ಟಿಕ್‌ಟಾಕ್‌ ಲವರ್ಸ್‌ಗೆ ಸ್ನ್ಯಾಪ್‌ಚಾಟ್‌ನಿಂದ ಹೊಸ ಫೀಚರ್‌.! ಸ್ಪಾಟ್‌ಲೈಟ್‌ನಲ್ಲಿ ಹಣಗಳಿಸುವುದು ಹೇಗೆ..?

By Gizbot Bureau
|

ನಿರಂತರ ಹಾಗೂ ದೀರ್ಘ ಅವಧಿಗೆ ತಮ್ಮ ಬಳಕೆದಾರರನ್ನು ಉಳಿಸಿಕೊಳ್ಳಲು ಸಾಮಾಜಿಕ ಮಾಧ್ಯಮ ವೇದಿಕೆಗಳು ತಮ್ಮ ಮಿತಿಗಳನ್ನು ಹಾಗೂ ಅಡೆತಡೆಗಳನ್ನು ಮೀರಿ ಹೊಸ ಫೀಚರ್‌ಗಳನ್ನು ಪರಿಚಯಿಸುತಲೇ ಬರುತ್ತಿವೆ. ಸ್ನ್ಯಾಪ್‌ಚಾಟ್ ಕಂಪನಿ ತನ್ನ ಭಾರತೀಯ ಬಳಕೆದಾರರಿಗಾಗಿ ಹೊಸ ಮನರಂಜನಾ ವೇದಿಕೆ 'ಸ್ಪಾಟ್‌ಲೈಟ್’ ಅನ್ನು ಪರಿಚಯಿಸಿದೆ. ಈ ಮೂಲಕ ಶಾರ್ಟ್‌ ವಿಡಿಯೋ ಪ್ಲಾಟ್‌ಫಾರ್ಮ್‌ಗೂ ಸ್ನ್ಯಾಪ್‌ಚಾಟ್‌ ಪ್ರವೇಶಿಸಿದಂತಾಗಿದೆ.

ಟಿಕ್‌ಟಾಕ್‌ ಲವರ್ಸ್‌ಗೆ ಸ್ನ್ಯಾಪ್‌ಚಾಟ್‌ನಿಂದ ಹೊಸ ಫೀಚರ್‌..!

ಸ್ನ್ಯಾಪ್‌ಚಾಟ್ ಆಪ್‌ನಲ್ಲಿ ಲಭ್ಯವಿರುವ ಹೊಸ ಮನರಂಜನಾ ಪ್ಲಾಟ್‌ಫಾರ್ಮ್ ಜನಪ್ರಿಯ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್ ಶಾರ್ಟ್‌ ವಿಡಿಯೋ ಮಾದರಿಯನ್ನು ಅನುಕರಿಸುತ್ತಿದೆ. ಈ ಜನವರಿಯಲ್ಲಿ ಸ್ನ್ಯಾಪ್‌ಚಾಟ್‌ನ್ನು 100 ಮಿಲಿಯನ್‌ ಬಳಕೆದಾರರು ಬಳಸುತ್ತಿದ್ದಾರೆ ಎಂದು ಕಂಪನಿ ಹೇಳಿಕೊಂಡಿತ್ತು.

ಸ್ಪಾಟ್‌ಲೈಟ್ ಟಿಕ್‌ಟಾಕ್‌ನ ಮತ್ತೊಂದು ಆವೃತ್ತಿ ಎಂದೇ ಹೇಳಲಾಗುತ್ತಿದೆ. ಆದರೆ, ತನ್ನ ಪ್ರತಿಸ್ಪರ್ಧಿಗಳಿಗಿಂತ ಸ್ಪಾಟ್‌ಲೈಟ್‌ನ್ನು ಭಿನ್ನವಾಗಿ ಬಳಕೆದಾರರಿಗೆ ನೀಡಲು ಸ್ನ್ಯಾಪ್‌ಚಾಟ್‌ ಹಲವು ಹೊಸ ಆಸಕ್ತಿದಾಯಕ ಫೀಚರ್‌ಗಳನ್ನು ಸೇರಿಸಿದೆ.ಸ್ಪಾಟ್‌ಲೈಟ್‌ನಲ್ಲಿ ಹೊಸತೇನಿದೆ..?

ಟಿಕ್‌ಟಾಕ್ ಅಥವಾ ಇನ್‌ಸ್ಟಾಗ್ರಾಮ್ ರೀಲ್‌ಗಳಂತೆ ಪಬ್ಲಿಕ್‌ ಕಮೆಂಟ್‌ಗಳ ಆಯ್ಕೆಯನ್ನು ಸ್ಪಾಟ್‌ಲೈಟ್ ನೀಡಿಲ್ಲ. ಜನಪ್ರಿಯ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕ್ರಿಯೆಟ್ರರ್ಸ್‌ ಕಿರುಕುಳ ಎದುರಿಸದಂತೆ ರಕ್ಷಿಸಲು ಈ ಉಪಕ್ರಮ ತೆಗೆದುಕೊಳ್ಳಲಾಗಿದೆ. ಇದಲ್ಲದೆ, ಬಳಕೆದಾರರು ತಮ್ಮ 'ಮೂಲ ವಿಷಯವನ್ನು’ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲು ಸಾರ್ವಜನಿಕ ಖಾತೆಯನ್ನು ರಚಿಸುವ ಅಗತ್ಯವಿಲ್ಲ. ಕಂಟೆಂಟ್‌ ಪೋಸ್ಟ್ ಮಾಡಲು ಅವರು ಡೀಫಾಲ್ಟ್ ಗೌಪ್ಯತೆ ಸೆಟ್ಟಿಂಗ್‌ಗಳೊಂದಿಗೆ ಸಾಮಾನ್ಯ ಖಾತೆಯನ್ನು ಸಹ ಬಳಸಬಹುದು.ಅಷ್ಟೇ ಅಲ್ಲದೇ ಅನಾಮಧೇಯವಾಗಿ ವಿಷಯವನ್ನು ಪೋಸ್ಟ್ ಮಾಡಲು ಸೃಷ್ಟಿಕರ್ತರಿಗೆ ಸ್ಪಾಟ್‌ಲೈಟ್‌ ಅವಕಾಶ ನೀಡುತ್ತದೆ. ಆದಾಗ್ಯೂ, ವಿಷಯವು ಒರಿಜಿನಲ್‌ ಆಗಿರಬೇಕು ಮತ್ತು ಇತರ ಪ್ಲ್ಯಾಟ್‌ಫಾರ್ಮ್‌ಗಳಿಂದ ಕಾಫಿ-ಪೇಸ್ಟ್‌ ಆಗಿರಬಾರದು. ಸ್ಪಾಟ್‌ಲೈಟ್‌ನಲ್ಲಿ ಯಾವ ರೀತಿಯ ವಿಷಯವನ್ನು ಪೋಸ್ಟ್ ಮಾಡಲಾಗಿದೆಯೆಂದು ಪರಿಶೀಲಿಸಲು, ಉತ್ತಮ ವಿಮರ್ಶೆಗಾಗಿ ಸ್ನ್ಯಾಪ್‌ಚಾಟ್ ಮಾನವ ಮತ್ತು ಎಐ ಸಾಮರ್ಥ್ಯವನ್ನು ಬಳಸುತ್ತಿದೆ.ಸ್ಪಾಟ್‌ಲೈಟ್‌ನ ಮತ್ತೊಂದು ಆಸಕ್ತಿದಾಯಕ ವೈಶಿಷ್ಟ್ಯವೆಂದರೆ ಟ್ವಿಟರ್ ಸೇರಿ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಶಾರ್ಟ್‌ ವಿಡಿಯೋಗಳನ್ನು ಹಂಚಿಕೊಳ್ಳುವ ಸಾಮರ್ಥ್ಯ. ಇದರ ಜೊತೆ ಕ್ರಿಯೆಟರ್ಸ್‌ ಸ್ಪಾಟ್‌ಲೈಟ್‌ನಲ್ಲಿ ಹಣವನ್ನು ಸಂಪಾದಿಸಬಹುದು. ಇದಕ್ಕಾಗಿ ಸ್ನ್ಯಾಪ್‌ಚಾಟ್ ಭಾರತದಲ್ಲಿ ಸ್ಪಾಟ್‌ಲೈಟ್ ಬಳಕೆದಾರರಿಗಾಗಿ ದಿನಕ್ಕೆ 1 ಮಿಲಿಯನ್ ಕಾರ್ಯಕ್ರಮ ತರುತ್ತಿದೆ. ಆದಾಗ್ಯೂ, ಸ್ನ್ಯಾಪ್‌ಚಾಟ್‌ ಒಂದು ಪೋಸ್ಟ್‌ನಲ್ಲಿನ ವೀಕ್ಷಣೆಗಳ ಸಂಖ್ಯೆಗೆ ಒಂದು ನಿರ್ದಿಷ್ಟ ಮಿತಿಯನ್ನು ಹಾಕಿದ್ದು, ಆ ಮಿತಿ ತಲುಪಿದ ನಂತರ ಸೃಷ್ಟಿಕರ್ತರು ಹಣ ಗಳಿಸಲು ಅರ್ಹರಾಗಿರುತ್ತಾರೆ.

