ಟ್ವಿಟ್ಟರ್‌ ವಿನ್ಯಾಸದಲ್ಲಿ ಭಾರೀ ಬದಲಾವಣೆ..! ಬಳಕೆದಾರರ ಅಸಮಾಧಾನ..!

By Gizbot Bureau
|

ಟ್ವಿಟ್ಟರ್‌ ಇತ್ತೀಚೆಗೆ ತನ್ ವೆಬ್‌ಸೈಟ್‌ನಲ್ಲಿ ಡೆಸ್ಕ್‌ಟಾಪ್ ಇಂಟರ್‌ಫೇಸ್‌ನ್ನು ಮರುವಿನ್ಯಾಸಗೊಳಿಸಿದೆ. ಟ್ವಿಟ್ಟರ್‌ ತನ್ನ ಮೊಬೈಲ್ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಿಂದ ಹೊಸ ಇಂಟರ್‌ಫೇಸ್‌ಗೆ ಅನೇಕ ಅಂಶಗಳನ್ನು ಅಳವಡಿಸಿಕೊಂಡಿದೆ. ಆದರೆ, ಮೊಬೈಲ್ ಆಪ್‌ನಲ್ಲಿ ಮೊದಲು ಪರಿಚಯಿಸಿದ್ದ ವಿನ್ಯಾಸ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈಗ ವೆಬ್ ಇಂಟರ್‌ಫೇಸ್‌ ಕೂಡ ಭಾರೀ ಹಿನ್ನಡೆ ಕಂಡಿದೆ.

ಬಳಕೆದಾರರ ಅಸಮಾಧಾನ

ಬಳಕೆದಾರರ ಅಸಮಾಧಾನ

ಟ್ವಿಟ್ಟರ್ ಬಳಕೆದಾರರು ಹೊಸ ವಿನ್ಯಾಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮತ್ತು ಹಳೇ ವಿನ್ಯಾಸಕ್ಕೆ ಮರಳಲು ಕಂಪನಿಗೆ ಕರೆ ನೀಡಿದ್ದಾರೆ. ಹೊಸ ವಿನ್ಯಾಸ ಮೊಬೈಲ್, ಡೆಸ್ಕ್‌ಟಾಪ್ ಮತ್ತು ವೆಬ್‌ನಲ್ಲಿ ಕನಿಷ್ಠ UI ಅನ್ನು ಕೇಂದ್ರ ವಿಷಯವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ಟ್ವಿಟ್ಟರ್‌ ಹೇಳುತ್ತಿದ್ದರೂ ಸಹ ಹೊಸ ವಿನ್ಯಾಸದಿಂದ ಬಳಕೆದಾರರ ಅವಕೃಪೆಗೆ ಪಾತ್ರವಾಗಿದೆ.

ಏನು ಬದಲಾವಣೆ..?

ಏನು ಬದಲಾವಣೆ..?

ನೀವು ಹೊಸ ಆವೃತ್ತಿಯಲ್ಲಿ ಲಾಗ್ ಇನ್ ಆದ ತಕ್ಷಣ ಕಮಾಂಡ್‌ ಮೆನುವನ್ನು ಎಡಕ್ಕೆ ಸರಿಸಲಾಗಿದೆ ಎಂಬುದನ್ನು ನೀವು ಗಮನಿಸಬಹುದು. ಅದಲ್ಲದೇ ಟ್ರೆಂಡಿಂಗ್ ಕಾಲಮ್‌ನ್ನು ಸಹ ಫೀಡ್‌ನ ಬಲಭಾಗಕ್ಕೆ ಸರಿಸಲಾಗಿದೆ. ಇನ್ಮುಂದೆ ಹೊಸ ಇಂಟರ್‌ಫೇಸ್‌ ನಿಮ್ಮ ಟ್ವೀಟ್‌ಗಳನ್ನು ಅಥವಾ ಅನುಯಾಯಿಗಳ ಸಂಖ್ಯೆಯನ್ನು ತೋರಿಸುವುದಿಲ್ಲ. ಆ ಡೇಟಾ ಪರಿಶೀಲಿಸಬೇಕೆಂದರೆ ನಿಮ್ಮ ಪ್ರೊಫೈಲ್ ಪುಟವನ್ನು ವೀಕ್ಷಿಸಬೇಕಾಗಿದೆ. ಟ್ರೆಂಡಿಂಗ್ ವಿಭಾಗವನ್ನು ಬಲಕ್ಕೆ ಸರಿಸಿರುವುದು ಬಹಳಷ್ಟು ಬಳಕೆದಾರರನ್ನು ಕೆರಳಿಸಿದೆ. ಆದ್ದರಿಂದ ಬಳಕೆದಾರರು ಹಳೆಯ ಇಂಟರ್‌ಫೇಸ್‌ಗೆ ಬದಲಾಗಲು ಬಯಸುತ್ತಿದ್ದಾರೆ. ಅದಕ್ಕಾಗಿಯೇ ಹಳೇ ಇಂಟರ್‌ಫೇಸ್‌ಗೆ ಹಿಂತಿರುಗಲು ಮಾರ್ಗವೂ ಕೂಡ ಇದೆ.

ಹಳೇ ಇಂಟರ್‌ಫೇಸ್‌ಗೆ ಬದಲಾಗೋದು ಹೇಗೆ..?

ಹಳೇ ಇಂಟರ್‌ಫೇಸ್‌ಗೆ ಬದಲಾಗೋದು ಹೇಗೆ..?

ಹಳೆಯ ಟ್ವಿಟರ್ ಇಂಟರ್‌ಫೇಸ್‌ನ್ನು ಮರಳಿ ತರಲು ಟ್ವಿಟರ್ ಬಳಕೆದಾರ ಮತ್ತು ಸಾಫ್ಟ್‌ವೇರ್ ಡೆವಲಪರ್ ಜುಸರ್ ಉಪಯುಕ್ತವಾದ ‘ನೀವೇ ಮಾಡಿ' ಮಾರ್ಗದರ್ಶಿಯನ್ನು ಹಂಚಿಕೊಂಡಿದ್ದಾರೆ. ಕೆಲವೇ ಕ್ಲಿಕ್‌ಗಳಲ್ಲಿ ‘ಗುಡ್‌ ಟ್ವಿಟರ್' ಎಂದು ಕರೆಯಲ್ಪಡುವ ಹಳೆಯ ಇಂಟರ್‌ಫೇಸ್‌ಗೆ ಹಿಂತಿರುಗಬಹುದು. ಹಳೆಯ ಇಂಟರ್‌ಫೇಸ್‌ ಪಡೆಯಲು, ಟ್ವಿಟರ್ ಒಪನ್‌ ಮಾಡಿ, ಮುಂದಿನ ಕಮಾಂಡ್‌ಗಳನ್ನು ಅನುಸರಿಸಿ. ಮೆನುವಿನಲ್ಲಿ ಎಡಕ್ಕೆ ಕಂಡುಬರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಸೆಟ್ಟಿಂಗ್ಸ್‌ ಮತ್ತು ಗೌಪ್ಯತೆಗೆ ಹೋಗಿ, ನಂತರ ಅಬೌಟ್‌ ಟ್ವಿಟರ್ ಕ್ಲಿಕ್ ಮಾಡಿ, ಬಳಿಕ ಡೈರೆಕ್ಟರಿ ಆಯ್ಕೆಯನ್ನು ಕ್ಲಿಕ್‌ ಮಾಡಿ (Go to Settings and privacy >> About Twitter >> Directory). ಈಗ, ಹೊಸ ಟ್ವಿಟರ್ ಟ್ಯಾಬ್ ತೆರೆದಿರುವುದನ್ನು ನೀವು ನೋಡುತ್ತೀರಿ. ಈ ಪುಟದ ಮೇಲ್ಭಾಗದಲ್ಲಿರುವ ಹೋಮ್ ಆಯ್ಕೆಯನ್ನು ಕ್ಲಿಕ್ ಮಾಡಿ, ಈಗ ನಿಮಗೆ ಹಳೆಯ ಬಳಕೆದಾರ ಇಂಟರ್‌ಫೇಸ್‌ಗೆ ರಿಡೈರೆಕ್ಟ್‌ ಮಾಡಲಾಗುತ್ತದೆ.

ಗುಡ್‌ ಟ್ವಿಟ್ಟರ್‌

ಗುಡ್‌ ಟ್ವಿಟ್ಟರ್‌

ದಿ ನೆಕ್ಸ್ಟ್ ವೆಬ್ ಪ್ರಕಾರ, ಗುಡ್‌ಟ್ವಿಟ್ಟರ್‌ನ್ನು ಸುಮಾರು 35,000 ಕ್ರೋಮ್ ಮತ್ತು ಫೈರ್‌ಫಾಕ್ಸ್ ಬಳಕೆದಾರರು ಡೌನ್‌ಲೋಡ್ ಮಾಡಿದ್ದಾರೆ. ಇದು ರೆಡ್ಡಿಟ್‌ನಲ್ಲಿ ತೀವ್ರ ವಿಮರ್ಶೆಗೂ ಸಹ ಒಳಗಾಗಿದೆ. ಈ ಅಚ್ಚುಕಟ್ಟಾದ ಚಿಕ್ಕ ಹ್ಯಾಕ್ ನಿಮ್ಮನ್ನು ಹಳೆಯ ಟ್ವಿಟರ್ ಇಂಟರ್‌ಫೇಸ್‌ಗೆ ಹಿಂತಿರುಗಿಸುತ್ತದೆ. ಆದರೆ, ಇದು ಶಾಶ್ವತ ಪರಿಹಾರವಲ್ಲ. ಹಳೆಯ ಇಂಟರ್‌ಫೇಸ್‌ಗೆ ಬದಲಾಯಿಸಲು ನೀವು ಡೈರೆಕ್ಟರಿಯನ್ನು ಮ್ಯಾನುವಲಿ ಭೇಟಿ ನೀಡಬೇಕಾಗುತ್ತದೆ.

Best Mobiles in India

English summary
How To Get Old Twitter Interface On Desktop

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X