Subscribe to Gizbot

ಫೋನ್‌ನಲ್ಲಿ ಇಂಸ್ಟಾಗ್ರಾಂ ಅಳವಡಿಸುವುದು ಹೇಗೆ?

Posted By: Super
ಫೋನ್‌ನಲ್ಲಿ ಇಂಸ್ಟಾಗ್ರಾಂ ಅಳವಡಿಸುವುದು ಹೇಗೆ?

ಇಂಸ್ಟಾಗ್ರಾಂ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಅಪ್ಲಿಕೇಷನ್ ಆಗಿದ್ದು ಇದರ ಸಹಾಯದಿಂದ ನಿಮ್ಮ ಮೊಬೈಲ್‌ಫೋನ್‌ನಲ್ಲಿ ತೆಗೆಯಲಾಗುವ ಫೋಟೋಗಳಿಗೆ ನಾನಾ ಬಗೆಯ ಎಫೆಕ್ಟ್ಸ್‌ ನೀಡಬಹುದಾಗಿದೆ. ಅಂದಹಾಗೆ ಇಂಸ್ಟಾಗ್ರಾಂ ಅಪ್ಲಿಕೇಷನ್‌ ಮೊಬೈಲ್‌ ಫೋನ್‌ಗೆ ಹೇಗೆ ಡೌನ್ಲೋಡ್‌ ಮಾಡಿಕೊಳ್ಳುವುದು ಎಂಬುದು ನಿಮಗೆ ತಿಳಿದಿದೆಯೆ? ಇಂಸ್ಟಾಗ್ರಾಂ ಅಪ್ಲಿಕೇಷನ್‌ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಡೌನ್ಲೋಡ್‌ ಮಾಡಿಕೊಳ್ಳುವ ಮೊದಲು ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಇಂಟರ್‌ನೆಟ್‌ ಕನೆಕ್ಷನ್‌ ಹಾಗೂ ಗೂಗಲ್‌ ಪ್ಲೇ ನಲ್ಲಿ ಖಾತೆ ಹೊಂದಿದ್ದೀರಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ, ಇದಲ್ಲದೆ ಇಂಸ್ಟಾಗ್ರಾಂ ಪಾವತಿ ಹಾಗೂ ಉಚಿತ ಮಾದರಿಗಳಲ್ಲಿ ಲಭ್ಯವಿದ್ದು ನಿಮ್ಮ ಅಗತ್ಯದ ಮೇರೆಗೆ ಆಯ್ಕೆ ಮಾಡಿಕೊಳ್ಳಿ.

ಆಪಲ್‌ ಐಒಎಸ್‌

ಮೊದಲಿಗೆ ನಿಮ್ಮ ಐಫೋನ್‌ನಲ್ಲಿ ಐಟ್ಯೂನ್ಸ್‌ಗೆ ತೆರಳಿ ಇಂಸ್ಟಾಗ್ರಾಂ ಅಪ್ಲಿಕೇಷನ್‌ ಟೌನ್ಲೋಡ್‌ ಮಾಡಿಕೊಳ್ಳಿ. ನಂತರ ಫೋನ್‌ನಲ್ಲಿ ನೀಡಲಾಗಿರುವ ಸ್ಲೈಟ್‌ ಬಾರ್‌ ತೆದುಕೊಳ್ಳಿ ಹಾಗೂ ಇಂಸ್ಟಾಗ್ರಾಂನ ಶಾರ್ಟ್‌ಕಟ್‌ ಟ್ಯಾಬ್‌ ಮೇಲೆ ಕ್ಲಿಕ್‌ ಮಾಡಿ. ಈಗ ನೀವು ನಿಮ್ಮ ಐಫೋನ್‌ನಲ್ಲಿ ಇಂಸ್ಟಾಗ್ರಾಂ ಬಳಸಬಹುದಾಗಿದೆ.

ಆಂಡ್ರಾಯ್ಡ್‌

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಇಂಸ್ಟಾಗ್ರಾಂ ಅಳವಡಿಸಲು ಮೊದಲಿಗೆ ಗೂಗಲ್‌ ಪ್ಲೇ ಮೂಲಕ ಅಪ್ಲಿಕೇಷನ್‌ ಡೌನ್ಲೋಡ್‌ ಮಾಡಿಕೊಳ್ಳಿ. ಅಪ್ಲಿಕೇಷನ್‌ ಡೌನ್ಲೋಡ್‌ ಮಾಡಿದ ಬಳಿಕ ನಿಮ್ಮ ಮೊಬೈಲ್‌ ಪರದೆಯ ಮೇಲೆ ಇಂಸ್ಟಾಗ್ರಾಂನ ಶಾರ್ಟ್‌ಕಟ್‌ ಐಕಾನ್‌ ತಂತಾನೆ ಬಂದು ಬಿಡುತ್ತದೆ. ನೀವು ಯಾವಾಗ ಬೇಕಾದರೂ ಸ್ಕ್ರೀನ್‌ ಮೇಲಿನ ಐಕಾನ್‌ ಕ್ಲಿಕ್‌ ಮಾಡುವ ಮೂಲಕ ಇಂಸ್ಟಾಗ್ರಾಂ ಬಳಸ ಬಹುದಾಗಿದೆ.

ಇಂಸ್ಟಾಗ್ರಾಂನಲ್ಲಿನ ಕೆಲ ಆಕರ್ಷಕ ಫೀಚರ್ಸ್‌ಗಳು ಹೀಗಿವೆ

  • ಶೇಕಡ 100 ಪ್ರತಿಷತ ಉಚಿತ ವಿನ್ಯಾಸ.

  • ಫೇಸ್‌ಬುಕ್‌, ಟ್ವಿಟ್ಟರ್‌, ಟಾಂಬ್ಲರ್‌ ಹಾಗೂ ಇತರೆ ಸಾಮಾಜಿಕ ತಾಣಗಳಲ್ಲಿ ಫೋಟೋ ಶೇರಿಂಗ್‌ ಸೌಲಭ್ಯ.

  • ಆಂಡ್ರಾಯ್ಡ್‌ 2.2 ಹಾಗೂ ಓಪನ್‌ ಜಿಐಎಲ್‌ಎಸ್‌ 2 ಬೆಂಬಲಿತ.

  • ಮುಂಬಲಿಯ ಹಾಗೂ ಹಿಂಬದಿಯ ಕ್ಯಾಮೆರಾಗಳಿಗೆ ಪೂರ್ಣ ಬೆಂಬಲ.

  • ಐಫೋನ್‌, ಐಪ್ಯಾಡ್‌ ಟಚ್ ಹಾಗೂ ಐಪ್ಯಾಡ್‌ ಬೆಂಬಲಿತ.

ಸ್ಕೈಪ್‌ ಮೂಲಕ ವೆಬ್‌ಕ್ಯಾಮ್‌ ಚಾಟ್‌ ಮಾಡುವುದು ಹೇಗೆ?

ಮೊಬೈಲ್‌ ನೆಟ್ವರ್ಕ್‌ನಲ್ಲಿ ಬ್ಯಾಲೆನ್ಸ್‌ ಟ್ರಾನ್ಸಫರ್‌ ಮಾಡುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot