ಎರಡೇ ಎರಡು ನಿಮಿಷದಲ್ಲಿ ಫೋನ್ ಸ್ಪೇಸ್ ಕ್ಲಿಯರ್ ಮಾಡಿ

By Shwetha
|

ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್ ಫ್ರಿ ಮಾಡುವುದು ನಿಮ್ಮ ಫೋನ್‌ಗೆ ಉತ್ತಮವಾದುದು. ನಿಮ್ಮ ಫೋನ್‌ನ ವೇಗವನ್ನು ವರ್ಧಿಸಿ ಅಗತ್ಯ ಸ್ಥಳಾವಕಾಶವನ್ನು ಇದು ಒದಗಿಸುತ್ತದೆ. ಇದರಿಂದ ಇನ್ನಷ್ಟು ಮಾಹಿತಿಪೂರ್ಣ ವಿಷಯಗಳನ್ನು ಫೋನ್‌ನಲ್ಲಿ ಸೇರಿಸಬಹುದಾಗಿದೆ. ಹಾಗಿದ್ದರೆ ಈ ಸ್ಪೇಸ್ ಕ್ಲಿಯರ್ ಮಾಡುವುದು ಹೇಗೆ ಎಂಬುದು ನಿಮ್ಮ ಸಮಸ್ಯೆಯಾಗಿದ್ದರೆ ಇಂದು ಅದಕ್ಕೆ ತಕ್ಕುದಾದ ಪರಿಹಾರಗಳೊಂದಿಗೆ ನಾವು ಬಂದಿರುವೆವು. ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡಿರುವ ಅಗತ್ಯ ಸಲಹೆಗಳು ಬರೇ ಎರಡು ನಿಮಿಷಗಳಲ್ಲಿ ಫೋನ್‌ನ ಸ್ಪೇಸ್ ಅನ್ನು ಕ್ಲಿಯರ್ ಮಾಡಿಬಿಡುತ್ತವೆ ಬನ್ನಿ ಅದು ಹೇಗೆ ಎಂಬುದನ್ನು ನೋಡೋಣ.

#1

#1

ನಿಮ್ಮ ಹಳೆಯ ಸಂದೇಶಗಳನ್ನು ಅಳಿಸಿ. ಇದು ಕೂಡ ನಿಮ್ಮ ಫೋನ್‌ನಲ್ಲಿ ಹೆಚ್ಚು ಸ್ಥಳವನ್ನು ಒದಗಿಸಲು ಸಹಾಯ ಮಾಡುತ್ತದೆ.

#2

#2

ಗೂಗಲ್ ಫೋಟೋಗಳಿಗಾಗಿ ಫೋಟೋ ಅಪ್‌ಲೋಡ್ ಅನ್ನು ಆನ್ ಮಾಡಿ. ಇದರಿಂದ ನಿಮ್ಮೆಲ್ಲಾ ಫೋಟೋಗಳು ವೈಫೈ ಅಥವಾ ಮೊಬೈಲ್ ನೆಟ್‌ವರ್ಕ್ ಮೂಲಕ ನಿಮ್ಮ ಗೂಗಲ್ ಖಾತೆಯಲ್ಲಿ ಸಂಗ್ರಹವಾಗುತ್ತದೆ. ಈ ರೀತಿ ನಿಮ್ಮ ಫೋನ್‌ನಿಂದ ಫೋಟೋಗಳನ್ನು ತೆಗೆದುಹಾಕಬಹುದು.

#3

#3

ಎಲ್ಲಾ ಫೈಲ್‌ಗಳನ್ನು ಮೈಕ್ರೋ ಎಸ್‌ಡಿ ಕಾರ್ಡ್‌ಗೆ ರವಾನಿಸುವುದೂ ಕೂಡ ಫೋನ್‌ನಲ್ಲಿ ಸ್ಥಳಾವಕಾಶವನ್ನು ಒದಗಿಸುತ್ತದೆ.

#4

#4

ನಿಮ್ಮ ಫೋನ್‌ನಲ್ಲಿ ಸ್ಥಳಾವಕಾಶವನ್ನು ಒದಗಿಸಲು ಇದು ಅತ್ಯಂತ ಸೂಕ್ತವಾದುದು. ನಿಮ್ಮ ಫೋನ್‌ನಲ್ಲಿ ಎಲ್ಲಾ ಹಾಡುಗಳನ್ನು ಅಳಿಸಿ. ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಗಳಿಗೆ ಬದಲಾಯಿಸಿಕೊಳ್ಳಿ. ಇದರಿಂದ ಆನ್‌ಲೈನ್‌ನಲ್ಲೇ ನಿಮಗೆ ಹಾಡು ಆಲಿಸಬಹುದು ಮತ್ತು ಫೋನ್ ಸ್ಪೇಸ್ ಅನ್ನು ಉಳಿಸಿಕೊಳ್ಳಬಹುದು.

#5

#5

ನಿಮ್ಮ ಫೋನ್‌ನಲ್ಲಿ ನಾರ್ಮಲ್ ಫೋಟೋಗಳನ್ನು ಕ್ಲಿಕ್ಕಿಸುವುದರ ಮೂಲಕ ಸ್ಥಳಾವಕಾಶವನ್ನು ಉಂಟುಮಾಡಬಹುದು. ಹೈ ಡೆಫಿನೇಶನ್ ಫೋಟೋಗಳನ್ನು ತೆಗೆಯಲು ನಿಮ್ಮ ಫೋನ್ ಕ್ಯಾಮೆರಾವನ್ನು ನೀವು ಬಳಸಿಕೊಂಡಲ್ಲಿ, ನಿಮ್ಮ ಸ್ಟೋರೇಜ್ ಸ್ಪೇಸ್ ಅನ್ನು ಇದು ಬಳಸಿಕೊಳ್ಳಬಹುದು. ಆದ್ದರಿಂದ ಸ್ಟೋರೇಜ್ ಸ್ಪೇಸ್ ಉಳಿಸಲು ನಾರ್ಮಲ್ ಫೋಟೋ ಕ್ಲಿಕ್ಕಿಸಿ.

#6

#6

ನೀವು ಕ್ರೋಮ್ ಬ್ರೌಸರ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಕ್ಯಾಶ್, ಡೇಟಾ ಮತ್ತು ಹಿಸ್ಟ್ರಿ ಕ್ಲಿಯರ್ ಮಾಡುವುದು ಅತ್ಯುತ್ತಮ.

#7

#7

ಸ್ಪೇಸ್ ವಿಷಯದಲ್ಲಿ ಇನ್‌ಸ್ಟಾಗ್ರಾಮ್ ಫೋಟೋಗಳು ಭಾರೀಯಾಗಿರುತ್ತವೆ. ಡೇಟಾದಲ್ಲಿ ಹೆವಿ ಎಂದೆನಿಸಿರುವ ಫೋಟೋಗಳನ್ನು ಅಳಿಸಿ ನಂತರ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

#8

#8

ನಿಮ್ಮ ಆಫ್‌ಲೈನ್ ವೀಡಿಯೊಗಳು, ಹಾಡುಗಳು ಹೆಚ್ಚಿನ ಸ್ಟೋರೇಜ್ ಸ್ಪೇಸ್ ಅನ್ನು ತೆಗೆದುಕೊಳ್ಳುತ್ತದೆ. ಅಪ್ಲಿಕೇಶನ್‌ಗೆ ಹೋಗಿ ಮತ್ತು ನೀವು ಉಳಿಸಿರುವ ಆಫ್‌ಲೈನ್ ವೀಡಿಯೊಗಳನ್ನು ಕ್ಲಿಯರ್ ಮಾಡಿ

#9

#9

ಬೇಡದ ಅಪ್ಲಿಕೇಶನ್‌ಗಳನ್ನು ಅಳಿಸಿ ಇದರಿಂದ ಸಾಕಷ್ಟು ಸ್ಪೇಸ್ ನಿಮಗೆ ದೊರೆಯುತ್ತದೆ.

#10

#10

ನಿಮ್ಮ ಫೋನ್ ಅನ್ನು ನಿಧಾನಗೊಳಿಸುತ್ತಿರುವ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ. ಇದು ಕ್ಯಾಮೆರಾ ಅಪ್ಲಿಕೇಶನ್‌ಗಳನ್ನು ಕೂಡ ಒಳಗೊಂಡಿರಬಹುದು. ಅದಷ್ಟು ಇವುಗಳ ಬಳಕೆಯನ್ನು ಕಡಿಮೆ ಮಾಡಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಯೂಟ್ಯೂಬ್‌ ವೀಡಿಯೋಗಳನ್ನ ಗೂಗಲ್‌ ಡ್ರೈವ್‌ಗೆ ಸೇವ್‌ ಮಾಡಲು 4 ಸ್ಟೆಪ್ಸ್‌</a><br /><a href=ವೈಫೈಗೆ ಸಂಪರ್ಕಗೊಂಡ ಇತರ ಡಿವೈಸ್‌ಗಳ ಡಿಸ್‌ಕನೆಕ್ಟ್ ಹೇಗೆ?
ಸ್ಮಾರ್ಟ್‌ಫೋನ್ ಭದ್ರತೆಗಾಗಿ ಎಂಟು ವಿಧಾನಗಳು" title="ಯೂಟ್ಯೂಬ್‌ ವೀಡಿಯೋಗಳನ್ನ ಗೂಗಲ್‌ ಡ್ರೈವ್‌ಗೆ ಸೇವ್‌ ಮಾಡಲು 4 ಸ್ಟೆಪ್ಸ್‌
ವೈಫೈಗೆ ಸಂಪರ್ಕಗೊಂಡ ಇತರ ಡಿವೈಸ್‌ಗಳ ಡಿಸ್‌ಕನೆಕ್ಟ್ ಹೇಗೆ?
ಸ್ಮಾರ್ಟ್‌ಫೋನ್ ಭದ್ರತೆಗಾಗಿ ಎಂಟು ವಿಧಾನಗಳು" loading="lazy" width="100" height="56" />ಯೂಟ್ಯೂಬ್‌ ವೀಡಿಯೋಗಳನ್ನ ಗೂಗಲ್‌ ಡ್ರೈವ್‌ಗೆ ಸೇವ್‌ ಮಾಡಲು 4 ಸ್ಟೆಪ್ಸ್‌
ವೈಫೈಗೆ ಸಂಪರ್ಕಗೊಂಡ ಇತರ ಡಿವೈಸ್‌ಗಳ ಡಿಸ್‌ಕನೆಕ್ಟ್ ಹೇಗೆ?
ಸ್ಮಾರ್ಟ್‌ಫೋನ್ ಭದ್ರತೆಗಾಗಿ ಎಂಟು ವಿಧಾನಗಳು

Best Mobiles in India

English summary
In this article we can found how to free up phones storage in 2 minutes by following very easy steps..Just do some tricks on your phone and see the magic.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X