Subscribe to Gizbot

ಆಂಡ್ರಾಯ್ಡ್‌ ಮೊಬೈಲ್‌ಗೆ 'ರೀಸೈಕಲ್‌ ಬಿನ್' ಫೀಚರ್‌ ಪಡೆಯುವುದು ಹೇಗೆ?

Written By:

ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿ ಡಿಲೀಟ್‌ ಮಾಡಿದ ಯಾವುದೇ ಫೈಲ್‌, ಫೋಟೋ, ಸಿನಿಮಾ, ಹಾಡುಗಳನ್ನು, ಇತರೆ ಯಾವುದೇ ಡೇಟಾವನ್ನು ಎಷ್ಟುದಿನ ಬೇಕಾದರೂ ಬಿಟ್ಟು ಮರುಪಡೆಯಬಹುದು. ಅದು ಕೇವಲ "ರೀಸೈಕಲ್‌ ಬಿನ್" (Recycle Bin)‌ ಫೀಚರ್‌ಗೆ ಹೋದ್ರೆ ನೀವು ಡಿಲೀಟ್‌ ಮಾಡಿದ ಯಾವುದೇ ಡೇಟಾವನ್ನು ಮರುಪಡೆಯಬಹುದು.

ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿರುವ "ರೀಸೈಕಲ್‌ ಬಿನ್"‌ ಫೀಚರ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲೂ ಇದ್ರೆ ಎಷ್ಟೊಂದು ಉಪಯೋಗವಾಗುತ್ತದೆ ಅಲ್ವೇ? ಹೌದು ಸ್ಮಾರ್ಟ್‌ಫೋನ್‌ಗಳಲ್ಲೂ ಸಹ ಆಕಸ್ಮಿಕವಾಗಿ ಡಿಲೀಟ್‌ ಆದ ಯಾವುದೇ ಡೇಟಾ "ರೀಸೈಕಲ್‌ ಬಿನ್‌" ಫೀಚರ್‌ನಲ್ಲಿರುವಂತೆ ಈಗ ಆಂಡ್ರಾಯ್ಡ್‌ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ "ರೀಸೈಕಲ್‌ ಬಿನ್‌" ಫೀಚರ್‌ ಪಡೆಯಬಹುದಾಗಿದೆ. ಹೇಗೆ ಎಂದು ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಂಪ್‌ಸ್ಟರ್‌‌ ಆಪ್‌ (Dumpster App)

ಡಂಪ್‌ಸ್ಟರ್‌‌ ಆಪ್‌ (Dumpster App)

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ತಾವು ಆಕಸ್ಮಿಕವಾಗಿ ಡಿಲೀಟ್‌ ಮಾಡಿದ ಯಾವುದೇ ಡೇಟಾ ಮತ್ತು ಫೈಲ್ಸ್‌ಗಳನ್ನು ಆಂಡ್ರಾಯ್ಡ್‌ ರೀಸೈಕಲ್‌ ಬಿನ್‌ನಲ್ಲಿ ಪಡೆಯಬಹುದು. ಡಿಲೀಟ್‌ ಆದ ಎಲ್ಲಾ ಡೇಟಾ ಸಹ ತಾತ್ಕಾಲಿಕವಾಗಿ ಡಂಪ್‌ಸ್ಟರ್‌‌ ಆಪ್‌ನಲ್ಲಿ (Dumster App) ಸಂಗ್ರಹವಾಗಿರುತ್ತದೆ.

ಡಂಪ್‌ಸ್ಟರ್‌‌ ಆಪ್‌(Dumster App) ಗುಣಲಕ್ಷಣಗಳು

ಡಂಪ್‌ಸ್ಟರ್‌‌ ಆಪ್‌(Dumster App) ಗುಣಲಕ್ಷಣಗಳು

* ಡಿಲೀಟ್‌ ಆದ ಫೋಟೋಗಳು, ಮ್ಯೂಸಿಕ್‌ ಫೈಲ್ಸ್‌, ವೀಡಿಯೋ ಇತರೆ ಎಲ್ಲಾ ಡಾಕುಮೆಂಟ್ ಅನ್ನು ರೀಸ್ಟೋರ್‌ ಮಾಡುತ್ತದೆ.
* ರೀಸ್ಟೋರ್ ಮಾಡಲು ಇಂಟರ್ನೆಟ್‌ ಬೇಕಾಗಿಲ್ಲಾ
* ಇನ್‌ಸ್ಟಾಲ್‌ ಆಗದ ಆಪ್‌ಗಳನ್ನು ಸಹ ರಿಕವರಿ ಮಾಡಬಹುದು.
* ಕೇವಲ ಒಮ್ಮೆ ಟ್ಯಾಪ್‌ ಮಾಡಿ * ಡಿಲೀಟ್‌ ಆದ ಡೇಟಾಗಳ ಪ್ರಿವೀವ್‌ ನೋಡಬಹುದು.
* ಡಂಪ್‌ಸ್ಟರ್‌ ಯಾವಾಗ ಎಲ್ಲಾ ಡಿಲೀಟ್ ಡೇಟಾವನ್ನು ಅಳಿಸಿ ಹಾಕಬೇಕು ಎಂಬುದನ್ನು ಶೆಡ್ಯೂಲ್‌ ಮಾಡಬಹುದು.

ಡಂಪ್‌ಸ್ಟರ್‌‌ ಆಪ್‌ ಬಳಕೆ ಹೇಗೆ?

ಡಂಪ್‌ಸ್ಟರ್‌‌ ಆಪ್‌ ಬಳಕೆ ಹೇಗೆ?

ಮೊದಲಿಗೆ ಡಂಪ್‌ಸ್ಟರ್‌ ಆಪ್‌ ಅನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ. ಆಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಆಪ್‌ ಓಪನ್‌ ಮಾಡಿ

ಆಪ್‌ ಓಪನ್‌ ಮಾಡಿ

ಡಂಪ್‌ಸ್ಟರ್‌ ಆಪ್‌ ಓಪನ್‌ ಮಾಡಿದಾಗ ದೀರ್ಘ ಒಪ್ಪಂದ ಪ್ರದರ್ಶನವಾಗುತ್ತದೆ. ಎಲ್ಲವನ್ನು ಓದುವುದರ ಬದಲು Agree ಎಂಬಲ್ಲಿ ಕ್ಲಿಕ್‌ ಮಾಡಿ, ಪ್ರೊಸೀಡ್‌ ಮಾಡಿ.

ರೀಸ್ಟೋರ್‌

ರೀಸ್ಟೋರ್‌

ಆಪ್‌ ಓಪನ್‌ ಮಾಡಿ ನಿಮ್ಮ ಡಿವೈಸ್‌ನಲ್ಲಿ ಡಿಲೀಟ್‌ ಆದ ಮಾಧ್ಯಮಗಳನ್ನು ಆಯ್ಕೆ ಮಾಡಿ.

ರೀಸ್ಟೋರ್‌

ರೀಸ್ಟೋರ್‌

ಡಿಲೀಟ್‌ ಆದ ಮೀಡಿಯಾ ಆಯ್ಕೆ ಮಾಡಿದ ನಂತರ ಡಂಪ್‌ಸ್ಟರ್‌ ರಿಸ್ಟೋರ್‌ ಮಾಡುತ್ತದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?

ಪೇಪರ್‌ನಿಂದ ಸ್ಪೀಕರ್ ತಯಾರಿಸುವುದು ಹೇಗೆ?

ಹಣ್ಣಿನಿಂದ ಫೋನ್ ಚಾರ್ಜರ್ ಟ್ರೈ ಮಾಡಿದ್ದೀರಾ?

ಭವಿಷ್ಯದ ತಂತ್ರಜ್ಞಾನ ಹೇಗಿರುತ್ತದೆ ವೀಡಿಯೋ ಬಿಡುಗಡೆ: ಮ್ಯಾಜಿಕ್ ಲೀಪ್‌

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How To get Recycle bin feature on android mobile. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot