ನಿಮ್ಮ ಮೊಬೈಲ್‌ ನಂಬರ್‌ಗೆ QR ಕೋಡ್ ರಚಿಸಬಹುದೇ?..ಅದು ಹೇಗೆ?

|

ಪ್ರಸ್ತುತ QR ಕೋಡ್‌ಗಳ ಬಳಕೆ ಹೆಚ್ಚಾಗಿರುವುದನ್ನು ನೀವು ಗಮನಿಸಿರಬಹುದು. ಪೇಮೆಂಟ್ ಮಾಡಲು QR ಕೋಡ್ ಬಳಕೆ, ಲೋಕೇಶನ್‌/ ವಿಳಾಸಗಾಗಿಯೂ QR ಕೋಡ್ ಬಳಕೆ, ಮಾಹಿತಿಗಳ ಲಿಂಕ್‌ಗಳು, ವಿಸಿಟಿಂಗ್ ಕಾರ್ಡ್‌ಗಳು ಸೇರಿದಂತೆ ಬಹುತೇಕ ಕಡೆಗಳಲ್ಲಿ ಈಗ QR ಕೋಡ್ ಬಳಕೆ ಅಧಿಕ ಹಾಗೂ ಸಾಮಾನ್ಯ ಎಂಬಂತಾಗಿದೆ. ಅದೇ ರೀತಿ ಮೊಬೈಲ್‌ ನಂಬರ್‌ಗೂ QR ಕೋಡ್ ರಚಿಸಿಕೊಳ್ಳಬಹುದಾಗಿದೆ. ಅರೇ ಅದು ಹೇಗೆ ಅಂತೀರಾ?

ಮೊಬೈಲ್‌ ನಂಬರ್‌ಗೂ QR

ಹೌದು, ಪೇಮೆಂಟ್‌, ವಿಳಾಸ ಗಳಂತೆ ನಿಮ್ಮ ಮೊಬೈಲ್‌ ನಂಬರ್‌ಗೂ QR ಕೋಡ್ ರಚಿಸಿಬಹುದಾಗಿದೆ. QR ಕೋಡ್‌ನಲ್ಲಿ ಬಳಕೆದಾರರಿಗೆ ಮಾಹಿತಿಯು ನೇರವಾಗಿ ಕಾಣಿಸುವುದಿಲ್ಲ ಮತ್ತು ಕೋಡ್ ರೂಪದಲ್ಲಿ ಇರುತ್ತದೆ. ಕ್ಯಾಮೆರಾ ಮೂಲಕ QR ಕೋಡ್ ಸ್ಕ್ಯಾನ್‌ ಮಾಡಿದಾಗ, ಮಾಹಿತಿ ತೆರೆದುಕೊಳ್ಳುತ್ತದೆ. ಹೀಗಾಗಿ ಕೋಡ್‌ಗಳು ಮಾಹಿತಿಯ ಸಂಕ್ಷಿಪ್ತ ರೂಪ ಅಥವಾ ಡಿಜಿಟಲ್ ರೂಪ ಎನ್ನಬಹುದು.

QR ಕೋಡ್‌ಗಳಲ್ಲಿ

QR ಕೋಡ್‌ಗಳಲ್ಲಿ ಎರಡು ರೀತಿಯಿದ್ದು, ವೆಬ್‌ನಲ್ಲಿ ಒಂದು ಸೆಟ್ ಸ್ಥಳಕ್ಕೆ ಲಿಂಕ್ ಮಾಡುವಂತಹವುಗಳು (ಸ್ಥಿರ QR ಕೋಡ್ ಎಂದು ಕರೆಯಲಾಗುತ್ತದೆ) ಮತ್ತು ಗ್ರಾಹಕರು ನವೀಕರಿಸಬಹುದಾದ ವೆಬ್ ಸ್ಥಳಕ್ಕೆ (ಡೈನಾಮಿಕ್ QR ಕೋಡ್ ಎಂದು ಕರೆಯಲಾಗುತ್ತದೆ). ಇನ್ನು QR ಕೋಡ್ ಗಳನ್ನು ರಚಿಸಲು ಆಪ್‌ಗಳು ಲಭ್ಯವಿವೆ. ಹಾಗಾದರೇ QR ಕೋಡ್ ರಚಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್‌ ಕ್ರೋಮ್‌ನಲ್ಲಿ QR ಕೋಡ್‌ ರಚಿಸಲು ಹೀಗೆ ಮಾಡಿ

ಗೂಗಲ್‌ ಕ್ರೋಮ್‌ನಲ್ಲಿ QR ಕೋಡ್‌ ರಚಿಸಲು ಹೀಗೆ ಮಾಡಿ

ಉಚಿತವಾಗಿ QR ಜನರೇಟರ್/ ರಚಿಸಲು ಗೂಗಲ್‌ ಕ್ರೋಮ್‌ನಲ್ಲಿ QR generator ಆಯ್ಕೆ ಇದೆ. ಆಂಡ್ರಾಯ್ಡ್‌ ಮತ್ತು ಐಓಎಸ್‌ ಎರಡರಲ್ಲೂ ಕ್ರೋಮ್‌ ನಲ್ಲಿ ಶೇರ್‌ ಸಿಸ್ಟಮ್‌ನಲ್ಲಿ ನಿರ್ಮಿಸಲಾಗಿದೆ. ಹಾಗೆಯೇ ಕ್ರೋಮ್‌ ಪ್ರತಿಯೊಂದು ಡೆಸ್ಕ್‌ಟಾಪ್ ಆವೃತ್ತಿಯಲ್ಲಿಯೂ ಸಹ ಲಭ್ಯವಿದೆ.

