ಹೊಸ ನೆಟ್‌ವರ್ಕ್‌ಗೆ ಫೋನ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ?

By Shwetha
|

ಟೆಲಿಕಾಮ್ ರೆಗ್ಯುಲೇಟರಿ ಅಥಾರಿಟಿಯು ಭಾರತೀಯ ಮೊಬೈಲ್ ಬಳಕೆದಾರರಿಗೆ ತಮ್ಮ ನೆಟ್‌ವರ್ಕ್ ಸೇವೆಯನ್ನು ಇನ್ನೊಂದು ನೆಟ್‌ವರ್ಕ್‌ಗೆ ಬದಲಾಯಿಸುವಂತಹ ವ್ಯವಸ್ಥೆಯನ್ನು ಕಲ್ಪಸಿದೆ. ಮೊಬೈಲ್ ನಂಬರ್ ಪೋರ್ಟೆಬಿಲಿಟಿ ವ್ಯವಸ್ಥೆಯನ್ನು ಬಳಸಿಕೊಂಡು ನೆಟ್‌ವರ್ಕ್ ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ. ಆದರೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಇನ್ನೊಂದು ನೆಟ್‌ವರ್ಕ್‌ಗೆ ಪೋರ್ಟ್ ಮಾಡುವುದು ಹೇಗೆ ಎಂಬುದು ನಿಮ್ಮ ಚಿಂತೆಯಾಗಿದ್ದರೆ ಇಲ್ಲಿದೆ ಸಲಹೆಗಳು.

ನಿಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸದೆಯೇ ಇನ್ನೊಂದು ಹೊಸ ನೆಟ್‌ವರ್ಕ್‌ಗೆ ನೀವು ಬದಲಾಯಿಸಿಕೊಳ್ಳಬೇಕೆಂದಿದ್ದೀರಾ ಎಂದಾದಲ್ಲಿ ಇಂದಿನ ಲೇಖನ ನಿಮಗೆ ಸೂಕ್ತ ಸಲಹೆಯನ್ನು ನೀಡಲಿದೆ. ಬನ್ನಿ ಹಾಗಿದ್ದರೆ ಆ ಸಲಹೆಗಳೇನು ಎಂಬುದನ್ನು ಅರಿತುಕೊಳ್ಳೋಣ.

ಹಂತ:1

ಹಂತ:1

ನಿಮ್ಮ ಮೊಬೈಲ್‌ನಿಂದ ಮೊದಲಿಗೆ ಒಂದು ಎಸ್‌ಎಮ್‌ಎಸ್ ಅನ್ನು PORT > ನಿಮ್ಮ ಮೊಬೈಲ್ ಸಂಖ್ಯೆ> 1900 ಗೆ ಕಳುಹಿಸಬೇಕು.

ಹಂತ: 2

ಹಂತ: 2

ಕೆಲವೇ ನಿಮಷಗಳಲ್ಲಿ, 1901 ಸಂಖ್ಯೆಯಿಂದ ನಿಮಗೆ ಯುಪಿಸಿ (ಯೂನಿಕ್ ಪೋರ್ಟಿಂಗ್ ಕೋಡ್) ಎಸ್‌ಎಮ್‌ಎಸ್ ರೂಪದಲ್ಲಿ ಬರುತ್ತದೆ. ಮೊಬೈಲ್ ಆಪರೇಟರ್ ತಮ್ಮ ಚಂದಾದಾರರಿಗೆ 8 ಅಂಕೆಗಳ ಆಲ್ಫಾ ನ್ಯೂಮರಿಕ್ ಕೋಡ್ ಮತ್ತು ಯುಪಿಸಿ ಎಕ್ಸ್‌ಪೈರಿ ದಿನಾಂಕವನ್ನು ಇನ್ನೊಂದು ನೆಟ್‌ವರ್ಕ್ ಆಪರೇಟರ್‌ಗೆ ಪೋರ್ಟಿಂಗ್ ಮಾಡಲು ಅನುಕೂಲಕರವಾಗುವಂತೆ ನೀಡುತ್ತದೆ.

ಹಂತ: 3

ಹಂತ: 3

ಇದೀಗ ನೀವು ಸಮೀಪದ ಔಟ್‌ಲೆಟ್/ಶೋರೂಮ್ (ನೀವು ಪೋರ್ಟ್ ಮಾಡಬೇಕಾಗಿರುವಲ್ಲಿ) ಗೆ ಭೇಟಿ ನೀಡಿ ಮತ್ತು ನಿಮ್ಮ ಕೋರಿಕೆಯನ್ನು ಸಂಬಂಧಪಟ್ಟವರಿಗೆ ತಿಳಿಸಿ.

ಹಂತ: 4

ಹಂತ: 4

ತದನಂತರ ಪ್ರಸ್ತುತ ಮೊಬೈಲ್ ಸಂಖ್ಯೆ, ಪ್ರಸ್ತುತ ಆಪರೇಟರ್ ಹೆಸರು ಮತ್ತು ಯುಪಿಸಿ ಕೋಡ್ ವಿವರಗಳಿರುವ ಮೊಬೈಲ್ ನಂಬರ್ ಪೋರ್ಟಿಂಗ್ ಫಾರ್ಮ್‌ನಲ್ಲಿ ತುಂಬಿಸಿ. ಮತ್ತು ಐಡಿ ದಾಖಲೆಯ ಪ್ರತಿ ಮತ್ತು ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಆಕಾರದ ಫೋಟೋವನ್ನು ಸಲ್ಲಿಸಿ.

ಹಂತ: 5

ಹಂತ: 5

ನಿಮ್ಮ ಪಾವತಿ ಹಾಗೂ ಸಲ್ಲಿಕೆಯ ನಂತರ ಕಸ್ಟಮರ್ ಸೆಂಟರ್ ನಿಮಗೆ ಹೊಸ ಸಿಮ್ ಅನ್ನು ನೀಡುತ್ತಾರೆ. ಒಂದು ದಿನದೊಳಗೆ ಪೋರ್ಟಿಂಗ್ ದೃಢೀಕರಿಸುವ ಸಮ್ಮತಿ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ.

ಹಂತ: 6

ಹಂತ: 6

ಇದೀಗ ನಿಮ್ಮ ಸಿಮ್ ಏಳು ದಿನಗಳಲ್ಲಿ ಸಕ್ರಿಯಗೊಳ್ಳುತ್ತದೆ ಅಂತೆಯೇ ದಿನಾಂಕದೊಂದಿಗೆ ಮತ್ತು ಪೋರ್ಟಿಂಗ್ ಸಮಯದೊಂದಿಗೆ ಎಸ್‌ಎಮ್‌ಎಸ್ ಅನ್ನು ನೀವು ಪಡೆದುಕೊಳ್ಳುತ್ತೀರಿ ಪೋರ್ಟಿಂಗ್ ಸಮಯ ಮತ್ತು ದಿನಾಂಕದಂದು ರಾತ್ರಿ ವೇಳೆಯಲ್ಲಿ ಸೇವೆಯ ಅನಾನುಕೂಲತೆ ಸುಮಾರು 2 ಗಂಟೆಗಳ ಕಾಲ ಇರಬಹುದು.

ಹಂತ: 7

ಹಂತ: 7

ನಿಮ್ಮ ಫೋನ್‌ನಲ್ಲಿ ಹೊಸ ಸಿಮ್ ಅನ್ನು ಇನ್‌ಸರ್ಟ್ ಮಾಡಿ ಮತ್ತು ಹಳೆಯ ಸಂಖ್ಯೆಯೊಂದಿಗೆ ನಿಮ್ಮ ಹೊಸ ನೆಟ್‌ವರ್ಕ್ ಅನ್ನು ಆನಂದಿಸಿ.

ಜಿಎಸ್‌ಎಮ್ ಹಾಗೂ ಸಿಡಿಎಮ್‌ಎ

ಜಿಎಸ್‌ಎಮ್ ಹಾಗೂ ಸಿಡಿಎಮ್‌ಎ

ಮೊಬೈಲ್ ನಂಬರ್ ಪೋರ್ಟೆಬಿಲಿಟಿಯು ಜಿಎಸ್‌ಎಮ್ ಹಾಗೂ ಸಿಡಿಎಮ್‌ಎ ಎರಡೂ ಸೇವೆಗಳಿಗೂ ಲಭ್ಯವಿದೆ. ಏರ್‌ಟೆಲ್, ಐಡಿಯಾ, ಸೆಲ್ಯುಲಾರ್, ರಿಲಾಯನ್ಸ್ ಕಮ್ಯೂನಿಕೇಶನ್ಸ್, ವೋಡಾಫೋನ್, ಬಿಎಸ್‌ಎನ್‌ಎಲ್, ಟಾಟಾ ಡೊಕೊಮೊ, ಮೊದಲಾದವು ಈ ಸೇವೆಯನ್ನು ಬೆಂಬಲಿಸುತ್ತಿವೆ.

Best Mobiles in India

English summary
In this article we are giving you simple tips on how to port your mobile number very easily. We are giving you tips here and follow these steps and enjoy your new network.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X