ಯೂಟ್ಯೂಬ್ ವಿಡಿಯೋಗಳಿಗೆ ಥಂಬ್‌ನೇಲ್‌ ಎಷ್ಟು ಮುಖ್ಯ?..ಥಂಬ್‌ನೇಲ್‌ ಹೇಗಿರಬೇಕು?

|

ಯೂಟ್ಯೂಬ್ ಅಪ್ಲಿಕೇಶನ್‌ ಅತ್ಯುತ್ತಮ ವಿಡಿಯೋ ಪ್ಲಾಟ್‌ಫಾರ್ಮ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಅನೇಕ ಬಳಕೆದಾರರು ಏನೇ ಮಾಹಿತಿ ಬೇಕಿದ್ದರೂ, ಯೂಟ್ಯೂಬ್ ತೆರೆಯುತ್ತಾರೆ. ಇನ್ನು ಯೂಟ್ಯೂಬ್‌ ತೆರೆದಾಗ ವೀಕ್ಷಕರು ನೋಡುವ ಮೊದಲು ಕಣ್ಣುಹಾಯಿಸುವುದೇ ಯೂಟ್ಯೂಬ್‌ ಥಂಬ್‌ನೇಲ್. ಹೌದು, ಅನೇಕ ವೀಕ್ಷಕರು ವೀಡಿಯೊದ ಥಂಬ್‌ನೇಲ್ ಅನ್ನು ಆಧರಿಸಿ ವೀಡಿಯೊವನ್ನು ಕ್ಲಿಕ್ ಮಾಡುತ್ತಾರೆ. ಹೀಗಾಗಿ ಥಂಬ್‌ನೇಲ್‌ಗಳು ಪ್ರಮುಖ ಎನಿಸಿಕೊಳ್ಳುತ್ತವೆ.

ಯೂಟ್ಯೂಬ್ ವಿಡಿಯೋಗಳಿಗೆ ಥಂಬ್‌ನೇಲ್‌ ಎಷ್ಟು ಮುಖ್ಯ?..ಥಂಬ್‌ನೇಲ್‌ ಹೇಗಿರಬೇಕು?

ಯೂಟ್ಯೂಬ್‌ ನಲ್ಲಿ ವಿಡಿಯೋಗಳಿಗೆ ಅತ್ಯುತ್ತಮ ಹಾಗೂ ಆಕರ್ಷಕ ಥಂಬ್‌ನೇಲ್‌ ರಚಿಸುವುದು ಉತ್ತಮ. ಥಂಬ್‌ನೇಲ್‌ ಚೆನ್ನಾಗಿದ್ದರೆ ವಿಡಿಯೋ ಕ್ಲಿಕ್ ಮಾಡುವ ಸಾಧ್ಯತೆಗಳು ಹೆಚ್ಚು. ಈ ನಿಟ್ಟಿನಲ್ಲಿ ವೀಡಿಯೊಗಳಿಗಾಗಿ ಕೆಲವು ಉತ್ತಮ ಯೂಟ್ಯೂಬ್‌ ಥಂಬ್‌ನೇಲ್‌ಗಳನ್ನು ಹೇಗೆ ಮಾಡಬಹುದು? ಯೂಟ್ಯೂಬ್‌ ಗಾಗಿ ಥಂಬ್‌ನೇಲ್‌ನ ಸರಿಯಾದ ಗಾತ್ರ ಯಾವುದು? ಯೂಟ್ಯೂಬ್‌ ವೀಡಿಯೊಗಳಿಗಾಗಿ ಥಂಬ್‌ನೇಲ್ ರಚಿಸಲು ಯಾವುದೇ ನಿರ್ದಿಷ್ಟ ಮಾರ್ಗಸೂಚಿ ಇದೆಯೇ? ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ ಬನ್ನಿರಿ.

ಯೂಟ್ಯೂಬ್ ಥಂಬ್‌ನೇಲ್‌ಗಳು ಯಾವುವು?
ಯೂಟ್ಯೂಬ್ ಥಂಬ್‌ನೇಲ್‌ಗಳು ಯೂಟ್ಯೂಬ್ ವೀಡಿಯೊಗಾಗಿ ಪ್ರಿ ಲುಕ್ ಫೋಟೊ ಆಗಿದೆ. ಥಂಬ್‌ನೇಲ್‌ಗಳು ವೀಡಿಯೊ ಯಾವುದರ ಬಗ್ಗೆ ಮತ್ತು ವಿಡಿಯೋವು ಯಾವ ವಿಷಯವನ್ನು ಒಳಗೊಂಡಿದೆ ಎಂಬುದನ್ನು ವಿವರಿಸುವ ಫೋಟೊ ಆಗಿದೆ. ಥಂಬ್‌ನೇಲ್‌ಗಳ ಉದಾಹರಣೆಗಳನ್ನು ಕೆಳಗೆ ನೀಡಲಾಗಿದೆ.

ಯೂಟ್ಯೂಬ್ ಥಂಬ್‌ನೇಲ್ ಆಯಾಮಗಳು
* ಥಂಬ್‌ನೇಲ್ 1280 × 720 ರೆಸಲ್ಯೂಶನ್ ಹೊಂದಿರಬೇಕು (ಕನಿಷ್ಠ 640 ಪಿಕ್ಸೆಲ್‌ಗಳ ಅಗಲದೊಂದಿಗೆ).
* ಇದನ್ನು JPG, GIF, ಅಥವಾ PNG ನಂತಹ ಇಮೇಜ್ ಫಾರ್ಮ್ಯಾಟ್‌ಗಳಲ್ಲಿ ಅಪ್‌ಲೋಡ್ ಮಾಡಬೇಕು.
* ಇದರ ಗಾತ್ರವು 2MB ಮಿತಿಯ ಅಡಿಯಲ್ಲಿ ಸೇವ್ ಮಾಡಿ.
* ಯೂಟ್ಯೂಬ್ ಪ್ಲೇಯರ್‌ಗಳು ಮತ್ತು ಪೂರ್ವವೀಕ್ಷಣೆಗಳಲ್ಲಿ ಹೆಚ್ಚು ಬಳಸಲಾಗಿರುವುದರಿಂದ ಬಳಕೆದಾರರು 16:9 ಆಕಾರ ಅನುಪಾತವನ್ನು ಬಳಸಲು ಪ್ರಯತ್ನಿಸಬಹುದು.

ಯೂಟ್ಯೂಬ್ ವಿಡಿಯೋಗಳಿಗೆ ಥಂಬ್‌ನೇಲ್‌ ಎಷ್ಟು ಮುಖ್ಯ?..ಥಂಬ್‌ನೇಲ್‌ ಹೇಗಿರಬೇಕು?

ಥಂಬ್‌ನೇಲ್ ರಚಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
* ನಿಮ್ಮ ಮೊಬೈಲ್‌ನಲ್ಲಿ Canva ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಅಥವಾ https://www.canva.com/ ಗೆ ಹೋಗಿ.
* ಆಪ್‌ನಲ್ಲಿ ಥಂಬ್‌ನೇಲ್ ಆಯ್ಕೆಮಾಡಿ. ನೀವು ಸೃಜನಾತ್ಮಕವಾಗಿ ಅನೇಕ ಬದಲಾವಣೆಗಳನ್ನು ಮಾಡಬಹುದು.
* ಈಗ, ನೀಲಿ ಪರದೆಯ ಎಡಭಾಗದಲ್ಲಿ, ನೀವು ವಿವಿಧ ಆಯ್ಕೆಗಳನ್ನು ನೋಡಬಹುದು:
- ಫೋಟೋಗಳು - ಸ್ಟಾಕ್ ಫೋಟೊಗಳಿಗಾಗಿ
- ಎಲಿಮೆಂಟ್ಸ್‌ - ಗ್ರಾಫಿಕ್ಸ್ ಮತ್ತು ಐಕಾನ್‌ಗಳಿಗಾಗಿ
- ಟೆಕ್ಸ್ಟ್‌ - ನಿಮ್ಮ ಸೃಜನಶೀಲತೆಗೆ ಟೆಕ್ಸ್ಟ್‌ ಅನ್ನು ಸೇರಿಸಲು
- ಅಪ್‌ಲೋಡ್‌ಗಳು - ಫೋಟೊ ಅಪ್ಲೋಡ್ ಮಾಡಲು

Most Read Articles
Best Mobiles in India

English summary
How to Make Best YouTube Thumbnail Image for Your Video.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X