QR ಕೋಡ್ ಮಂಕಿ

QR ಕೋಡ್ ಮಂಕಿ

QR ಕೋಡ್ ಮಂಕಿ ಸಾಫ್ಟ್‌ವೇರ್ ಉಚಿತವಾಗಿದೆ. ಈ ವೆಬ್‌ಸೈಟ್‌ನಿಂದ ಬಳಕೆದಾರರು ಬಯಸಿದ QR ಕೋಡ್ ಅನ್ನು ತಕ್ಷಣವೇ ರಚಿಸಬಹುದು ಮತ್ತು ಡೌನ್‌ಲೋಡ್ ಸಹ ಮಾಡಬಹುದು. Qr-code-generator.com ನಂತೆ, ಪಾವತಿಸಿದ ಯೋಜನೆಗಳೊಂದಿಗೆ, ಡೈನಾಮಿಕ್ QR ಕೋಡ್‌ಗಳನ್ನು ಸಹ ರಚಿಸಬಹುದು.

QRTIGER

QRTIGER

QRTIGER ವಿಶ್ವದ ಅತ್ಯಂತ ಸುಧಾರಿತ ಆನ್‌ಲೈನ್ QR ಕೋಡ್ ಜನರೇಟರ್ ಆಗಿದೆ. 147 ದೇಶಗಳಲ್ಲಿ 850,000 ಬ್ರ್ಯಾಂಡ್‌ಗಳಿಂದ ವಿಶ್ವಾಸಾರ್ಹವಾಗಿ, QRTIGER ಅನ್ನು ProductHunt ನಲ್ಲಿ ಅತ್ಯಂತ ನವೀನ ಉತ್ಪನ್ನವಾಗಿ ನೀಡಲಾಯಿತು. ಆ ಬ್ರ್ಯಾಂಡ್‌ಗಳಲ್ಲಿ ಲುಲುಲೆಮನ್, ಸಿಬಿಎಸ್, ವೈನರ್‌ಮೀಡಿಯಾ, ಉಬರ್, ಡಿಸ್ನಿ, ಸೊಡೆಕ್ಸೊ, ಪೆಪ್ಸಿಕೊ, ಎಲ್ ಒಸಿಟೇನ್, ಸ್ಯಾಮ್‌ಸಂಗ್, ಡಿಸ್ನಿ, ಟಿಕ್‌ಟಾಕ್, ಯುನಿವರ್ಸಲ್ ಸ್ಟುಡಿಯೋಸ್, ಹಿಲ್ಟನ್ ಹೋಟೆಲ್‌ಗಳು ಮತ್ತು ಹೆಚ್ಚಿನವು ಸೇರಿವೆ.

QR ಕೋಡ್ ಜನರೇಟರ್

QR ಕೋಡ್ ಜನರೇಟರ್

ಪ್ರಮುಖ QR ಕೋಡ್‌ ಜನರೇಟರ್‌ಗಳಲ್ಲಿ ಇದು ಸಹ ಒಂದಾಗಿದೆ. QR ಕೋಡ್ ಬಾರ್‌ಕೋಡ್‌ನ ಎರಡು ಆಯಾಮದ ಆವೃತ್ತಿಯಾಗಿದ್ದು, ಸಾಮಾನ್ಯವಾಗಿ ಕಪ್ಪು ಮತ್ತು ಬಿಳಿ ಪಿಕ್ಸೆಲ್ ಮಾದರಿಗಳಿಂದ ಮಾಡಲ್ಪಟ್ಟಿದೆ. ನೀವು URL, vCard, ಇಮೇಲ್, SMS, ಟ್ವಿಟರ್, WiFi ಮತ್ತು ಬಿಟ್‌ಕಾಯಿನ್‌ ನಿಂದ ಆಯ್ಕೆ ಮಾಡಬಹುದು.

Wix QR ಕೋಡ್ ಜನರೇಟರ್‌

Wix QR ಕೋಡ್ ಜನರೇಟರ್‌

ಈ QR ಕೋಡ್ ಜನರೇಟರ್‌ನೊಂದಿಗೆ ನಿಮ್ಮ ಸ್ವಂತ ಕಸ್ಟಮ್, ಉತ್ತಮ ಗುಣಮಟ್ಟದ QR ಕೋಡ್‌ಗಳನ್ನು ರಚಿಸಿಬಹುಸು. ಬಳಕೆದಾರರು ನಿಮ್ಮ ಮುದ್ರಿತ ಅಥವಾ ಡಿಜಿಟಲ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಮಾರಾಟವನ್ನು ಹೆಚ್ಚಿಸಲು QR ಕೋಡ್‌ಗಳನ್ನು ಬಳಸಿ. QR (ಕ್ವಿಕ್ ರೆಸ್ಪಾನ್ಸ್) ಕೋಡ್ ಒಂದು ರೀತಿಯ ಬಾರ್‌ಕೋಡ್ ಆಗಿದೆ. ಇದು QR ಕೋಡ್ ಸ್ಕ್ಯಾನರ್ ಮೂಲಕ ಓದಬಹುದಾದ ಮಾಹಿತಿಯನ್ನು ಹೊಂದಿದೆ.

Best Mobiles in India

English summary
how to Make QR code for mobile number: Follow these steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X