ಸ್ಪಾಟ್‌ಲೈಟ್ ಬಳಕೆ ಹೇಗೆ..?

* ನಿಮ್ಮ ಸಾಧನದಲ್ಲಿ ಸ್ನ್ಯಾಪ್‌ಚಾಟ್ ಆಪ್‌ ತೆರೆಯಿರಿ.

* ಆಪ್‌ ಪ್ರಾರಂಭಿಸಿದ ಬಳಿಕ, ಕೆಳಗಿನ ಬಲ ಮೂಲೆಯಲ್ಲಿರುವ ಪ್ಲೇಬ್ಯಾಕ್ ಬಟನ್ ಪರಿಶೀಲಿಸಿ.

* ಟ್ಯಾಪಿಂಗ್ ನಂತರ, ಇದು ಸ್ಪಾಟ್‌ಲೈಟ್ ಪ್ಲಾಟ್‌ಫಾರ್ಮ್‌ನ್ನು ಪಾಪ್-ಅಪ್ ಮಾಡುತ್ತದೆ.

* ನೀವು ಯಾವುದೇ ವಿಷಯವನ್ನು ಬಯಸಿದರೆ ನೀವು 'ಹಾರ್ಟ್‌’ ಐಕಾನ್ ಅನ್ನು ಸ್ಕ್ರಾಲ್ ಮಾಡಬಹುದು ಮತ್ತು ಟ್ಯಾಪ್ ಮಾಡಬಹುದು.

* ಸ್ಪಾಟ್‌ಲೈಟ್ ರಚಿಸಲು, ಶೂಟ್ ಮಾಡಲು ಸ್ನ್ಯಾಪ್ ಕ್ಯಾಮೆರಾ ಐಕಾನ್ ಅನ್ನು ಟ್ಯಾಪ್ ಮಾಡಿ.

* ವಿಶೇಷವೆಂದರೆ, ಮೆಕ್ಸಿಕೊ ಮತ್ತು ಬ್ರೆಜಿಲ್‌ನ ಬಳಕೆದಾರರಿಗಾಗಿ ಹೊಸ ಸ್ಪಾಟ್‌ಲೈಟ್ ಫೀಚರ್‌ ಪರಿಚಯವಾಗುತ್ತಿದೆ. ಇದು ಈಗಾಗಲೇ ಯುಎಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಕೆ, ಐರ್ಲೆಂಡ್, ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ಲಭ್ಯವಿದೆ.

Best Mobiles in India

English summary
How To Make Money Via Snapchat Spotlight.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X