ನಿಮ್ಮ ಆಧಾರ್ ಜೊತೆಗೆ ಮೊಬೈಲ್ ನಂಬರ್ ನ್ನು ಆನ್ ಲೈನ್ ನಲ್ಲಿ ಲಿಂಕ್ ಮಾಡಬಹುದೇ?

By Gizbot Bureau
|

ಆಧಾರ್ ಎಂಬುದು ಭಾರತ ಸರ್ಕಾರವು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ನೀಡಿರುವ ವಿಶೇಷವಾದ 12 ಸಂಖ್ಯೆಗಳಾಗಿರುತ್ತದೆ. ನಿಮ್ಮ ಗುರುತನ್ನು ಸಾಬೀತು ಪಡಿಸುವುದಕ್ಕೆ ಇರುವ ಬಹಳ ಪ್ರಮುಖವಾದ ದಾಖಲಾತಿಗಳಲ್ಲಿ ಆಧಾರ್ ಕೂಡ ಒಂದು. ಐಟಿಆರ್ ನ್ನು ಸಲ್ಲಿಸುವುದು ಮತ್ತು ಭಾರತದ ಸರ್ಕಾರದ ಯೋಜನೆಗಳನ್ನು ಪಡೆಯುವುದಕ್ಕಾಗಿ ಆಧಾರ್ ಬಹಳ ಪ್ರಮುಖವಾದುದ್ದಾಗಿದೆ.

ಆಧಾರ್ ಕಾರ್ಡ್

ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ನ್ನು ಲಿಂಕ್ ಮಾಡುವಿಕೆಯನ್ನು ಬಹಳ ಸುಲಭವಾಗಿ ಮಾಡಬಹುದಾಗಿದ್ದು ಆನ್ ಲೈನ್ ನಲ್ಲಿ ಓಟಿಪಿ ಪಡೆಯುವ ಮೂಲಕ ಅಥವಾ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಆಫ್ ಲೈನ್ ಮೂಲಕ ಪಡೆಯಬಹುದಾಗಿದೆ. ಒಂದು ವೇಳೆ ನೀವು ಆಧಾರ್ ಕಾರ್ಡ್ ನ್ನು ಈಗಾಗಲೇ ಮೊಬೈಲ್ ನಂಬರ್ ಗೆ ಲಿಂಕ್ ಮಾಡಿದ್ದರೆ ಓಟಿಪಿ ಮೂಲಕ ರಿ-ವೆರಿಫೈ ಮಾಡುವುದಕ್ಕೂ ಕೂಡ ಪ್ರಯೋಜನಕಾರಿಯಾಗಿದೆ. ಆದರೆ ಒಂದು ವೇಳೆ ನೀವು ಮೊಬೈಲ್ ನಂಬರ್ ನ್ನು ಈಗಲೂ ಲಿಂಕ್ ಮಾಡುವುದಕ್ಕೆ ಅಸಾಧ್ಯವಾದರೆ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಮಾಡಿಕೊಳ್ಳಬಹುದು.

ಆಧಾರ್ ಕಾರ್ಡ್

1. ಆಧಾರ್ ಕಾರ್ಡ್ ಗೆ ನಿಮ್ಮ ಮೊಬೈಲ್ ನಂಬರ್ ನ್ನು ಲಿಂಕ್ ಮಾಡುವುದು ಹೇಗೆ?

ಓಟಿಪಿ ಮೂಲಕ ನಿಮ್ಮ ಮೊಬೈಲ್ ನಂಬರ್ ನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವುದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. ನಿಮ್ಮ ಮೊಬೈಲ್ ನಿಂದ 14546 ನ್ನು ಡಯಲ್ ಮಾಡಿ.

2. ಇದೀಗ ನೀಡಲಾಗಿರುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಭಾರತೀಯರು ಅಥವಾ NRI

3. ಒಂದನ್ನು ಒತ್ತುವ ಮೂಲಕ ಆಧಾರ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದಕ್ಕೆ ಒಪ್ಪಿಗೆ ನೀಡಿ.

4. ಇದೀಗ ನಿಮ್ಮ 12 ಡಿಜಿಟ್ ನ ಆಧಾರ್ ನಂಬರ್ ನ್ನು ಎಂಟರ್ ಮಾಡಿ ಒಂದನ್ನು ಒತ್ತಿ ಖಾತ್ರಿಗೊಳಿಸಿ.

2. ಮೊಬೈಲ್ ನಂಬರ್ ಆಧಾರ್ ಜೊತೆಗೆ ಲಿಂಕ್ ಆಗಿದೆ ಎಂಬುದನ್ನು ಪರೀಕ್ಷಿಸುವುದು ಹೇಗೆ?

