ಶೇ.100 ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್ ವೇಗಗೊಳಿಸುವುದು ಹೇಗೆ?

By Suneel
|

ಭಾರತದಲ್ಲಿ ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್ ಅತಿ ಹೆಚ್ಚು ಜನರು ಬಳಸುವ ಭಾರತೀಯ ಇಂಟರ್ನೆಟ್ ಸೇವೆಯಾಗಿದೆ.

ಬಿಎಸ್‌ಎನ್‌ಎಲ್‌ ಟೆಲಿಕಾಂ ಕಂಪನಿ ಬಜೆಟ್‌ ಬೆಲೆಯಲ್ಲಿ ತನ್ನ ಗ್ರಾಹಕರಿಗೆ ಉತ್ತಮ ಇಂಟರ್ನೆಟ್ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಜಿಯೋಗೆ ಸ್ಪರ್ಧಿಯಾಗಿ ಪ್ರಸ್ತುತದಲ್ಲಿ ಇನ್ನೂ ಹೆಚ್ಚು ಭಯಾನಕವಾಗೆ ಉತ್ತಮ ಇಂಟರ್ನೆಟ್ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಆದರೆ ಗ್ರಾಹಕರಿಗೆ ಉಂಟಾಗಿರುವ ಸಮಸ್ಯೆ ಎಂದರೆ ಉತ್ತಮ ಪ್ಯಾಕೇಜ್‌ಗಳು ಇದ್ದರೂ ಸಹ ಮಂದಗತಿಯ ಇಂಟರ್ನೆಟ್ ಸಂಪರ್ಕ ಪಡೆಯುತ್ತಿರುವುದು.

ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

ಹಲವು ವೇಳೆ ಉತ್ತಮ ಸೇವೆಯ ಇಂಟರ್ನೆಟ್‌ ಪ್ಯಾಕೇಜ್‌ ಹೊಂದಿದ್ದರೂ ಸಹ ಅರ್ಧದಷ್ಟು ಇಂಟರ್ನೆಟ್ ವೇಗ ಪಡೆಯದಿರುವುದು ಗ್ರಾಹಕರಿಗೆ ಎದುರಾಗಿರುವ ಸಮಸ್ಯೆ ಆಗಿದೆ. ಆದ್ದರಿಂದ ಇಂದಿನ ಲೇಖನದಲ್ಲಿ ಶೇಕಡ 100 ಇಂಟರ್ನೆಟ್‌ ವೇಗವನ್ನು ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ನಲ್ಲಿ ಹೆಚ್ಚಿಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಕೆಳಗಿನ ಸ್ಲೈಡರ್‌ನಲ್ಲಿನ ಮಾಹಿತಿ ಓದಿರಿ.

ಸಾರ್ವಜನಿಕ DNS ಸರ್ವರ್‌ ಬಳಸಿ

ಸಾರ್ವಜನಿಕ DNS ಸರ್ವರ್‌ ಬಳಸಿ

ಬಿಎಸ್‌ಎನ್‌ಎಲ್‌ ಡೀಪಾಲ್ಟ್‌ DNS ಸರ್ವರ್‌, ಗೂಗಲ್‌ DNS ಅಥವಾ ಓಪನ್‌ DNS ನೊಂದಿಗೆ ವ್ಯವಸ್ಥೆಹೊಂದಿ ಬರುವುದಿಲ್ಲ. ಆದ್ದರಿಂದ ದೀರ್ಘವಾಗಿ ಇಂಟರ್ನೆಟ್ ವೇಗ ನಿಧಾನವಾಗುತ್ತದೆ. ಆದ್ದರಿಂದ ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ ಬಳಕೆದಾರರು ಗೂಗಲ್‌ DNS ಅಥವಾ ಓಪನ್‌DNS ಸರ್ವರ್‌ ಅನ್ನು ಸೆಟ್‌ ಮಾಡಿ.

DNS ಸರ್ವರ್‌ ಸೆಟ್‌ ಮಾಡುವುದು ಹೇಗೆ?

DNS ಸರ್ವರ್‌ ಸೆಟ್‌ ಮಾಡುವುದು ಹೇಗೆ?

DNS ಸರ್ವರ್‌ ಬದಲಿಸಲು ನಾವು ತಿಳಿಸುವ ಹಂತಗಳನ್ನು ಪಾಲಿಸಬೇಕು.
Control Panel>>Network and Sharing>>Change adapter settings>> Select your LAN Adapter>> Right Click it>> Properties>> IPV4 (ಇಂಟರ್ನೆಟ್ ಪ್ರೋಟೋಕಾಲ್‌ ವರ್ಸನ್) ಸೆಲೆಕ್ಟ್‌ ಮಾಡಿ>>Properties

Properties ಗೆ ಹೋಗಿ DNS ಸೆಟ್ಟಿಂಗ್ಸ್ ಅನ್ನು ನೋಡಬಹುದು. ಕೆಳಗಿನ ರೀತಿಯಲ್ಲಿ DNS ಸರ್ವರ್‌ ಸೆಟ್ಟಿಂಗ್ಸ್ ಅನ್ನು ಬದಲಿಸಿ.
ಗೂಗಲ್‌ ಪಬ್ಲಿಕ್‌ DNS
Primary DNS server: 8.8.8.8
Preferred DNS server: 8.8.4.4

ಓಪನ್‌DNS
Primary DNS server: 208.67.222.222
Preferred DNS server: 208.67.220.220

ADSL ಉತ್ತಮ ಮೋಡೆಮ್‌ ಬಳಸಿ

ADSL ಉತ್ತಮ ಮೋಡೆಮ್‌ ಬಳಸಿ

ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ನ ಇಂಟರ್ನೆಟ್‌ ವೇಗ ಹೆಚ್ಚಿಸಲು ನಂತರದ ಹಂತವೆಂದರೆ ಸದಾಕಾಲ ಉತ್ತಮವಾದ ADSL ಮೋಡೆಮ್‌ ಬಳಸುವುದು. ಇದು ಇತರೆ ಬ್ಯಾಂಡ್‌ವಿಡ್ತ್‌ಗಳಿಗಿಂತ ಹೆಚ್ಚಿನ ಆಫರ್‌ ನೀಡುತ್ತದೆ.

ಕಂಪ್ಯೂಟರ್‌ನಲ್ಲಿನ ವೈರಸ್ ರಿಮೂವ್ ಮಾಡಿ

ಕಂಪ್ಯೂಟರ್‌ನಲ್ಲಿನ ವೈರಸ್ ರಿಮೂವ್ ಮಾಡಿ

ಕಂಪ್ಯೂಟರ್‌ ಮಾಲ್‌ವೇರ್‌ ಅಥವಾ ವೈರಸ್‌ಗೆ ಒಳಗಾಗಿದ್ದಲ್ಲಿ ಇಂಟರ್ನೆಟ್ ವೇಗ ಕುಸಿಯಲು ಮುಖ್ಯ ಕಾರಣ. ಆದ್ದರಿಂದ ಸದಾಕಾಲ ವೈರಸ್‌ ಅನ್ನು ಮಾನಿಟರ್‌ ಮಾಡುವ ಆಂಟಿವೈರಸ್‌ ಸಾಫ್ಟ್‌ವೇರ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಿ.

ನಿಮ್ಮ ಫೋನ್‌ ಲೈನ್‌ ಅನ್ನು ಗಮನಿಸಿ

ನಿಮ್ಮ ಫೋನ್‌ ಲೈನ್‌ ಅನ್ನು ಗಮನಿಸಿ

ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ನಲ್ಲಿ ಕಡಿಮೆ ಇಂಟರ್ನೆಟ್ ವೇಗ ಪಡೆಯಲು ನಿಮ್ಮ ಫೋನ್ ಲೈನ್‌ ಅನ್ನು ಗಮನಿಸಿ. ನೀವು ಬಿಎಸ್‌ಎನ್‌ಎಲ್‌ ಸಿಮ್‌ ಬಳಸುತ್ತಿದ್ದಲ್ಲಿ ಕರೆ ಸಮಯದಲ್ಲಿ ನೆಟ್‌ವರ್ಕ್‌ ಸಮಸ್ಯೆ ಎದುರಿಸಿದಲ್ಲಿ ಅದು ಇಂಟರ್ನೆಟ್ ಕಡಿಮೆ ವೇಗಕ್ಕೆ ಕಾರಣ ಎಂದು ತಿಳಿಯಬಹುದು. ಅಂತಹ ಸಮಯದಲ್ಲಿ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.

Best Mobiles in India

Read more about:
English summary
How to Increase Your Slow BSNL Broadband Speed up to 100 percent. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X