ನಿಮ್ಮ ಫೋನ್ ಸರಿಯಾಗಿ ಚಾರ್ಜ್ ಆಗುತ್ತಿಲ್ಲವೇ? ಇಲ್ಲಿದೆ ಪರಿಹಾರ

By Shwetha
|

ನಿಮ್ಮ ಫೋನ್ ಬ್ಯಾಟರಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ನಿಮ್ಮ ಫೋನ್ ಚಾರ್ಜರ್ ಅಥವಾ ಬ್ಯಾಟರಿ ತುಂಡಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಆದರೆ ಇದಕ್ಕಿರುವ ಪರಿಹಾರ ತುಂಬಾ ಸರಳವಾಗಿದ್ದು ಅದನ್ನು ಹೇಗೆ ಸರಿಹೊಂದಿಸುವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೀಡಿರುವ ಪರಿಹಾರಗಳಿಂದ ಅರಿತುಕೊಳ್ಳಬಹುದಾಗಿದೆ.

ನಿಮ್ಮ ಫೋನ್‌ಗೆ ಚಾರ್ಜರ್ ಅನ್ನು ಸಿಕ್ಕಿಸಿರುವಾಗ ಅದು ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು ಅಥವಾ ನಿಧಾನವಾಗಿ ಚಾರ್ಜ್ ಆಗುತ್ತಿರಬಹುದು. ಇದು ಸಣ್ಣ ದೋಷಗಳಾಗಿದ್ದರೂ ಕೆಲವೊಂದು ಪರಿಹಾರಗಳ ಮೂಲಕ ಇದನ್ನು ಸರಿಪಡಿಸಿಕೊಳ್ಳಬಹುದಾಗಿದೆ.

#1

#1

ನಿಮ್ಮ ನೈಜ ಹಾರ್ಡ್‌ವೇರ್‌ನಲ್ಲಿ ಸಣ್ಣ DIY ರಿಪೇರಿಯನ್ನು ಮಾಡಿಕೊಳ್ಳಿ. ನಿಮ್ಮ ಡಿವೈಸ್ ಅನ್ನು ಶಟ್ ಡೌನ್ ಮಾಡಿ ಸಾಧ್ಯವಾದಲ್ಲಿ ಬ್ಯಾಟರಿಯನ್ನು ಹೊರತೆಗೆಯಿರಿ. ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಒಳಗಡೆ ಸಣ್ಣ ಟ್ಯಾಬ್ ಲೆವರ್ ಅಪ್ ಮಾಡಿ. ಇದನ್ನು ಆದಷ್ಟು ಜಾಗರೂಕತೆಯಿಂದ ಮಾಡಿ.

#2

#2

ನಿಮ್ಮ ಫೋನ್ ಅನ್ನು ಜೀನ್ಸ್ ಪಾಕೆಟ್‌ನಲ್ಲಿ ನೀವು ಇರಿಸಿಕೊಂಡಿರುತ್ತೀರಿ ಇದರಿಂದ ಧೂಳು ಫೋನ್‌ನಲ್ಲಿ ಹತ್ತಿಕೊಂಡಿರಬಹುದು. ಆದ್ದರಿಂದ ಚಾರ್ಜರ್‌ಗೆ ಏನಾದರೂ ಅಂಟಿಕೊಂಡಿದೆಯೇ ಎಂಬುದನ್ನು ಗಮನಿಸಿ ಅದನ್ನು ನಿವಾರಿಸಿಕೊಳ್ಳಿ.

#3

#3

ಚಾರ್ಜರ್‌ನಲ್ಲಿ ಕೇಬಲ್ ಮುಖ್ಯವಾಗಿದ್ದು ಅಡಾಪ್ಟರ್ ಅಲ್. ಆದ್ದರಿಂದ ಈ ಕೇಬಲ್ ನಿಮ್ಮ ಫೋನ್‌ನಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಕಂಡುಕೊಳ್ಳಿ.

