ಉಚಿತವಾಗಿ Spotify ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯುವುದು ಹೇಗೆ?

|

ಮ್ಯೂಸಿಕ್‌ ಎಂದರೇ ಎಲ್ಲರಿಗೂ ಇಷ್ಟ. ಅದಕ್ಕಾಗಿಯೇ ಹಲವು ಮ್ಯೂಸಿಕ್ ಆಪ್‌ಗಳು ಹುಟ್ಟಿಕೊಂಡಿವೆ. ಆ ಪೈಕಿ ಸ್ಪಾಟಿಫೈ - Spotify ಆಪ್ ಸಹ ಒಂದಾಗಿದೆ. ಈ ಅಪ್ಲಿಕೇಶನ್‌ ಮೂಲಕ ಬಳಕೆದಾರರು ಅವರ ನೆಚ್ಚಿನ ಹಾಡುಗಳು, ಜನಪ್ರಿಯ ಹಾಡುಗಳನ್ನು ಯಾವಾಗ ಬೇಕಾದರೂ ಕೇಳಲು ಸಾಧ್ಯವಿದೆ. ಮ್ಯೂಸಿಕ್‌ನ ಅತ್ಯುತ್ತಮ ಸೇವೆ ಪಡೆಯಲು ಈ ಆಪ್‌ ಚಂದಾದಾರಿಕೆಯನ್ನು ಸೌಲಭ್ಯ ಹೊಂದಿದೆ. ಅದಾಗ್ಯೂ ಉಚಿತ ಸೇವೆ ಸಹ ಇದೆ.

ಉಚಿತವಾಗಿ Spotify ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯುವುದು ಹೇಗೆ?

ಸ್ಪಾಟಿಫೈ ಭಾರತದಲ್ಲಿನ ಬಳಕೆದಾರರಿಗೆ ಮೂರು ತಿಂಗಳ ಉಚಿತ ಸ್ಪಾಟಿಫೈ ಪ್ರೀಮಿಯಂ ಚಂದಾದಾರಿಕೆಯನ್ನು ನೀಡಲು ವೀಸಾದೊಂದಿಗೆ ಕೈಜೋಡಿಸಿದೆ. ಈ ಕೊಡುಗೆಯು ಪ್ರೀಮಿಯಂ ಇಂಡಿವಿಜುವಲ್ ಪ್ಲಾನ್‌ಗೆ ಮಾನ್ಯವಾಗಿರುತ್ತದೆ. ಈ ಯೋಜನೆಯು ತಿಂಗಳಿಗೆ 119 ರೂ. ಆಗಿದೆ. ಪ್ರೀಮಿಯಂ ಚಂದಾದಾರಿಕೆಯನ್ನು ಪ್ರಯತ್ನಿಸದ ಮತ್ತು ವೀಸಾ ಕಾರ್ಡ್ ಹೊಂದಿರುವ ಬಳಕೆದಾರರು ಈ ಕೊಡುಗೆಗೆ ಅರ್ಹರಾಗಿರುತ್ತಾರೆ.

ಅನ್‌ವರ್ಸ್‌ಗಾಗಿ, ಸ್ಪಾಟಿಫೈ ಪ್ರೀಮಿಯಂ ಸದಸ್ಯತ್ವವು ಸಾವಿರಾರು ಜಾಹೀರಾತು ಮುಕ್ತ ಹಾಡುಗಳಿಗೆ ಮತ್ತು ಮಲ್ಟಿ ಡಿವೈಸ್ ಸಪೋರ್ಟ್‌ ನೀಡುತ್ತದೆ. ಚಂದಾದಾರರು ಕೇಳಲು, ಹಾಡುಗಳನ್ನು ಆಫ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಗುಂಪು ಸೆಷನ್‌ಗಳು ಮತ್ತು ಹಾಡುಗಳನ್ನು ಬಿಟ್ಟುಬಿಡುವುದು ಸೇರಿದಂತೆ ವೈಶಿಷ್ಟ್ಯಗಳಿಗೆ ಪ್ರವೇಶವನ್ನು ಪಡೆಯಬಹುದು.

ಉಚಿತವಾಗಿ Spotify ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯುವುದು ಹೇಗೆ?

ಆಫರ್ ಪಡೆಯಲು ಬಳಕೆದಾರರು ವೀಸಾ ಕಾರ್ಡ್ ಹೊಂದಿರಬೇಕು ಎಂಬುದನ್ನು ಗಮನಿಸಿ. ಬಳಕೆದಾರರು ತಮ್ಮ ವೈಯಕ್ತಿಕ ಸ್ಪಾಟಿಫೈ ಖಾತೆಯೊಂದಿಗೆ ಸೈನ್ ಇನ್ ಮಾಡಬೇಕಾಗುತ್ತದೆ. ಹಾಗೆಯೇ ಪ್ರಾಂಪ್ಟ್ ಮಾಡಿದಾಗ ವೀಸಾ ಕಾರ್ಡ್ ವಿವರಗಳನ್ನು ನಮೂದಿಸಬೇಕು. ಗಮನಾರ್ಹವಾಗಿ, ಪ್ರಾಯೋಗಿಕ ಅವಧಿಯನ್ನು ಒಳಗೊಂಡಂತೆ ಯಾವುದೇ ರೀತಿಯ ಸ್ಪಾಟಿಫೈ ಪ್ರೀಮಿಯಂ ಪ್ಲಾನ್‌ಗಳನ್ನು ಈ ಹಿಂದೆ ಪಡೆದಿರುವ ಬಳಕೆದಾರರು ಈ ಆಫರ್‌ಗೆ ಅರ್ಹರಾಗಿರುವುದಿಲ್ಲ. ಹಾಗಾದರೇ ಈ ಕೊಡುಗೆಯನ್ನು ಪಡೆಯಲು ಅನುಸರಿಸಬೇಕಾದ ಹಂತಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಉಚಿತ 3 ತಿಂಗಳ ಸ್ಪಾಟಿಫೈ ಪ್ರೀಮಿಯಂ ಚಂದಾದಾರಿಕೆ ಪಡೆಯಲು ಈ ಕ್ರಮ ಫಾಲೋ ಮಾಡಿ:
* ಕೊಡುಗೆ ಪೇಜ್‌ಗೆ ಭೇಟಿ ನೀಡಿ ಮತ್ತು Start trial ಆಯ್ಕೆಯನ್ನು ಟ್ಯಾಪ್ ಮಾಡಿ
* ಈಗ ಲಾಗ್ ಇನ್ ಮಾಡಿ ಅಥವಾ ಎಲ್ಲಾ ವಿವರಗಳೊಂದಿಗೆ ಸೈನ್ ಅಪ್ ಮಾಡಿ
* ಮೂರು ತಿಂಗಳ ಪ್ರಾಯೋಗಿಕ ಆಯ್ಕೆಯನ್ನು ಆರಿಸಿ, ವೀಸಾ ಕಾರ್ಡ್ ವಿವರಗಳನ್ನು ಸೇರಿಸಿ ಮತ್ತು ಅದನ್ನು ಸಕ್ರಿಯಗೊಳಿಸಿ.

ಉಚಿತವಾಗಿ Spotify ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯುವುದು ಹೇಗೆ?

ಬಳಕೆದಾರರು ಯಾವಾಗ ಬೇಕಾದರೂ ಈ ಉಚಿತ ಪ್ರಯೋಗವನ್ನು ರದ್ದುಗೊಳಿಸಬಹುದು. ಮೂರು ತಿಂಗಳ ಪ್ರಯೋಗದ ನಂತರ, ಪ್ರೀಮಿಯಂ ಚಂದಾದಾರಿಕೆಯನ್ನು ಬಳಸುವುದನ್ನು ಮುಂದುವರಿಸಲು ಬಳಕೆದಾರರು ಪ್ರತಿ ತಿಂಗಳು 119 ರೂ. ಪಾವತಿಸಲು ಶುರು ಮಾಡಬೇಕಾಗಿರುತ್ತದೆ.

