ್ಲಿಕ್ಸ್‌ ಬಳಸುತ್ತಾರೆ. ಇದೇ ಕಾರಣಕ್ಕೆ ಇತ್ತಿಚಿಗೆ ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಶೇರಿಂಗ್‌ಗೂ ಶುಲ್ಕ ವಿಧಿಸುವುದಕ್ಕೆ ಮುಂದಾಗಿದೆ. ಒಂದೇ ಖಾತೆಯನ್ನು ಹಲವರು ಬಳಸುವುದರಿಂದ ನಿಮ್ಮ ಸ್ಟ್ರೀಮಿಂಗ್‌ ಹಿಸ್ಟರಿ ಎಲ್ಲರೂ ನೋಡುವುದಕ್ಕೆ ಸಾದ್ಯವಿದೆ. ಆದರಿಂದ ಕೆಲವರು ತಮ್ಮ ಪ್ರೊಫೈಲ್‌ ಪಾಸ್‌ವರ್ಡ್‌ ಅನ್ನು ಶೇರ್‌ ಮಾಡಲು ಮುಂದಾಗುವುದಿಲ್ಲ.

ನೆಟ್‌ಫ್ಲಿಕ್ಸ್‌

ನಿಮ್ಮ ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಅನ್ನು ಬಳಸಿ ನಿಮ್ಮ ಖಾತೆಯನ್ನು ಬಳಸುತ್ತಿದ್ದಾರೆ ಅನ್ನೊದನ್ನು ಸುಲಭವಾಗಿ ತಿಳಿಯಬಹುದು. ಇದರಿಂದ ನಿಮ್ಮ ನೆಟ್‌ಫ್ಲಿಕ್ಸ್‌ ಖಾತೆಯ ದುರುಪಯೋಗವನ್ನು ತಡೆಯಬಹುದು. ಒಂದು ವೇಳೆ ನಿಮಗೆ ತಿಳಿಯದವರು ಬಳಸುತ್ತಿದ್ದಾರೆ ಎಂದು ಕಂಡರೆ ಪಾಸ್‌ವರ್ಡ್‌ ಬದಲಾಯಿಸುವುದಕ್ಕೆ ಸಾಧ್ಯವಾಗಲಿದೆ. ಅಲ್ಲದೆ ಎಲ್ಲಾ ಅನಗತ್ಯ ಬಳಕೆದಾರರನ್ನು ಒಂದೇ ಬಾರಿಗೆ ನೀವು ಲಾಗ್ ಔಟ್ ಮಾಡುವುದಕ್ಕೆ ಅವಕಾಶವಿದೆ. ಹಾಗಾದ್ರೆ ನಿಮ್ಮ ಖಾತೆಯನ್ನು ಯಾರು ಬಳಸುತ್ತಿದ್ದಾರೆ ಎಂದು ತಿಳಿಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ನೆಟ್‌ಫ್ಲಿಕ್ಸ್ ಖಾತೆಯನ್ನು ಯಾರು ಬಳಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸುವುದು ಹೇಗೆ?

ನಿಮ್ಮ ನೆಟ್‌ಫ್ಲಿಕ್ಸ್ ಖಾತೆಯನ್ನು ಯಾರು ಬಳಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸುವುದು ಹೇಗೆ?

ನಿಮ್ಮ ನೆಟ್‌ಫ್ಲಿಕ್ಸ್‌ ಖಾತೆಯ ಪಾಸ್‌ವರ್ಡ್‌ ಬಳಸಿ ಲಾಗ್‌ ಇನ್‌ ಆಗಿರುವ ಡಿವೈಸ್‌ಗಳನ್ನು ಪರಿಶೀಲಿಸಲು, ನೀವು ಡೆಸ್ಕ್‌ಟಾಪ್/ಲ್ಯಾಪ್‌ಟಾಪ್‌ನಲ್ಲಿ ನೆಟ್‌ಫ್ಲಿಕ್ಸ್‌ಗೆ ಲಾಗ್ ಇನ್ ಆಗಬೇಕಾಗುತ್ತದೆ. ಇದಾದ ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.
ಹಂತ:1 ಗೂಗಲ್‌ ಕ್ರೋಮ್‌ ಅಥವಾ ನಿಮ್ಮ ಆಯ್ಕೆಯ ವೆಬ್‌ ಬ್ರೌಸರ್ ಮೂಲಕ ನೆಟ್‌ಫ್ಲಿಕ್ಸ್‌ ವೆಬ್‌ಸೈಟ್‌ಗೆ ಹೋಗಬೇಕು.
ಹಂತ:2 ನಂತರ ನಿಮ್ಮ ಇಮೇಲ್ ಐಡಿ ಅಥವಾ ಫೋನ್ ಸಂಖ್ಯೆಯನ್ನು ಬಳಕೆದಾರಹೆಸರು ಮತ್ತು ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಿರಿ ಮತ್ತು 'ಸೈನ್ ಇನ್' ಕ್ಲಿಕ್ ಮಾಡಿ.
ಹಂತ:3 ಲಾಗ್ ಇನ್ ಮಾಡಿದ ನಂತರ, ಬಳಕೆದಾರರ ಪ್ರೊಫೈಲ್‌ಗಳಲ್ಲಿ ಒಂದನ್ನು ನಮೂದಿಸಿ
ಹಂತ:4 ಪ್ರೊಫೈಲ್ ಚಿತ್ರದ ಮೇಲಿನ ಬಲಭಾಗದಲ್ಲಿರುವ ಡ್ರಾಪ್‌ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
ಹಂತ:5 ಇದೀಗ ಪಾಪ್ ಅಪ್ ಆಗುವ ಆಯ್ಕೆಗಳಲ್ಲಿ, ನಿಮ್ಮ 'ಖಾತೆ' ಹೆಸರಿನ ಒಂದನ್ನು ಕಾಣಬಹುದು.
ಹಂತ:6 ನಂತರ ನಿಮ್ಮ ಖಾತೆ ಸೆಟ್ಟಿಂಗ್ಸ್‌ ಪೇಜ್‌ ನಮೂದಿಸಲು ಅದರ ಮೇಲೆ ಕ್ಲಿಕ್ ಮಾಡಿ.
ಹಂತ:7 ಪೇಜ್‌ ಕೆಳಭಾಗದಲ್ಲಿ ಸೆಟ್ಟಿಂಗ್ಸ್‌ ವಿಭಾಗವಿರುತ್ತದೆ, ಇಲ್ಲಿ ನೀವು ನೀಲಿ ಬಣ್ಣದ ಹಲವು ಆಯ್ಕೆಗಳನ್ನು ಕಾಣಬಹುದು.
ಹಂತ:8 ಇದರಲ್ಲಿ 'ರೀಸೆಂಟ್ ಡಿವೈಸ್ ಸ್ಟ್ರೀಮಿಂಗ್ ಆಕ್ಟಿವಿಟಿ' ಎಂಬ ಆಯ್ಕೆಯನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ.
ಹಂತ:9 ಇದೀಗ, ಯಾವ ಡಿವೈಸ್‌ ನಿಮ್ಮ ಖಾತೆಗೆ ಲಾಗ್ ಇನ್ ಆಗುತ್ತಿದೆ ಎನ್ನುವ ವಿವರವನ್ನು ನೋಡಬಹುದು. ಜೊತೆಗೆ ಎಲ್ಲಿಂದ ಲಾಗಿನ್ ಆಗಿದ್ದಾರೆ ಮತ್ತು ಕೊನೆಯ ಬಾರಿ ಲಾಗ್ ಇನ್ ಮಾಡಿದ್ದಾರೆ ಎಂಬುದನ್ನು ಸಹ ನೀವು ನೋಡಲು ಸಾಧ್ಯವಾಗುತ್ತದೆ.

ನೆಟ್‌ಫ್ಲಿಕ್ಸ್ ಲಾಗಿನ್‌ಗಳನ್ನು ತೆಗೆದುಹಾಕುವುದು ಹೇಗೆ

ನೆಟ್‌ಫ್ಲಿಕ್ಸ್ ಲಾಗಿನ್‌ಗಳನ್ನು ತೆಗೆದುಹಾಕುವುದು ಹೇಗೆ

ನಿಮ್ಮ ಖಾತೆಯ ಪಾಸ್‌ವರ್ಡ್‌ಗಳನ್ನು ಬಳಸಿ ಯಾರೆಲ್ಲಾ ಲಾಗಿನ್‌ ಆಗಿದ್ದಾರೆ ಎಂದು ತಿಳಿದ ನಂತರ ಅವರನ್ನು ಲಾಗ್‌ಔಟ್‌ ಮಾಡುವುದಕ್ಕೆ ಕೂಡ ಅವಕಾಶವಿದೆ. ಇದಕ್ಕಾಗಿ ನೀವು ಮೊದಲಿಗೆ ನಿಮ್ಮ ನೆಟ್‌ಫ್ಲಿಕ್ಸ್‌ ಅಕೌಂಟ್‌ ತೆರೆಯಿರಿ. ಇದರಲ್ಲಿ ಅಕೌಂಟ್‌ ಸೆಟ್ಟಿಂಗ್ಸ್‌ ಪೇಜ್‌ಗೆ ಹೋಗಿ, ಇದರಲ್ಲಿ ಮೇಲಿನ ಬಲಭಾಗದಲ್ಲಿರುವ ಡ್ರಾಪ್-ಡೌನ್ ಮೆನುವನ್ನು ತೆರೆಯುವ ಮೂಲಕ ನಿಮ್ಮ ಅಕೌಂಟ್‌ ಆಯ್ಕೆ ಮಾಡಿ. ನಂತರ ಸೆಟ್ಟಿಂಗ್ಸ್‌ ಪೇಜ್‌ನಲ್ಲಿ 'ಸೈನ್‌ ಔಟ್‌ ಆಫ್‌ ಆಲ್‌ ಡಿವೈಸ್‌' ಎಂದು ಹೇಳುವ ಬ್ಲೂ ಲಿಂಕ್ ಕ್ಲಿಕ್ ಮಾಡಿ. ಇದನ್ನು ಖಚಿತಪಡಿಸಲು ಮತ್ತೊಮ್ಮೆ 'ಸೈನ್ ಔಟ್' ಬಟನ್ ಅನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಪಾಸ್‌ವರ್ಡ್ ಅನ್ನು ಬದಲಾಯಿಸುವ ಮೂಲಕ ನಿಮ್ಮ ಅಕೌಂಟ್‌ ಅನ್ನು ನೀವು ಲಾಗ್‌ ಇನ್‌ ಆಗಬಹುದಾಗಿದೆ.

ವೆಬ್ ಬ್ರೌಸರ್ ಬಳಸಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಬದಲಾಯಿಸುವುದು ಹೇಗೆ?

ವೆಬ್ ಬ್ರೌಸರ್ ಬಳಸಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಬದಲಾಯಿಸುವುದು ಹೇಗೆ?

* ನಿಮ್ಮ ಕಂಪ್ಯೂಟರ್‌ ನಲ್ಲಿರುವ ಯಾವುದೇ ಬ್ರೌಸರ್‌ ನಲ್ಲಿ ನೆಟ್‌ಫ್ಲಿಕ್ಸ್‌ಗೆ ಲಾಗ್ ಇನ್ ಮಾಡಿ ಮತ್ತು ಯಾವುದೇ ಪ್ರೊಫೈಲ್ ಆಯ್ಕೆಮಾಡಿ.
* ತದ ನಂತರ, ಪರದೆಯ ಮೇಲಿನ ಬಲ ಭಾಗದ ಮೂಲೆಯಲ್ಲಿರುವ ಪ್ರೊಫೈಲ್ ಐಕಾನ್ ಮೇಲೆ ಸುಳಿದಾಡಿ ಮತ್ತು ಪಾಪ್ ಅಪ್ ಮೆನುವಿನಿಂದ "ಖಾತೆ" ಆಯ್ಕೆ ಮಾಡಿ.
* ಖಾತೆ ಸೆಟ್ಟಿಂಗ್‌ ಗಳ ಪುಟದಿಂದ, 'ಸದಸ್ಯತ್ವ ಮತ್ತು ಬಿಲ್ಲಿಂಗ್' ವಿಭಾಗದ ಅಡಿಯಲ್ಲಿ 'ಪಾಸ್‌ವರ್ಡ್ ಬದಲಾಯಿಸಿ' ಆಯ್ಕೆಯನ್ನು ಕ್ಲಿಕ್ ಮಾಡಿ.
* ಪ್ರಸ್ತುತ ಪಾಸ್‌ವರ್ಡ್ ಅನ್ನು ಮೊದಲ ಟೆಕ್ಸ್ಟ್‌ ಬಾಕ್ಸ್‌ಯಲ್ಲಿ ಮತ್ತು ಹೊಸ ಪಾಸ್‌ವರ್ಡ್ ಅನ್ನು ಎರಡನೇ ಮತ್ತು ಮೂರನೇ ಟೆಕ್ಸ್ಟ್‌ ಬಾಕ್ಸ್‌ ಗಳಲ್ಲಿ ನಮೂದಿಸಿ. ಕೊನೆಯದಾಗಿ, ನಿಮ್ಮ ಪಾಸ್‌ವರ್ಡ್ ಬದಲಾಯಿಸಲು 'ಸೇವ್' ಕ್ಲಿಕ್ ಮಾಡಿ.

ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ಗಳು

ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ಗಳು

149 ರೂ ಮೊಬೈಲ್ ಪ್ಲಾನ್‌
ನೆಟ್‌ಫ್ಲಿಕ್ಸ್‌ 149ರೂ. ಮಾಸಿಕ ಬೆಲೆಯಲ್ಲಿ ಮೊಬೈಲ್‌ ಪ್ಲಾನ್‌ ನೀಡುತ್ತಿದೆ. ಈ ಯೋಜನೆಯು ಉತ್ತಮ ವೀಡಿಯೊ ಸ್ಟ್ರೀಮಿಂಗ್ ಗುಣಮಟ್ಟವನ್ನು (480p) ನೀಡುತ್ತದೆ. ಇದು ಒಂದು ಮೊಬೈಲ್ ಮತ್ತು ಒಂದು ಟ್ಯಾಬ್ಲೆಟ್ ಪರದೆಗೆ ಮಾತ್ರ ಪ್ರವೇಶವನ್ನು ಅನುಮತಿಸುತ್ತದೆ.
199ರೂ.ಬೇಸಿಕ್‌ ಪ್ಲಾನ್‌
199ರೂ.ಮಾಸಿಕ ಬೆಲೆಯಲ್ಲಿ ಬೇಸಿಕ್‌ ಪ್ಲಾನ್‌ ನೀಡುತ್ತಿದೆ. ಈ ಪ್ಲಾನ್‌ 480p ರೆಸಲ್ಯೂಶನ್‌ನ ವೀಡಿಯೊ ಗುಣಮಟ್ಟವನ್ನು ನೀಡಲಿದೆ. ಇದರಲ್ಲಿ ಮೊಬೈಲ್, ಟ್ಯಾಬ್ಲೆಟ್, ಟಿವಿ ಮತ್ತು ಕಂಪ್ಯೂಟರ್‌ನಲ್ಲಿ ಪ್ರವೇಶವನ್ನು ನೀಡುತ್ತದೆ.
499ರೂ. ಸ್ಟ್ಯಾಂಡರ್ಡ್‌ ಪ್ಲಾನ್‌
ಸ್ಟ್ಯಾಂಡರ್ಡ್ ಯೋಜನೆಯು ತಿಂಗಳಿಗೆ 499ರೂ. ಶುಲ್ಕ ವಿಧಿಸುತ್ತದೆ. ಈ ಪ್ಲಾನ್‌ನಲ್ಲಿ ನೀವು 1080pರೆಸಲ್ಯೂಶನ್ ವೀಡಿಯೊಗಳನ್ನು ಸ್ಟ್ರೀಮಿಂಗ್‌ ಮಾಡಬಹುದಾಗಿದೆ. ಇದರಲ್ಲಿ ಬಳಕೆದಾರರು ಮೊಬೈಲ್, ಟ್ಯಾಬ್ಲೆಟ್, ಟಿವಿ ಮತ್ತು ಕಂಪ್ಯೂಟರ್‌ನಲ್ಲಿ ಸೇವೆಯನ್ನು ಪ್ರವೇಶಿಸಬಹುದು.
649ರೂ.ಪ್ರೀಮಿಯಂ ಪ್ಲಾನ್‌
ಈ ಪ್ಲಾನ್‌ ಭಾರತದಲ್ಲಿ ತಿಂಗಳಿಗೆ 649 ರೂ. ಬೆಲೆಯನ್ನು ಹೊಂದಿದೆ. ಇದು 4K+HDR ರೆಸಲ್ಯೂಶನ್ ನೀಡುತ್ತದೆ. ಈ ಪ್ಲಾನ್‌ನಲ್ಲಿ ಮೊಬೈಲ್, ಟ್ಯಾಬ್ಲೆಟ್, ಟಿವಿ ಮತ್ತು ಕಂಪ್ಯೂಟರ್‌ನಲ್ಲಿ ಪ್ರವೇಶವನ್ನು ನೀಡುತ್ತದೆ.

Best Mobiles in India

Read more about:
English summary
Here's how to check who has been logging in to your Netflix account and remove unwanted users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X