#4

#4

ಕೇಬಲ್ ಸಮಸ್ಯೆಯನ್ನು ಉಂಟುಮಾಡುತ್ತಿಲ್ಲ ಎಂದಾದಲ್ಲಿ, ವಾಲ್ ಪ್ಲಗ್ ಅಡಾಪ್ಟರ್ ಅನ್ನು ಪರಿಶೀಲಿಸಿ. ಒಂದೇ ರೀತಿಯ ಚಾರ್ಜರ್/ಕೇಬಲ್ ವಿವಿಧ ಡಿವೈಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಕಂಡುಕೊಳ್ಳಿ. ನಿಮ್ಮ ವಾಲ್ ಸಾಕೆಟ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂಬುದನ್ನು ಪರಿಶೀಲಿಸಿ.

#5

#5

ನೀರಿನ ಬಳಿ ಅಥವಾ ಬಿಸಿ ಇರುವ ಜಾಗದಲ್ಲಿ ಫೋನ್ ಚಾರ್ಜ್ ಅನ್ನು ಮಾಡದಿರಿ.

#6

#6

ಡಿವೈಸ್‌ಗೆ ಓವರ್ ಚಾರ್ಜ್ ಮಾಡಬೇಡಿ ರಾತ್ರಿ ಇಡೀ ಫೋನ್‌ಗೆ ಚಾರ್ಜ್ ಮಾಡುವುದರಿಂದ ಚಾರ್ಜಿಂಗ್ ಸಮಯ ಅಧಿಕವಾಗಿ ಫೋನ್ ಸ್ಫೋಟ ಅಥವಾ ಫೋನ್‌ಗೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಓವರ್ ಚಾರ್ಜ್ ಮಾಡಬೇಡಿ.

#7

#7

ನೀವು ಚಾರ್ಜರ್ ಅಥವಾ ಕೇಬಲ್ ಅನ್ನು ರೀಪ್ಲೇಸ್ ಮಾಡುತ್ತಿದ್ದೀರಿ ಎಂದಾದಲ್ಲಿ ಆದಷ್ಟು ಬ್ರ್ಯಾಂಡ್‌ಗೆ ಗಮನ ನೀಡಿ. ಕಡಿಮೆ ಬೆಲೆಗೆ ದೊರಕುತ್ತದೆಂದು ಗುಣಮಟ್ಟವಿಲ್ಲದ ಚಾರ್ಜರ್ ಅಥವಾ ಕೇಬಲ್ ಖರೀದಿಸಬೇಡಿ.

#8

#8

ಬ್ಯಾಟರಿಗಳು ದೀರ್ಘ ಸಮಯದವರೆಗೆ ಬಾಳಿಕೆ ಬರುವುದಿಲ್ಲ ಮತ್ತು ಕೆಲವೊಂದು ವರ್ಷಗಳ ನಂತರ ನೀವು ಬ್ಯಾಟರಿಯನ್ನು ಬದಲಾಯಿಸಬೇಕಾಗುತ್ತದೆ. ಬರೇ ಆರು ತಿಂಗಳಲ್ಲಿ ನಿಮ್ಮ ಫೋನ್ ಬ್ಯಾಟರಿ ಕಳಪೆ ಮಟ್ಟದ್ದು ಎಂಬುದನ್ನು ಅರಿತುಕೊಳ್ಳಿ. ಇದಕ್ಕಾಗಿ ಬ್ಯಾಟರಿ ರೀಪ್ಲೇಸ್ ಮಾಡಿಕೊಳ್ಳಬಹುದು. ಆದರೆ ಬ್ಯಾಟರಿ ಎರಡು ವರ್ಷಗಳಿಗಿಂತ ಹಳೆಯದು ಎಂದಾದಲ್ಲಿ ನೀವು ಬೇರೆ ಬ್ಯಾಟರಿ ಖರೀದಿಸಲೇಬೇಕು.

