ನಿಮ್ಮ ಲ್ಯಾಪ್‌ಟಾಪ್‌ ಹೆಚ್ಚು ಬಿಸಿಯಾಗುವುದು ಏಕೆ? ಇದಕ್ಕೆ ಪರಿಹಾರ ಏನು?

|

ಪ್ರಸ್ತುತ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ವರ್ಕ್‌ ಫ್ರಂ ಹೋಮ್‌ ಶುರುವಾದ ನಂತರ ಲ್ಯಾಪ್‌ಟಾಪ್‌ ಬಳಸುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಇನ್ನು ಲ್ಯಾಪ್‌ಟಾಪ್‌ ಬಳಸುವಾಗ ಹಠಾತ್ತನೆ ಬಿಸಿಯಾಗುವುದು, ಸ್ಲೋ ಆಗುವುದು ಮತ್ತು ಸಡನ್‌ ಆಗಿ ಸ್ಟಾಪ್‌ ಆಗುವುದು ಕೆಲವೊಮ್ಮೆ ಕಿರಿಕಿರಿ ಎನಿಸಿಬಿಡುತ್ತದೆ. ಅದರಲ್ಲೂ ಲ್ಯಾಪ್‌ಟಾಪ್‌ ಬಿಸಿಯಾದಾಗ ವರ್ಕ್‌ ಮಾಡುವುದು ಕೂಡ ಕಷ್ಟ ಆಗಲಿದೆ. ಇಂತಹ ಸನ್ನಿವೇಶದಲ್ಲಿ ಏನು ಮಾಡೋದು ಅನ್ನೊದು ಕೆಲವರಿಗೆ ತಿಳಿದಿರುವುದಿಲ್ಲ.

ಲ್ಯಾಪ್‌ಟಾಪ್‌

ಹೌದು, ಲ್ಯಾಪ್‌ಟಾಪ್‌ ಬಳಸುವಾಗ ಬಿಸಿ ಅನುಭವ ಬಂದರೆ ಕೆಲಸ ಮಾಡುವುದಕ್ಕೆ ಕಷ್ಟ ಆಗಲಿದೆ. ಲ್ಯಾಪ್‌ಟಾಪ್‌ ಬಳಸುವಾಗ ಒಂದೇ ಸಮಯದಲ್ಲಿ ಅನೇಕ ಅಪ್ಲಿಕೇಶನ್‌ಗಳನ್ನು ರನ್‌ ಮಾಡಿದರೆ ಏಕಾಏಕಿ ಬಿಸಿಯಾಗುವುದಕ್ಕೆ ಶುರುವಾಗಲಿದೆ. ಇದರಿಂದ ಲ್ಯಾಪ್‌ಟಾಪ್‌ಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ನಿಮ್ಮ ಲ್ಯಾಪ್‌ಟಾಪ್‌ ಅನ್ನು ರಕ್ಷಿಸುವುದಕ್ಕೆ ಮೊದಲ ಅಧ್ಯತೆ ನೀಡಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಲ್ಯಾಪ್‌ಟಾಪ್‌ ಬಿಸಿಯಾದಾಗ ನೀವು ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲ್ಯಾಪ್‌ಟಾಪ್ ಬಿಸಿಯಾಗುವುದಕ್ಕೆ ಕಾರಣ ಏನು?

ಲ್ಯಾಪ್‌ಟಾಪ್ ಬಿಸಿಯಾಗುವುದಕ್ಕೆ ಕಾರಣ ಏನು?

ಲ್ಯಾಪ್‌ಟಾಪ್‌ಗಳು ಡೆಸ್ಕ್‌ಟಾಪ್‌ ಕಂಪ್ಯೂಟರ್‌ಗಳಿಗಿಂತ ಕಡಿಮೆ ಸಾಂದ್ರವಾಗಿರುತ್ತವೆ. ಆದರಿಂದ ಲ್ಯಾಪ್‌ಟಾಪ್‌ನಲ್ಲಿರುವ ಎಲ್ಲಾ ಯೂನಿಟ್‌ಗಳು ಕಡಿಮೆ ಸ್ಥಳಾವಕಾಶವನ್ನು ಹೊಂದಿರುತ್ತವೆ. ಇದೇ ಕಾರಣಕ್ಕೆ ನೀವು ಹೆಚ್ಚಿನ ಕಂಪ್ಯೂಟಿಂಗ್ ಪವರ್‌ ಅಗತ್ಯವಿರುವ ಪಂಕ್ಷನ್‌ಗಳನ್ನು ನೀವು ಶುರುಮಾಡಿದರೆ ಲ್ಯಾಪ್‌ಟಾಪ್‌ ಬಿಸಿಯಾಗಲು ಶುರುವಾಗಲಿದೆ. ಅಂದರೆ ವೀಡಿಯೊ ಗೇಮ್ ಅನ್ನು ಲೋಡ್ ಮಾಡುವುದು ಅಥವಾ ಟಿವಿ ಕಾರ್ಯಕ್ರಮಗಳನ್ನು ಸ್ಟ್ರೀಮಿಂಗ್ ಮಾಡುವುದರಿಂದ ನಿಮ್ಮ ಲ್ಯಾಪ್‌ಟಾಪ್‌ನ ತಾಪಮಾನವು ಹೆಚ್ಚಾಗುವ ಸಾದ್ಯತೆಯಿದೆ.

ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗಲು ಇತರ ಕಾರಣಗಳು?

ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗಲು ಇತರ ಕಾರಣಗಳು?

ಲ್ಯಾಪ್‌ಟಾಪ್‌ ಬಳಸುವಾಗ ಯಾವುದೇ ಕಡೆಯಿಂದಲೂ ಗಾಳಿ ಬೀಸದ ಕಡೆ ಇರಿಸಿದರೆ, ಗಾಳಿಯ ಹರಿವನ್ನು ಕಡಿಮೆ ಮಾಡುವ ಹಾಸಿಗೆ, ದಿಂಬು ಅಥವಾ ಅಸಮವಾದ ಮೇಲ್ಮೈಯಲ್ಲಿ ನಿಮ್ಮ ಲ್ಯಾಪ್‌ಟಾಪ್ ಬಳಸುತ್ತಿದ್ದರೆ ಲ್ಯಾಪ್‌ಟಾಪ್‌ ಬಿಸಿಯಾಗಲಿದೆ. ಇದಲ್ಲದೆ ಲ್ಯಾಪ್‌ಟಾಪ್‌ ಮೇಲಿನ ಧೂಳು, ಕೊಳಕು ಮತ್ತು ಕೂದಲು ನಿಮ್ಮ ಲ್ಯಾಪ್‌ಟಾಪ್‌ನ ಫ್ಯಾನ್‌ಗೆ ಅಡ್ಡಿಯಾಗಬಹುದು, ಇದರಿಂದಾಗಿ ಡಿವೈಸ್‌ ಕೂಲ್‌ ಆಗುವ ಬದಲು ಹೀಟ್‌ ಆಗಬಹುದು. ಹಾಗೆಯೇ ಹಳೆಯ ಬ್ಯಾಟರಿಯಿಂದಾಗಿಯೂ ಲ್ಯಾಪ್‌ಟಾಪ್‌ ಬಿಸಿಯಾಗಲಿದೆ.

ಲ್ಯಾಪ್‌ಟಾಪ್‌ ಓವರ್‌ಹೀಟ್‌ ಆದಾಗ ಕಂಡುಬರುವ ಲಕ್ಷಣಗಳು

ಲ್ಯಾಪ್‌ಟಾಪ್‌ ಓವರ್‌ಹೀಟ್‌ ಆದಾಗ ಕಂಡುಬರುವ ಲಕ್ಷಣಗಳು

* ಬೇಸಿಕ್‌ ವರ್ಕ್‌ ನಿರ್ವಹಿಸಲು ನಿಮ್ಮ ಲ್ಯಾಪ್‌ಟಾಪ್ ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
* ಅಪ್ಲಿಕೇಶನ್‌ಗಳು ಮತ್ತು ಪಂಕ್ಷನ್‌ ವರ್ಕ್‌ ಆಗುವುದು ಸ್ಥಗಿತಗೊಳ್ಳುತ್ತದೆ.
* ನಿಮ್ಮ ಮೌಸ್ ಅಥವಾ ಕೀಬೋರ್ಡ್‌ನಂತಹ ಲ್ಯಾಪ್‌ಟಾಪ್ ಟೂಲ್ಸ್‌ ರಿಯಾಕ್ಟ್‌ ಮಾಡುವುದು ಸ್ಟಾಪ್ ಆಗಲಿದೆ.
* ನಿಮ್ಮ ಲ್ಯಾಪ್‌ಟಾಪ್ ಇದ್ದಕ್ಕಿದ್ದಂತೆ ಶಟ್‌ಡೌನ್ ಆಗುತ್ತದೆ.
* ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗುತ್ತಿದೆ ಎಂದು ಎಚ್ಚರಿಸುವ ಅನಿರೀಕ್ಷಿತ ದೋಷ ಸಂದೇಶಗಳು ಕಾಣಿಸಿಕೊಳ್ಳುತ್ತವೆ.

ಲ್ಯಾಪ್‌ಟಾಪ್‌ ಬಿಸಿಯಾಗುವುದನ್ನು ತಪ್ಪಿಸುವುದು ಹೇಗೆ?

ಲ್ಯಾಪ್‌ಟಾಪ್‌ ಬಿಸಿಯಾಗುವುದನ್ನು ತಪ್ಪಿಸುವುದು ಹೇಗೆ?

* ನಿಮ್ಮ ಲ್ಯಾಪ್‌ಟಾ ಹೀಟ್‌ ಆದಾಗ ಮೊದಲಿಗೆ ಲ್ಯಾಪ್‌ಟಾಪ್ ಅನ್ನು ಆಫ್ ಮಾಡಿ. ಕಾರ್ಡ್ಸ್‌ ಅನ್‌ಪ್ಲಗ್ ಮಾಡಿ ಮತ್ತು ಬ್ಯಾಟರಿಯನ್ನು ತೆಗೆದುಹಾಕಿ ಲ್ಯಾಪ್‌ಟಾಪ್‌ ಬಿಸಿ ತಣ್ಣಗೆ ಆಗುವ ತನಕ ಆನ್‌ ಮಾಡಬಾರದು.
* ಕೊಳಕು ಅಥವಾ ದೂಳು ಲ್ಯಾಪ್‌ಟಾಪ್‌ ಪ್ಯಾಣ್‌ ಸೇರದಂತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಅಲ್ಲದೆ ನಿಮ್ಮ ಲ್ಯಾಪ್‌ಟಾಪ್‌ನ ದ್ವಾರಗಳನ್ನು ಸ್ವಚ್ಛಗೊಳಿಸಲು ಸಂಕುಚಿತ ಗಾಳಿಯನ್ನು ಬಳಸಿ.
* ನಿಮ್ಮ ಲ್ಯಾಪ್‌ಟಾಪ್‌ ಫ್ಯಾನ್‌ ಉತ್ತಮವಾಗಿಲ್ಲದಿದ್ದರೆ ನಿಮ್ಮ ಸಿಸ್ಟಂನ ಫ್ಯಾನ್ ಕಂಟ್ರೋಲ್‌ ಸೆಟ್ಟಿಂಗ್‌ಗಳನ್ನು ಬದಲಾಯಿಸಿ. ನೀವು ವಿಂಡೋಸ್ ಮಾದರಿಯನ್ನು ಹೊಂದಿದ್ದರೆ, ನೀವು ಇದನ್ನು BIOS ಮೆನುವಿನಲ್ಲಿ ಮಾಡಬಹುದು.
* ತಂಪಾದ ಕೋಣೆಯಲ್ಲಿ ಕೆಲಸ ಮಾಡಿ.
* ನಿಮ್ಮ ಲ್ಯಾಪ್‌ಟಾಪ್ ಅನ್ನು ಯಾವುದೇ ಮೇಲ್ಮೈಯಲ್ಲಿ ಇರಿಸುವ ಮತ್ತು ಗಾಳಿಯ ಹರಿವನ್ನು ಹೆಚ್ಚಿಸಲು ಬಿಲ್ಟ್-ಇನ್ ಫ್ಯಾನ್‌ಗಳನ್ನು ಹೊಂದಿರುವ ಕೂಲಿಂಗ್ ಪ್ಯಾಡ್ ಅನ್ನು ಬಳಸಿ.

Best Mobiles in India

English summary
You're hard at work on your laptop when suddenly it starts to heat up, slow down, and maybe even stall.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X