ಫೇಸ್‌ಬುಕ್‌ನಲ್ಲಿ ನೀವು ಸಹ ನೀಲಿ ಟಿಕ್‌ ಬ್ಯಾಡ್ಜ್ ಪಡೆಯಬಹುದು; ಈ ರೀತಿ ಮನವಿ ಸಲ್ಲಿಸಿ

|

ಟ್ವಿಟ್ಟರ್‌ನಲ್ಲಿ ಅಥವಾ ಫೇಸ್‌ಬುಕ್‌ನಲ್ಲಿ ಬ್ಲೂಟಿಕ್‌ ಇರುವ ಖಾತೆ ನೋಡಿದರೆ ಅವರ ಬಗ್ಗೆ ಗೌರವ ಹೆಚ್ಚಾಗುತ್ತದೆ. ನಾವು ಸಹ ದೊಡ್ಡ ವ್ಯಕ್ತಿ ಎನಿಸಿಕೊಳ್ಳಬೇಕಲ್ಲ. ನಮ್ಮ ಹೆಸರಿನ ಮುಂದೆಯೂ ಈ ಬ್ಲೂಟಿಕ್‌ ಇರಬೇಕಲ್ಲ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಟ್ವಿಟ್ಟರ್‌ ಮಾಲೀಕರ ದೊಂಬರಾಟದಿಂದ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಬದಲಾವಣೆ ಆಗುತ್ತಲೇ ಇದ್ದು, ಬ್ಲೂಟಿಕ್‌ಗೆ ಬೆಲೆ ಇಲ್ಲದಂತೆ ಆಗಿದೆ. ಆದರೆ, ಮೆಟಾ ಒಡೆತನದ ಫೇಸ್‌ಬುಕ್‌,ಇನ್‌ಸ್ಟಾಗ್ರಾಮ್‌ನಲ್ಲಿ ಈ ಆಯ್ಕೆಇದ್ದು, ಬ್ಲೂಟಿಕ್‌ ವಿಚಾರದಲ್ಲಿ ಗಂಭೀರವಾಗಿ ಖಾತೆ ಪರಿಶೀಲನೆ ನಡೆಸುತ್ತದೆ. ಅದರಂತೆ ನೀವು ಸಹ ಪರಿಶೀಲಿಸಿದ ಬ್ಯಾಡ್ಜ್ ಪಡೆಯಬಹುದು. ಆದರೆ, ಈ ನಿಯಮ ಪಾಲನೆ ಮಾಡಬೇಕು.

ಮೆಟಾ ಒಡೆತನ

ಹೌದು, ಮೆಟಾ ಒಡೆತನದ ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ನಲ್ಲಿ ಬಳಕೆದಾರರಿಗೆ ವಿಶಿಷ್ಟ ಗುರುತನ್ನು ನೀಡಲಾಗುತ್ತದೆ. ಈ ವಿಶಿಷ್ಟ ಗುರುತನ್ನು ‘ಪರಿಶೀಲನೆ' ಎಂದು ಕರೆಯಲಾಗುತ್ತದೆ. ಈ ‘ಪರಿಶೀಲನೆ' ಪ್ರಕ್ರಿಯೆ ಸ್ವಯಂಪ್ರೇರಿತವಾಗಿರಲಿದ್ದು, ನೀವು ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಅನ್ನು ಹೇಗೆ ಪರಿಶೀಲಿಸಿಕೊಳ್ಳಬೇಕು ಎಂಬುದನ್ನು ಹಂತಹಂತವಾಗಿ ನಾವು ವಿವರಿಸಿದ್ದೇವೆ ಈ ಲೇಖನ ಓದಿ.

ಪರಿಶೀಲನೆಗೆ (Verification) ಇರಬೇಕಾದ ಅರ್ಹತೆ

ಪರಿಶೀಲನೆಗೆ (Verification) ಇರಬೇಕಾದ ಅರ್ಹತೆ

ಫೇಸ್‌ಬುಕ್ ಪ್ರೊಫೈಲ್ ಅಥವಾ ಪುಟವನ್ನು ಪರಿಶೀಲಿಸಲು ಬಳಕೆದಾರರು ಮನವಿ ಸಲ್ಲಿಸಬೇಕು. ಇದಕ್ಕಾಗಿ ಫೇಸ್‌ಬುಕ್ ನಿಗದಿಪಡಿಸಿದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಪ್ರೊಫೈಲ್ ಅನ್ನು ಪೂರ್ಣಗೊಳಿಸಬೇಕು. ಅದಕ್ಕೂ ಮಿಗಿಲಾಗಿ ನಿಮ್ಮ ಖಾತೆ ಅಥವಾ ಪೇಜ್‌ ಅಧಿಕೃತವಾಗಿರಬೇಕು.

ಫೇಸ್‌ಬುಕ್‌ ಖಾತೆ

ಫೇಸ್‌ಬುಕ್‌ ಖಾತೆಯಲ್ಲಿನ ಕುರಿತು ಎಲ್ಲಾ ವಿಭಾಗವು ಪೂರ್ಣವಾಗಿರಬೇಕು. ಅದರಲ್ಲೂ ಈ ಪರಿಶೀಲನೆ ಪ್ರಕ್ರಿಯೆಗೆ, ಖಾತೆ ಅಥವಾ ಪೇಜ್‌ ಗಮನಾರ್ಹವಾಗಿರಬೇಕು. ಅಂದರೆ, ನಿಮ್ಮ ಅಕೌಂಟ್‌ಬಗ್ಗೆ ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರಬೇಕು ಹಾಗೂ ನಿಮ್ಮ ಖಾತೆಯನ್ನು ಬಳಕೆದಾರರು ಆಗಾಗ್ಗೆ ಹುಡುಕುತ್ತಿರಬೇಕು ಅಥವಾ ನಿಮ್ಮ ಪೇಜ್‌ ಬ್ರ್ಯಾಂಡ್ ಆಗಿರಬೇಕು.

ನಿಯಮ

ನಿಯಮ

ಈ ಮೇಲಿನ ನಿಯಮಗಳು ನಿಮಗೆ ಅನ್ವಯಿಸಿದರೆ ನೀವು ಫೇಸ್‌ಬುಕ್‌ ನಲ್ಲಿ ಪರಿಶೀಲಿಸಿದ ಬ್ಯಾಡ್ಜ್‌ ಪಡೆದುಕೊಳ್ಳಬಹುದು. ಹಾಗಿದ್ರೆ, ಇದಕ್ಕೆ ಮನವಿ ಸಲ್ಲಿಸುವುದು ಹೇಗೆ? ಎಂಬುದನ್ನು ಇಲ್ಲಿ ಹಂತಹತವಾಗಿ ವಿವರಿಸಿದ್ದೇವೆ ನೋಡಿ.

  • ಹಂತ 1
  • ಮೊದಲು ನೀವು ಫೇಸ್‌ಬುಕ್‌ ಖಾತೆಗೆ ಲಾಗ್‌ ಇನ್‌ ಆಗಿ ಅಲ್ಲಿ ಪರಿಶೀಲನೆ ಬ್ಯಾಡ್ಜ್ ವಿನಂತಿ ವೆಬ್‌ಪುಟಕ್ಕೆ ಹೋಗಿ (https://www.facebook.com/help/contact/295038365360854) ನಂತರ ಅಲ್ಲಿ ಒಂದು ಫಾರ್ಮ್‌ ಕಾಣಿಸಿಕೊಳ್ಳುತ್ತದೆ ಅದನ್ನು ಭರ್ತಿ ಮಾಡಿ.

    • ಹಂತ 2
    • ಕೇಳಲಾದ ಮಾಹಿತಿಯನ್ನು ಭರ್ತಿ ಮಾಡುವ ಮೊದಲು, ಪರಿಶೀಲಿಸಲು ಬಯಸುವ ಖಾತೆಯ ಪ್ರಕಾರವನ್ನು ಆಯ್ಕೆಮಾಡಿ. ಅಂದರೆ ಫೇಸ್‌ಬುಕ್ ಪೇಜ್‌ ಅಥವಾ ನಿಮ್ಮ ಪ್ರೊಫೈಲ್.

