ಟೆಲಿಗ್ರಾಮ್‌ನಲ್ಲಿ Last Seen ಹೈಡ್ ಮಾಡುವುದು ಹೇಗೆ ಗೊತ್ತಾ?

|

ಫೇಸ್‌ಬುಕ್ ಒಡೆತನದ ಇನ್‌ಸ್ಟಂಟ್ ಮೆಸೆಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್‌ ಈಗಾಗಲೇ ಬಳಕೆದಾರರಿಗೆ ಉಪಯುಕ್ತ ಫೀಚರ್ಸ್‌ ನೀಡಿ ಲೀಡಿಂಗ್‌ನಲ್ಲಿದೆ. ವಾಟ್ಸಾಪ್‌ ಆಪ್‌ಗೆ ನೇರ ಪೈಪೋಟಿ ನೀಡುವ ಹಲವು ಸೋಶೀಯಲ್ ಮೀಡಿಯಾ ಆಪ್‌ಗಳು ಇದ್ದು, ಅವುಗಳಲ್ಲಿ ಇತ್ತೀಚಿಗೆ ಟೆಲಿಗ್ರಾಮ್ ಆಪ್ ಹೆಚ್ಚು ಅಬ್ಬರದಲ್ಲಿದೆ. ವಾಟ್ಸಾಪ್‌ಗೆ ಪರ್ಯಾಯ ಎಂದೇ ಗುರುತಿಸಿಕೊಂಡಿರುವ ಈ ಟೆಲಿಗ್ರಾಮ್ ಆಪ್‌ ಬಳಕೆದಾರರ ಪ್ರೈವೆಸಿಗೆ ಹಲವು ಅನುಕೂಲಕರ ಫೀಚರ್ಸ್‌ಗಳ ಆಯ್ಕೆಯನ್ನು ಒದಗಿಸಿದೆ.

ಟೆಲಿಗ್ರಾಮ್

ಹೌದು, ಟೆಲಿಗ್ರಾಮ್ ತನ್ನ ಬಳಕೆದಾರರಿಗೆ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಕೆಲವು ಅಗತ್ಯ ಆಯ್ಕೆಗಳನ್ನು ನೀಡಿದೆ. ವಾಟ್ಸಾಪ್‌ನಂತೆ ಲಾಸ್ಟ್‌ ಸೀನ್ ಹೈಡ್ ಮಾಡುವ ಅವಕಾಶವನ್ನು ಸಹ ಟೆಲಿಗ್ರಾಮ್ ಹೊಂದಿದೆ. ಅದರೊಂದಿಗೆ ಬಳಕೆದಾರರ ಕಾಂಟ್ಯಾಕ್ಟ್‌ ಮತ್ತು ಪ್ರೊಫೈಲ್ ಫೋಟೊವನ್ನು ಹೈಡ್‌ ಮಾಡಲು ಅನುಮತಿಸುತ್ತದೆ. ಬಳಕೆದಾರರು ತಮ್ಮ ಬಳಕೆದಾರ ಹೆಸರಿನಿಂದ ಮಾತ್ರ ಹೋಗಲು ತಮ್ಮ ಹೆಸರನ್ನು ಮರೆ ಮಾಡಬಹುದು. ಹಾಗೆಯೇ ಆನ್‌ಲೈನ್ ಮಾಹಿತಿಯನ್ನು ಮರೆ ಮಾಡಲು ಈ ಅಪ್ಲಿಕೇಶನ್ ಅವಕಾಶ ನೀಡುತ್ತದೆ. ಹಾಗಾದರೇ ಲಾಸ್ಟ್‌ ಸೀನ್ ಹೈಡ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಲಾಸ್ಟ್‌ ಸೀನ್ ಹೈಡ್

ಲಾಸ್ಟ್‌ ಸೀನ್ ಹೈಡ್

ಟೆಲಿಗ್ರಾಂ ಬಳಕೆದಾರರು ತಮ್ಮ ಕಾಂಟ್ಯಾಕ್ಟ್‌ನಲ್ಲಿರುವವರಿಗೆ ತಮ್ಮ ಲಾಸ್ಟ್‌ ಸೀನ್ ಹೈಡ್ ಮಾಡಲು ಅವಕಾಶ ನೀಡಲಾಗಿದೆ. ಆದಾಗ್ಯೂ, ಬಳಕೆದಾರರು ಲಾಸ್ಟ್‌ ಸೀನ್ ಹೈಡ್ ಮಾಡುವುದರಿಂದ ಅವರಿಗೂ ಇತರ ಬಳಕೆದಾರರ ಲಾಸ್ಟ್ ಸೀನ್ ಕಾಣಿಸುವುದಿಲ್ಲ ಎಂಬುದನ್ನು ಗಮನಿಸಬೇಕಿದೆ.

ಟೆಲಿಗ್ರಾಮ್‌ನಲ್ಲಿ ಲಾಸ್ಟ್‌ ಸೀನ್ ಹೈಡ್ ಮಾಡಲು ಈ ಕ್ರಮ ಅನುಸರಿಸಿ:

ಟೆಲಿಗ್ರಾಮ್‌ನಲ್ಲಿ ಲಾಸ್ಟ್‌ ಸೀನ್ ಹೈಡ್ ಮಾಡಲು ಈ ಕ್ರಮ ಅನುಸರಿಸಿ:

* ಟೆಲಿಗ್ರಾಂ ಆಪ್ ತೆರೆಯಿರಿ.
* ನಂತರ ಮೇಲಿನ ಎಡ ಭಾಗದಲ್ಲಿರುವ ಮೂರು ಸಾಲುಗಳ ಮೇಲೆ ಒತ್ತಿರಿ.
* ಬಳಿಕ ಗೌಪ್ಯತೆ ಮತ್ತು ಭದ್ರತೆಯನ್ನು ಆಯ್ಕೆ ಮಾಡಿ.
* ಆ ನಂತರ ಲಾಸ್ಟ್‌ ಸೀನ್ ಮತ್ತು ಆನ್‌ಲೈನ್ ಆಯ್ಕೆಮಾಡಿ.
* ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ Nobody ಆಯ್ಕೆ ಸೆಲೆಕ್ಟ್ ಮಾಡಿ.

ಪ್ರೈವಸಿ ಸೆಟ್ಟಿಂಗ್‌ಗಳನ್ನು ಬದಲಿಸಲು ಈ ಕ್ರಮಗಳನ್ನು ಫಾಲೋ ಮಾಡಿ:

ಪ್ರೈವಸಿ ಸೆಟ್ಟಿಂಗ್‌ಗಳನ್ನು ಬದಲಿಸಲು ಈ ಕ್ರಮಗಳನ್ನು ಫಾಲೋ ಮಾಡಿ:

ನಿಮ್ಮ ಕಾಂಟ್ಯಾಕ್ಟ್‌ ಮತ್ತು ಪ್ರೊಫೈಲ್ ಫೋಟೊವನ್ನು ಹೈಡ್‌ ಮಾಡಲು, ಮೊದಲು ಟೆಲಿಗ್ರಾಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಗೌಪ್ಯತೆ ಮತ್ತು ಸುರಕ್ಷತೆಗೆ(privacy and security) ಹೋಗಿ. ಫೋನ್ ಸಂಖ್ಯೆ ಆಯ್ಕೆಯನ್ನು ಆರಿಸಿ, ನಂತರ my contacts ಆಯ್ಕೆಯನ್ನು ಆರಿಸಿ ಅಥವಾ ನೀವು ಅದನ್ನು ಸಂಪೂರ್ಣವಾಗಿ ಮರೆ ಮಾಡಲು ಬಯಸಿದರೆ 'ಯಾರೂ ಇಲ್ಲ'. ಬಳಕೆದಾರ ಹೆಸರನ್ನು ಹೊಂದಿಸಲು, ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಬಳಕೆದಾರ ಹೆಸರು ಆಯ್ಕೆಯನ್ನು ಆರಿಸಿ. ನಿಮ್ಮ ಆಯ್ಕೆಯ ಬಳಕೆದಾರ ಹೆಸರನ್ನು ಟೈಪ್ ಮಾಡಿ. ತದನಂತರ ಖಚಿತಪಡಿಸಲು ಟಿಕ್ ಗುರುತು ಆಯ್ಕೆಮಾಡಿ.

ಪ್ರೊಫೈಲ್ ಫೋಟೊವನ್ನು ಹೈಡ್‌ ಹೀಗೆ ಮಾಡಿ:

ಪ್ರೊಫೈಲ್ ಫೋಟೊವನ್ನು ಹೈಡ್‌ ಹೀಗೆ ಮಾಡಿ:

ನಿಮ್ಮ ಪ್ರೊಫೈಲ್ ಫೋಟೊವನ್ನು ಹೈಡ್‌ ಮಾಡಲು, ಗೌಪ್ಯತೆ ಮತ್ತು ಸುರಕ್ಷತೆಗೆ ಹೋಗಿ ಮತ್ತು 'ಪ್ರೊಫೈಲ್ ಫೋಟೋಗಳು' ಆಯ್ಕೆಮಾಡಿ ನಂತರ 'ಮೈ ಕಾಂಟ್ಯಾಕ್ಟ್‌' ಆಯ್ಕೆ ಮೇಲೆ ಕ್ಲಿಕ್ ಮಾಡಿ ಮತ್ತು 'ಅಪ್ಲೈ' ಆಯ್ಕೆ ಕ್ಲಿಕ್ ಮಾಡುವ ಮೂಲಕ ಪ್ರಕ್ರಿಯೆಯನ್ನು ಮುಗಿಸಿ.

Best Mobiles in India

English summary
How To Hide Last Seen On Telegram Application: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X