ನಿಮ್ಮ ಟ್ರೇನ್‌ನ ಲೊಕೇಷನ್‌ ಪತ್ತೆ ಮಾಡುವುದು ಹೇಗೆ?

Posted By: Staff
ನಿಮ್ಮ ಟ್ರೇನ್‌ನ ಲೊಕೇಷನ್‌ ಪತ್ತೆ ಮಾಡುವುದು ಹೇಗೆ?

ಭಾರತೀಯ ರೈಲ್ವೇ ನೆಟ್ವರ್ಕ್‌ ವಿಶ್ವದಲ್ಲೇ ಅತ್ಯಂತ ದೊಡ್ಡ ರೈಲ್ವೇ ನೆಟ್ವರ್ಕಕ್‌ಗಳಲ್ಲಿ ಒಂದಾಗಿದೆ. ಇಂದು ದಿನ ನಿತ್ಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಲಕ್ಷಾಂತರ ಮಂದಿ ಪ್ರಯಾಣ ಬೆಳೆಸುತ್ತಾರೆ. ಈ ಸಲುವಾಗಿ ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಅನುಕೂಲವಾಗಲೆಂದು ನ್ಯಾಷನಲ್‌ ಟ್ರೇನ್‌ ಎನ್‌ಕ್ವೈರೀ ಸಿಸ್ಟಂ ಎಂಬ ನೂತನ ವೆಬ್‌ಸೈಟ್‌ ಜಾರಿಗೆ ತಂದಿದೆ. ಈ ವೆಬ್‌ಸೈಟ್‌ನ ಮೂಲಕ ನಿಮ್ಮ ಟ್ರೇನ್‌ ನ ಲೊಕೇಷನ್‌ ಪತ್ತೆ ಮಾಡಬಹುದಾಗಿದೆ. ಇಷ್ಟೇ ಅಲ್ಲಾ ವೆಬ್‌ಸೈಟ್‌ ಅಲ್ಲದೆ ಭಾರತೀಯ ರೈಲ್ವೇ ಆಂಡ್ರಾಯ್ಡ್‌ ಆಪ್ಸ್‌ ಕೂಡ ಬಿಡುಗಡೆ ಮಾಡಿದ್ದು ಈ ಮೂಲಕ ಬಳಕೆದಾರರು ತಮ್ಮ ಮೊಬೈಲ್‌ ಮೂಲಕವೇ ಟ್ರೇನದದ ಲೊಕೇಷನ್‌ ಪತ್ತೆ ಮಾಡಬಹುದಾಗಿದೆ.

ವೆಬ್‌ ಸೈಟ್‌ ನಲ್ಲಿ ಸರ್ಚ್‌ ಮಾಡುವುದು ಹೇಗೆ?

1-ಟ್ರೇನ್‌ ಲೊಕೇಷನ್‌ ಪತ್ತೆ ಮಾಡಲು ಮೊದಲಿಗೆ ಈ ಕೆಳಗಿನ ಯಾವುದೇ ಸಂಖ್ಯೆ ಹಾಗೂ ಹೆಸರನ್ನು ಸರ್ಚ್‌ಬಾಕ್ಸ್‌ನಲ್ಲಿ ಹಾಕಿ.

  • ರೈಲಿನ ನಂಬರ್‌

  • ರೈಲಿನ ಹೆಸರು.

  • ಸ್ಟೇಷನ್‌ ಕೋಡ್‌.

  • ಮಧ್ಯದಲ್ಲಿನ ಸ್ಟೇಷನ್‌ ಹೆಸರು.

2- ಇದಾದ ಬಳಿಕ ಸರ್ಚ್‌ ಮಾಡಿರುವ ಹೆಸರುಗಳಲ್ಲಿ ಯಾವುದಾದರು ಒಂದನ್ನು ಕ್ಲಿಕ್‌ ಮಾಡಿ.

3- ರೈಲಿನ ಲೊಕೇಷನ್‌ ಹಾಗೂ ಟೈಮ್‌ ಹಾಗೂ ರೈಲು ಎಚ್ಟು ಗಂಟೆ ತಡವಾಗಿ ಬರಲಿದೆ. ಎಷ್ಟು ಗಂಟೆಗೆ ನಿಮ್ಮ ಸ್ಥಳ ತಲುಪಲಿದೆ ಎಂಬ ಮಾಹಿತಿಗಳು ಸೇರಿದಂತೆ ಎಲ್ಲಾ ಮಾಹಿತಿಗಳು ಲಭ್ಯವಾಗುತ್ತದೆ.

ಫೋನ್‌ನಲ್ಲಿಯೇ ರೈಲ್ವೇ ಮಾಹಿತಿ ಪಡೆಯುವುದು ಹೇಗೆ?

ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ ಈ ಅಪ್ಲಿಕೇಷನ್‌ ಕೆಲಸ ಮಾಡಿತ್ತದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಸ್ಮಾರ್ಟ್‌ಫೋನ್‌ನಲ್ಲಿ ಉಚಿತ ಅಪ್ಲಿಕೇಷನ್‌ ಡೌನ್ಲೋಡ್‌ ಮಾಡಿಕೊಳ್ಳಲುಲಾಗ್‌ ಇನ್‌ ಮಾಡಿಕೊಳ್ಳಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot