ಶಾಶ್ವತವಾಗಿ ವಾಟ್ಸಾಪ್‌ ಮತ್ತು ಇನ್‌ಸ್ಟಾಗ್ರಾಂ ಖಾತೆ ಡಿಲೀಟ್ ಮಾಡುವುದು ಹೇಗೆ?

|

ಪ್ರಸ್ತುತ ಸಾಮಾಜಿಕ ಜಾಲತಾಣಗಳು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮೋಡಿ ಮಾಡಿವೆ. ಮುಖ್ಯವಾಗಿ ಫೇಸುಬುಕ್‌, ವಾಟ್ಸಪ್, ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್ ಆಪ್‌ಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಲಿಸ್ಟ್‌ನಲ್ಲಿ ಫೇಸ್‌ಬುಕ್‌ ಮಾಲೀಕತ್ವದ ವಾಟ್ಸಾಪ್‌ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಆದರೆ ಈ ಸಾಮಾಜಿಕ ಆಪ್‌ಗಳನ್ನು ಬಳಸುವ ಬಹುತೇಕ ಬಳಕೆದಾರರು ಶಾಶ್ವತವಾಗಿ ಖಾತೆ ಡಿಲೀಟ್ ಮಾಡುವುದು ಹೇಗೆ ಎಂದು ಯೋಚಿಸುತ್ತಾರೆ.

ಸ್ಮಾರ್ಟ್‌ಪೋನ್

ಹೌದು, ಸ್ಮಾರ್ಟ್‌ಪೋನ್ ಹೊಂದಿರುವ ಪ್ರತಿಯೊಬ್ಬರು ಮೊಬೈಲ್‌ನಲ್ಲಿಯೂ ಒಂದಿಲ್ಲೊಂದು ಸಾಮಾಜಿಕ ಜಾಲತಾಣದ ಆಪ್‌ ಇದ್ದೆ ಇರುತ್ತದೆ. ಅದರಲ್ಲಿ ವಾಟ್ಸಾಪ್, ಫೇಸ್‌ಬುಕ್ ಗಟ್ಟಿ ಸ್ಥಾನ ಪಡೆದಿವೆ ಎನ್ನಬಹುದಾಗಿದೆ. ಕೆಲವು ಬಳಕೆದಾರರಿಗೆ ವಾಟ್ಸಾಪ್‌ ಖಾತೆಯನ್ನು ಮತ್ತು ಇನ್‌ಸ್ಟಾಗ್ರಾಂ ಅಕೌಂಟ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಬೇಕು ಎಂದುಕೊಂಡಿರುತ್ತಾರೆ. ಆದರೆ ಡಿಲೀಟ್ ಮಾಡುವುದು ಹೇಗೆ ಎಂಬುದರಲ್ಲಿ ಗೊಂದಲ ಇರುತ್ತದೆ. ಈ ನಿಟ್ಟಿನಲ್ಲಿ ಇಂದಿನ ಲೇಖನದಲ್ಲಿ ವಾಟ್ಸಾಪ್‌ ಮತ್ತು ಇನ್‌ಸ್ಟಾಗ್ರಾಂ ಅಕೌಂಟ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ವಾಟ್ಸಾಪ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿರಿ:

ವಾಟ್ಸಾಪ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿರಿ:

* ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ
* ನಂತರ ಬಲ ಭಾಗದ ಕಾರ್ನರ್‌ನಲ್ಲಿ ಕಾಣಿಸುವ ಮೂರು ಡಾಟ್‌ಗಳ ಮೆನು ಕ್ಲಿಕ್ ಮಾಡಿ
* ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ ಸೆಟ್ಟಿಂಗ್ ಆಯ್ಕೆ ಸೆಲೆಕ್ಟ್ ಮಾಡಿರಿ
* ಆನಂತರ ಅಕೌಂಟ್ಸ್‌ ಆಯ್ಕೆಯನ್ನು ಕ್ಲಿಕ್ ಮಾಡಿರಿ
* ಡಿಲೀಟ್ ಮೈ ಅಕೌಂಟ್ ಆಯ್ಕೆ ಸೆಲೆಕ್ಟ್ ಮಾಡಿರಿ
* ಡಿಲೀಟ್ ಮಾಡುವ ಮುನ್ನ ಡಿಲೀಟ್ ಮಾಡುತ್ತಿರುವ ಬಗ್ಗೆ ಕಾರಣ ಕೇಳುತ್ತದೆ.

ಶಾಶ್ವತವಾಗಿ ಇನ್‌ಸ್ಟಾಗ್ರಾಂ ಡಿಲೀಟ್ ಮಾಡಲು ಹೀಗೆ ಮಾಡಿ:

ಶಾಶ್ವತವಾಗಿ ಇನ್‌ಸ್ಟಾಗ್ರಾಂ ಡಿಲೀಟ್ ಮಾಡಲು ಹೀಗೆ ಮಾಡಿ:

* ವೆಬ್ ವರ್ಷನ್‌ ಇನ್‌ಸ್ಟಾಗ್ರಾಂ ತೆರೆದು ಲಾಗ್‌ ಇನ್‌ ಆಗಿರಿ.

* ಅಕೌಂಟ್ ತೆಗೆದುಹಾಕುವ ಸೂಕ್ತ ಕಾರಣ ತಿಳಿಸಬೇಕು.

* ನಂತರ ಶಾಶ್ವತವಾಗಿ ತೆಗೆದುಹಾಕುವ ಆಯ್ಕೆ ಕಾಣಿಸುತ್ತದೆ- rid of it forever

* ನಂತರ ಪಾಸ್‌ವರ್ಡ್‌ ಎಂಟ್ರಿ ಮಾಡಿ.

* ಕೊನೆಯದಾಗಿ ಡಿಸೆಬಲ್ ಆಯ್ಕೆ ಕ್ಲಿಕ್ ಮಾಡಿ.

ತಾತ್ಕಾಲಿಕವಾಗಿ ಇನ್‌ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿರಿ:

ತಾತ್ಕಾಲಿಕವಾಗಿ ಇನ್‌ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿರಿ:

* ವೆಬ್ ವರ್ಷನ್‌ ಇನ್‌ಸ್ಟಾಗ್ರಾಂ ತೆರೆದು ಲಾಗ್‌ ಇನ್‌ ಆಗಿರಿ.

* ಎಡಿಟ್ ಪ್ರೊಫೈಲ್ ಆಯ್ಕೆ ಒತ್ತಿರಿ.

* ಅಕೌಂಟ್ ಮುಚ್ಚಿರಿ ಆಯ್ಕೆ ಸೆಲೆಕ್ಟ್ ಮಾಡಿ. (Temporarily disable my account)

* ಅಕೌಂಟ್ ಮುಚ್ಚವ ಕಾರಣ ತಿಳಿಸಬೇಕು.

* ನಂತರ ಪಾಸ್‌ವರ್ಡ್‌ ಎಂಟ್ರಿ ಮಾಡಿ

* ಕೊನೆಯದಾಗಿ ಡಿಸೆಬಲ್ ಆಯ್ಕೆ ಕ್ಲಿಕ್ ಮಾಡಿ

Best Mobiles in India

English summary
How to Permanently Delete WhatsApp and Instagram Accounts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X