ಫೋನ್ ಬಿಸಿಯಾಗುತ್ತಿದೆಯೇ? ಈ ಟಿಪ್ಸ್ ಅನುಸರಿಸಿ

By Shwetha
|

ನಮಗೆ ಆಗಾಗ ತಲೆಬಿಸಿ ಆಗುವುದುಂಟು. ಇದಕ್ಕೆ ಹಲವಾರು ಕಾರಣಗಳು ಇದ್ದಾವು. ಸುಡುವ ಬೇಸಗೆ, ಕಾಡುವ ಚಿಂತೆ. ಬೆವರು, ಬಾಯಾರಿಕೆ, ವಿರಹ, ಕೋಪ ತಾಪ! ಹೀಗೆ, ನೂರೆಂಟು ತಲೆಬಿಸಿಯಿಂದ ನಾವು ಬೆಂದು ಬಸವಳಿಯುತ್ತೇವೆ. ಹೀಗಾಗಿ, ನಮ್ಮ ಪ್ರಾಂಬ್ಲಮ್ಮುಗಳೇ ನಮಗೆ ಸಾಕಷ್ಟಿರುವಾಗ ನಾವೇ ನಿತ್ಯ ಉಪಯೋಗಿಸುವ ವಸ್ತು - ಪದಾರ್ಥಗಳ ಆರೋಗ್ಯವನ್ನು ಚಿಂತಿಸುವ ಗೋಜಿಗೆ ಹೋಗುವುದಿಲ್ಲ. ಅದಕ್ಕೆಲ್ಲ ಪುರುಸೊತ್ತು ಯಾವನಿಗಿದೆ? ಯಾವಳಿಗಿದೆ?!

ನಿರ್ಜೀವ ವಸ್ತುಗಳಿಗೂ ಒಂದು ಆತ್ಮ ಅಂತ ಇರುತ್ತದೆ ! ಈ ವಾದಕ್ಕೆ ಪುಷ್ಠಿಕೊಡುವ ಗ್ಯಾಡ್ಜೆಟ್ಟುಗಳಲ್ಲಿ ಮೊದಲು ಸ್ಥಾನ ನಿಮ್ಮ ಅಂಗೈಯಲ್ಲಿ ಆಡುವ ಬೊಂಬೆ ಆಂಡ್ರ್ಯಾಡ್ ಫೋನುಗಳಿಗೆ ಸಲ್ಲುತ್ತದೆ. 24 ಗಂಟೆ ಕೆಲ್ಸ ಮಾಡೀ ಮಾಡೀ ಅದಕ್ಕೂ ಪಾಪ ಸುಸ್ತಾಗಿರುತ್ತದೆ. ಬ್ಯಾಟರಿಯ ಬಿಸಿ ಅಪ್ಪುಗೆಯಲ್ಲಿ ನೆಮ್ಮದಿಯಾಗಿರುವುದಕ್ಕೆ ಅದರ ನೆರೆಹೊರೆಯವರು ಬಿಡುವುದಿಲ್ಲ. ಕೆಲಸಕ್ಕೆ ಬರುವ, ಕೆಲಸಕ್ಕೆ ಬಾರದ ಅಪ್ಲಿಕೇಷನ್ನುಗಳು, ಯಾವತ್ತೋ ಡೌನ್ ಲೋಡ್ ಮಾಡಿಕೊಂಡ, ಆದರೆ ಎಂದೂ ಬಳಸದ ನೂರೆಂಟು ಆಪ್ ಗಳು ನಿಮ್ಮ ಪ್ರೀತಿಯ ಸ್ಮಾರ್ಟ್ ಫೋನುಗಳನ್ನು ತಿಗಣೆಯಂತೆ ಕಚ್ಚಿ ಕಚ್ಚಿ, ಅದರ ನೆಮ್ಮದಿಯನ್ನು ಹಾಳುಗೆಡವುತ್ತದೆ.