2. ಮೊಬೈಲ್ ನಂಬರ್ ಆಧಾರ್ ಜೊತೆಗೆ ಲಿಂಕ್ ಆಗಿದೆ ಎಂಬುದನ್ನು ಪರೀಕ್ಷಿಸುವುದು ಹೇಗೆ?

ಯುಐಡಿಎಐ ನ ಅಧಿಕೃತ ವೆಬ್ ಸೈಟ್ ನ್ನು ನೀವು ಭೇಟಿ ಮಾಡಬೇಕಾಗುತ್ತದೆ. ಅದುವೇ https://uidai.gov.in/ ಮತ್ತು 'Verify Email/Mobile Number' ಆಯ್ಕೆಯನ್ನು ಪರೀಕ್ಷಿಸಿ. ಇದು ನಿಮಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸುವುದಕ್ಕೆ ಸಹಾಯ ಮಾಡುತ್ತದೆ. ಆದರೆ, ಹೊಸ ಮೊಬೈಲ್ ನಂಬರ್ ನ್ನು ನೀವು ರಿಜಿಸ್ಟರ್ ಮಾಡುವುದಕ್ಕ ಬಯಸುವುದಾದರೆ ಹತ್ತಿರದ ಆಧಾರ್ ಕೇಂದ್ರಕ್ಕೆ ನೀವು ಭೇಟಿ ನೀಡಬೇಕಾಗುತ್ತದೆ.

3.ಎರಡು ಆಧಾರ್ ಕಾರ್ಡ್ ಗೆ ಒಂದೇ ಮೊಬೈಲ್ ನಂಬರ್ ನ್ನು ಲಿಂಕ್ ಮಾಡುವುದಕ್ಕೆ ಸಾಧ್ಯವಿದೆಯೇ?

ಹೌದು, ಎರಡು ಅಥವಾ ಅದಕ್ಕಿಂತ ಹೆಚ್ಚು ಆಧಾರ್ ಕಾರ್ಡ್ ಗೆ ನೀವು ಒಂದೇ ಮೊಬೈಲ್ ನಂಬರ್ ನ್ನು ಲಿಂಕ್ ಮಾಡುವುದಕ್ಕೆ ಅವಕಾಶವಿರುತ್ತದೆ.

4.ಆಧಾರ್ ಕಾರ್ಡ್ ಮೊಬೈಲ್ ನಂಬರ್ ಜೊತೆಗೆ ಲಿಂಕ್ ಆಗುವುದಕ್ಕೆ ಎಷ್ಟು ದಿನ ತೆಗೆದುಕೊಳ್ಳುತ್ತದೆ?

ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಅಪ್ ಡೇಟ್ ಆಗುವುದಕ್ಕೆ ಸಾಮಾನ್ಯವಾಗಿ 90 ಕೆಲಸದ ದಿನಗಳನ್ನು ಪಡೆಯಲಾಗುತ್ತದೆ ಎಂದು ಯುಐಡಿಎಐ ಸಹಾಯವಾಣಿ ತಿಳಿಸುತ್ತದೆ.ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್ ನ್ನು ಮೊಬೈಲ್ ನಂಬರ್ ಗೆ ಲಿಂಕ್ ಮಾಡುವುದಕ್ಕೆ ಸಾಧ್ಯವಿದೆ ಮತ್ತು ಒಂದು ವೇಳೆ ನೀವು ಅಪ್ ಡೇಟ್ ಮಾಡುವುದಕ್ಕೆ ಬಯಸುವುದಾದರೆ ಆನ್ ಲೈನ್ ನಲ್ಲಿ ಮಾಡುವುದಕ್ಕೆ ಅವಕಾಶವಿರುತ್ತದೆ.

5.ಆಧಾರ್ ಕಾರ್ಡ್ ನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ನ್ನು ಬದಲಾಯಿಸುವುದು ಹೇಗೆ?

ಆಧಾರ್ ಕಾರ್ಡ್ ನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ನ್ನು ಬದಲಾಯಿಸುವುದಕ್ಕೆ ನೀವು ಬಯಸುತ್ತಿದ್ದರೆ ನೀವು ಹತ್ತಿರದ ಆಧಾರ್ ಅಪ್ ಡೇಟ್ ಕೇಂದ್ರಕ್ಕೆ ಭೇಟಿ ನೀಡಿ.

Most Read Articles
Best Mobiles in India

English summary
How To Link Aadhar With Your Mobile Number Online: Step By Step Instructions

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X