ವಾಟ್ಸಾಪ್‌ನಲ್ಲಿ ಫೇಕ್‌ ನಂಬರ್ ಪತ್ತೆ ಮಾಡುವುದು ತುಂಬಾ ಸುಲಭ!..ಹೀಗೆ ಮಾಡಿ!

|

ಮೆಟಾ ಒಡೆತನದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಅಪ್ಲಿಕೇಶನ್ ವಾಟ್ಸಾಪ್‌ (WhatsApp) ಈಗಾಗಲೇ ಅಧಿಕ ಸಕ್ರಿಯ ಬಳಕೆದಾರರನ್ನು ಒಳಗೊಂಡು ಮುನ್ನಲೆಯಲ್ಲಿ ಕಾಣಿಸಿಕೊಂಡಿದೆ. ವಾಟ್ಸಾಪ್‌ ತನ್ನ ಬಳಕೆದಾರರಿಗೆ ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿ ಹೆಚ್ಚಿನ ಜನಪ್ರಿಯತೆ ಪಡೆದಿದೆ. ಜೊತೆಗೆ ತನ್ನ ನೂತನ ಅಪ್‌ಡೇಟ್‌ನಲ್ಲಿ ಒಂದಿಲ್ಲೊಂದು ಆಕರ್ಷಕ ಫೀಚರ್‌ ಸೇರ್ಪಡೆ ಮಾಡುತ್ತ ಮುನ್ನಡೆದಿದೆ. ಹಾಗೆಯೇ ಬಳಕೆದಾರರ ಸುರಕ್ಷತೆಗೂ ಹೆಚ್ಚಿನ ಮಹತ್ವ ನೀಡಿದ್ದು, ಫೇಕ್ ನಂಬರ್ ಪತ್ತೆ ಮಾಡಬಹುದಾಗಿದೆ.

WhatsApp

ಹೌದು, ವಾಟ್ಸಾಪ್‌ನಲ್ಲಿ (WhatsApp) ಬಳಕೆದಾರರ ಸಂಖ್ಯೆ ಏರುತ್ತಿರುವ ಜೊತೆಗೆ ಜೊತೆಗೆನೇ ವಾಟ್ಸಾಪ್‌ ವಂಚನೆ ಕೂಡ ವೇಗವಾಗಿ ಹೆಚ್ಚುತ್ತಿದೆ. ಬಳಕೆದಾರರಿಗೆ ಕೆಲವೊಮ್ಮೆ ಅಪರಿಚಿತ ನಂಬರ್‌ಗಳಿಂದ ಮೆಸೆಜ್‌ ಬರುತ್ತವೆ. ಎಷ್ಟೋ ಸಂದರ್ಭದಲ್ಲಿ ಆ ನಂಬರ್‌ಗಳು ಫೇಕ್ (Fake) ಆಗಿರುವ ಸಾಧ್ಯತೆಗಳಿರುತ್ತವೆ. ಅಂತಹ ನಂಬರ್‌ಗಳಿಂದ ಬರುವ ಮೆಸೆಜ್‌ಗಳಿಂದ ಬಳಕೆದಾರರು ಎಚ್ಚರವಹಿಸುವುದು ಸೂಕ್ತ.

ವಾಟ್ಸಾಪ್‌ಗೆ ಬರುವ ಅಪರಿಚಿತ ಸಂಖ್ಯೆ

ಇನ್ನು ಬಳಕೆದಾರರು ತಮ್ಮ ವಾಟ್ಸಾಪ್‌ಗೆ ಬರುವ ಅಪರಿಚಿತ ಸಂಖ್ಯೆ/ ನಂಬರ್‌, ನಕಲಿ ಅಥವಾ ಅಸಲಿ ಆಗಿದೆಯೇ ಎಂದು ಪತ್ತೆ ಮಾಡುವ ಮೂಲಕ ವಂಚನೆಗಳನ್ನು ತಪ್ಪಿಸಬಹುದಾಗಿದೆ. ಹಾಗಾದರೆ ವಾಟ್ಸಾಪ್‌ ಬರುವ ಅಪರಿಚಿತ ಸಂಖ್ಯೆ ಫೇಕ್ ಆಗಿದೆಯಾ ಅಥವಾ ಇಲ್ಲವೆ ಎಂಬುದನ್ನು ಪತ್ತೆ ಮಾಡುವುದು ಹೇಗೆ ಮತ್ತು ಇತರೆ ಕೆಲವು ವಾಟ್ಸಾಪ್‌ ಸಂಗತಿಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಂಡ್ರಾಯ್ಡ್‌ ಬಳಕೆದಾರರು ಈ ಕ್ರಮ ಅನುಸರಿಸಿ:

ಆಂಡ್ರಾಯ್ಡ್‌ ಬಳಕೆದಾರರು ಈ ಕ್ರಮ ಅನುಸರಿಸಿ:

ಹಂತ 1: ವಾಟ್ಸಾಪ್‌ನಲ್ಲಿ ಅಪರಿಚಿತ ಮೆಸೆಜ್‌ ಸ್ವೀಕರಿಸಿದಾಗ, ಪ್ರೊಫೈಲ್ ಅನ್ನು ಟ್ಯಾಪ್ ಮಾಡಿ ಮತ್ತು ನೋಂದಾಯಿತ ಸಂಖ್ಯೆಯನ್ನು ಪರಿಶೀಲಿಸಿ.
ಹಂತ 2: ಸಂಖ್ಯೆಯು +1 ನೊಂದಿಗೆ ಪ್ರಾರಂಭವಾದರೆ, ಆ ನಂಬರ್ ನಕಲಿಯಾಗಿರಬಹುದು.

ಐಫೋನ್ ಬಳಕೆದಾರರು ಈ ಕ್ರಮ ಅನುಸರಿಸಿ:

ಐಫೋನ್ ಬಳಕೆದಾರರು ಈ ಕ್ರಮ ಅನುಸರಿಸಿ:

ಹಂತ 1: ನಿಮ್ಮ ವಾಟ್ಸಾಪ್‌ ನಲ್ಲಿ ಮೆಸೆಜ್ ಕಳುಹಿಸಿದವರ ವಾಟ್ಸಾಪ್‌ ಚಾಟ್ ಅನ್ನು ತೆರೆಯಿರಿ.
ಹಂತ 2: ಮೆಸೆಜ್ ಕಳುಹಿಸಿದವರ ಹೆಸರಿನ ಮೇಲೆ ಕ್ಲಿಕ್ ಮಾಡಿ.
ಹಂತ 3: ಬಳಿಕ ಮೆಸೆಜ್ ಕಳುಹಿಸಿದವರ ಫೋನ್ ಸಂಖ್ಯೆಯನ್ನು ತಿಳಿಯಲು ಕೆಳಗೆ ನೋಡಿ.
ಹಂತ 4: ಅಲ್ಲಿ ಕಾಣಿಸುವ ನಂಬರ್‌ನ ಆರಂಭಿಕ ಸಂಖ್ಯೆ +1 ನೊಂದಿಗೆ ಪ್ರಾರಂಭವಾದರೆ, ಅದು ನಕಲಿ ನಂಬರ್‌ ಆಗಿರಲಿದೆ.

ಒಂದೇ ವೇಳೆಗೆ ಹೆಚ್ಚು ಜನರಿಗೆ ವಾಟ್ಸಾಪ್‌ ಮೆಸೆಜ್‌ ಮಾಡುವುದು ಹೇಗೆ?

ಒಂದೇ ವೇಳೆಗೆ ಹೆಚ್ಚು ಜನರಿಗೆ ವಾಟ್ಸಾಪ್‌ ಮೆಸೆಜ್‌ ಮಾಡುವುದು ಹೇಗೆ?

ಹೆಚ್ಚು ಜನರಿಗೆ/ ಸದಸ್ಯರಿಗೆ ವಾಟ್ಸಾಪ್‌ (WhatsApp) ಮೆಸೆಜ್ ಸೆಂಡ್ ಮಾಡಲು ವಾಟ್ಸಾಪ್‌ನಲ್ಲಿ ಲಭ್ಯವಿರುವ ಆಯ್ಕೆಯು Broadcast ಆಗಿದೆ. ಒಂದೇ ಮೆಸೆಜ್‌ ಅನ್ನು ಹೆಚ್ಚು ಜನರಿಗೆ ಶೇರ್ ಮಾಡಲು ನೆರವಾಗಲಿದ್ದು, ಬಳಕೆದಾರರ ಸಮಯ ಉಳಿಸುತ್ತದೆ.

ಆಂಡ್ರಾಯ್ಡ್‌ ಬಳಕೆದಾರರು ಈ ಕ್ರಮ ಅನುಸರಿಸಿ:

ಆಂಡ್ರಾಯ್ಡ್‌ ಬಳಕೆದಾರರು ಈ ಕ್ರಮ ಅನುಸರಿಸಿ:

ಹಂತ 1: ವಾಟ್ಸಾಪ್ ತೆರೆಯಿರಿ.
ಹಂತ 2: ಚಾಟ್ಸ್ ಮೇಲೆ ಕ್ಲಿಕ್ ಮಾಡಿ.
ಹಂತ 3: 'ಬ್ರಾಡ್‌ಕಾಸ್ಟ್‌ ಮೆಸೆಜ್‌' ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 4: ಮೆಸೆಜ್‌ ಅನ್ನು ಕಳುಹಿಸಲು, ಹಲವಾರು ಕಾಂಟ್ಯಾಕ್ಟ್‌ಗಳನ್ನು ಆಯ್ಕೆ ಮಾಡಿ.
ಹಂತ 5: Done ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 6: ಮೆಸೆಜ್‌ ಅನ್ನು ಟೈಪ್ ಮಾಡಿ ಮತ್ತು ಅಗತ್ಯ ಇದ್ದರೆ ಮೀಡಿಯಾ (ಫೋಟೊ/ವಿಡಿಯೋ) ಲಗತ್ತಿಸಿ.
ಹಂತ 7: ಕೊನೆಯದಾಗಿ, ಕಳುಹಿಸು (Send) ಬಟನ್ ಒತ್ತಿರಿ.

ಐಫೋನ್ ಬಳಕೆದಾರರು ಈ ಕ್ರಮ ಫಾಲೋ ಮಾಡಿರಿ:

ಐಫೋನ್ ಬಳಕೆದಾರರು ಈ ಕ್ರಮ ಫಾಲೋ ಮಾಡಿರಿ:

ಹಂತ 1: ವಾಟ್ಸಾಪ್ ತೆರೆಯಿರಿ ಮತ್ತು ಚಾಟ್‌ಗಳ ಮೇಲೆ ಕ್ಲಿಕ್ ಮಾಡಿ.
ಹಂತ 2: ನಂತರ ಹೊಸ ಚಾಟ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ ಹೊಸ ಗುಂಪಿನ ಮೇಲೆ ಕ್ಲಿಕ್ ಮಾಡಿ ಮತ್ತು ಮೆಸೆಜ್‌ ಅನ್ನು ಕಳುಹಿಸಲು ಹಲವಾರು ಕಾಂಟ್ಯಾಕ್ಟ್‌ಗಳನ್ನು ಸೇರಿಸಿ.
ಹಂತ 4: ನೆಕ್ಸ್ಟ್‌(Next) ಆಯ್ಕೆ ಕ್ಲಿಕ್ ಮಾಡಿ.
ಹಂತ 5: ಗುಂಪಿನ ಹೆಸರು ಮತ್ತು ಫೋಟೊವನ್ನು ನಮೂದಿಸಿ, ನಂತರ ರಚಿಸಿ ಟ್ಯಾಪ್ ಮಾಡಿ.
ಹಂತ 6: ಈಗ ನಿಮ್ಮ ವಾಟ್ಸಾಪ್‌ನಲ್ಲಿ ಗುಂಪನ್ನು ತೆರೆಯಿರಿ ಮತ್ತು ಗುಂಪಿಗೆ ಮೆಸೆಜ್‌ ಕಳುಹಿಸಿ.

Best Mobiles in India

English summary
How to Identify Fake WhatsApp Number: Follow These Easy steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X