ನಿಮ್ಮ ಫೋನಿನಲ್ಲಿ ಈ ಸೆಟ್ಟಿಂಗ್ ಮಾಡಿ ನೋಡಿ, ಖಂಡಿತಾ ನೀವು ಶಾಕ್‌ ಆಗ್ತೀರಾ!

|

ಸ್ಮಾರ್ಟ್‌ಫೋನ್‌ ಸದ್ಯ ಪ್ರತಿಯೊಬ್ಬರ ಅಗತ್ಯ ಡಿವೈಸ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಳಕೆದಾರರು ಫೋನಿನಲ್ಲಿ ಖಾಸಗಿ ಫೋಟೊ, ವಿಡಿಯೋ, ಫೈಲ್‌ ಸೇರಿದಂತೆ ಕೆಲವು ಪ್ರಮುಖ ದಾಖಲೆಗಳನ್ನು ಸೇವ್ ಮಾಡಿಕೊಂಡಿರುತ್ತಾರೆ. ಈ ನಿಟ್ಟಿನಲ್ಲಿ ಫೋನಿನ ಸುರಕ್ಷತೆಯ ಬಗ್ಗೆ ಗಮನ ನೀಡುವುದು ಅಗತ್ಯ ವಾಗಿರುತ್ತದೆ. ಮುಖ್ಯವಾಗಿ ಇತರರ ಕೈಯಲ್ಲಿ ಸ್ಮಾರ್ಟ್‌ಫೋನ್‌ ಕೊಟ್ಟಾಗ ಖಾಸಗಿ ಮಾಹಿತಿ ಅವರು ವೀಕ್ಷಿಸದಂತೆ ಮಾಡುವುದು ಕೆಲವು ವೇಳೆ ಅಗತ್ಯವೇ ಸರಿ.

ನಿಮ್ಮ ಫೋನಿನಲ್ಲಿ ಈ ಸೆಟ್ಟಿಂಗ್ ಮಾಡಿ ನೋಡಿ, ಖಂಡಿತಾ ನೀವು ಶಾಕ್‌ ಆಗ್ತೀರಾ!

ಹೌದು, ಕೆಲವು ಸಂದರ್ಭಗಳಲ್ಲಿ ಅನಿವಾರ್ಯವಾಗಿ ಇತರರ ಕೈ ಗೆ ಫೋನ್ ನೀಡುವ ಪ್ರಸಂಗ ಇರುತ್ತದೆ. ಅಂತಹ ವೇಳೆ ಆಂಡ್ರಾಯ್ಡ್‌ ಫೋನಿನಲ್ಲಿರುವ ಸ್ಕ್ರೀನ್ ಪಿನ್ನಿಂಗ್ (Screen Pinning) ಆಯ್ಕೆಯನ್ನು ಸಕ್ರಿಯ ಮಾಡುವುದು ನೆರವಿಗೆ ಬರುತ್ತದೆ. ಈ ಆಯ್ಕೆ ಸಕ್ರಿಯೇ ಮಾಡಿದರೆ, ನಿಮ್ಮಿಂದ ಫೋನ್ ಪಡೆದವರು ನಿಗದಿತ ಆಪ್‌ ಬಿಟ್ಟು ಬೇರೆ ಯಾವುದೇ ಆಪ್‌ ತೆರೆಯಲು ಆಗುವುದಿಲ್ಲ. ಅಂದಹಾಗೆ ಪೋಷಕರು ತಮ್ಮ ಮಕ್ಕಳಿಗೆ ಫೋನ್ ಕೊಡುವಾಗ ಸಹ ಈ ಸ್ಕ್ರೀನ್ ಪಿನ್ನಿಂಗ್ ಆಯ್ಕೆಯು ಉಪಯುಕ್ತ ಎನಿಸುತ್ತದೆ. ಹಾಗಾದರೆ ನಿಮ್ಮ ಆಂಡ್ರಾಯ್ಡ್‌ ಫೋನಿನಲ್ಲಿ ಈ ಸ್ಕ್ರೀನ್ ಪಿನ್ನಿಂಗ್ ಆಯ್ಕೆ ಸಕ್ರಿಯ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆಂಡ್ರಾಯ್ಡ್‌ನಲ್ಲಿ ಸ್ಕ್ರೀನ್ ಪಿನ್ನಿಂಗ್ ಎಂದರೇನು?
ಸ್ಕ್ರೀನ್ ಪಿನ್ನಿಂಗ್ (Screen Pinning) ಆಯ್ಕೆಯು ಸ್ಮಾರ್ಟ್‌ಫೋನ್‌ನಲ್ಲಿ ಪಿನ್ನ ಮಾಡಿರುವ ಸ್ಕ್ರೀನ್ ಬಿಟ್ಟು ಫೋನಿನಲ್ಲಿ ಇತರೆ ಯಾವುದೇ ಇತರೆ ಚಟುವಟಿಕೆ ಮಾಡಲು ಅವರಿಗೆ ಅನುಮತಿ ನೀಡುವುದಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಸಂದರ್ಭದಲ್ಲಿ ಬೇರೆಯವರ ಕೈಗೆ ಸ್ಮಾರ್ಟ್‌ಫೋನ್‌ ಕೊಡುವಾಗ ಸ್ಕ್ರೀನ್ ಪಿನ್ನಿಂಗ್ ಆಯ್ಕೆ ಯನ್ನು ಸಕ್ರಿಯ ಮಾಡಿ ಕೊಡುವುದು ಉತ್ತಮ. ಇದ್ರಿಂದ ಅವರು ನಿಮ್ಮ ಫೋನಿನಲ್ಲಿ ಅಗತ್ಯ ಸ್ಕ್ರೀನ್ ಬಿಟ್ಟು, ಬೇರೆ ಏನನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ.

ನಿಮ್ಮ ಫೋನಿನಲ್ಲಿ ಈ ಸೆಟ್ಟಿಂಗ್ ಮಾಡಿ ನೋಡಿ, ಖಂಡಿತಾ ನೀವು ಶಾಕ್‌ ಆಗ್ತೀರಾ!

ನಿಮ್ಮ ಫೋನಿನಲ್ಲಿ ಸ್ಕ್ರೀನ್ ಪಿನ್ನಿಂಗ್ ಆಯ್ಕೆ
ಸ್ಕ್ರೀನ್‌ ಪಿನ್ನಿಂಗ್ (Screen Pinning) ಆಯ್ಕೆ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಸ್ಪೆಷಲ್‌ ಎನಿಸಿಕೊಂಡಿದೆ. ಈ ಆಯ್ಕೆಯು ಇತ್ತೀಚಿನ ಹೊಸ ನೂತನ ಆಂಡ್ರಾಯ್ಡ್‌ ಓಎಸ್ ಆವೃತ್ತಿಯಲ್ಲಿ ಲಭ್ಯವಿದೆ. ಹೀಗಾಗಿ ಈ ರೀತಿಯ ಸೌಲಭ್ಯ ಪಡೆಯಲು ಬಳಕೆದಾರರು ಪ್ರತ್ಯೇಕವಾಗಿ ಥರ್ಡ್‌ಪಾರ್ಟಿ ಆಪ್ಸ್‌ ಇನ್‌ಸ್ಟಾಲ್ ಮಾಡುವ ಅಗತ್ಯವೇ ಇರುವುದಿಲ್ಲ.

ಸ್ಕ್ರೀನ್‌ ಪಿನ್ನಿಂಗ್ ಆಯ್ಕೆ ಸಕ್ರಿಯ ಮಾಡಲು ಈ ಕ್ರಮ ಅನುಸರಿಸಿ:
ಹಂತ 1. ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ ಆಯ್ಕೆ ತೆರೆಯಿರಿ
ಹಂತ 2. ಕೆಲವು ಫೋನ್‌ಗಳಲ್ಲಿ ಸೆಕ್ಯುರಿಟಿ ಮತ್ತು ಲಾಕ್‌ ಹಾಗೆಯೇ ಇನ್ನು ಕೆಲವು ಫೋನ್‌ಗಳಲ್ಲಿ ಬಯೋಮೆಟ್ರಿಕ್ ಮತ್ತು ಸೆಕ್ಯುರಿಟಿ.
ಹಂತ 3. ನಂತರ ಸ್ಕಾಲ್ ಮಾಡಿ ಸ್ಕ್ರೀನ್ ಪಿನ್ನಿಂಗ್ ಆಯ್ಕೆ ಸೆಲೆಕ್ಟ್ ಮಾಡಿ. ಆನ್ ಮಾಡಿರಿ.

ನಿಮ್ಮ ಫೋನಿನಲ್ಲಿ ಈ ಸೆಟ್ಟಿಂಗ್ ಮಾಡಿ ನೋಡಿ, ಖಂಡಿತಾ ನೀವು ಶಾಕ್‌ ಆಗ್ತೀರಾ!
ಹಂತ 4. ಆಗ ಸ್ಕ್ರೀನ್ ಪಿನ್ನಿಂಗ್ ಸಕ್ರಿಯ ಆಗಿರುತ್ತದೆ.
ಹಂತ 5. ಬೇರೆಯವರಿಗೆ ಫೋನ್ ಕೊಡುವಾಗ ರಿಸೆಂಟ್ ಮೆನು ಆಯ್ಕೆಯನ್ನು ಸೆಲಕ್ಟ್ ಮಾಡಿರಿ. (ಆಪ್ ಐಕಾನ್ ಅನ್ನು ದೀರ್ಘಕಾಲ ಒತ್ತಿರಿ ಮತ್ತು 'ಈ ಅಪ್ಲಿಕೇಶನ್ ಅನ್ನು ಪಿನ್ ಮಾಡಿ' ಆಯ್ಕೆಯನ್ನು ಟ್ಯಾಪ್ ಮಾಡಿ).
ಹಂತ 6. ನಂತರ ಬಲ ಭಾಗದಲ್ಲಿ ಕಾಣುವ ಮೂರು ಡಾಟಗಳಲ್ಲಿ ಸ್ಕ್ರೀನ್ ಪಿನ್ನಿಂಗ್ ಚಾಲ್ತಿ ಮಾಡಿ.

ಐಫೋನ್‌ಗಳಲ್ಲಿ ಲಭ್ಯವಿಲ್ಲದಂತಹ ಅತ್ಯಂತ ಉಪಯುಕ್ತ ಫೀಚರ್ಸ್/ ಆಯ್ಕೆ ಸ್ಕ್ರೀನ್ ಪಿನ್ನಿಂಗ್ (Screen Pinning) ಆಗಿದೆ. MIUI ರನ್ ಮಾಡುವ ಶಿಯೋಮಿ ಫೋನ್‌ಗಳಂತಹ ಎಲ್ಲಾ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಲಭ್ಯವಿಲ್ಲ.

Best Mobiles in India

English summary
How To Pin Apps On Android Smartphones: Its Amazing.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X