ಗೂಗಲ್‌ ಪೇ ಮತ್ತು ಫೋನ್‌ಪೇ ಆಪ್‌ನಲ್ಲಿ LIC ಪ್ರೀಮಿಯಂ ಪಾವತಿಸುವುದು ಹೇಗೆ?

|

ಫೋನ್‌ಪೇ ಮತ್ತು ಗೂಗಲ್‌ ಪೇ ಅಪ್ಲಿಕೇಶನ್‌ಗಳು ಭಾರತದ ಪ್ರಮುಖ ಡಿಜಿಟಲ್ ಪಾವತಿ ವೇದಿಕೆಯಾಗಿವೆ. ಫೋನ್‌ಪೇ ಮತ್ತು ಗೂಗಲ್‌ ಪೇ ಯುಪಿಐ ಆಪ್‌ ಬಳಸಿ, ಬಳಕೆದಾರರು ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಹಾಗೆಯೇ ಮೊಬೈಲ್, ಡಿಟಿಎಚ್, ಡೇಟಾ ಕಾರ್ಡ್‌ಗಳನ್ನು ತ್ವರಿತವಾಗಿ ರೀಚಾರ್ಜ್ ಮಾಡಬಹುದು. ಇದರೊಂದಿಗೆ ಯುಟಿಲಿಟಿ ಪಾವತಿಗಳನ್ನು ಮಾಡಬಹುದು ಮತ್ತು ಚಿನ್ನವನ್ನು ಖರೀದಿಸಬಹುದಾದ ಆಯ್ಕೆ ಸಹ ಇದೆ. ಅಲ್ಲದೇ ಎಲ್‌ಐಸಿ ಇನ್ಶುರೆನ್ಸ್‌ ಕಂತು ಪಾವತಿಸಬಹುದು.

ಗೂಗಲ್‌

ಹೌದು, ಪೋನ್‌ಪೇ ಹಾಗೂ ಗೂಗಲ್‌ ಪೇ ಸದ್ಯ ಟ್ರೆಂಡಿಂಗ್‌ನಲ್ಲಿರುವ ಯುಪಿಐ ಆಪ್‌ಗಳಾಗಿವೆ. ಗ್ರಾಹಕರಿಗೆ ಅಗತ್ಯವಿರುವ ಎಲ್ಲ ಸೇವೆಗಳ ಪೇಮೆಂಟ್‌ ಆಯ್ಕೆ ಹೊಂದಿವೆ. ಹಾಗೆಯೇ LIC ಪಾಲಿಸಿಗಳ ಪ್ರೀಮಿಯಂ ಕಂತುಗಳನ್ನು ಪಾವತಿಸಲು ಈ ಎರಡು ಯುಪಿಐ ಪ್ಲಾಟ್‌ಫಾರ್ಮ್‌ಗಳು ಆಯ್ಕೆಯನ್ನು ಒದಗಿಸಿವೆ. ಹೀಗಾಗಿ ಬಳಕೆದಾರರು ತ್ವರಿತವಾಗಿ ಎಲ್‌ಐಸಿ ಪ್ರೀಮಿಯಂ ಪಾವತಿಸಬಹುದು. ಪಾವತಿಸಿದ ಬಳಿಕ ಬಿಲ್ ಸಹ ಲಭ್ಯ. ಹಾಗಾದರೇ ಫೋನ್‌ಪೇ ಮತ್ತು ಗೂಗಲ್‌ ಪೇ ಆಪ್‌ಗಳಲ್ಲಿ LIC ಪ್ರೀಮಿಯಂ ಪಾವತಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಎಲ್‌ಐಸಿ ಪ್ರೀಮಿಯಂ ಪಾವತಿಸಲು ಈ ಕ್ರಮ ಅನುಸರಿಸಿ:

ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಎಲ್‌ಐಸಿ ಪ್ರೀಮಿಯಂ ಪಾವತಿಸಲು ಈ ಕ್ರಮ ಅನುಸರಿಸಿ:

ಹಂತ 1: ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ ಮತ್ತು ‘ಎಲ್‌ಐಸಿ ಪ್ರೀಮಿಯಂ' ಐಕಾನ್ ಕ್ಲಿಕ್ ಮಾಡಿ

ಹಂತ 2: ವಿವರಗಳನ್ನು ನಮೂದಿಸಿ, ಬಾಕಿ ಮೊತ್ತವನ್ನು ಪಾವತಿಸಿ

ಹಂತ 3: ತೆರಿಗೆ ಪ್ರಯೋಜನಗಳನ್ನು ಪಡೆಯಲು ರಶೀದಿಯನ್ನು ತ್ವರಿತವಾಗಿ ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು ‘View Receipt' ಕ್ಲಿಕ್ ಮಾಡಿ.

ಗೂಗಲ್ ಪೇ ಮೂಲಕ ಎಲ್ಐಸಿ ಪ್ರೀಮಿಯಂ ಪಾವತಿಸಲು ಈ ಹಂತ ಫಾಲೋ ಮಾಡಿ:

ಗೂಗಲ್ ಪೇ ಮೂಲಕ ಎಲ್ಐಸಿ ಪ್ರೀಮಿಯಂ ಪಾವತಿಸಲು ಈ ಹಂತ ಫಾಲೋ ಮಾಡಿ:

ಹಂತ 1: ಮೊದಲು, ನಿಮ್ಮ ಮೊಬೈಲ್‌ನಲ್ಲಿ Google Pay ಅಪ್ಲಿಕೇಶನ್ ತೆರೆಯಿರಿ.

ಹಂತ 2: ಬ್ಯುಸಿನೆಸ್‌ ಮತ್ತು ಬಿಲ್ ಆಯ್ಕೆಯಲ್ಲಿ ಕಾಣಿಸುವ ಎಲ್‌ಐಸಿ ಐಕಾನ್ ಟ್ಯಾಪ್ ಮಾಡಿ.

ಎಲ್‌ಐಸಿ

ಹಂತ 3: ಎಲ್‌ಐಸಿ ಪಾಲಿಸಿಯನ್ನು ಲಿಂಕ್ ಮಾಡಬೇಕಾಗಿರುವುದರಿಂದ ನಿಮ್ಮ ಪಾವತಿಗಳನ್ನು ಸುಲಭವಾಗಿ ಪಾವತಿಸಬಹುದು ಮತ್ತು ಟ್ರ್ಯಾಕ್ ಮಾಡಬಹುದು. ಪ್ರಾರಂಭಿಸಿ ಟ್ಯಾಪ್ ಮಾಡಿ.

ಹಂತ 4: ನಿಮ್ಮ ಪಾಲಿಸಿ ಸಂಖ್ಯೆ, ಇಮೇಲ್ ಐಡಿ, ಖಾತೆಯ ಹೆಸರನ್ನು ಎಲ್ಐಸಿ ಪಾಲಿಸಿ ರೆಕಾರ್ಡ್ಸ್ ಪ್ರಕಾರ ಭರ್ತಿ ಮಾಡಿ ಇದರಿಂದ ನಿಮ್ಮ ಎಲ್ಐಸಿ ಪಾಲಿಸಿಯನ್ನು ಲಿಂಕ್ ಮಾಡಬಹುದು ಮತ್ತು ಪ್ರೀಮಿಯಂ ಪಾವತಿಸಬಹುದು.

Most Read Articles
Best Mobiles in India

English summary
How to Pay LIC Premium Through Google Pay And Phonepe. Step by step guide.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X