ವಾಟ್ಸಾಪ್‌ ಮೂಲಕ 'ಜಿಯೋಫೋನ್‌ ನೆಕ್ಸ್ಟ್' ಮುಂಗಡ ಬುಕಿಂಗ್ ಮಾಡುವುದು ಹೇಗೆ?

|

ಸದ್ಯ ಮೊಬೈಲ್ ಮಾರುಕಟ್ಟೆಯಲ್ಲಿ JioPhone Next - ಜಿಯೋಫೋನ್‌ ನೆಕ್ಸ್ಟ್‌ ಫೋನಿನದ್ದೇ ಸದ್ದು. ರಿಲಯನ್ಸ್ ಜಿಯೋ ಮತ್ತು ಗೂಗಲ್ ನಡುವಿನ ಸಹಯೋಗದೊಂದಿಗೆ ಈ ಫೋನ್‌ ಅಭಿವೃದ್ಧಿಪಡಿಸಲಾಗಿದೆ. ಇದರೊಂದಿಗೆ ಇದು ಗ್ರಾಹಕರ ಜೇಬಿಗೆ ಹೊರೆಯಿಲ್ಲದ ಪ್ರೈಸ್‌ ಟ್ಯಾಗ್‌ ಅನ್ನು ಹೊಂದಿರುವುದು ಮತ್ತೊಂದು ಆಕರ್ಷಕ ಸಂಗತಿಯಾಗಿದೆ. ಈಗಾಗಲೇ ಗ್ರಾಹಕರ ಗಮನ ಸೆಳೆದಿರುವ ಈ ಫೋನ್‌ ಅನ್ನು ಖರೀದಿಸಲು ಮುಂಗಡ ಬುಕ್ಕಿಂಗ್ ಮಾಡಬೇಕಿರುತ್ತದೆ.

ವಾಟ್ಸಾಪ್‌ ಮೂಲಕ 'ಜಿಯೋಫೋನ್‌ ನೆಕ್ಸ್ಟ್' ಮುಂಗಡ ಬುಕಿಂಗ್ ಮಾಡುವುದು ಹೇಗೆ?

ಹೌದು, ಜಿಯೋಫೋನ್‌ ನೆಕ್ಸ್ಟ್‌ ಬೆಲೆಯು ಗ್ರಾಹಕರನ್ನು ಅಚ್ಚರಿಗೊಳಿಸಿದೆ. ಜಿಯೋಫೋನ್‌ ನೆಕ್ಸ್ಟ್‌ ಫೋನಿನ ಬೆಲೆಯು ಭಾರತದಲ್ಲಿ 6,499 ರೂ. ಆಗಿದೆ. ಅದಾಗ್ಯೂ ಗ್ರಾಹಕರಿಗೆ ಅನುಕೂಲ ಆಗಲೆಂದು ಸಂಸ್ಥೆಯು EMI ಅವಕಾಶ ಸಹ ಮಾಡಿಕೊಟ್ಟಿದೆ. ಗ್ರಾಹಕರು ಒಂದೇ ಬಾರಿ ಪೂರ್ಣ ಹಣ ಕೊಟ್ಟು ಖರೀದಿಸಬಹುದು. ಇಲ್ಲವೇ ಅನುಕೂಲಕರ EMI ಸೌಲಭ್ಯ ಪಡೆಯಬಹುದಾಗಿದೆ. ಈ ಫೋನ್ ಖರೀದಿಸುವ ಗ್ರಾಹಕರು ವಾಟ್ಸಾಪ್‌ ಮೂಲಕ ಸಹ ಮುಂಗಡ ಬುಕ್ಕಿಂಗ್ ಮಾಡಬಹುದು. ಹಾಗಾದರೇ ವಾಟ್ಸಾಪ್‌ ಮೂಲಕ JioPhone Next ಅನ್ನು ಮುಂಗಡವಾಗಿ ಬುಕ್ ಮಾಡುವುದು ಹೇಗೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ ಮೂಲಕ 'ಜಿಯೋಫೋನ್‌ ನೆಕ್ಸ್ಟ್‌' ಮುಂಗಡ-ಬುಕ್ ಮಾಡಲು ಹೀಗೆ ಮಾಡಿ:

ಹಂತ 1: ಮೊದಲನೆಯದಾಗಿ, ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡಿ 7018270182
ಹಂತ 2: ನಂತರ, ವಾಟ್ಸಾಪ್‌ ತೆರೆಯಿರಿ ಮತ್ತು ಈ ಸಂಪರ್ಕದೊಂದಿಗೆ ಚಾಟ್ ಪ್ರಾರಂಭಿಸಿ. ನೀವು ಸರಳವಾದ ಹಾಯ್ ಸಂದೇಶವನ್ನು ಕಳುಹಿಸಬಹುದು
ಹಂತ 3: ರಿಲಯನ್ಸ್ ಜಿಯೋ ಚಾಟ್‌ಬಾಟ್ ನಿಮ್ಮ ಆಸಕ್ತಿಯನ್ನು ಜಿಯೋಫೋನ್ ಮುಂಗಡ ಬುಕ್ ಮಾಡಲು ನೋಂದಾಯಿಸುತ್ತದೆ.
ಹಂತ 4: ಜಿಯೋಫೋನ್‌ ನೆಕ್ಸ್ಟ್‌ ಗಾಗಿ ಪೂರ್ವ-ಬುಕಿಂಗ್ ಪೂರ್ಣಗೊಳಿಸಲು ಹಂತಗಳನ್ನು ಅನುಸರಿಸಿ ಮುಂದಿನ
ಹಂತ 5: ನೀವು ದೃಢೀಕರಣವನ್ನು ಪಡೆಯುತ್ತೀರಿ. ನಿಮ್ಮ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್ ಪಡೆಯಲು ನೀವು ಇದನ್ನು ಹತ್ತಿರದ JioMart ರಿಟೇಲರ್‌ನಲ್ಲಿ ತೋರಿಸಬಹುದು

ವಾಟ್ಸಾಪ್‌ ಮೂಲಕ 'ಜಿಯೋಫೋನ್‌ ನೆಕ್ಸ್ಟ್' ಮುಂಗಡ ಬುಕಿಂಗ್ ಮಾಡುವುದು ಹೇಗೆ?

ಯಾವುದೇ ಹೆಚ್ಚುವರಿ ಶುಲ್ಕ ಇಲ್ಲ
ಜಿಯೋಫೋನ್‌ ನೆಕ್ಸ್ಟ್ ಮುಂಗಡ ಬುಕಿಂಗ್ ಮಾಡಲು ಯಾವುದೇ ಹೆಚ್ಚುವರಿ ಶುಲ್ಕವಿಲ್ಲ. ಅಂದರೆ, ನೀವು ಪೂರ್ವ-ಬುಕ್ ಮಾಡಲು ಮುಂದುವರಿಯಬಹುದು ಮತ್ತು ಜಿಯೋಫೋನ್‌ ನೆಕ್ಸ್ಟ್ ಅನ್ನು ಪಡೆದುಕೊಳ್ಳಬಹುದು. ಗಮನಿಸಬೇಕಾದ ಅಂಶ ಎಂದರೇ, ಜಿಯೋ EMI ಆಯ್ಕೆಗಳನ್ನು ಪರಿಚಯಿಸಿದೆ. ಒಂದು ವೇಳೆ ನೀವು EMI ಆಯ್ಕೆಗೆ ಆಯ್ದುಕೊಂಡರೇ, ಖರೀದಿದಾರರು 1,999.ರೂ ಟೋಕನ್ ಅನ್ನು ಪಾವತಿಸಬೇಕಾಗುತ್ತದೆ.

ಜಿಯೋಫೋನ್‌ ನೆಕ್ಸ್ಟ್ ಫೋನಿನ ಕೆಲವು ಫೀಚರ್ಸ್‌:
* ವಾಯ್ಸ್ ಫಸ್ಟ್- ಸಾಮರ್ಥ್ಯಗಳು ಬಳಕೆದಾರರು ಸಾಧನದೊಂದಿಗೆ ಮಾತನಾಡುವ ಮೂಲಕ (ಆಪ್ ತೆರೆಯಿರಿ, ಸೆಟ್ಟಿಂಗ್‌ಗಳನ್ನು ನಿರ್ವಹಿಸಿ ಇತ್ಯಾದಿ) ಅದನ್ನು ನಿರ್ವಹಿಸಲು ಗೂಗಲ್ ಅಸಿಸ್ಟೆಂಟ್ ಸಹಾಯ ಮಾಡುತ್ತದೆ. ಬಳಕೆದಾರರು ತಮಗೆ ತಿಳಿದಿರುವ ಭಾಷೆಯಲ್ಲಿ ಮಾಹಿತಿ/ಕಂಟೆಂಟ್ ಅನ್ನು ಇಂಟರ್‌ನೆಟ್‌ನಿಂದ ಸುಲಭವಾಗಿ ಪಡೆಯಬಹುದು.

* ರೀಡ್ ಅಲೌಡ್- ರೀಡ್ ಅಲೌಡ್ ಸೌಲಭ್ಯವು ಬಳಕೆದಾರರಿಗೆ ತಮ್ಮ ಪರದೆಯ ಮೇಲಿರುವ ಯಾವುದೇ ವಿಷಯವನ್ನು ಓದಿಸಿ, ಕೇಳಲು ಅನುವು ಮಾಡಿಕೊಡುತ್ತದೆ. ಬಳಕೆದಾರರು ಸರಳವಾಗಿ ತಮ್ಮ ಆದ್ಯತೆಯ ಭಾಷೆಯಲ್ಲಿ ಕೇಳುವ ಮೂಲಕ ವಿಷಯವನ್ನು ಸುಲಭವಾಗಿ ಪಡೆದುಕೊಳ್ಳುವುದನ್ನು ಇದು ಸಾಧ್ಯವಾಗಿಸುತ್ತದೆ.

ವಾಟ್ಸಾಪ್‌ ಮೂಲಕ 'ಜಿಯೋಫೋನ್‌ ನೆಕ್ಸ್ಟ್' ಮುಂಗಡ ಬುಕಿಂಗ್ ಮಾಡುವುದು ಹೇಗೆ?

* ಟ್ರಾನ್ಸ್‌ಲೇಟ್ ನೌ- ಟ್ರಾನ್ಸ್‌ಲೇಟ್ ನೌ ಸೌಲಭ್ಯವು ಯಾವುದೇ ಪರದೆಯನ್ನು ಭಾರತದ 10 ಜನಪ್ರಿಯ ಭಾಷೆಗಳ ಪೈಕಿ ತಮ್ಮ ಆಯ್ಕೆಯ ಭಾಷೆಗೆ ಅನುವಾದಿಸಿಕೊಳ್ಳಲು ಬಳಕೆದಾರರಿಗೆ ಅನುವುಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಯ ಭಾಷೆಯಲ್ಲಿ ಯಾವುದೇ ವಿಷಯವನ್ನು ಓದುವುದು ಸಾಧ್ಯವಾಗುತ್ತದೆ.

* ಸುಲಭ ಮತ್ತು ಸ್ಮಾರ್ಟ್ ಕ್ಯಾಮೆರಾ- ಜಿಯೋಫೋನ್ ನೆಕ್ಸ್ಟ್‌ನಲ್ಲಿರುವ ಸ್ಮಾರ್ಟ್ ಮತ್ತು ಶಕ್ತಿಯುತ ಕ್ಯಾಮೆರಾ ಪೋರ್ಟ್ರೇಟ್ ಮೋಡ್‌ನಂತಹ ವಿವಿಧ ಫೋಟೋಗ್ರಫಿ ಮೋಡ್‌ಗಳನ್ನು ಬೆಂಬಲಿಸುತ್ತದೆ, ಹಾಗೂ ಇದು ಮಸುಕಾದ ಹಿನ್ನೆಲೆಯಿರುವ ಉತ್ತಮ ಫೋಟೋಗಳನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ನೈಟ್ ಮೋಡ್ ನೆರವಾಗುತ್ತದೆ. ಭಾವನೆಗಳು ಮತ್ತು ಸಂಭ್ರಮಾಚರಣೆಯೊಂದಿಗೆ ತಮ್ಮ ಸೆಲ್ಫಿಗಳನ್ನು ಉತ್ತಮಗೊಳಿಸಲು ವಿಶಿಷ್ಟವಾದ ಭಾರತ-ಕೇಂದ್ರಿತ ಲೆನ್ಸ್‌ಗಳನ್ನೂ ಕ್ಯಾಮೆರಾ ಒಳಗೊಂಡಿದೆ.

* ಲಕ್ಷಾಂತರ ಆಪ್‌ಗಳನ್ನು ಬಳಸುವ ಅವಕಾಶ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಎಲ್ಲ ಆಂಡ್ರಾಯ್ಡ್ ಆಪ್‌ಗಳನ್ನೂ ಈ ಸಾಧನವು ಬೆಂಬಲಿಸುತ್ತದೆ ಮತ್ತು ಆ ಮೂಲಕ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಲಕ್ಷಾಂತರ ಆಪ್‌ಗಳ ಪೈಕಿ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ನೀಡುತ್ತದೆ. ಅನೇಕ ಜಿಯೋ ಮತ್ತು ಗೂಗಲ್ ಆಪ್‌ಗಳ‌ನ್ನು ಈ ಸಾಧನದಲ್ಲಿ ಮುಂಚಿತವಾಗಿ ಲೋಡ್ ಮಾಡಲಾಗಿದೆ.

* ಸ್ವಯಂಚಾಲಿತ ಫೀಚರ್ ಅಪ್‌ಡೇಟ್‌ಗಳು ಹೊಸ ವೈಶಿಷ್ಟ್ಯಗಳು, ಕಸ್ಟಮೈಸೇಶನ್, ಭದ್ರತಾ ಅಪ್‌ಡೇಟ್‌ಗಳು ಹಾಗೂ ಇನ್ನೂ ಹೆಚ್ಚಿನದಕ್ಕಾಗಿ ಜಿಯೋಫೋನ್ ನೆಕ್ಸ್ಟ್‌ನಲ್ಲಿ ಓವರ್ ದಿ ಏರ್ ಅಪ್‌ಡೇಟ್ಸ್ ಬೆಂಬಲವಿದ್ದು, ಇದು ಕಾಲಕ್ರಮೇಣ ಫೋನ್ ಅನುಭವವನ್ನು ವರ್ಧಿಸುತ್ತಲೇ ಹೋಗುತ್ತದೆ.

* ಸ್ನೇಹಿತರೊಂದಿಗೆ ಸುಲಭವಾಗಿ ಹಂಚಿಕೊಳ್ಳಿ ಆಪ್‌ಗಳು, ಫೈಲ್‌ಗಳು, ಫೋಟೋಗಳು, ವೀಡಿಯೊಗಳು, ಹಾಡುಗಳು ಮತ್ತು ಇನ್ನೂ ಹೆಚ್ಚಿನದನ್ನು ಕುಟುಂಬದವರು ಮತ್ತು ಸ್ನೇಹಿತರೊಂದಿಗೆ, ಇಂಟರ್‌ನೆಟ್ ಇಲ್ಲದಿದ್ದರೂ ಸಹ, ನಿಯರ್‌ಬೈ ಶೇರ್ ವೈಶಿಷ್ಟ್ಯವನ್ನು ಬಳಸಿ ತ್ವರಿತವಾಗಿ ಹಂಚಿಕೊಳ್ಳಿ.

Best Mobiles in India

English summary
How To Pre-Book JioPhone Next On WhatsApp: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X