ಹಗಲೂ ಇರಳೂ ದುಡಿದೂ ದುಡಿದೂ, ನಿಮಗಾಗಿ, ನಿಮ್ಮವರಿಗಾಗಿ ಮಿಡಿದೂ ಮಿಡಿದೂ ಆಯಾಸಗೊಂಡಿರುವ ಫೋನಿನ ಆರೋಗ್ಯ - ಕ್ಷೇಮ ಕಾಪಾಡುವುದು ನಿಮ್ಮ ಹೊಣೆ. ನೀವಲ್ಲದೆ ಅದಕ್ಕೆ ಇನ್ನಾರು ಗತಿ?! ಭಾರತದಂತಹ ಉಷ್ಣವಲಯದಲ್ಲಿ ಜೀವಿಸುವ ಸ್ಮಾರ್ಟ್ ಫೋನುಗಳಿಗೂ ಈಗ ಬೆಸಿಗೆಯ ಬಿಸಿ ತಟ್ಟುತ್ತಿದೆ. ನಮಗೆ ಆಗುವ ಹಾಗೆ. ಆದ್ದರಿಂದ ನಿಮ್ಮ ಫೋನನ್ನು ತಂಪಾಗಿಡುವುದಕ್ಕೆ ನಮ್ಮಲ್ಲಿ ಕೆಲವು ಸಲಹೆಗಳುಂಟು. ಅದನ್ನು ಪಾಲಿಸಿದರೆ ನಿಮ್ಮ ಫೋನಿನ ಜೀವ ತಂಪಾಗಿರುತ್ತದೆ. ನೀವೂ ತಂಪಾಗಿಯೇ ಇರುತ್ತೀರಿ. ಬನ್ನಿ, ಫೋನ್ ಆರೈಕೆಗೆ ತಯಾರಾಗೋಣ. ಅದಕ್ಕೆ ಸ್ವಲ್ಪ ಕೋಲ್ಡ್ ಕ್ರೀಂ ಹಚ್ಚಿ, ಐಸ್ ಕ್ರೀಂ ತಿನ್ನಿಸಿ ಸಂತೈಸೋಣ!

#1

#1

ನಿಮ್ಮ ಫೋನ್ ಅನ್ನು ಆದಷ್ಟು ಸೂರ್ಯನ ಬೆಳಕಿಗೆ ಒಡ್ಡುವುದನ್ನು ಕಡಿಮೆ ಮಾಡಿ. ಆದಷ್ಟು ನೇರವಾಗಿ ಸೂರ್ಯನ ಬೆಳಕಿಗೆ ಫೋನ್ ಅನ್ನು ಇರಿಸಬೇಡಿ ನಿಮ್ಮ ಫೋನ್ ಅನ್ನು ಬಿಸಿಯಾಗಿಸುವುದರಿಂದ ರಕ್ಷಿಸುವ ವಿಧಾನ ಇದಾಗಿದೆ.

#2

#2

ನಿಮ್ಮ ಫೋನ್‌ನಲ್ಲಿರುವ ಬೇಡದ ಅಪ್ಲಿಕೇಶನ್‌ಗಳನ್ನು ನಿವಾರಣೆ ಮಾಡಿಕೊಳ್ಳಿ. ನೀವು ಬಳಸದೇ ಇರುವ ಅಪ್ಲಿಕೇಶನ್‌ಗಳು ಹಿನ್ನಲೆಯಲ್ಲಿ ಚಾಲನೆಗೊಳ್ಳತ್ತವೆ ಮತ್ತು ನಿಮ್ಮ ಫೋನ್ ಅನ್ನು ಬಿಸಿಯಾಗಿಸುತ್ತವೆ.

#3

#3

ಹಿನ್ನಲೆಯಲ್ಲಿ ಚಾಲನೆಯಾಗುವ ಅಪ್ಲಿಕೇಶನ್‌ಗಳಂತೆಯೇ ಪರದೆಯ ಬ್ರೈಟ್‌ನೆಸ್ ಅನ್ನು ಅಧಿಕವಾಗಿರಿಸುವುದೂ ಕೂಡ ಬ್ಯಾಟರಿಯನ್ನು ಬಿಸಿಯಾಗಿಸಿ ಫೋನ್ ಬಿಸಿಯಾಗುವಂತೆ ಮಾಡುತ್ತದೆ.

#4

#4

ನಿಮ್ಮ ಫೋನ್ ಅನ್ನು ನೀವು ಬಳಸುತ್ತಿಲ್ಲ ಎಂದಾದಲ್ಲಿ ಅದನ್ನು ಏರ್‌ಪ್ಲೇನ್ ಮೋಡ್‌ನಲ್ಲಿರಿಸಿ ಅಥವಾ ಅದನ್ನು ಆಫ್ ಮಾಡಿ. ಈ ಎರಡೂ ಸಲಹೆಗಳು ಫೋನ್ ಬ್ಯಾಟರಿಯನ್ನು ಉಳಿಸುವುದು ಮಾತ್ರವಲ್ಲದೆ ಫೋನ್ ಬಿಸಿಯಾಗುವುದರಿಂದ ತಡೆಯುತ್ತದೆ.

#5

#5

ನಿಮ್ಮ ಫೋನ್ ಈಗಾಗಲೇ ಹೆಚ್ಚು ಬಿಸಿಯಾಗುತ್ತಿದೆ ಎಂದಾದಲ್ಲಿ, ಫೋನ್ ಕೇಸ್ ಅನ್ನು ತೆಗೆದಿರಿಸಿ. ಫೋನ್ ಕೇಸ್ ಅನ್ನು ತೆಗೆದಿರಿಸುವುದರಿಂದ ಫೋನ್ ಬಿಸಿಯಾಗುವುದು ತಪ್ಪುತ್ತದೆ.

#6

#6

ಮೊದಲನೆಯದಾಗಿ ನಿಮ್ಮ ಫೋನ್ ಕೇಸ್‌ನಿಂದ ಹೊರಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಹೆಚ್ಚು ಸಮಯಗಳ ಕಾಲ ಫೋನ್ ಅನ್ನು ಚಾರ್ಜ್ ಮಾಡದಿರಿ. ದಿನದಲ್ಲಿ 70 ರಿಂದ 80 ಶೇಕಡಾದಷ್ಟು ಫೋನ್ ಚಾರ್ಜ್ ಮಾಡಿ.

#7

#7

ನೇರವಾಗಿ ಸೂರ್ಯನ ಬೆಳಕು ಬೀಳುವಂತಹ ಸ್ಥಳದಲ್ಲಿ ಫೋನ್ ಅನ್ನು ಇರಿಸದಿರಿ. ಇದು ಬ್ಯಾಟರಿ ಮತ್ತು ಸ್ಕ್ರೀನ್‌ಗೆ ಹಾನಿಯನ್ನುಂಟು ಮಾಡಬಹುದು. ಆದಷ್ಟು ಬಿಗಿಯಾದ ಕಿಸೆಯಲ್ಲಿ ಫೋನ್ ಅನ್ನು ಇರಿಸದಿರಿ.

#8

#8

ಬೀಚ್ ನಿಮಗೆ ಮೋನರಂಜನೆಯನ್ನು ನೀಡಬಹುದಾಗಿದ್ದರೂ ನಿಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಹಾನಿಯನ್ನುಂಟು ಮಾಡಬಹುದು. ಗ್ಯಾಲಕ್ಸಿ ಎಸ್5 ಗೆ ನೀರು, ಧೂಳು ಮತ್ತು ಮರಳು ಹೆಚ್ಚು ಹಾನಿಕರವಾಗಿದೆ.

#9

#9

ನೀರಿನ ಬಳಿ ಈಜು ಹೊಡೆಯುವುದು ಸಂತಸಕರವಾದ ವಿಷಯವಾಗಿದೆ. ಆದರೆ ಇದು ನಿಮ್ಮ ಫೋನ್‌ಗೆ ಹಾನಿಯನ್ನುಂಟು ಮಾಡಬಹುದು. ನೀರಿನಲ್ಲಿ ಫೋನ್ ಆದಷ್ಟು ಒದ್ದೆಯಾಗದಂತೆ ನೋಡಿಕೊಳ್ಳಿ. ನೀರಿನಾಳದಲ್ಲೂ ಕಾರ್ಯನಿರ್ವಹಿಸುವ ಫೋನ್ ಕವರ್‌ಗಳಿಗೆ ಸ್ವಲ್ಪ ದುಡ್ಡು ವ್ಯಯಿಸಿ.

#10

#10

ಇದಿಷ್ಟೂ ಸಲಹೆಗಳನ್ನು ಅನುಸರಿಸಿ ಕೂಡ ನಿಮ್ಮ ಫೋನ್ ಬಿಸಿಯಾಗುತ್ತದೆ ಎಂದಾದಲ್ಲಿ ಅದನ್ನು ಸ್ವಲ್ಪ ಹೊತ್ತು ಉಪಯೋಗಿಸುವುದನ್ನು ಬಿಡಿ. ಸ್ವಲ್ಪ ಹೊತ್ತು ತಣಿದ ನಂತರ ಅದನ್ನು ಬಳಸಿ. ನಿಮ್ಮ ಫೋನ್‌ನಲ್ಲಿ ನೀವು ಹೆಚ್ಚು ಕಾರ್ಯನಿರ್ವಹಿಸುತ್ತೀರಿ ಎಂದಾದಲ್ಲಿ ಅದು ಬಿಸಿಯಾಗುವುದು ಖಂಡಿತ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಪ್ರತಿಯೊಬ್ಬರಿಗೂ ಗೊಂದಲ ಉಂಟುಮಾಡುವ ಅಚ್ಚರಿ ಫೋಟೋಗಳು </a><br /><a href=10 ವಿಧಾನಗಳಿಂದ ಸ್ಮಾರ್ಟ್‌ಫೋನ್ ಸುರಕ್ಷತೆ ಹೇಗೆ?
ಬ್ಲ್ಯಾಕ್‌ಬೆರಿ, ನೋಕಿಯಾಗಳಲ್ಲಿ ವಾಟ್ಸಾಪ್ ಇನ್ನುಮುಂದೆ ಇಲ್ಲ
10 ವಿಧಾನಗಳಿಂದ ಸ್ಮಾರ್ಟ್‌ಫೋನ್ ಸುರಕ್ಷತೆ ಹೇಗೆ? " title="ಪ್ರತಿಯೊಬ್ಬರಿಗೂ ಗೊಂದಲ ಉಂಟುಮಾಡುವ ಅಚ್ಚರಿ ಫೋಟೋಗಳು
10 ವಿಧಾನಗಳಿಂದ ಸ್ಮಾರ್ಟ್‌ಫೋನ್ ಸುರಕ್ಷತೆ ಹೇಗೆ?
ಬ್ಲ್ಯಾಕ್‌ಬೆರಿ, ನೋಕಿಯಾಗಳಲ್ಲಿ ವಾಟ್ಸಾಪ್ ಇನ್ನುಮುಂದೆ ಇಲ್ಲ
10 ವಿಧಾನಗಳಿಂದ ಸ್ಮಾರ್ಟ್‌ಫೋನ್ ಸುರಕ್ಷತೆ ಹೇಗೆ? " loading="lazy" width="100" height="56" />ಪ್ರತಿಯೊಬ್ಬರಿಗೂ ಗೊಂದಲ ಉಂಟುಮಾಡುವ ಅಚ್ಚರಿ ಫೋಟೋಗಳು
10 ವಿಧಾನಗಳಿಂದ ಸ್ಮಾರ್ಟ್‌ಫೋನ್ ಸುರಕ್ಷತೆ ಹೇಗೆ?
ಬ್ಲ್ಯಾಕ್‌ಬೆರಿ, ನೋಕಿಯಾಗಳಲ್ಲಿ ವಾಟ್ಸಾಪ್ ಇನ್ನುಮುಂದೆ ಇಲ್ಲ
10 ವಿಧಾನಗಳಿಂದ ಸ್ಮಾರ್ಟ್‌ಫೋನ್ ಸುರಕ್ಷತೆ ಹೇಗೆ?

Best Mobiles in India

English summary
In this article we are giving you some tips on how to protect your phone from over heating. These easy tips helps you to prevent phone from over heat.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X