      • ಹಂತ 3
      • ಈ ಹಂತದಲ್ಲಿ ನಿಮ್ಮ ಅಧಿಕೃತ ಐಡಿಯನ್ನು ಅಪ್‌ಲೋಡ್ ಮಾಡುವ ಮೂಲಕ ದೃಢೀಕರಿಸಿ. ಇದರಲ್ಲಿ ನೀವು ಚಾಲಕರ ಪರವಾನಗಿ, ಪಾಸ್‌ಪೋರ್ಟ್, ರಾಷ್ಟ್ರೀಯ ಗುರುತಿನ ಚೀಟಿ, ಟ್ಯಾಕ್ಸ್‌ ಫೈಲಿಂಗ್, ಇತ್ತೀಚಿನ ಯುಟಿಲಿಟಿ ಬಿಲ್ ಸೇರಿದಂತೆ ಇನ್ನಿತರೆ ಡಾಕ್ಯುಮೆಂಟ್‌ ಬಳಕೆ ಮಾಡಬಹುದು.

        • ಹಂತ 4
        • ಇದಾದ ಬಳಿಕ ನಿಮ್ಮ ಖಾತೆಯ ಅಡಿಯಲ್ಲಿ ಬರುವ ವರ್ಗ ಮತ್ತು ನಿಮ್ಮ ಖಾತೆಯು ಹೆಚ್ಚು ಜನಪ್ರಿಯವಾಗಿರುವ ದೇಶ ಅಥವಾ ಪ್ರದೇಶವನ್ನು ಭರ್ತಿ ಮಾಡಿ. ಹಾಗೆಯೇ ಪ್ರೇಕ್ಷಕರ ವಿಭಾಗದಲ್ಲಿ, ನಿಮ್ಮನ್ನು ಅನುಸರಿಸುವ ಜನರ ಪ್ರಕಾರಗಳು, ಅವರ ಆಸಕ್ತಿಗಳು ಸೇರಿದಂತೆ ಇನ್ನಿತರೆ ಮಾಹಿತಿಯನ್ನು ನೀವು ಮಾಹಿತಿ ಭರ್ತಿ ಮಾಡಬಹುದು.

          • ಹಂತ 5
          • ಇಷ್ಟೆಲ್ಲಾ ಮಾಹಿತಿಯನ್ನು ಭರ್ತಿ ಮಾಡದ ಮೇಲೆ ನೀವು ನೀಡಿದ ಮಾಹಿತಿ ಅನುಗುಣವಾಗಿ ಫೇಸ್‌ಬುಕ್‌ ಅದನ್ನು ಪರಿಶೀಲನೆಗೆ ಒಳಪಡಿಸುತ್ತದೆ. ಈ ವೇಳೆ ನಿಮ್ಮ ಮನವಿಯನ್ನು ಸ್ವೀಕಾರ ಮಾಡಬಹುದು ಅಥವಾ ತಿರಸ್ಕರಿಸಲೂಬಹುದು. ಈ ಎಲ್ಲಾ ಪ್ರಕ್ರಿಯೆ ಪೂರ್ಣವಾಗಲು 48 ಗಂಟೆಗಳಿಂದ 45 ದಿನ ಆಗಲಿದೆ.

            ನಿಮ್ಮ ಖಾತೆ

            ಇನ್ನು ನಿಮ್ಮ ಖಾತೆಯನ್ನು ಈಗ ಪರಿಶೀಲಿಸಲಾಗುವುದಿಲ್ಲ ಎಂಬ ಬಗ್ಗೆಯೂ ಕೆಲವರಿಗೆ ಫೇಸ್‌ಬುಕ್ ಮಾಹಿತಿ ನೀಡುತ್ತದೆ. ಇದಾದ ಬಳಿಕ ಅಂದರೆ ನೀವು 30 ದಿನಗಳ ನಂತರ ಮತ್ತೊಮ್ಮೆ ಪೇಜ್‌ ಅಥವಾ ಪ್ರೊಫೈಲ್ ಅನ್ನು ಪರಿಶೀಲಿಸಲು ಅರ್ಜಿ ಸಲ್ಲಿಸುವ ಆಯ್ಕೆ ಸಹ ನೀಡಲಾಗಿದೆ.

Best Mobiles in India

English summary
How to get a verified badge on Facebook.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X