ಕಳೆದುಹೋದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಅನ್ನು ಕಂಡುಹಿಡಿಯುವುದು ಹೇಗೆ ?

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಇಲ್ಲದೇ ದಿನವೇ ಕಳೆಯುವುದಿಲ್ಲ ಎನ್ನವಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪ್ರತಿಯೊಂದಕ್ಕೂ ಮೊಬೈಲ್‌ ಇರಲೇಬೇಕು ಎನ್ನುವ ಕಾಲಘಟ್ಟದಲ್ಲಿ ಇದ್ದೇವೆ. ಇನ್ನು ಹೆಚ್ಚಿನ ಕೆಲಸಗಳು ಸ್ಮಾರ್ಟ್‌ಫೋನ್‌ ಮೂಲಕವೇ ನಡೆಯಲಿದ್ದು, ನಮ್ಮ ಅಗತ್ಯ ದಾಖಲೆಗಳನ್ನ ಸ್ಮಾರ್ಟ್‌ಫೋನ್‌ನಲ್ಲಿ ಶೇಖರಿಸಿಟ್ಟಿಕೊಂಡಿರುತ್ತೇವೆ. ಹೀಗಾಗಿ ಅನಿವಾರ್ಯವಾಗಿ ಸ್ಮಾರ್ಟ್‌ಫೋನ್‌ ಬಿಟ್ಟಿರಲಾರದ ಪರಿಸ್ಥಿತಿ ಎಲ್ಲರಲ್ಲೂ ಇದೆ. ಆದರೆ ಸದಾ ನಿಮ್ಮ ಕೈನಲ್ಲಿ ರಿಂಗಣಿಸುವ ಸ್ಮಾರ್ಟ್‌ಫೋನ್‌ ಒಮ್ಮಿದೊಮ್ಮೆಲೆ ಕಳೆದು ಹೋದರೆ ಆಕಾಶವೇ ಕಳಚಿ ಬಿದ್ದಂತೆ ಆಗಲಿದೆ.

ಸ್ಮಾರ್ಟ್‌ಫೋನ್‌

ಹೌದು, ನಿಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವೇ ಆಗಿ ಹೋಗಿರುವ ಸ್ಮಾರ್ಟ್‌ಫೋನ್‌ ಕಳೆದು ಹೋದರೆ ಎಲ್ಲಿಲ್ಲದ ಟೆನ್ಶನ್‌ ಶುರುವಾಗಿ ಬಿಡುತ್ತೆ. ಸ್ಮಾರ್ಟ್‌ಫೋನ್‌ ಕಳೆದು ಹೋಯಿತಲ್ಲ, ಎನ್ನುವುದಕ್ಕಿಂತ ಅದರಲ್ಲಿರುವ ದಾಖಲೆಗಳ ಸುರಕ್ಷತೆಯ ಬಗ್ಗೆ ಚಿಂತೆ ಶುರುವಾಗುತ್ತೆ. ಆದರೆ ಇಂತಹ ಸನ್ನಿವೇಶದಲ್ಲಿ ಭಯಬೀತಿಯೊಂದೆ ಪರಿಹಾರವಲ್ಲ. ಸ್ಮಾರ್ಟ್‌ಫೋನ್‌ ಕಳೆದು ಹೋದಾಗ ಅದನ್ನು ಪತ್ತೇ ಹಚ್ಚುವುದಕ್ಕೆ ಗೂಗಲ್‌ ಸಹಾಯವನ್ನು ಪಡೆಯಬಹುದಾಗಿದೆ. ಹಾಗಾದ್ರೆ ನಿಮ್ಮ ಸ್ಮಾರ್ಟ್‌ಫೋನ್‌ ಕಳೆದು ಹೋದರೆ ಪತ್ತೆ ಹಚ್ಚುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕಳೆದುಹೋದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಅನ್ನು ಕಂಡುಹಿಡಿಯುವುದು ಹೇಗೆ ?

ಕಳೆದುಹೋದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಅನ್ನು ಕಂಡುಹಿಡಿಯುವುದು ಹೇಗೆ ?

ಹಂತ 1: ಪ್ರತ್ಯೇಕ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ Google's My Device ವೆಬ್‌ಸೈಟ್‌ಗೆ ಹೋಗಿ ಮತ್ತು ನಿಮ್ಮ Google ಸೈನ್‌ ಇನ್‌ ಮಾಡಿ. ಈಗ ನೀವು ಟ್ರ್ಯಾಕ್ ಮಾಡಲು ಬಯಸುವ ಸ್ಮಾರ್ಟ್‌ಫೋನ್‌ಗೆ ಲಾಗ್ ಇನ್ ಆಗಿದ್ದೀರಿ.

ಹಂತ 2: ನೀವು ಲಾಗ್ ಇನ್ ಆದ ತಕ್ಷಣ, ಖಾತೆಗೆ ಲಿಂಕ್ ಮಾಡಲಾದ ನಿಮ್ಮ ಕೊನೆಯದಾಗಿ ಬಳಸಿದ ಡಿವೈಸ್‌ ಅನ್ನು ವೆಬ್‌ಸೈಟ್ ಹುಡುಕಲು ಪ್ರಾರಂಭಿಸುತ್ತದೆ. ಕೊನೆಯದಾಗಿ ಬಳಸಿದ ಡಿವೈಸ್‌ನ ಕೆಳಗೆ ಆ ಖಾತೆಗೆ ಲಾಗ್ ಇನ್ ಆಗಿರುವ ನಿಮ್ಮ ಎಲ್ಲಾ ಇತರ ಡಿವೈಸ್‌ಗಳನ್ನು ನೀವು ನೋಡಲು ಸಾಧ್ಯವಾಗುತ್ತದೆ.

ಹಂತ 3: ಸೇವೆಯು ನಿಮ್ಮ ಡಿವೈಸ್‌ ಅನ್ನು ಪತ್ತೆ ಮಾಡಿದ ನಂತರ ಅದು ಇರುವ ಸ್ಥಳದ ಲೊಕೇಶನ್‌ ಮ್ಯಾಪ್‌ ಅನ್ನು ನಿಮಗೆ ಒದಗಿಸುತ್ತದೆ.

ಹಂತ 4: ನಿಮ್ಮ ಸಾಧನಕ್ಕೆ ನಿಖರವಾದ ನಿರ್ದೇಶನಗಳನ್ನು ಒದಗಿಸುವ Google ಮ್ಯಾಪ್‌ಗಳ ವಿಂಡೋವನ್ನು ತೆರೆಯಲು ನೀವು ಮ್ಯಾಪ್‌ನಲ್ಲಿರುವ ಪಾಯಿಂಟರ್ ಅನ್ನು ಟ್ಯಾಪ್ ಮಾಡಬಹುದು.

ಹಂತ 5: ನೀವು ನಿಖರವಾದ ಸ್ಥಳವನ್ನು ತಲುಪಿದ ನಂತರ, ಪುಟದಲ್ಲಿನ "ಪ್ಲೇ ಸೌಂಡ್" ಅಥವಾ "ಸೆಕ್ಯುರ್‌ ಡಿವೈಸ್‌" ನಂತಹ ಇತರ ಆಯ್ಕೆಗಳನ್ನು ನೀವು ಬಳಸಬಹುದು.

ಪ್ಲೇ ಸೌಂಡ್ ಫೀಚರ್ಸ್‌ ನಿಮ್ಮ ಡಿವೈಸ್‌ ಸೈಲೆಂಟ್‌ ಮೂಡನಲ್ಲಿದ್ದರೂ ಸಹ ನೀವು ಸ್ಮಾರ್ಟ್‌ಫೋನ್‌ ಕಳೆದು ಹೋದ ಸ್ಥಳದ ಬಳಿ ಹೋದಾಗ 5 ನಿಮಿಷಗಳ ಕಾಲ ರಿಂಗಣಿಸುತ್ತದೆ. ಸೆಕ್ಯುರ್‌ ಡಿವೈಸ್‌ ಫೀಚರ್ಸ್‌ ನಿಮ್ಮ ಡಿವೈಸ್‌ ಅನ್ನು ಲಾಕ್ ಮಾಡುತ್ತದೆ. ಇದು ನಿಮ್ಮ Google ಖಾತೆಯಿಂದ ಸೈನ್ ಔಟ್ ಮಾಡುತ್ತದೆ ಮತ್ತು ಲಾಕ್ ಸ್ಕ್ರೀನ್‌ನಲ್ಲಿ ಸಂದೇಶ ಮತ್ತು ನಿಮ್ಮ ಫೋನ್ ಸಂಖ್ಯೆಯನ್ನು ತೋರಿಸುತ್ತದೆ.

ಕಳೆದ ಹೋದ Android ಡಿವೈಸ್‌ನಲ್ಲಿರುವ ಡೇಟಾವನ್ನು ಡಿಲೀಟ್‌ ಮಾಡುವುದು ಹೇಗೆ?

ಕಳೆದ ಹೋದ Android ಡಿವೈಸ್‌ನಲ್ಲಿರುವ ಡೇಟಾವನ್ನು ಡಿಲೀಟ್‌ ಮಾಡುವುದು ಹೇಗೆ?

ಹಂತ 1:Find My Device ಸರ್ಚ್‌ ವೆಬ್‌ಸೈಟ್‌ಗೆ ಹೋಗಿ.

ಹಂತ 2: ಆಯ್ಕೆಗಳಲ್ಲಿ, ಡಿವೈಸ್‌ನ ಹೆಸರು ಮತ್ತು ವಿವರಗಳ ಅಡಿಯಲ್ಲಿರುವ "ಡಿವೈಸ್‌ ಡಿಲೀಟ್‌" ಆಯ್ಕೆಯನ್ನು ಪಟ್ಟಿ ಟ್ಯಾಪ್ ಮಾಡಿ.

ಹಂತ 3: ಹೊಸ ಸ್ಪ್ಲಾಶ್ ಪರದೆಯಲ್ಲಿ "ಡಿವೈಸ್‌ ಡಿಲೀಟ್‌" ಗುಂಡಿಯನ್ನು ಟ್ಯಾಪ್ ಮಾಡುವ ಮೂಲಕ ದೃಡೀಕರಿಸಿ.

ಹಂತ 4: ನಿಮ್ಮ Google ಸೈನ್‌ ಇನ್‌ ಮಾಡಿ.

ಹಂತ 5: ನಂತರ ನಿಮ್ಮ ಡಿವೈಸ್‌ ಇಂಟರ್ನೆಟ್‌ಗೆ ಸಂಪರ್ಕಗೊಂಡ ತಕ್ಷಣ, ಅದು ಫ್ಯಾಕ್ಟರಿ ಡೇಟಾ ರಿಸೆಟ್‌ ಮಾಡಲಿದೆ. ಈ ಮೂಲಕ ದುಷ್ಟರ ಕೈಗೆ ನಿಮ್ಮ ಸ್ಮಾರ್ಟ್‌ಫೋನ್‌ ಸಿಕ್ಕರೂ ನಿಮ್ಮ ಡೇಟಾ ಸಿಗದಂತೆ ಎಚ್ಚರಿಕೆ ವಹಿಸಬಹುದಾಗಿದೆ.

Best Mobiles in India

English summary
How to locate a lost Android smartphone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X