Subscribe to Gizbot

ಫೋಟೋ ಗ್ಯಾಲರಿಯಲ್ಲಿ ವಾಟ್ಸಾಪ್ ಫೋಟೋಗಳು ಬರದಂತೆ ಮಾಡುವುದು ಹೇಗೆ?

Written By:

ವಾಟ್ಸಾಪ್ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಕೆಲವೇ ಸಮಯಗಳಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಸಂದೇಶ ಪ್ಲಾಟ್‌ಫಾರ್ಮ್ ಆಗಿದೆ. ಸಂದೇಶ ರವಾನಿಸಲು, ವೀಡಿಯೊ ಕಳುಹಿಸಲು, ಗೆಳೆಯರೊಂದಿಗೆ ಚಾಟಿಂಗ್‌ಗಾಗಿ, ಸುದ್ದಿಮೂಲವಾಗಿ ಹೀಗೆ ವಾಟ್ಸಾಪ್ ಹತ್ತು ಹಲವು ಕಾರ್ಯಗಳನ್ನು ಬಳಕೆದಾರರಿಗೆ ದೊರಕುವಂತೆ ಮಾಡುತ್ತಿದೆ.

ಆದರೆ ವಾಟ್ಸಾಪ್‌ನ ಕೆಲವೊಂದು ಗುಟ್ಟುಗಳನ್ನು ಅರಿತುಕೊಂಡು ನೀವು ಇದನ್ನು ಬಳಸುತ್ತೀರಿ ಎಂದಾದಲ್ಲಿ ಇದು ಇನ್ನಷ್ಟು ಪ್ರಯೋಜನಕಾರಿಯಾಗುವುದು ನಿಶ್ಚಿತ. ನಿಮ್ಮ ಸ್ನೇಹಿತರು ವಾಟ್ಸಾಪ್‌ನಲ್ಲಿ ಕಳುಹಿಸುವ ಫೋಟೋಗಳು ನಿಮಗೆ ಮಾತ್ರ ನೋಡುವಂಥದ್ದಾಗಿರುತ್ತದೆ ಗೌಪ್ಯವಾಗಿರುತ್ತದೆ. ಈ ಫೋಟೋಗಳು ಡೌನ್‌ಲೋಡ್ ಆಗುವುದು ಗ್ಯಾಲರಿಯಲ್ಲಿ. ಹಾಗಿದ್ದರೆ ಈ ಗ್ಯಾಲರಿಯಲ್ಲಿ ಸೇವ್ ಆಗುವ ಫೋಟೋಗಳನ್ನು ಮರೆಮಾಡುವುದು ಹೇಗೆ ಎಂಬುದನ್ನೇ ಇಂದು ನಾವು ತಿಳಿಸಿಕೊಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಎಸ್ ಫೈಲ್ ಎಕ್ಸ್‌ಪ್ಲೋರರ್

#1

ನೀವು ಇದಕ್ಕಾಗಿ ಫೈಲ್ ಮ್ಯಾನೇಜರ್ ಅಪ್ಲಿಕೇಶನ್ ಅನ್ನು ತೆರೆಯಬೇಕು. ಇಎಸ್ ಫೈಲ್ ಎಕ್ಸ್‌ಪ್ಲೋರರ್ ಅನ್ನು ಬಳಸಿ ಫೋಟೋ ಹೈಡ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ವಾಟ್ಸಾಪ್ ಫೋಲ್ಡರ್‌

#2

ವಾಟ್ಸಾಪ್ ಫೋಲ್ಡರ್‌ಗೆ ನ್ಯಾವಿಗೇಟ್ ಮಾಡಿ. ಎಸ್‌ಡಿ ಕಾರ್ಡ್‌ನಲ್ಲಿ ಈ ಫೋಟೋಗಳು ಇರುತ್ತವೆ, ವಾಟ್ಸಾಪ್ ಮತ್ತು ಮೀಡಿಯಾ ಕ್ಲಿಕ್ ಮಾಡಿ.

ವಾಟ್ಸಾಪ್ ಇಮೇಜಸ್‌

#3

ವಾಟ್ಸಾಪ್ ಇಮೇಜಸ್‌ಗೆ ಹೋಗಿ ಮತ್ತು ಹ್ಯಾಮ್ ಬರ್ಗರ್ (3 ಡಾಟ್ಸ್) ಕ್ಲಿಕ್ ಮಾಡಿ ಇದು ಬಲ ಮೇಲ್ಭಾಗದಲ್ಲಿರುತ್ತದೆ. ಇದು ಹೊಸ ಬಾಕ್ಸ್ ಅನ್ನು ಪ್ರದರ್ಶಿಸುತ್ತದೆ. ಫೈಲ್ ಕ್ಲಿಕ್ ಮಾಡಿ.

.ನೊಮೀಡಿಯಾ

#4

ಫೈಲ್ .ನೊಮೀಡಿಯಾ ರಚಿಸಿ ಓಕೆ ಒತ್ತಿರಿ. .ನೋಮೀಡಿಯಾ ರಚನೆಯಾಗಿದೆ ಎಂಬ ಸಂದೇಶವನ್ನು ನೀವು ಪಡೆದುಕೊಳ್ಳುತ್ತೀರಿ.

ಗ್ಯಾಲರಿ ಅಪ್ಲಿಕೇಶನ್‌

#5

ಗ್ಯಾಲರಿ ಅಪ್ಲಿಕೇಶನ್‌ಗೆ ಹಿಂತಿರುಗಿ ವಾಟ್ಸಾಪ್ ಫೋಲ್ಟರ್ ವ್ಯಾನಿಶ್ ಆಗಿರುವುದನ್ನು ನಿಮಗಿಲ್ಲಿ ಗಮನಿಸಬಹುದಾಗಿದೆ. ಇದು ಜಾಸ್ತಿ ತೊಂದರೆ ಮಾಡುತ್ತಿದೆ ಎಂದಾದಲ್ಲಿ .ನೊಮೀಡಿಯಾ ಫೈಲ್ ಅಳಿಸಿ.

ಶೋ ಹಿಡನ್ ಫೈಲ್ಸ್‌

#6

ನಿಮ್ಮ ಫೈಲ್ ಮ್ಯಾನೇಜರ್‌ನಲ್ಲಿ ಇದು ಮರೆಯಾಗಿರುತ್ತದೆ. ಎಡ ಮೇಲ್ಭಾಗದಲ್ಲಿ ಸಣ್ಣ ನೀಲಿ ಬಣ್ಣದ ಐಕಾನ್ ಅನ್ನು ಸ್ಪರ್ಶಿಸಿ ಶೋ ಹಿಡನ್ ಫೈಲ್ಸ್‌ಗಾಗಿ ಲಭ್ಯವಾಗುವವರೆಗೆ ಸ್ಕ್ರಾಲ್ ಡೌನ್ ಮಾಡಿ. ಈ ಆಯ್ಕೆಯನ್ನು ಆನ್ ಮಾಡಿ.

ವಾಟ್ಸಾಪ್ ಇಮೇಜಸ್ ಫೋಲ್ಡರ್‌

#7

ಇದೀಗ, ನಿಮ್ಮ ವಾಟ್ಸಾಪ್ ಇಮೇಜಸ್ ಫೋಲ್ಡರ್‌ಗೆ ಹಿಂತಿರುಗಿ, ನಿಮ್ಮ ಹಿಡನ್ ಫೈಲ್ ಅನ್ನು ಕಾಣಬಹುದು. .ನೊಮೀಡಿಯಾ ಫೈಲ್ ಮೇಲೆ ದೀರ್ಘವಾಗಿ ಒತ್ತಿರಿ ಮತ್ತು ಅದನ್ನು ಅಳಿಸಿ. ನಿಮ್ಮ ವಾಟ್ಸಾಪ್ ಚಿತ್ರಗಳು ನಿಮ್ಮ ಗ್ಯಾಲರಿ ಅಪ್ಲಿಕೇಶನ್‌ನಲ್ಲಿ ಕಾಣಿಸಿಕೊಳ್ಳುತ್ತವೆ (ಇದು ಕಾಣಿಸಿಕೊಂಡಿಲ್ಲ ಎಂದಾದಲ್ಲಿ, ಕ್ಯಾಶ್ ಕ್ಲಿಯರ್ ಮಾಡಿ ಹಾಗೂ ಅಗತ್ಯವಿದ್ದಲ್ಲಿ ಫೋನ್ ರೀಬೂಡ್ ಮಾಡಿ)

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಕಿರಿ ವಯಸ್ಸಿನಲ್ಲೇ ಅಂದುಕೊಂಡಿದ್ದನ್ನು ಸಾಧಿಸಿದ 14 ಭಾರತೀಯರು
ಚಾರ್ಜರ್‌ ಇಲ್ಲದೇ ಫೋನ್‌ ಚಾರ್ಜ್‌ ಮಾಡುವ 9 ಸರಳ ವಿಧಾನಗಳು
ನಿಮ್ಮ ಫೋನ್ ಸರಿಯಾಗಿ ಚಾರ್ಜ್ ಆಗುತ್ತಿಲ್ಲವೇ? ಇಲ್ಲಿದೆ ಪರಿಹಾರ
ಮಾರ್ಶ್ ಮಲ್ಲೊಗೆ ಅಪ್‌ಡೇಟ್ ಆಗುವ ಮುನ್ನ ತಿಳಿದುಕೊಳ್ಳಬೇಕಾದ ಅಂಶಗಳು

ಗಿಜ್‌ಬಾಟ್ ಫೇಸ್‌ಬುಕ್ ಪುಟ

ಫೇಸ್‌ಬುಕ್ ಪುಟ

ಇನ್ನಷ್ಟು ಸುದ್ದಿಗಾಗಿ ನಮ್ಮ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡುತ್ತಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here we'll show you how to quickly and easily hide WhatsApp pictures from your gallery app.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot