ಕೆಲವೇ ಸೆಕೆಂಡುಗಳಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಆಪ್ಸ್‌ ಬೆಸ್ಟ್‌!

|

ಫೋನ್‌ಪೇ ಮತ್ತು ಗೂಗಲ್‌ ಪೇ ಅಪ್ಲಿಕೇಶನ್‌ಗಳು ಭಾರತದ ಪ್ರಮುಖ ಡಿಜಿಟಲ್ ಪಾವತಿ ವೇದಿಕೆಯಾಗಿವೆ. ಫೋನ್‌ಪೇ ಮತ್ತು ಗೂಗಲ್‌ ಪೇ ಯುಪಿಐ ಆಪ್‌ ಬಳಸಿ, ಬಳಕೆದಾರರು ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಹಾಗೆಯೇ ಮೊಬೈಲ್, ಡಿಟಿಎಚ್, ಡೇಟಾ ಕಾರ್ಡ್‌ಗಳನ್ನು ತ್ವರಿತವಾಗಿ ರೀಚಾರ್ಜ್ ಮಾಡಬಹುದು. ಇದರೊಂದಿಗೆ ಯುಟಿಲಿಟಿ ಪಾವತಿಗಳನ್ನು ಮಾಡಬಹುದು ಮತ್ತು ಚಿನ್ನವನ್ನು ಖರೀದಿಸಬಹುದಾದ ಆಯ್ಕೆ ಸಹ ಇದೆ. ಅಲ್ಲದೇ ಕೆಲವೇ ಸೆಕೆಂಡುಗಳ ವಿದ್ಯುತ್ ಬಿಲ್ ಪಾವತಿಸಬಹುದು.

ಟ್ರೆಂಡಿಂಗ್‌ನಲ್ಲಿರುವ

ಹೌದು, ಪೋನ್‌ಪೇ ಹಾಗೂ ಗೂಗಲ್‌ ಪೇ ಸದ್ಯ ಟ್ರೆಂಡಿಂಗ್‌ನಲ್ಲಿರುವ ಯುಪಿಐ ಆಪ್‌ಗಳಾಗಿವೆ. ಗ್ರಾಹಕರಿಗೆ ಅಗತ್ಯವಿರುವ ಎಲ್ಲ ಸೇವೆಗಳ ಪೇಮೆಂಟ್‌ ಆಯ್ಕೆ ಹೊಂದಿವೆ. ಹಾಗೆಯೇ ವಿದ್ಯುತ್ ಬಿಲ್ ಪಾವತಿಸಲು ಈ ಪೋನ್‌ಪೇ ಹಾಗೂ ಗೂಗಲ್‌ ಪೇ ಯುಪಿಐ ಪ್ಲಾಟ್‌ಫಾರ್ಮ್‌ಗಳು ಆಯ್ಕೆಯನ್ನು ಒದಗಿಸಿವೆ. ಹೀಗಾಗಿ ಬಳಕೆದಾರರು ತ್ವರಿತವಾಗಿ ವಿದ್ಯುತ್ ಬಿಲ್ ಪಾವತಿಸಬಹುದು. ಹಾಗೆಯೇ ಆಟೋ ಪೇ ಆಯ್ಕೆ ಸೆಟ್‌ ಸಹ ಮಾಡಬಹುದಾಗಿದೆ. ಹಣ ಪಾವತಿಸಿದ ಬಳಿಕ ಅದಕ್ಕೆ ಬಿಲ್ ಸಹ ಲಭ್ಯವಾಗುತ್ತದೆ. ಹಾಗಾದರೇ ಫೋನ್‌ಪೇ ಮತ್ತು ಗೂಗಲ್‌ ಪೇ ಆಪ್‌ಗಳಲ್ಲಿ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ:

ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ:

ಹಂತ 1: ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ.
ಹಂತ 2: 'ರೀಚಾರ್ಜ್ ಮತ್ತು ಪಾವತಿ ಬಿಲ್‌ಗಳು' ವಿಭಾಗದ ಅಡಿಯಲ್ಲಿ 'ವಿದ್ಯುತ್' ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ವಿದ್ಯುತ್ ಮಂಡಳಿಯನ್ನು ಆಯ್ಕೆ ಮಾಡಿ.
ಹಂತ 4: ನಿಮ್ಮ ಬಿಲ್ ವಿವರಗಳನ್ನು ನಮೂದಿಸಿ.
ಹಂತ 5: ನಿಮ್ಮ ಬಿಲ್ ಅನ್ನು UPI/ಡೆಬಿಟ್ ಕಾರ್ಡ್‌ಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಪಾವತಿಸಿ.

ಆಟೋ ಪೇ ಆಯ್ಕೆ

ಆಟೋ ಪೇ ಆಯ್ಕೆ

ಗ್ರಾಹಕರು ಫೋನ್‌ಪೇ ನಲ್ಲಿ ಆಟೋ ಪೇ ಆಯ್ಕೆಯನ್ನು ಸಕ್ರಿಯಗೊಳಿಸಬಹುದು. ಆಟೋ ಪೇಯೊಂದಿಗೆ, ಗ್ರಾಹಕರು ತಮ್ಮ ಅನೇಕ ಯುಟಿಲಿಟಿ ಬಿಲ್‌ಗಳ ಬಾಕಿ ಇರುವ ದಿನಾಂಕಗಳ ಬಗ್ಗೆ ಚಿಂತಿಸಬೇಕಾಗಿಲ್ಲ ಅಥವಾ ವಿಳಂಬ ಪಾವತಿ ಶುಲ್ಕಗಳನ್ನು ಭರಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ಗ್ರಾಹಕರು ಆಯ್ಕೆ ಮಾಡಿದ ಪಾವತಿ ವಿಧಾನದಿಂದ ಬಾಕಿ ಮೊತ್ತವು ಸ್ವಯಂಚಾಲಿತವಾಗಿ ಡೆಬಿಟ್ ಆಗುತ್ತದೆ.

ಗೂಗಲ್ ಪೇ ಆಪಲ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ:

ಗೂಗಲ್ ಪೇ ಆಪಲ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ:

ಹಂತ 1: ನಿಮ್ಮ ಫೋನ್‌ನಲ್ಲಿ ಗೂಗಲ್ ಪೇ ಆಪ್ ತೆರೆಯಿರಿ.

ಹಂತ 2: ಪರದೆಯ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ, "+ ಹೊಸ ಪಾವತಿ" ಆಯ್ಕೆಯನ್ನು ಪತ್ತೆ ಮಾಡಿ ಮತ್ತು ಟ್ಯಾಪ್ ಮಾಡಿ.

ಹಂತ 3: ಈಗ ಮುಂದಿನದರಲ್ಲಿ "ಬಿಲ್ ಪಾವತಿಗಳು" ಆಯ್ಕೆಯನ್ನು ಆರಿಸಿ.

ಹಂತ 4: ವಿವಿಧ ಬಿಲ್ ಪಾವತಿ ಆಯ್ಕೆಗಳಿಂದ 'ವಿದ್ಯುತ್' ಟ್ಯಾಬ್ ಆಯ್ಕೆಮಾಡಿ.

ಏಜೆನ್ಸಿಯನ್ನು

ಹಂತ 5: ನಂತರ ನೀವು ಪಾವತಿ ಮಾಡಲು ಬಯಸುವ ಏಜೆನ್ಸಿಯನ್ನು ಆಯ್ಕೆ ಮಾಡಿ.

ಹಂತ 6: ನೀವು ಬಯಸಿದ ಕಂಪನಿಯನ್ನು ಆಯ್ಕೆ ಮಾಡಿದ ನಂತರ, ಪಾವತಿ ಪ್ರಕ್ರಿಯೆಯನ್ನು ಮುಗಿಸಲು ನಿಮ್ಮ ಗ್ರಾಹಕ ಖಾತೆಯನ್ನು ನೀವು ಲಿಂಕ್ ಮಾಡಬೇಕಾಗುತ್ತದೆ.

ಹಂತ 7: ನೀವು ಬಿಲ್ ಪಾವತಿಸಲು ಬಯಸುವ ಮೊತ್ತವನ್ನು ನಮೂದಿಸಿ ಮತ್ತು UPI ಪಿನ್ ಬಳಸಿ ಬಿಲ್ ಪಾವತಿಸಿ.

ಇತರೆ ಆಪ್ಸ್‌ ಬಳಕೆ

ಇತರೆ ಆಪ್ಸ್‌ ಬಳಕೆ

ಪೋನ್‌ಪೇ ಹಾಗೂ ಗೂಗಲ್‌ ಪೇ ಹೊರತುಪಡಿಸಿ ಇತರೆ ಆಪ್‌ಗಳು ಸಹ ವಿದ್ಯುತ್ ಬಿಲ್ ಸೇರಿದಂತೆ ಹಲವು ಬಿಲ್ ಪಾವತಿ ಆಯ್ಕೆಗಳನ್ನು ಒಳಗೊಂಡಿವೆ. ಆ ಪೈಕಿ ಪೇಟಿಎಮ್, ಭಾರತ್ ಪೇ, ಅಮೆಜಾನ್ ಪೇ ಹಾಗೂ ಬ್ಯಾಂಕ್‌ಗಳ ಆಪ್ಸ್‌ಗಳು ಸೇರಿವೆ.

Best Mobiles in India

English summary
How to Pay Your Electricity Bill Through Google Pay And PhonePe.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X