ಸದ್ಯ, ಸ್ಪಾಟಿಫೈ ಮಿನಿ, ಡಿಯೋ, ಫ್ಯಾಮಿಲಿ ಮತ್ತು ಇಂಡಿವಿಜುವಲ್ ಒಳಗೊಂಡಂತೆ ಒಟ್ಟು ನಾಲ್ಕು ಪ್ರೀಮಿಯಂ ಯೋಜನೆಗಳ ಆಯ್ಕೆ ನೀಡುತ್ತಿದೆ. ಮಿನಿ ಯೋಜನೆಯು ಒಂದೇ ಖಾತೆಗೆ ದಿನಕ್ಕೆ 7 ರೂ. ಪ್ರೀಮಿಯಂ ಡ್ಯುಯೊ ಯೋಜನೆಯು ಎರಡು ಖಾತೆಗಳನ್ನು ಬೆಂಬಲಿಸುತ್ತದೆ. ತಿಂಗಳಿಗೆ 165 ರೂ. ಆಗಿದೆ. ಇನ್ನು ಫ್ಯಾಮಿಲಿ ಯೋಜನೆಯು ಆರು ಖಾತೆಗಳನ್ನು ಬೆಂಬಲಿಸುತ್ತದೆ ಮತ್ತು ನಿಮಗೆ 199ರೂ. ವೆಚ್ಚವಾಗುತ್ತದೆ. ಕೊನೆಯದಾಗಿ, ಪ್ರೀಮಿಯಂ ವೈಯಕ್ತಿಕ ಯೋಜನೆಯು ಒಂದು ವರ್ಷಕ್ಕೆ 939 ರೂ. ಆಗಿದೆ. ಇದು ಸೀಮಿತ ಅವಧಿಯ ಕೊಡುಗೆಯ ಆಗಿದೆ. ಸ್ಪಾಟಿಫೈ ಸಂಸ್ಥೆಯು ತನ್ನ 12 ತಿಂಗಳ ಪ್ರಿಪೇಯ್ಡ್ ಯೋಜನೆಯಲ್ಲಿ 939 ರೂ.ಗೆ 20 ಪ್ರತಿಶತ ರಿಯಾಯಿತಿಯನ್ನು ಘೋಷಿಸಿದೆ.

ಇತ್ತೀಚಿಗಷ್ಡ ಸ್ಪಾಟಿಫೈ ಸಂಸ್ಥೆ ಹೊಸದಾಗಿ 12 ಭಾರತೀಯ ಭಾಷೆಗಳಿಗೆ ಬೆಂಬಲಿಸಲಿದೆ. ಈ ಮೂಲಕ ಭಾರತದ ಸ್ಥಳೀಯ ಭಾಷೆ ಬಳಕೆದಾರರನ್ನು ಆಕರ್ಷಿಸಲು ಮುಂದಾಗಿದೆ. ಸದ್ಯ ಹೊಸದಾಗಿ ಸೇರಿಸಲಾದ 12 ಭಾರತೀಯ ಭಾಷೆಗಳಲ್ಲಿ ಹಿಂದಿ, ಗುಜರಾತಿ, ಭೋಜ್‌ಪುರಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಮತ್ತು ಬಂಗಾಳಿ ಸೇರಿವೆ. ಭಾರತದಲ್ಲಿನ ನಮ್ಮ ಬಳಕೆದಾರರಿಗೆ ಉತ್ತಮವಾದ ಆಡಿಯೊ ವಿಷಯವನ್ನು ನೀಡುವುದಕ್ಕೆ ನಾವು ಬದ್ಧರಾಗಿದ್ದೇವೆ.ಇದೇ ಕಾರಣಕ್ಕೆ ನಮ್ಮ ಬಳಕೆದಾರರು ಮಾತನಾಡುವ ಭಾಷೆಗಳಲ್ಲಿ ನಮ್ಮ ಸೇವೆಯನ್ನು ನೀಡಲು ನಾವು ಮುಂದಾಗಿದ್ದೇವೆ ಎಂದು ಸ್ಪಾಟಿಫೈ ಸಂಸ್ಥೆ ಹೇಳಿಕೊಂಡಿದೆ.

Best Mobiles in India

English summary
How to Get Free 3 Months Spotify Premium Subscription: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X