ಪಿಸಿ ಹಾಗೂ ಲ್ಯಾಪ್‌ಟಾಪ್‌ನಲ್ಲಿ ವಿಂಡೋಸ್‌ 8 ಬಳಸುವುದು ಹೇಗೆ?

Posted By: Staff
ಪಿಸಿ ಹಾಗೂ ಲ್ಯಾಪ್‌ಟಾಪ್‌ನಲ್ಲಿ ವಿಂಡೋಸ್‌ 8 ಬಳಸುವುದು ಹೇಗೆ?

ಮೈಕ್ರೋಸಾಫ್ಟ್‌ ತನ್ನಯ ನೂತನ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ಚಲಾವಣೆಗೆ ತಂದಿದ್ದು ನೀವು ನಿಮ್ಮ ಪಿಸಿ, ಕಂಪ್ಯೂಟರ್‌ಗೆ ಅಥವಾ ಲ್ಯಾಪ್‌ಟಾಪ್‌ಗೆ ಇನ್ಸಟಾಲ್‌ ಮಾಡಿಕೊಳ್ಳ ಬಹುದಾಗಿದೆ. ಆದರೆ ಈ ನೂತನ ಆಪರೇಟಿಂಗ್‌ ಸಿಸ್ಟಂ ಪ್ರಯೋಗ ಮಾಡುವುದಾದರೂ ಹೇಗೆ? ಅದಕ್ಕಾಗಿ ಮೊದಲು ನೂತನ ಆಪರೇಟಿಂಗ್‌ ಸಿಸ್ಟಂ ನಲ್ಲಿನ ಫೀಚರ್ಸ್‌ಗಳ ಕುರಿತಾಗಿ ತಿಳಿದು ಕೊಳ್ಳೋಣ ಹಾಗೂ ಹೇಗೆ ಬಳಕೆ ಮಾಡುವುದು ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಹಾಗಿದ್ದಲ್ಲಿ ಬನ್ನಿ ವಿಂಡೋಸ್‌ 8 ನಲ್ಲಿನ ಕೆಲ ಫೀಚರ್ಸ್‌ಗಳನ್ನು ತಿಳಿದುಕೊಳ್ಳೋಣ.

  • ವಿಂಡೋಸ್‌ 8 ನ ಪ್ರಮುಖ ವಿಶೇಷತೆ ಏನೆಂದರೆ ಈ ಆಪರೇಟಿಂಗ್‌ ಸಿಸ್ಟಂ ಅನ್ನು ನೀವು ಕೇವಲ ಲ್ಯಾಪ್‌ಟಾಪ್‌ ಹಾಗೂ ಕಂಪ್ಯೂಟರ್‌ನಲ್ಲಿ ಮಾತ್ರವಲ್ಲ ಟ್ಯಾಬ್ಲೆಟ್‌ನಲ್ಲಿಯೂ ಕೂಡ ಬಳಸಬಹುದಾಗಿದೆ. ವಿಂಡೋಸ್‌ 8 ವಿಂಡೋ 8 ಹಾಗೂವಿಂಡೋ ಆರ್‌ಟಿಯ ಎರಡು ಮಾದರಿಗಳಲ್ಲಿ ಲಭ್ಯವಿದೆ. ಅಂದಹಾಗೆ ಈ ಎರಡೂ ಮಾದರಿಗಳು ಬಹುತೇಕ ಒಂದೇ ರೀತಿಯಂತಿದ್ದು ವಿಂಡೋ 8 ನಲ್ಲಿಸೆಂಟರ್ಡ್‌ ಚಿಪ್‌ ನೀಡಲಾಗಿದೆ ಹಾಗೂ ವಿಂಡೋ ಆರ್‌ಟಿ ವಿಂಡೋ 8 ಗಿಂತಲೂ ಹಗುರವಾಗಿದ್ದು ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್ಲೆಟ್‌ಗಳಲ್ಲಿ ಬಳಸಲು ಸೂಕ್ತವಾಗಿದೆ.

  • ವಿಂಡೋ 8 ಇನ್ಸರ್ಟ್‌ ಮಾಡಿದ ಬಳಿಕ ಮೊದಲ ಬಾರಿಗೆ ನೀವು ವಿಂಡೋಸ್‌ 8 ಓಪನ್‌ ಮಾಡಿದಾಗ ಅದರಲ್ಲಿ ಹಲವಾರು ಫೀಚರ್ಸ್‌ಗಳನ್ನು ನೀಡಲಾಗಿರುತ್ತದೆ. ಅಂದಹಾಗೆ ನೀವು ಟಚ್‌ಸ್ಕ್ರೀನ್‌ ಡಿವೈಜ್‌ನಲ್ಲಿ ವಿಂಡೋ 8 ಬಳಸುತ್ತಿದ್ದಲ್ಲಿ ಸ್ಕ್ರೀನ್‌ನ ಯಾವುದೇ ಭಾಗದಲ್ಲಿ ಟಚ್‌ ಮಾಡಿ ನಿಮ್ಮ್ ಡಿವೈಜ್‌ನಲ್ಲಿ ಟಚ್‌ಸ್ಕ್ರೀನ ಇಲ್ಲವಾದಲ್ಲಿ ಕೀ ಬೋರ್ಡ್‌ ಯಾವುದೇ ಕೀ ಪ್ರೆಸ್‌ ಮಾಡಿ.

  • ಸ್ಕ್ರೀನ್‌ ಟಚ್‌ ಮಾಡಿದ ಬಳಿಕ ಅಥವ ಕೀ ಪ್ರೆಸ್‌ ಮಾಡಿದ ಬಳಿಕ ನಿಮ್ಮ ಮುಂದೆ ಹಲವಾರು ಟೈಲ್ಸ್‌ ಆಪ್ಷನ್‌ ಕಾಣೀಸಿಕೊಳ್ಳುತ್ತದೆ. ಜೊತೆಗೆ ನಿಮ್ಮ ಪಿ.ಸಿಯ ಢಫಾಲಟ್‌ ನಿಕ್‌ ನೇಮ್‌ ಕೂಡಾ ಬರುತ್ತದೆ. ನಿಮಗೆ ಬೇಕಾದಲ್ಲಿ ಹೆಸರನ್ನು ಬದಲಾಯಿಸಿಕೊಳ್ಳ ಬಹುದಾಗಿದೆ.

  • ವಿಂಡೋಸ್‌ 8 ನ ಡೆಸ್ಕ್ಟಾಪ್‌ ಸ್ಕ್ರೀನ್‌ನಲ್ಲಿ ಸ್ಟಾರ್ಟ್‌ ಗೋಚರಿಸುವುದಿಲ್ಲ ಇದರಿಂದ ನಿಮಗೆ ಕೊಂಚ ತೊಂದರೆ ಉಂಟು ಮಾಡಬಹುದು. ಹಾಗಿದ್ದಲ್ಲಿ ನೀವು ಯಾವುದೇ ಪ್ರೊಗ್ರಾಮ್‌ ಸ್ಟಾರ್ಟ್‌ ಮಾಡಬೇಕೆಂದಿದ್ದಲ್ಲಿ ವಿಂಡೋಸ್‌ 8 ನಲ್ಲಿ ಸ್ಕ್ರೀನ್‌ನ ಬಲಭಾಗದ ಮೂಲೆಯಲ್ಲಿ ಮೌಸ್‌ ಮೂಲಕ ಕ್ಲಿಕ್‌ ಮಾಡಿ ಕೆಳಗಿನ ಕಡೆಗೆ ಸ್ವೈಪ್‌ ಮಾಡಬೇಕಾಗುತ್ತದೆ. ನಂತರ ನಿಮ್ಮ ಮುಂದೆ ಸಾಫ್ಟ್‌ವೇರ್‌ಗಳು ಹಾಗೂ ಫ್ರೋಗ್ರಾಮ್‌ಗಳು ತರೆದುಕೊಳ್ಳುತ್ತವೆ.
Please Wait while comments are loading...
Opinion Poll

Social Counting