ಜಿಯೋ ಸಿಮ್ ಅನ್ನು ಉಚಿತವಾಗಿ ನಿಮ್ಮ ಮನೆ ಬಾಗಿಲಿಗೆ ಪಡೆಯುವುದು ಹೇಗೆ?

|

ದೇಶದ ಟೆಲಿಕಾಂ ವಲಯದಲ್ಲಿ ಏರ್‌ಟೆಲ್, ಜಿಯೋ, ವಿ ಹಾಗೂ ಬಿಎಸ್‌ಎನ್‌ಎಲ್‌ ಟೆಲಿಕಾಂಗಳು ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಭಿನ್ನ ಭಿನ್ನ ಮಾರ್ಗಗಳನ್ನು ಅರಸುತ್ತಾ ಮುನ್ನಡೆದಿವೆ. ಆ ಪೈಕಿ ಸದ್ಯ ರಿಲಯನ್ಸ್‌ ಜಿಯೋ ಟೆಲಿಕಾಂ ಮುಂಚೂಣಿಯ ಟೆಲಿಕಾಂ ಆಗಿ ಗುರುತಿಸಿಕೊಂಡಿದೆ. ಹಾಗೆಯೇ ಚಂದಾದಾರರಿಗೆ ಹಲವು ಭಿನ್ನ ಪ್ರಯೋಜನಗಳನ್ನು ಒಳಗೊಂಡ ಪ್ರೀಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ನೀಡಿದೆ. ಇದರೊಂದಿಗೆ ಗ್ರಾಹಕರನ್ನು ಸೆಳೆಯಲು ಸಿಮ್ ಹೋಮ್ ಡೆಲಿವರಿ ಸೇವೆ ನೀಡುತ್ತಿದೆ.

ಪಡೆಯುವ

ಹೌದು, ಜಿಯೋ ಟೆಲಿಕಾಂ ಆಪರೇಟರ್ ಬಳಕೆದಾರರಿಗೆ ಹೊಸ ಜಿಯೋ ಸಿಮ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಹಾಗೆಯೇ ಆ ಸಿಮ್ ಅನ್ನು ನೇರವಾಗಿ ಮನೆ ಬಾಗಿಲಿಗೆ ಪಡೆಯುವ ಸೇವೆಯ ಆಯ್ಕೆ ಅನ್ನು ಒದಗಿಸಿದೆ. ಹಾಗಾದರೇ ಹೊಸ ಜಿಯೋ ಸಿಮ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಲು ಮತ್ತು ಅದನ್ನು ಉಚಿತವಾಗಿ ಮನೆ ಬಾಗಿಲಿಗೆ ಪಡೆಯುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಸಿಮ್ ಅನ್ನು ಉಚಿತವಾಗಿ ಮನೆ ಬಾಗಿಲಿಗೆ ಪಡೆಯಲು ಹೀಗೆ ಮಾಡಿರಿ:

ಜಿಯೋ ಸಿಮ್ ಅನ್ನು ಉಚಿತವಾಗಿ ಮನೆ ಬಾಗಿಲಿಗೆ ಪಡೆಯಲು ಹೀಗೆ ಮಾಡಿರಿ:

ಹಂತ 1: ಅಧಿಕೃತ ರಿಲಯನ್ಸ್ ಜಿಯೋ ವೆಬ್‌ಸೈಟ್‌ ತೆರೆಯಿರಿ.

ಹಂತ 2: ವೆಬ್‌ಸೈಟ್‌ನ ಮೇಲ್ಭಾಗದಲ್ಲಿ ಕಾಣಿಸುವ ಜಿಯೋ ಸಿಮ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಅಥವಾ https://www.jio.com/en-in/jio-postpaid-prepaid-home-delivery-book-appoint.html ಮೇಲೆ ಕ್ಲಿಕ್ ಮಾಡಿ

ಹಂತ 3: ಪೂರ್ಣ ಹೆಸರು ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ನಿಮ್ಮ ಕೆಲವು ವೈಯಕ್ತಿಕ ವಿವರಗಳನ್ನು ನಮೂದಿಸಿ

ಹಂತ 4: ಜನರೇಟ್ OTP ಮೇಲೆ ಕ್ಲಿಕ್ ಮಾಡಿ

ಹಂತ 5: ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಕಳುಹಿಸಿದ ಆರು ಅಂಕಿಯ OTP ನಮೂದಿಸಿ.

ಪೋರ್ಟ್

ಹಂತ 6: ಜಿಯೋ ವೆಬ್‌ಸೈಟ್ ನಂತರ ಸಿಮ್ - ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಅನ್ನು ಆಯ್ಕೆ ಮಾಡುವ ಆಯ್ಕೆ ಕಾಣಿಸುತ್ತದೆ.

ಹಂತ 7: ಜಿಯೋ ಪೋರ್ಟ್ ಅಥವಾ ಜಿಯೋ ಅಥವಾ ಹೊಸ ಕನೆಕ್ಷನ್ ನಂತಹ ಆಯ್ಕೆಗಳನ್ನು ನೀಡುತ್ತದೆ. ನಿಮಗೆ ಸೂಕ್ತವಾದ ಆಯ್ಕೆಯನ್ನು ನೀವು ಆಯ್ಕೆ ಮಾಡಬಹುದು

ಹಂತ 8: ವೆಬ್‌ಸೈಟ್ ಈಗ ನೀವು ವಿಳಾಸ, ಪಿನ್ ಕೋಡ್ ಮತ್ತು ಮನೆ ಸಂಖ್ಯೆ ಸೇರಿದಂತೆ ಇತರ ವಿವರಗಳನ್ನು ಸೇರಿಸುವ ಅಗತ್ಯವಿದೆ.

ಯಶಸ್ವಿಯಾಗಿ

ಹಂತ 9: ಈ ವಿವರಗಳನ್ನು ಸೇರಿಸಿದ ನಂತರ, "submit new Jio Sim request" ಆಯ್ಕೆಯನ್ನು ಕ್ಲಿಕ್ ಮಾಡಿ

ಹಂತ 10: ನಿಮ್ಮ ವಿನಂತಿಯನ್ನು ಯಶಸ್ವಿಯಾಗಿ ಪ್ರಕ್ರಿಯೆಗೊಳಿಸಲಾಗಿದೆ ಮತ್ತು ವೆಬ್‌ಸೈಟ್ ಒಂದು ಸಂದೇಶವನ್ನು ತೋರಿಸುತ್ತದೆ: "ಜಿಯೋ ಬಗ್ಗೆ ನಿಮ್ಮ ಆಸಕ್ತಿಗೆ ಧನ್ಯವಾದಗಳು. ನಿಮ್ಮ ಪ್ರಸ್ತುತ ಸಂಖ್ಯೆಯನ್ನು ಜಿಯೋಗೆ ಪೋರ್ಟ್ ಮಾಡುವ ನಿಮ್ಮ ವಿನಂತಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ. ನಮ್ಮ ಕಾರ್ಯನಿರ್ವಾಹಕರು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತಾರೆ.

ಹೊಸ ಸಿಮ್ ಖರೀದಿಸಲು ಅವಶ್ಯ ಇರುವ ದಾಖಲೆಗಳು

ಹೊಸ ಸಿಮ್ ಖರೀದಿಸಲು ಅವಶ್ಯ ಇರುವ ದಾಖಲೆಗಳು

ಹೊಸ ಜಿಯೋ ಸಿಮ್ ಪಡೆಯುವ ಸಮಯದಲ್ಲಿ, ಬಳಕೆದಾರರು ದೃಢೀಕರಣಕ್ಕಾಗಿ ಗುರುತಿನ ಪುರಾವೆ (POI) ಮತ್ತು ವಿಳಾಸದ ಪುರಾವೆ (POA) ಅನ್ನು ನೀಡುವುದು ಅಗತ್ಯ. ಹಾಗಾದರೇ ಹೊಸ ಸಿಮ್ ಪಡೆಯಲು ಈ ಕೆಳಗೆ ಸೂಚಿಸಲಾದ ಅಗತ್ಯ ದಾಖಲೆಗಳಲ್ಲಿ ಯಾವುದಾರೂ ಒಂದು ದಾಖಲೆ ಇದ್ದರೂ ಸರಿ.
* ಆಧಾರ್ ಕಾರ್ಡ್
* ವೋಟರ್ ಐಡಿ
* ಪಾಸ್‌ಪೋರ್ಟ್‌
* ಡ್ರೈವಿಂಗ್ ಲೈಸೆನ್ಸ್‌

ಸಿಮ್ ಪೋರ್ಟ್‌ ಮಾಡುವುದು ಹೇಗೆ?..ಇಲ್ಲಿದೆ ಮಾಹಿತಿ:

ಸಿಮ್ ಪೋರ್ಟ್‌ ಮಾಡುವುದು ಹೇಗೆ?..ಇಲ್ಲಿದೆ ಮಾಹಿತಿ:

ಸಿಮ್ ಪೋರ್ಟ್ ಸೇವೆ ಪ್ರಾರಂಭಿಸಲು, ಬಳಕೆದಾರರು ತಮ್ಮ ಮೊಬೈಲ್‌ ಸಂಖ್ಯೆಯಿಂದ, ಫೋನ್‌ನಲ್ಲಿರುವ ನಾರ್ಮಲ್ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ಎಸ್‌ಎಮ್‌ಎಸ್‌ ಕಳುಹಿಸಬೇಕು. ಮೆಸೆಜ್‌ನಲ್ಲಿ ‘PORT' ಎಂದು ಬರೆಯುವುದು ನಂತರ ಸ್ಪೇಸ್ ‘ಮೊಬೈಲ್ ಸಂಖ್ಯೆ' ನಮೂದಿಸುವುದು ಬಳಿಕ 1900 ನಂಬರ್‌ಗೆ ಎಸ್‌ಎಮ್‌ಎಸ್‌ ಕಳುಹಿಸುವುದು. ಎಸ್‌ಎಮ್‌ಎಸ್‌ ಸೆಂಡ್ ಆದ ಬಳಿಕ ಬಳಕೆದಾರರ ಇನ್‌ಬಾಕ್ಸ್‌ಗೆ ಸಿಮ್ ಪೋರ್ಟಿಂಗ್ ಕೋಡ್ ಲಭ್ಯವಾಗುವುದು.

ಮೊಬೈಲ್‌ ನಂಬರ್ ಪೋರ್ಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:

ಮೊಬೈಲ್‌ ನಂಬರ್ ಪೋರ್ಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:

* ಸಿಮ್ ಪೋರ್ಟ್‌ ಮಾಡಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಅಗತ್ಯ.

* ಅದಕ್ಕಾಗಿ ಮೊದಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಜನರೇಟ್ ಮಾಡುವುದು.

* ಕ್ಯಾಪಿಟಲ್ ಅಕ್ಷರಗಳಲ್ಲಿ PORT-ಸ್ಪೇಸ್‌-ನಿಮ್ಮ ನೊಬೈಲ್ ಸಂಖ್ಯೆ ನಮೂದಿಸಿ. 1900 ನಂಬರ್‌ಗೆ ಎಸ್‌ಎಮ್‌ಎಸ್‌ ಮಾಡುವುದು.

* ಆ ಬಳಿಕ UPC ಎಸ್‌ಎಮ್‌ಎಸ್‌ ಲಭ್ಯವಾಗುತ್ತದೆ.

ಬಯಸುವ

* ಪೋರ್ಟ್ ಆಗ ಬಯಸುವ ಟೆಲಿಕಾಂ ಸಂಸ್ಥೆಯ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡುವುದು.

* Customer Acquisition Form (CAF) ತುಂಬುವುದು ಮತ್ತು ಕೆವೈಸಿ ದಾಖಲಾತಿ ನೀಡುವುದು.

* 5 ದಿನಗಳ ಒಳಗಾಗಿ ಸಿಮ್ ಪೋರ್ಟ್ ಆಗುವುದು

ಎಮ್‌ಎನ್‌ಪಿ

ಎಮ್‌ಎನ್‌ಪಿ

ಟೆಲಿಕಾಂ ವಲಯದಲ್ಲಿ ಎಮ್‌ಎನ್‌ಪಿ ಸೌಲಭ್ಯವು ಚಂದಾದಾರರಿಗೆ ಉಪಯುಕ್ತವಾಗಿದ್ದು, ಒಂದು ಆಪರೇಟರ್‌ನಿಂದ ಇನ್ನೊಂದು ಟೆಲಿಕಾಂ ಆಪರೇಟರ್‌ಗೆ ಬದಲಾಯಿಸಬಹುದಾಗಿದೆ. ಈ ಎಮ್‌ಎನ್‌ಪಿ ಬದಲಾವಣೆಯು ಯಶಸ್ವಿಯಾಗಲು ಸುಮಾರು ಒಂದು ವಾರ ಆಗುತ್ತಿತ್ತು. ಆದ್ರೆ ಟ್ರಾಯ್‌ನ ಹೊಸ ಎಮ್‌ಎನ್‌ಪಿ ನಿಯಮ ಜಾರಿಯಿಂದ ಈಗ ಐದು ದಿನಗಳ ಬಳಗಾಗಿ ಸಿಮ್‌ ಫೋರ್ಟ್ ಆಗಲಿದೆ.

Best Mobiles in India

English summary
How To Get A New Jio SIM Delivered at Home For Free: Follow These Steps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X