ನಿಮ್ಮ ಸ್ಮಾರ್ಟ್‌ಫೋನ್‌ ಟಚ್‌ಸ್ಕ್ರೀನ್ ಕಾರ್ಯನಿರ್ವಹಿಸುತ್ತಿಲ್ಲವೇ? ಇಲ್ಲಿದೆ ಪರಿಹಾರ!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಇಲ್ಲದೆ ಹೊರಹೋಗುವುದು ಕೂಡ ಅಸಾಧ್ಯ ಎನ್ನುವ ಕಾಲಘಟ್ಟದಲ್ಲಿದ್ದೇವೆ. ಯುವಕರಿಂದ ಹಿಡಿದು ಎಲ್ಲಾ ವಯೋಮಾನದವರು ಕೂಡ ಸ್ಮಾರ್ಟ್‌ಫೋನ್‌ ಹೊಂದಲು ಬಯಸುತ್ತಾರೆ. ಇನ್ನು ನೀವು ಬಳಸುವ ಸ್ಮಾರ್ಟ್‌ಫೋನ್‌ನ ಟಚ್‌ಸ್ಕ್ರೀನ್‌ ಏಕಾಏಕಿ ಕಾರ್ಯನಿರ್ವಹಿಸದೆ ಹೋದಾಗ ಏನು ಮಾಡುವುದು ಅನ್ನೊ ಆತಂಕ ಕಾಡುತ್ತದೆ. ಯಾವುದೇ ರೀತಿಯ ಡ್ಯಾಮೇಜ್‌ ಇಲ್ಲದೇ ಹೋದರೂ ಕೆಲವೊಮ್ಮೆ ಟಚ್‌ಸ್ಕ್ರೀನ್‌ ವರ್ಕ್‌ ಆಗದೆ ಇರೋದನ್ನು ಸಹ ನಾವು ಕಾಣಬಹುದಾಗಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ನಲ್ಲಿ ಟಚ್‌ಸ್ಕ್ರೀನ್‌ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಟಚ್‌ಸ್ಕ್ರೀನ್‌ ಕಾರ್ಯನಿರ್ವಹಿಸದೆ ಹೋದಾಗ ಸ್ಮಾರ್ಟ್‌ಫೋನ್‌ ಬಳಸುವುದು ಸಾಕಷ್ಟು ಕಷ್ಟ ಎನಿಸುತ್ತದೆ. ಕೆಲವೊಮ್ಮೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗ್ರೀನ್ ಸ್ಕ್ವೇರ್ ಬಾಕ್ಸ್ ಕಾಣಿಸಕೊಳ್ಳಲಿದೆ. ಇದರಲ್ಲಿ ನೀವು ವಾಲ್ಯೂಮ್ ಕೀ ಶಾರ್ಟ್‌ಕಟ್‌ನೊಂದಿಗೆ ತಪ್ಪಾಗಿ ಟಾಕ್‌ಬ್ಯಾಕ್ ಆನ್ ಆಗಿಬಿಟ್ಟಿರುತ್ತದೆ. ಇದರಿಂದಲೂ ನಿಮ್ಮ ಸ್ಮಾರ್ಟ್‌ಫೋನ್‌ ಟಚ್‌ ವರ್ಕ್‌ ಆಗುವುದಿಲ್ಲ. ಇಂತಹ ಸಮಯದಲ್ಲಿ ನಿಮ್ಮ ಟಚ್‌ಸ್ಕ್ರೀನ್‌ ವರ್ಕ್‌ ಆಗುವಂತೆ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌ನಲ್ಲಿ ಕೆಲವೊಂದು ಕಾರ್ಯಗಳಿಗೆ ವಾಲ್ಯೂಮ್‌ ಶಾರ್ಟ್‌ಕಟ್‌ ಕೀ ಬಳಸುತ್ತೇವೆ. ಆದರೆ ಈ ವಾಲ್ಯೂಮ್‌ ಶಾರ್ಟ್‌ಕಟ್‌ ಕೀಯನ್ನು ತಪ್ಪಾಗಿ ಬಳಸಿದರೆ ನಿಮ್ಮ ಸ್ಮಾರ್ಟ್‌ಫೋನ್‌ನ ಟಚ್‌ಸ್ಕ್ರೀನ್‌ ವರ್ಕ್‌ ಆಗದಂತೆ ಆದರೂ ಅಚ್ಚರಿಯಿಲ್ಲ. ಏಕೆಂದರೆ ಕೆಲವೊಮ್ಮೆ ವಾಲ್ಯೂಮ್‌ ಕೀ ಶಾಟ್‌ಕಟ್‌ನ ತಪ್ಪು ಬಳಕೆಯಿಂದ ಸ್ಮಾರ್ಟ್‌ಫೋನ್‌ನಲ್ಲಿ ಟಾಕ್‌ಬ್ಯಾಕ್‌ ಆನ್‌ ಆಗುವ ಸಾಧ್ಯತೆ ಇರಲಿದೆ. ಇದರಿಂದ ಟಚ್‌ಸ್ಕ್ರೀನ್‌ ವರ್ಕ ಆಗದೆ ಟಾಕ್‌ಬ್ಯಾಕ್‌ ವರ್ಕ್‌ ಆಗುತ್ತಿರುತ್ತದೆ. ಇಂತಹ ಸಮಯದಲ್ಲಿ ಕೆಲವು ನಿಮಯಗಳನ್ನು ಅನುಸರಿಸಿ ಮತ್ತೆ ಟಾಕ್‌ಬ್ಯಾಕ್‌ ಅನ್ನು ಆಪ್‌ ಮಾಡಬೇಕಾಗುತ್ತದೆ.

ಹೋಮ್‌ಸ್ಕ್ರೀನ್‌

ಇನ್ನು ನಿಮ್ಮ ಹೋಮ್‌ಸ್ಕ್ರೀನ್‌ನಲ್ಲಿ ನೀವು ಹಸಿರು ಪೆಟ್ಟಿಗೆಯನ್ನು ಕಂಡರೆ ಮತ್ತು ಅಪ್ಲಿಕೇಶನ್ ಡ್ರಾಯರ್ ಅಥವಾ ಇತರ ಅಪ್ಲಿಕೇಶನ್‌ಗಳಿಗೆ ಪ್ರವೇಶಿಸಲು ಸಾಧ್ಯವಾಗದಿದ್ದರೆ, ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಟಾಕ್‌ಬ್ಯಾಕ್ ವೈಶಿಷ್ಟ್ಯವನ್ನು ಆಫ್ ಮಾಡಬೇಕಾಗುತ್ತದೆ. ವಾಲ್ಯೂಮ್ ಅಪ್ ಬಟನ್ ಮತ್ತು ವಾಲ್ಯೂಮ್ ಡೌನ್ ಬಟನ್ ಅನ್ನು ಏಕಕಾಲದಲ್ಲಿ ಮೂರು ಸೆಕೆಂಡುಗಳ ಕಾಲ ಒತ್ತಿದರೆ, ಟಾಕ್‌ಬಾಕ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಮತ್ತು ಗ್ರೀ ಬಾಕ್ಸ್ ಕಣ್ಮರೆಯಾಗುತ್ತದೆ. ಆದರೂ ಕೆಲವೊಮ್ಮೆ ವಾಲ್ಯೂಮ್‌ ಶಾರ್ಟ್‌ಕಟ್ ಅನ್ನು ತಪ್ಪಾಗಿ ಆನ್ ಮಾಡಿದರೆ, ಮತ್ತೆ ಟಚ್‌ಸ್ಕ್ರೀನ್‌ ಆಪ್‌ ಕಾರ್ಯನಿರ್ವಹಿಸದೆ ಇರಬಹುದು. ಆದರಿಂದ ಫೋನ್ ಸೆಟ್ಟಿಂಗ್‌ಗಳಿಂದ ಟಾಕ್‌ಬ್ಯಾಕ್‌ ಅನ್ನು ನಿಷ್ಕ್ರಿಯಗೊಳಿಸಬಹುದು. ಟಾಕ್‌ಬ್ಯಾಕ್ ಶಾರ್ಟ್‌ಕಟ್ ಆಫ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಆಂಡ್ರಾಯ್ಡ್‌ನಲ್ಲಿ ಟಾಕ್‌ಬ್ಯಾಕ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಆಂಡ್ರಾಯ್ಡ್‌ನಲ್ಲಿ ಟಾಕ್‌ಬ್ಯಾಕ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಹಂತ 1: ಮೇಲಿನಿಂದ ನೊಟೀಫೀಕೇಶನ್‌ ಸ್ಕ್ರೀನ್‌ ಸ್ವೈಪ್ ಮಾಡುವ ಮೂಲಕ ಸೆಟ್ಟಿಂಗ್‌ಗಳಿಗೆ ಹೋಗಿ.

ಹಂತ 2: ಸುಧಾರಿತ ಸೆಟ್ಟಿಂಗ್‌ಗಳು ಅಥವಾ ಸಿಸ್ಟಮ್‌ಗೆ ಹೋಗಿ ಪ್ರವೇಶಸಾಧ್ಯತೆಯನ್ನು ಟ್ಯಾಪ್ ಮಾಡಿ.

ಹಂತ 3: ಟಾಕ್‌ಬ್ಯಾಕ್ ಅನ್ನು ಹುಡುಕಿ ಮತ್ತು ಟಾಕ್‌ಬ್ಯಾಕ್ ಶಾರ್ಟ್ ಅಥವಾ ಸ್ಲೈಡರ್ ಬಳಸಿ ಪ್ರವೇಶಿಸುವಿಕೆಯನ್ನು ಆಫ್ ಮಾಡಿ

ಇದರೊಂದಿಗೆ, ಶಾರ್ಟ್‌ಕಟ್ ಅನ್ನು ನಿಷ್ಕ್ರಿಯಗೊಳಿಸಬಹುದಾಗಿದೆ .

Best Mobiles in India

English summary
Ever noticed your phone’s touchscreen is not working? Want to remove Green square box on your Android smartphone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X