#9

#9

ಪಿಸಿ ಅಥವಾ ಲ್ಯಾಪ್‌ಟಾಪ್‌ಗಿಂತಲೂ ವಾಲ್ ಚಾರ್ಜರ್‌ನಿಂದ ಫೋನ್ ಚಾರ್ಜ್ ಮಾಡುವುದು ವೇಗವಾಗಿದೆ ಕಂಪ್ಯೂಟರ್‌ನ ಯುಎಸ್‌ಬಿ ಪೋರ್ಟ್‌ಗಳು ಸಾಕಷ್ಟು ಪವರ್ ಅನ್ನು ಒದಗಿಸುವುದಿಲ್ಲ. ಯುಎಸ್‌ಬಿ ಪೋರ್ಟ್‌ಗಿಂತಲೂ ವಾಲ್ ಚಾರ್ಜರ್ ವೇಗವಾಗಿ ಫೋನ್ ಚಾರ್ಜ್ ಮಾಡುತ್ತದೆ.

#10

#10

ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಫೋನ್ ಬ್ಯಾಟರಿ ವರ್ಧಿಸುವಲ್ಲಿ ಸಹಕಾರಿಯಾಗಲಿದೆ. ಹಳೆಯ ಡಿವೈಸ್ ಅನ್ನು ಪ್ರಸ್ತುತ ಸಾಫ್ಟ್‌ವೇರ್‌ಗೆ ಅಪ್‌ಗ್ರೇಡ್ ಮಾಡುವುದರಿಂದ ನಿಮ್ಮ ಫೋನ್‌ಗೆ ಪ್ರಯೋಜನ ಹೆಚ್ಚು.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಕಾಣೆಯಾದ ಮಗುವನ್ನು 2 ಗಂಟೆಗಳಲ್ಲಿ ವಾಟ್ಸಾಪ್‌ನಿಂದ ಪತ್ತೆಹಚ್ಚಿದ ಪೋಲಿಸರು</a><br /><a href=ಮೊಬೈಲ್‌ನಲ್ಲಿ ಫೇಸ್‌ಬುಕ್‌ ಸ್ಪೀಡ್‌ಗಾಗಿ "ಫೇಸ್‌ಬುಕ್‌ ಲೈಟ್"‌ ಆಪ್‌
ಸೆಲ್ಫಿಗಾಗಿ ಹಂಸ ಪಕ್ಷಿಯ ಪ್ರಾಣವನ್ನೇ ತೆಗೆದ ಪ್ರವಾಸಿ" title="ಕಾಣೆಯಾದ ಮಗುವನ್ನು 2 ಗಂಟೆಗಳಲ್ಲಿ ವಾಟ್ಸಾಪ್‌ನಿಂದ ಪತ್ತೆಹಚ್ಚಿದ ಪೋಲಿಸರು
ಮೊಬೈಲ್‌ನಲ್ಲಿ ಫೇಸ್‌ಬುಕ್‌ ಸ್ಪೀಡ್‌ಗಾಗಿ "ಫೇಸ್‌ಬುಕ್‌ ಲೈಟ್"‌ ಆಪ್‌
ಸೆಲ್ಫಿಗಾಗಿ ಹಂಸ ಪಕ್ಷಿಯ ಪ್ರಾಣವನ್ನೇ ತೆಗೆದ ಪ್ರವಾಸಿ" loading="lazy" width="100" height="56" />ಕಾಣೆಯಾದ ಮಗುವನ್ನು 2 ಗಂಟೆಗಳಲ್ಲಿ ವಾಟ್ಸಾಪ್‌ನಿಂದ ಪತ್ತೆಹಚ್ಚಿದ ಪೋಲಿಸರು
ಮೊಬೈಲ್‌ನಲ್ಲಿ ಫೇಸ್‌ಬುಕ್‌ ಸ್ಪೀಡ್‌ಗಾಗಿ "ಫೇಸ್‌ಬುಕ್‌ ಲೈಟ್"‌ ಆಪ್‌
ಸೆಲ್ಫಿಗಾಗಿ ಹಂಸ ಪಕ್ಷಿಯ ಪ್ರಾಣವನ್ನೇ ತೆಗೆದ ಪ್ರವಾಸಿ

Best Mobiles in India

English summary
In this article we are giving suggestion on how to fix a phone that wont charge. Here you can through the suggestion which will helps you lot to fix the problem..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X